ನವೆಂಬರ್ 29ರ ಭಾನುವಾರ ಬ್ರಹ್ಮ ಯೋಗ, ಇಂದ್ರ ಯೋಗ ಸೇರಿದಂತೆ ಹಲವು ಶುಭ ಯೋಗಗಳು ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಿಥುನ, ಸಿಂಹ, ತುಲಾ, ವೃಷಭ ಮತ್ತು ಕಟಕ ರಾಶಿಯವರಿಗೆ ಅನುಕೂಲಕರ ದಿನವಾಗಿರಲಿದೆ ಎಂದು ಜ್ಯೋತಿಷ್ಯ ಭವಿಷ್ಯ ತಿಳಿಸಿದೆ.
Brahma Yoga: ನವೆಂಬರ್ 29ರ ಭಾನುವಾರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಶೇಷವಾಗಿರಲಿದೆ. ಈ ದಿನ ಬ್ರಹ್ಮ ಯೋಗ, ಇಂದ್ರ ಯೋಗ ಸೇರಿದಂತೆ ಹಲವು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಶುಭ ಯೋಗಗಳ ಪ್ರಭಾವದಿಂದ ಐದು ರಾಶಿಗಳಿಗೆ ಸೇರಿದವರಿಗೆ ಉತ್ತಮ ಫಲಗಳು ದೊರೆಯಲಿವೆ ಎಂದು ಜ್ಯೋತಿಷ್ಯ ಭವಿಷ್ಯದಲ್ಲಿ ತಿಳಿಸಲಾಗಿದೆ. ವಿಶೇಷವಾಗಿ ಉದ್ಯೋಗ, ಹಣಕಾಸು, ಕುಟುಂಬ ಜೀವನ, ಪ್ರೀತಿ ಹಾಗೂ ವೈಯಕ್ತಿಕ ವಿಚಾರಗಳಲ್ಲಿ ಈ ರಾಶಿಯವರಿಗೆ ಅನುಕೂಲಕರ ಬೆಳವಣಿಗೆಗಳಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮಿಥುನ, ಸಿಂಹ, ತುಲಾ, ವೃಷಭ ಮತ್ತು ಕಟಕ ರಾಶಿಯವರಿಗೆ ಭಾನುವಾರ ಶುಭದಾಯಕವಾಗಿರಲಿದೆ. ಸೂರ್ಯ ದೇವರ ಅನುಗ್ರಹದೊಂದಿಗೆ ಈ ರಾಶಿಯವರ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ ಎಂಬುದು ಜ್ಯೋತಿಷ್ಯದ ಮಾಹಿತಿ.
1/5
ಮಿಥುನ ರಾಶಿ
ಮಿಥುನ ರಾಶಿಯವರಿಗೆ ನವೆಂಬರ್ 29 ಉತ್ತಮ ದಿನವಾಗಿರಲಿದೆ. ಹೊಸ ವಿಚಾರಗಳನ್ನ ಕಲಿಯುವ ಆಸಕ್ತಿ ಹೆಚ್ಚಾಗಲಿದ್ದು, ಸ್ನೇಹಿತರು ಹಾಗೂ ಆಪ್ತರಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸುವ ಅವಕಾಶ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಂವಹನ ಕೌಶಲ್ಯ ಪ್ರಮುಖ ಪಾತ್ರ ವಹಿಸಲಿದೆ. ಸಹೋದ್ಯೋಗಿಗಳೊಂದಿಗೆ ಉತ್ತಮ ಹೊಂದಾಣಿಕೆ ಇರಲಿದೆ. ಕುಟುಂಬ ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಹಣ ಖರ್ಚು ಮಾಡುವ ಸಾಧ್ಯತೆಯಿದೆ. ಆದರೆ ಹೂಡಿಕೆ ಅಥವಾ ಹೊಸ ವಸ್ತುಗಳ ಖರೀದಿಗೂ ಮುನ್ನ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದರಿಂದ ಅನುಕೂಲವಾಗಲಿದೆ. ಪ್ರೀತಿಯ ವಿಚಾರದಲ್ಲಿ ಸಂಗಾತಿಯೊಂದಿಗೆ ಮನಬಿಚ್ಚಿ ಮಾತನಾಡುವುದರಿಂದ ಸಂಬಂಧದಲ್ಲಿ ಸಾಮರಸ್ಯ ಹೆಚ್ಚಲಿದೆ. ವಿವಾಹಿತರು ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯಲಿದ್ದಾರೆ. ಕೆಲಸದ ಒತ್ತಡದ ನಡುವೆ ವಿಶ್ರಾಂತಿ ಹಾಗೂ ಆಹಾರದ ಕಡೆಗೂ ಗಮನ ನೀಡಬೇಕು.
2/5
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಭಾನುವಾರ ಆತ್ಮವಿಶ್ವಾಸದಿಂದ ಕೂಡಿದ ದಿನವಾಗಿರಲಿದೆ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಬೆಳವಣಿಗೆಗಳಿಗೆ ಅವಕಾಶ ದೊರೆಯಲಿದೆ. ತಮ್ಮ ಪ್ರತಿಭೆಯನ್ನ ಪ್ರದರ್ಶಿಸಲು ಸೂಕ್ತ ಅವಕಾಶ ಸಿಗಬಹುದು. ಕೆಲಸದ ಸ್ಥಳದಲ್ಲಿ ನಾಯಕತ್ವದ ಗುಣಗಳಿಂದ ಅನುಕೂಲವಾಗಲಿದೆ. ಹೊಸ ಜವಾಬ್ದಾರಿಗಳನ್ನ ವಹಿಸಿಕೊಳ್ಳುವ ಮೂಲಕ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ಸಾಧ್ಯತೆಯಿದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಬಜೆಟ್ ಪರಿಶೀಲಿಸುವುದು ಅಗತ್ಯ. ಉಳಿತಾಯ ಮತ್ತು ಭವಿಷ್ಯದ ಆರ್ಥಿಕ ಅಗತ್ಯಗಳಿಗೆ ಆದ್ಯತೆ ನೀಡುವುದು ಉತ್ತಮ. ಪ್ರೀತಿಯ ಜೀವನದಲ್ಲಿ ಸಂಗಾತಿಯೊಂದಿಗೆ ಭಾವನೆಗಳನ್ನ ಹಂಚಿಕೊಳ್ಳುವುದರಿಂದ ಉತ್ತಮ ಸಮಯ ಕಳೆಯಬಹುದು. ಆರೋಗ್ಯದ ದೃಷ್ಟಿಯಿಂದ ಆಹಾರ ಮತ್ತು ವಿಶ್ರಾಂತಿಗೆ ಆದ್ಯತೆ ನೀಡಬೇಕು.
3/5
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಭಾನುವಾರ ಸಕಾರಾತ್ಮಕ ಫಲಿತಾಂಶಗಳನ್ನ ನೀಡುವ ದಿನವಾಗಿರಲಿದೆ. ಸ್ನೇಹಿತರು ಮತ್ತು ಆಪ್ತರೊಂದಿಗೆ ಉತ್ತಮ ಸಂವಹನ ಇರಲಿದೆ. ಅವರ ಸಹಕಾರದಿಂದ ತಮ್ಮ ಗುರಿಗಳನ್ನ ಸಾಧಿಸುವತ್ತ ಗಮನ ಹರಿಸಲು ಸಾಧ್ಯವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಯೋಜನೆಗಳು ಹಾಗೂ ಪಾಲುದಾರಿಕೆಗಳಿಂದ ಅನುಕೂಲವಾಗುವ ಸಾಧ್ಯತೆಯಿದೆ. ಸಹೋದ್ಯೋಗಿಗಳೊಂದಿಗೆ ಉತ್ತಮ ಹೊಂದಾಣಿಕೆ ಇರುವುದರಿಂದ ಕೆಲಸಗಳನ್ನ ಸುಲಭವಾಗಿ ಪೂರ್ಣಗೊಳಿಸಬಹುದು. ಹಣಕಾಸಿನ ವಿಚಾರದಲ್ಲಿ ಸೂಕ್ತ ಯೋಜನೆ ರೂಪಿಸಬೇಕು. ಹೂಡಿಕೆ ನಿರ್ಧಾರಗಳನ್ನ ಆತುರದಲ್ಲಿ ತೆಗೆದುಕೊಳ್ಳದೆ ಎಲ್ಲಾ ಅಂಶಗಳನ್ನ ಪರಿಶೀಲಿಸುವುದು ಉತ್ತಮ. ಪ್ರೀತಿಯ ಜೀವನದಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಗಳ ಕುರಿತು ಚರ್ಚೆ ನಡೆಸುವಿರಿ. ವಿವಾಹಿತರು ಸಂಬಂಧದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಉತ್ತಮ.
4/5
ವೃಷಭ ರಾಶಿ
ವೃಷಭ ರಾಶಿಯವರಿಗೆ ಭಾನುವಾರ ಉತ್ತಮ ಅವಕಾಶಗಳು ಲಭಿಸುವ ಸಾಧ್ಯತೆಯಿದೆ. ಕುಟುಂಬದವರು ಮತ್ತು ಪ್ರೀತಿಪಾತ್ರರೊಂದಿಗೆ ಸಂತೋಷದ ಸಮಯ ಕಳೆಯಲಿದ್ದು, ಅವರಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ತಾಳ್ಮೆ ಮತ್ತು ಸ್ಥಿರತೆಯಿಂದ ಕಾರ್ಯನಿರ್ವಹಿಸುವುದು ಪ್ರಯೋಜನಕಾರಿಯಾಗಲಿದೆ. ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳ ಸಲಹೆ ಮತ್ತು ಸಹಕಾರ ಸಿಗಲಿದೆ. ಹೊಸ ಜವಾಬ್ದಾರಿಗಳನ್ನ ಬುದ್ಧಿವಂತಿಕೆಯಿಂದ ನಿರ್ವಹಿಸುವ ಅವಕಾಶವೂ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಖರ್ಚು ಮತ್ತು ಉಳಿತಾಯದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಪ್ರೀತಿಯ ಜೀವನದಲ್ಲಿ ಸಂಗಾತಿಯ ಭಾವನೆಗಳನ್ನ ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು. ವೈವಾಹಿಕ ಜೀವನದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ.
5/5
ಕಟಕ ರಾಶಿ
ಕಟಕ ರಾಶಿಯವರಿಗೆ ಭಾನುವಾರ ಚಂದ್ರನ ಸಂಚಾರದಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದು ಜ್ಯೋತಿಷ್ಯ ಭವಿಷ್ಯದಲ್ಲಿ ತಿಳಿಸಲಾಗಿದೆ. ಮನೆಯವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಸಿಗಲಿದೆ. ಉದ್ಯೋಗದಲ್ಲಿ ತಮ್ಮ ಜವಾಬ್ದಾರಿಗಳನ್ನ ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ಹೊಸ ಯೋಜನೆಗಳ ಬಗ್ಗೆಯೂ ಗಮನ ಹರಿಸಲು ಸಾಧ್ಯವಾಗಲಿದೆ. ಸಹೋದ್ಯೋಗಿಗಳೊಂದಿಗೆ ಉತ್ತಮ ಹೊಂದಾಣಿಕೆ ಇರಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಯೋಚಿಸುವುದು ಅಗತ್ಯ. ಕುಟುಂಬದ ಅಗತ್ಯಗಳು ಮತ್ತು ವೈಯಕ್ತಿಕ ಖರ್ಚುಗಳ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು. ಸಂಗಾತಿಯೊಂದಿಗೆ ಭಾವನೆಗಳನ್ನ ಹಂಚಿಕೊಳ್ಳುವುದರಿಂದ ಸಂಬಂಧದಲ್ಲಿ ನಂಬಿಕೆ ಹೆಚ್ಚಲಿದೆ. ಮಾನಸಿಕ ನೆಮ್ಮದಿಗಾಗಿ ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಸಮಯ ಮೀಸಲಿಡುವುದು ಉತ್ತಮ.