• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಸಿಹಿ ತಿನಿಸೆಂದು ರಸಗುಲ್ಲಾ ರೀತಿಯ ವಸ್ತುವನ್ನು ಬಾಯಲ್ಲಿಟ್ಟ ವ್ಯಕ್ತಿಗೆ ಕಾದಿತ್ತು ಶಾಕ್!‌ ಮುಂದಾಗಿದ್ದು ಅನಾಹುತ

ಸಿಹಿ ತಿನಿಸೆಂದು ರಸಗುಲ್ಲಾ ರೀತಿಯ ವಸ್ತುವನ್ನು ಬಾಯಲ್ಲಿಟ್ಟ ವ್ಯಕ್ತಿಗೆ ಕಾದಿತ್ತು ಶಾಕ್!‌ ಮುಂದಾಗಿದ್ದು ಅನಾಹುತ

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಪದರಿಯಾ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ರಸಗುಲ್ಲಾ ಎಂದು ಭಾವಿಸಿ ದೇಶೀಯ ಬಾಂಬ್ ಕಚ್ಚಿದ ಪರಿಣಾಮ ಬಾಯಲ್ಲೇ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Written ByYashaswini V
Published: Nov 13, 2026, 11:35 IST|Updated: Nov 13, 2026, 11:38 IST
joinshare
ಸಿಹಿ ತಿನಿಸೆಂದು ರಸಗುಲ್ಲಾ ರೀತಿಯ ವಸ್ತುವನ್ನು ಬಾಯಲ್ಲಿಟ್ಟ ವ್ಯಕ್ತಿಗೆ ಕಾದಿತ್ತು ಶಾಕ್!‌ ಮುಂದಾಗಿದ್ದು ಅನಾಹುತ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮಧ್ಯಪ್ರದೇಶ : ಮಧ್ಯಪ್ರದೇಶ ದಿಂಡೋರಿಯಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ರಸಗುಲ್ಲಾ ಎಂದು ಭಾವಿಸಿ ದೇಶಿಯ ತಯಾರಕ ಸ್ಪೋಟಕವನ್ನು ಬಾಯಿಗೆ ಹಾಕಿಕೊಂಡು ಕಚ್ಚಿದ ಪರಿಣಾಮ ಅದು ಬಾಯಲ್ಲೇ ಸ್ಪೋಟಗೊಂಡು ಮುಖವೆಲ್ಲಾ ಛಿದ್ರ ಛಿದ್ರವಾಗಿ ಆತ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ತೀವ್ರ ತನಿಖೆಗೆ ಒಳಪಡಿಸಿದ್ದಾರೆ.

ಏನಿದು ಘಟನೆ ?
ಮಧ್ಯಪ್ರದೇಶದ ದಿಂಡೋರಿಯ ಜಿಲ್ಲೆಯ ಪದಾರಿಯಾ ಗ್ರಾಮದಲ್ಲಿ ನ. 10ರ ತಡರಾತ್ರಿ ರಾಜೇಂದ್ರ ಬರೋಟಿಯಾ ಎಂಬ ವ್ಯಕ್ತಿ ಊಟ ಮಾಡಿ ಚಳಿಗೆ ಬೆಂಕಿ ಕಾಯುಸುತ್ತಾ ಹೊರಗೆ ಕುಳಿತಿದ್ದರು. ಈ ವೇಳೆ ರಾಮ್‌ ಭಗತ್‌ ಬರೋಟಿಯಾ ಎಂಬಾತ ಅವರ ಮನೆಗೆ ಬಂದಿದ್ದಾನೆ. ಆತನ ಕೈಯಲ್ಲಿ ಬಿಳಿ ಬಣ್ಣದ, ದುಂಡಗಿನ ವಸ್ತುವೊಂದಿತ್ತು. ಆ ವಸ್ತುವನ್ನು ರಾಮ್‌ ಭಗತ್‌ ರಾಜೇಂದ್ರಾ ಅವರಿಗೆ ನೀಡಿದ್ದಾನೆ. ಹಾಗೆಯೇ ಅದು ರಸಗುಲ್ಲಾ ಎಂದು ಹೇಳಿ ನೀಡಿದ್ದಾನೆ ಎನ್ನಲಾಗಿದೆ. ಆತನ ಮಾತನ್ನು ನಂಬಿದ ರಾಜೇಂದ್ರ, ಅದನ್ನು ನಿಜವಾದ ಸಿಹಿ ತಿಂಡಿ ರಸಗುಲ್ಲಾ ಎಂದು ಭಾವಿಸಿ ಹಿಂದೆ ಮುಂದೆ ನೋಡದೆ ಬಾಯಿಗೆ ಹಾಕಿಕೊಂಡಿದ್ದಾರೆ. ಅದನ್ನು ಬಾಯಿಗಿಟ್ಟು ಒಂದು ಬೈಟ್‌ ಅಗಿಯುತ್ತಿದ್ದಂತೆ ಅದು ಸ್ಫೋಟಗೊಂಡಿರುವ ಘಟನೆ ನಡೆದಿದೆ.

ಹೌದು, ರಾಜೇಂದ್ರ ಅವರಿಗೆ ರಾಮ್‌ ಭಗತ್‌ ಬರೋಟಿಯಾ ಎಂಬಾತ ಸಿಹಿ ತಿನಿಸು ಎಂದು ಹೇಳಿ ನೀಡಿದ ವಸ್ತು ರಸಗುಲ್ಲಾ ಆಗಿರಲಿಲ್ಲ, ಬದಲಾಗಿ ಅದು ದೇಶಿಯ ನಾಡ ಬಾಂಬ್ ಆಗಿತ್ತು ಎಂದು ತಿಳಿದುಬಂದಿದೆ. ಹಾಗಾಗಿಯೇ, ರಾಜೇಂದ್ರ ಸಿಹ ತಿನಿಸೆಂದು ಭಾವಿಸಿ ಬಾಯಿಗೆ ಹಾಕಿಕೊಂಡ ರಸಗುಲ್ಲ ರೀತಿಯ ವಸ್ತು ಭಾರಿ ಶಬ್ದದೊಂದಿಗೆ ಬಾಯಲ್ಲೇ ಸ್ಪೋಟಗೊಂಡಿದೆ. ಸ್ಫೋಟದ ತೀವ್ರತೆಗೆ ರಾಜೇಂದ್ರ ಅವರ ಬಾಯಿ, ದವಡೆ ಹಾಗೂ ಮುಖ ಛಿದ್ರ ಛಿದ್ರಗೊಂಡಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

ಮನೆಯೊಳಗೆ ಏಕಾಏಕಿ ಭಾರಿ ಸ್ಫೋಟದ ಶಬ್ದ ಕೇಳಿ ಬಂದ ತಕ್ಷಣ, ರಾಜೇಂದ್ರ ಅವರ ಪತ್ನಿ ಸುಶೀಲಾ ಬಾಯಿ ಗಾಬರಿಯಿಂದ ಕೋಣೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ರಕ್ತದ ಮಡುವಿನಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಪತಿಯನ್ನು ಕಂಡು ಆಕೆ ಆಘಾತಕ್ಕೊಳಗಾಗಿದ್ದಾರೆ.

ತಕ್ಷಣವೇ ನೆರೆ ಹೊರೆಯವರನ್ನು ಕೂಗಿ ಕರೆದು ಅವರ ಸಹಾಯದಿಂದ ಆಟೋ ರಿಕ್ಷಾದಲ್ಲಿ ರಾಜೇಂದ್ರ ಅವರನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ರಾಜೇಂದ್ರ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ವೈದ್ಯರು ದೃಢಪಡಿಸಿದ್ದಾರೆ. ಇದಾದ ಬಳಿಕ ನ. 11 ರಂದು ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರು ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.  ಈ ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ.

ಪೊಲೀಸ್‌ ತನಿಖೆ:
ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ದಿಂಡೋರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಮೃತನಿಗೆ ಸ್ಫೋಟಕ ನೀಡಿದ್ದ ಪ್ರಮುಖ ಆರೋಪಿ ರಾಮ್ ಭಗತ್ ಬರೋಟಿಯಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ರಾಮ್‌ ಭಗತ್‌, ತನಗೆ ಒಬ್ಬ ಬಾಲಕ ಈ ಬಾಂಬ್‌ ನೀಡಿದ್ದು ಎಂದು ಬಾಯ್ಬಿಟ್ಟಿದ್ದಾನೆ. ಆತನ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆ ಹುಡುಗನನ್ನೂ ಸಹ ಬಂಧಿಸಿದ್ದಾರೆ. ಈತನೊಂದಿಗೆ ಮತ್ತೊಬ್ಬ ಆರೋಪಿಯನ್ನು ಜೈಲಿಗಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಆದರೆ ಈ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿ ಕೊ*ಲೆ ಮಾಡುವ ಸಂಚಿನಿಂದ ರಾಜೇಂದ್ರ ಅವರಿಗೆ ಬಾಂಬ್‌ ನೀಡಿದ್ದಾರೆಯೇ? ಉದ್ದೇಶಪೂರ್ವಕವಾಗಿ ನೀಡಿದ್ದರೂ ಅದು ಏಕೆ? ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎಂಬುದರ ಬಗ್ಗೆ ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

Add Zee News as a Preferred Source
TAGS:
Crime
India