ಕನ್ನಡದ ಪ್ರತಿಭಾವಂತ ನಟ ರಾಜ್ ಬಿ ಶೆಟ್ಟಿ ಇದೀಗ ತಮಿಳು ಚಿತ್ರರಂಗದಲ್ಲೂ ತಮ್ಮ ಖದರ್ ತೋರಿಸಲು ಸಜ್ಜಾಗಿದ್ದಾರೆ. ಕಾಲಿವುಡ್ ಸ್ಟಾರ್ ವಿಜಯ್ ಸೇತುಪತಿ ಜೊತೆ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಪಾಕೆಟ್ ನಾವೆಲ್’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ವಿಜಯ್ ಸೇತುಪತಿ ಜೊತೆ ಕಾಲರ್ ಹಿಡಿದುಕೊಂಡು ನಗುತ್ತಿರುವ ವಿಶೇಷ ಫೋಟೋ ಹಂಚಿಕೊಂಡಿರುವ ರಾಜ್ ಬಿ ಶೆಟ್ಟಿ, ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಹಾಗಾದ್ರೆ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ? ಯಾರೆಲ್ಲಾ ಈ ಚಿತ್ರದಲ್ಲಿ ನಟಿಸಿದ್ದಾರೆ? ನೋಡೋಣ.
ರಾಜ್ ಬಿ ಶೆಟ್ಟಿ ಹಂಚಿಕೊಂಡಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಫೋಟೋದಲ್ಲಿ ರಾಜ್ ಬಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಇಬ್ಬರೂ ಒಬ್ಬರಿಗೊಬ್ಬರು ಶರ್ಟ್ ಕಾಲರ್ ಹಿಡಿದುಕೊಂಡಿದ್ದಾರೆ. ಆದರೆ ಮುಖದಲ್ಲಿ ಕೋಪವಿಲ್ಲ, ಬದಲಿಗೆ ಆಕಾಶದತ್ತ ಮುಖ ಮಾಡಿ ಜೋರಾಗಿ ನಗುತ್ತಿದ್ದಾರೆ. ಈ ವಿಭಿನ್ನ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ.
ಇನ್ನು ಈ ಫೋಟೋವನ್ನು ವಿಜಯ್ ಸೇತುಪತಿ ಅವರೇ ನಿರ್ದೇಶಿಸಿದ್ದಾರೆ ಎಂದು ರಾಜ್ ಬಿ ಶೆಟ್ಟಿ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ಇಬ್ಬರು ಕಲಾವಿದರ ನಡುವಿನ ಆತ್ಮೀಯತೆಯೂ ಫೋಟೋದಲ್ಲಿ ಎದ್ದು ಕಾಣುತ್ತಿದೆ.ಪಾಕೆಟ್ ನಾವೆಲ್’ ಚಿತ್ರಕ್ಕೆ ‘ಸೂಪರ್ ಡಿಲಕ್ಸ್’ ಖ್ಯಾತಿಯ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ನಿರ್ದೇಶನವಿದೆ. ವಿಭಿನ್ನ ಕಥೆ ಮತ್ತು ವಿಶಿಷ್ಟ ಸಿನಿಮಾ ಮೇಕಿಂಗ್ ಮೂಲಕ ಗುರುತಿಸಿಕೊಂಡಿರುವ ಈ ನಿರ್ದೇಶಕರ ಜೊತೆ ರಾಜ್ ಬಿ ಶೆಟ್ಟಿ ಕೈಜೋಡಿಸಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಮುಂದಿನ ವರ್ಷ ಜನವರಿ 14ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಸೇತುಪತಿ, ರಾಜ್ ಬಿ ಶೆಟ್ಟಿ, ಮಾಳವಿಕಾ ಮೋಹನನ್ ಹಾಗೂ ಕಿಶೋರ್ ಸೇರಿದಂತೆ ಪ್ರತಿಭಾವಂತ ಕಲಾವಿದರ ತಂಡವೇ ಚಿತ್ರದಲ್ಲಿದೆ.ಕನ್ನಡದಲ್ಲಿ ‘ಗರುಡ ಗಮನ ವೃಷಭ ವಾಹನ’, ‘ಒಂದು ಮೊಟ್ಟೆಯ ಕಥೆ’ ಸೇರಿದಂತೆ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಾಜ್ ಬಿ ಶೆಟ್ಟಿ, ಮಲಯಾಳಂ ಚಿತ್ರರಂಗದಲ್ಲೂ ತಮ್ಮ ನಟನೆಯ ಛಾಪು ಮೂಡಿಸಿದ್ದಾರೆ. ಇದೀಗ ತಮಿಳು ಚಿತ್ರರಂಗದ ಸ್ಟಾರ್ ನಟ ವಿಜಯ್ ಸೇತುಪತಿ ಜೊತೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.
ಒಟ್ಟಿನಲ್ಲಿ, ಸಂಕ್ರಾಂತಿ ಹಬ್ಬಕ್ಕೆ ‘ಪಾಕೆಟ್ ನಾವೆಲ್’ ಮೂಲಕ ರಾಜ್ ಬಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ವಿಭಿನ್ನ ಕಾಂಬಿನೇಷನ್ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ಮೋಡಿ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.