ನೌಕರರ ಭವಿಷ್ಯ ನಿಧಿ ಸಂಸ್ಥೆ ಬಹು ನಿರೀಕ್ಷಿತ ಯುಪಿಐ ಆಧಾರಿತ ಪಿಎಫ್ ಹಣ ವಿತ್ ಡ್ರಾ ಪರೀಕ್ಷಿಸಲು ಆರಂಭಿಸಿದೆ.
ಇಪಿಎಫ್‌ಒದ ನೂತನ ಉಪಕ್ರಮವು ಇನ್ಮುಂದೆ ಚಂದಾದಾರರಿಗೆ ಪಿಎಫ್ ಹಿಂಪಡೆಯುವಿಕೆಯನ್ನು ಸುಗಮಗೊಳಿಸಲಿದೆ.
1/6
ಇಪಿಎಫ್‌ಒ ಇತ್ತೀಚಿನ ಸುದ್ದಿ
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಬ್ಯಾಂಕ್‌ಗಳ ಸಹಯೋಗದೊಂದಿಗೆ ಏಕೀಕೃತ ಪಾವತಿ ಇಂಟರ್ಫೇಸ್ (UPI) ಮೂಲಕ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಟೆಸ್ಟಿಂಗ್ ಆರಂಭಿಸಿದೆ ಎಂದು ತಿಳಿದುಬಂದಿದೆ.
2/6
ಯುಪಿಐ ಮೂಲಕ ಪಿಎಫ್ ಹಣ
ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವಿಕೆಯು ಇಪಿಎಫ್‌ಒ ಸದಸ್ಯರಿಗೆ ಅಗತ್ಯವಿದ್ದಾಗ ತಮ್ಮ ಹಣವನ್ನು ಬಳಸುವುದನ್ನು ಸುಗಮಗೊಳಿಸುತ್ತದೆ. ಇದಕ್ಕಾಗಿ ಇಪಿಎಫ್‌ಒ ಯುಎಎನ್ ಪೋರ್ಟಲ್ ಅನ್ನು ಚಂದಾದಾರರ ಯುಪಿಐ ಖಾತೆಯೊಂದಿಗೆ ಲಿಂಕ್ ಮಾಡುತ್ತದೆ ಎನ್ನಲಾಗಿದೆ.
3/6
ಇಪಿಎಫ್‌ಒ ಪಿಎಫ್ ವಿತ್ ಡ್ರಾ ಈಗಿನ ಪ್ರಕ್ರಿಯೆ
ಪ್ರಸ್ತುತ, ಇಪಿಎಫ್‌ಒ ಚಂದಾದಾರರು ತಮ್ಮ ಭವಿಷ್ಯ ನಿಧಿ ಖಾತೆಯಿಂದ ಹಣ ಹಿಂಪಡೆಯಲು ಯುಎಎನ್ ಪೋರ್ಟಲ್ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪಿಎಫ್ ಮೊತ್ತ ಇಪಿಎಫ್ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆಗೊಳ್ಳುತ್ತದೆ.
4/6
ಇಪಿಎಫ್ ಹೊಸ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತೆ?
ಇಪಿಎಫ್‌ಒದ ಹೊಸ ಪ್ರಕ್ರಿಯೆ ಅಡಿಯಲ್ಲಿ ಇಪಿಎಫ್‌ಒ ಯುಎಎನ್ ಪೋರ್ಟಲ್ ಅನ್ನು ಇಪಿಎಫ್ ಸದಸ್ಯರ ಯುಪಿಐ ಖಾತೆಗಳಿಗೆ ಲಿಂಕ್ ಮಾಡುವುದರಿಂದ ಇದು ಚಂದಾದಾರರು ಅಗತ್ಯವಿದ್ದಾಗ ತಮ್ಮ ಹಣವನ್ನು ಯುಪಿಐ ಮೂಲಕ ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಇಪಿಎಫ್ ಹಣ ವಿತ್ ಡ್ರಾ ಪ್ರಕ್ರಿಯೆ ಸುಗಮಗೊಳ್ಳುತ್ತದೆ.
5/6
ಇಪಿಎಫ್ ಯುಪಿಐ ವಿತ್ ಡ್ರಾ ಯಾರಿಗೆ ಲಾಭ
ಭವಿಷ್ಯ ನಿಧಿ ಹಣವನ್ನು ಯುಪಿಐ ಮೂಲಕವೇ ಹಿಂಪಡೆಯುವ ವ್ಯವಸ್ಥೆಯು ಇಪಿಎಫ್‌ಒದ ಲಕ್ಷಾಂತರ ಮಂದಿ ಚಂದಾದಾರಿಗೆ ನೇರವಾಗಿ ಪ್ರಯೋಜನವಾಗಲಿದೆ.
6/6
ಇಪಿಎಫ್ ಯುಪಿಐ ವಿತ್ ಡ್ರಾ ಯಾವಾಗ ಲಭ್ಯ?
ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವ ಇಪಿಎಫ್‌ಒದ ನೂತನ ವೈಶಿಷ್ಟ್ಯವು ಎಲ್ಲಾ ಚಂದಾದಾರಿಗೆ ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಇಪಿಎಫ್‌ಒ ಮೂಲಗಳು ತಿಳಿಸಿವೆ.
Disclaimer: ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ.