Bigg Boss Kannada 13 Eviction: ಬಿಗ್‌ಬಾಸ್ ಕನ್ನಡ ಸೀಸನ್ 13 ರ ಮನೆಯಲ್ಲಿ ಜಗಳದ ಕಾವು ಜೋರಾಗಿದೆ. ಟಾಸ್ಕ್ ವೇಳೆ ಮಂಜ ಅವರು ತಾಂಡವ್ ರಾಮ್‌ಗೆ ಕಾಲಿನಿಂದ ಒದ್ದಿದ್ದಾರೆ ಎನ್ನಲಾದ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಗ್‌ಬಾಸ್ ಮನೆಯಿಂದ ಇಂದೇ ಇಬ್ಬರು ಸ್ಪರ್ಧಿಗಳು ಔಟ್ ಆಗಬಹುದು ಎಂಬ ಚರ್ಚೆ ಶುರುವಾಗಿದೆ. ಕಡಿಮೆ ವೋಟ್ ಅಲ್ಲ, ನಾಲಿಗೆ ಹರಿಬಿಟ್ಟಿದ್ದಕ್ಕೆ ರೆಡ್ ಕಾರ್ಡ್ ಶಿಕ್ಷೆ ನೀಡಲಾಗಿದೆಯೇ..? ಇಲ್ಲಿದೆ ಕಂಪ್ಲೀಟ್ ಮಾಹಿತಿ
1/5
ಬಿಗ್ ಬಾಸ್ ಎಲಿಮಿನೇಷನ್
ಮತ್ತೊಂದೆಡೆ, ಗಗನ್ ಅವರು ಗಾನವಿ ವಿರುದ್ಧ ಕೆಟ್ಟ ಪದಗಳನ್ನು ಬಳಸಿದ್ದಾರೆ ಎನ್ನಲಾದ ವಿಚಾರವೂ ವಿವಾದ ಸೃಷ್ಟಿಸಿದೆ. ಸ್ಪರ್ಧಿಗಳ ಈ ವರ್ತನೆಗೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮಂಜ ಮತ್ತು ಗಗನ್ ಇಬ್ಬರಿಗೂ ರೆಡ್ ಕಾರ್ಡ್ ನೀಡಿ ಮನೆಯಿಂದ ಹೊರಹಾಕಲಾಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.
2/5
ಬಿಗ್ ಬಾಸ್ ಎಲಿಮಿನೇಷನ್
ಕಡಿಮೆ ವೋಟ್‌ಗಳಿಂದಲ್ಲ, ನಿಯಮ ಉಲ್ಲಂಘನೆಯ ಕಾರಣಕ್ಕೆ ಇಬ್ಬರೂ ಎಲಿಮಿನೇಟ್ ಆಗುತ್ತಾರಾ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
3/5
ಬಿಗ್ ಬಾಸ್ ಎಲಿಮಿನೇಷನ್
ಬಿಗ್ ಬಾಸ್ ವೀಕೆಂಡ್ ಪ್ರೋಮೋದಲ್ಲಿ ಸುದೀಪ್ ಅವರು ಇಂದು ಈ ವೇದಿಕೆ ಮೇಲೆ ಡಿಸ್ಕಷನ್ ಗಿಂತ ಹೆಚ್ಚಾಗಿ ಡಿಸಿಷನ್ ಮುಖ್ಯವಾಗಲಿದೆ ಎಂದಿದ್ದಾರೆ. ಈ ಮಾತು ಸಹ ವೀ ಕ್ಷಕರಲ್ಲಿ ಕುತೂಹಲ ಸಷ್ಟಿಸಿದೆ.
4/5
ಬಿಗ್ ಬಾಸ್ ಎಲಿಮಿನೇಷನ್
ಗಾನವಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಗಗನ್ ಹಾಗೂ ಮಿತಿ ಮೀರಿದ ವರ್ತನೆ ತೋರುತ್ತಿರುವ ಮಂಜ ಇಬ್ಬರೂ ಬಿಗ್ ಬಾಸ್ ಮನೆಯಿಂದ ರೆಡ್ ಕಾರ್ಡ್ ಪಡೆದು ಔಟ್ ಆಗ್ತಾರಾ ಎಂಬ ಪ್ರಶ್ನೆ ಮೂಡಿದೆ.
5/5
ಬಿಗ್ ಬಾಸ್ ಎಲಿಮಿನೇಷನ್
ಇಬ್ಬರಿಗೂ ರೆಡ್ ಕಾರ್ಡ್ ನೀಡಲಾಗಿದೆ ಅಥವಾ ಅಧಿಕೃತವಾಗಿ ಮನೆಯಿಂದ ಹೊರಹಾಕಲಾಗಿದೆ ಎಂಬ ಮಾಹಿತಿ ಇನ್ನೂ ದೃಢಪಟ್ಟಿಲ್ಲ. ಬಿಗ್‌ಬಾಸ್ ತೆಗೆದುಕೊಳ್ಳುವ ಅಂತಿಮ ನಿರ್ಧಾರವೇ ಈ ಗೊಂದಲಕ್ಕೆ ತೆರೆ ಎಳೆಯಲಿದೆ.