ಇಂದು ಕಿಚ್ಚನ ಪಂಚಾಯಿತಿಯಲ್ಲಿ ಬಿಗ್‌ಬಾಸ್ ಸ್ಪರ್ಧಿ ಸುದೀಪ್ ಅವರ ಮುಖವಾಡವನ್ನು ರಿವೀಲ್ ಮಾಡಲಾಗಿದೆ
ಬಿಗ್‌ಬಾಸ್ ಮನೆಯಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಕ್ಕಿದ್ದು, ವಾರಕ್ಕೊಂದು ಕುತೂಹಲ ಈ ವಾರವಂತೂ ಗುಳ್ಳೇನರಿಯದೇ ಸದ್ದು ಜೋರಾಗಿಬಿಟ್ಟಿದೆ.
1/5
ಈ ವಾರ ಬರೀ ಗುಳ್ಳೆನರಿಯದ್ದೇ ಸದ್ದು
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಬರೀ ಗುಳ್ಳೆನರಿಯದ್ದೇ ಸದ್ದು.. ಯಾರು ಈ ಗುಳ್ಳೆನರಿ? ಎಲ್ಲಿಂದ ಬಂತು? ಇದರ ಹಿಂದಿರೋ ಅಸಲಿ ವ್ಯಕ್ತಿ ಯಾರು? ಇಂತಹ ಹತ್ತಾರು ಪ್ರಶ್ನೆಗಳು ಮನೆಯ ಸದಸ್ಯರ ತಲೆ ಕೆಡಿಸಿವೆ. ವಾರವಿಡೀ ಮನೆಯವರ ನಿದ್ದೆಗೆಡಿಸಿದ್ದ ಈ ನಿಗೂಢ ಗುಳ್ಳೆನರಿಯ ಅಸಲಿ ಮುಖ ಕೊನೆಗೂ ಬಯಲಾಗುವ ಸಮಯ ಬಂದಿದೆ.
2/5
ದಿನಕ್ಕೊಂದು ಟ್ವಿಸ್ಟ್
ಬಿಗ್‌ಬಾಸ್ ಮನೆಯಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಕ್ಕಿದ್ದು, ವಾರಕ್ಕೊಂದು ಕುತೂಹಲ ಈ ವಾರವಂತೂ ಗುಳ್ಳೇನರಿಯದೇ ಸದ್ದು ಜೋರಾಗಿಬಿಟ್ಟಿದೆ. ಮನೆಯ ಸದಸ್ಯರಿಗೆ ಕಾಣಿಸಿಕೊಂಡು ಕಾಡುತ್ತಿದ್ದ ಈ ಗುಳ್ಳೆನರಿ ಯಾರು ಎಂಬುದೇ ಎಲ್ಲರಿಗೂ ದೊಡ್ಡ ಪ್ರಶ್ನೆಯಾಗಿತ್ತು. ಗುಳ್ಳೆನರಿ ಮನೆಯೊಳಗೆ ಹೇಗೆ ಬಂತು? ಅದರ ಹಿಂದಿನ ವ್ಯಕ್ತಿ ಯಾರು? ಎಂಬ ಚರ್ಚೆಗಳು ಕೂಡ ಜೋರಾಗಿದ್ದವು.
3/5
ಮನೆಯವರು ವಿಫಲ
ಆದರೆ, ಈ ನಿಗೂಢ ಆಟದ ಹಿಂದಿನ ಅಸಲಿ ವ್ಯಕ್ತಿ ಬೇರಾರೂ ಅಲ್ಲ.. ಸ್ಪರ್ಧಿ ಯಶಸ್. ಹೌದು, ಯಶಸ್ ಗುಳ್ಳೆನರಿಯ ಪಾತ್ರದಲ್ಲಿ ಕಾಣಿಸಿಕೊಂಡು ಮನೆಯ ಸದಸ್ಯರಿಗೆ ಸಖತ್ ಕುತೂಹಲ ಮೂಡಿಸಿದ್ದಾರೆ. ಇಷ್ಟೆಲ್ಲಾ ನಡೆದರೂ ಗುಳ್ಳೆನರಿಯ ಅಸಲಿ ಗುರುತನ್ನು ಕಂಡುಹಿಡಿಯುವಲ್ಲಿ ಮನೆಯವರು ವಿಫಲರಾಗಿದ್ದಾರೆ.
4/5
ಕಿಚ್ಚನ ಪಂಚಾಯ್ತಿಯಲ್ಲಿ ಗುಳ್ಳೆನರಿಯ ಅಸಲಿ ಮುಖ
ಇದೀಗ ವಾರಾಂತ್ಯದ ಸಂಚಿಕೆಯಲ್ಲಿ ಈ ರಹಸ್ಯಕ್ಕೆ ತೆರೆ ಬೀಳಲಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಕಿಚ್ಚನ ಪಂಚಾಯ್ತಿಯಲ್ಲಿ ಗುಳ್ಳೆನರಿಯ ಅಸಲಿ ಮುಖ ಬಯಲಾಗಲಿದೆ.
5/5
ಗುಳ್ಳೆನರಿಯ ರಹಸ್ಯ
ಯಶಸ್ ಅವರ ಈ ಆಟದ ಬಗ್ಗೆ ಮನೆಯ ಸದಸ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆ? ಗುಳ್ಳೆನರಿಯ ರಹಸ್ಯ ಬಯಲಾದಾಗ ಮನೆಯವರ ಮುಖದಲ್ಲಿ ಯಾವ ರೀತಿಯ ಅಚ್ಚರಿ ಮೂಡಲಿದೆ? ಎಂಬ ಕುತೂಹಲ ಹೆಚ್ಚಾಗಿದೆ.