ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ, ಹಾಲೇಶ್ ಕೋಗುಂಡಿ ನಿರ್ದೇಶನದ ಬಹುನಿರೀಕ್ಷಿತ ‘ಪರಾಕ್’ ಸಿನಿಮಾಗೆ ದಾವಣಗೆರೆಯ ಶಾಲಾ ಮಕ್ಕಳು ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ.
ಪರಾಕ್’ ಸಿನಿಮಾಗೆ ದಾವಣಗೆರೆಯ ಶಾಲಾ ಮಕ್ಕಳು ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ.
1/5
ಶ್ರೀಮುರಳಿ ಅಭಿನಯದ ಪರಾಕ್
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ, ಹಾಲೇಶ್ ಕೋಗುಂಡಿ ನಿರ್ದೇಶನದ ಬಹುನಿರೀಕ್ಷಿತ ‘ಪರಾಕ್’ ಸಿನಿಮಾಗೆ ದಾವಣಗೆರೆಯ ಶಾಲಾ ಮಕ್ಕಳು ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ.
2/5
‘ಪರಾಕ್’ ಚಿತ್ರದ ಪೋಸ್ಟರ್
ಮಕ್ಕಳ ದಿನಾಚರಣೆಯ ಪ್ರಯುಕ್ತ ದಾವಣಗೆರೆಯ ಪ್ರತಿಷ್ಠಿತ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಸುಮಾರು 5 ಸಾವಿರ ವಿದ್ಯಾರ್ಥಿಗಳು ತಮ್ಮ ಕಲಾಕುಂಚದ ಮೂಲಕ ‘ಪರಾಕ್’ ಚಿತ್ರದ ಪೋಸ್ಟರ್ ಅನ್ನು ಅದ್ಭುತವಾಗಿ ಬಿಡಿಸುವ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
3/5
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರ ರಚನೆ:
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಶಾಲಾ ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ‘ಪರಾಕ್’ ಚಿತ್ರದ ಪೋಸ್ಟರ್ ಬಿಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸಾವಿರಾರು ಮಕ್ಕಳ ಈ ವಿನೂತನ ಪ್ರಯತ್ನ ಮತ್ತು ಕಲಾ ಪ್ರದರ್ಶನ ನೆರೆದಿದ್ದವರನ್ನು ನಿಬ್ಬೆರಗಾಗಿಸಿತು.
4/5
ವಿದ್ಯಾರ್ಥಿಗಳಿಂದ ಚಿತ್ರಕಲೆ
ಹಳೇ ವಿದ್ಯಾರ್ಥಿಗೆ ತವರು ಶಾಲೆಯ ಅಭಿನಂದನೆ ವಿಶೇಷವೆಂದರೆ, ‘ಪರಾಕ್’ ಚಿತ್ರದ ನಿರ್ದೇಶಕರಾದ ಹಾಲೇಶ್ ಕೋಗುಂಡಿ ಅವರು ಇದೇ ದಾವಣಗೆರೆಯ ಸಿದ್ದಗಂಗಾ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದಾರೆ. ತಾವು ಕಲಿತ ಶಾಲೆಯ ವಿದ್ಯಾರ್ಥಿಗಳೇ ತಮ್ಮ ಸಿನಿಮಾದ ಪೋಸ್ಟರ್ ಬಿಡಿಸಿ, ಮಕ್ಕಳ ದಿನಾಚರಣೆಯಂದು ವಿಶೇಷ ಗೌರವ ಹಾಗೂ ಅಭಿನಂದನೆ ಸಲ್ಲಿಸಿರುವುದು ನಿರ್ದೇಶಕರ ಸಂತಸವನ್ನು ಇಮ್ಮಡಿಗೊಳಿಸಿದೆ.
5/5
ಚಿತ್ರಕಲೆಯ ಮೂಲಕ ವಿಶ್
ತಮ್ಮ ಹಳೇ ವಿದ್ಯಾರ್ಥಿಯ ಸಿನಿಮಾ ಯಶಸ್ವಿಯಾಗಲಿ ಎಂದು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ 5 ಸಾವಿರ ವಿದ್ಯಾರ್ಥಿಗಳು ಚಿತ್ರಕಲೆಯ ಮೂಲಕ ಶುಭ ಕೋರಿದ್ದಾರೆ.