Bigg Boss Kannada Season 13 elimination : ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ರಂಗೇರುತ್ತಿದೆ. ಫಿನಾಲೆ ಹಂತದತ್ತ ಸಾಗುತ್ತಿದ್ದರೂ ಪ್ರತಿ ವಾರದ ಎಲಿಮಿನೇಷನ್ ಕುತೂಹಲ ಮೂಡಿಸುತ್ತಿದೆ. ಈ ವಾರ ಯಾರು ಮನೆಯಿಂದ ಹೊರಹೋಗಲಿದ್ದಾರೆ ಎಂಬ ಪ್ರಶ್ನೆ ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ವೋಟಿಂಗ್ ಟ್ರೆಂಡ್ ಗಮನಿಸಿದರೆ ಒಬ್ಬ ಸ್ಪರ್ಧಿಗೆ ಎಲಿಮಿನೇಷನ್ ಭೀತಿ ಎದುರಾಗಿದೆ.
1/5
ಬಿಗ್‌ಬಾಸ್ ಕನ್ನಡ 13ಎಲಿಮಿನೇಷನ್
ಈ ವಾರ ನಾಮಿನೇಟ್ ಆಗಿರುವ ಸ್ಪರ್ಧಿಗಳ ಪೈಕಿ ಕೆಲವರು ಉತ್ತಮ ಮತಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಮತ್ತೊಂದೆಡೆ, ಒಬ್ಬ ಸ್ಪರ್ಧಿ ವೋಟಿಂಗ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
2/5
ಬಿಗ್‌ಬಾಸ್ ಕನ್ನಡ 13ಎಲಿಮಿನೇಷನ್
ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಈ ವಾರ ಯಶಸ್ ಕೃಷ್ಣ, ಸೌಂದರ್ಯಾ ಶೆಟ್ಟಿ, ಆಸಿಯಾ ಫಿರ್ದೋಸ್, ಕಿರಣ್ ಶಾಸ್ತ್ರಿ, ಜಗದೀಶ್ (ಜಗ್ಗ ಮಮ್ಮಿ) ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಈ ಪೈಕಿ ಕೆಲವರು ಉತ್ತಮ ಮತಗಳೊಂದಿಗೆ ಸುರಕ್ಷಿತ ಸ್ಥಾನದಲ್ಲಿದ್ದರೆ, ಕೊನೆಯ ಸ್ಥಾನದಲ್ಲಿರುವ ಸ್ಪರ್ಧಿ ಮನೆಯಿಂದ ಹೊರ ಹೋಗಲಿದ್ದಾರೆ.
3/5
ಬಿಗ್‌ಬಾಸ್ ಕನ್ನಡ 13ಎಲಿಮಿನೇಷನ್
ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಆಟದ ಮೂಲಕ ಗಮನ ಸೆಳೆದಿದ್ದ ಈ ಸ್ಪರ್ಧಿಗೆ ಈ ವಾರ ಪ್ರೇಕ್ಷಕರಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಈ ವಾರದ ಎಲಿಮಿನೇಷನ್‌ನಲ್ಲಿ ಇವರೇ ಹೊರಬರಬಹುದು ಎಂಬ ಊಹಾಪೋಹಗಳು ಜೋರಾಗಿವೆ.
4/5
ಬಿಗ್‌ಬಾಸ್ ಕನ್ನಡ 13ಎಲಿಮಿನೇಷನ್
ಸಾಮಾಜಿಕ ಮಾಧ್ಯಮಗಳಲ್ಲಿನ ಲೆಕ್ಕಾಚಾರದ ಪ್ರಕಾರ, ಜಗದೀಶ್ (ಜಗ್ಗ ಮಮ್ಮಿ) ಬಿಗ್ ಬಾಸ್ ಕನ್ನಡ ಸೀಸನ್ 13 ರಿಂದ ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಎಲಿಮಿನೇಷನ್ ಪ್ರಕ್ರಿಯೇಯಲ್ಲಿ ಜಗದೀಶ್ ಹೊರ ಬರಬಹುದು ಎಂಬ ಚರ್ಚೆ ಜೋರಾಗಿದೆ.
5/5
ಬಿಗ್‌ಬಾಸ್ ಕನ್ನಡ 13ಎಲಿಮಿನೇಷನ್
ಆದರೆ ಅಧಿಕೃತವಾಗಿ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬ ಬಗ್ಗೆ ಇಂದಿನ ಎಪಿಸೋಡ್‌ನಲ್ಲಿಯೇ ತಿಳಿಯಲಿದೆ. ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಯಾರಿಗೆ ಗುಡ್‌ಬೈ ಹೇಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.