• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಚಿನ್ನಕ್ಕಿಂತಲೂ ದುಬಾರಿ ಈ ಪ್ರಾಣಿಯ ಹಾಲು! ಲೀಟರ್‌ಗೆ 7,000 ದರದಲ್ಲಿ ಮಾರಾಟ

ಚಿನ್ನಕ್ಕಿಂತಲೂ ದುಬಾರಿ ಈ ಪ್ರಾಣಿಯ ಹಾಲು! ಲೀಟರ್‌ಗೆ 7,000 ದರದಲ್ಲಿ ಮಾರಾಟ

ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ರಾಜ್ಯದ ಮೊದಲ ಕತ್ತೆ ಹಾಲಿನ ಫಾರ್ಮ್ ‘ಡೈರಿಕಾ ಫಾರ್ಮ್ಸ್’ ಆರಂಭವಾಗಿದ್ದು, ಇಲ್ಲಿ ಪ್ರತಿ ಲೀಟರ್ ಹಾಲನ್ನು ₹7,000 ದರದಲ್ಲಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 21, 2026, 17:32 IST|Updated: Nov 21, 2026, 17:35 IST
joinshare
ಚಿನ್ನಕ್ಕಿಂತಲೂ ದುಬಾರಿ ಈ ಪ್ರಾಣಿಯ ಹಾಲು! ಲೀಟರ್‌ಗೆ 7,000 ದರದಲ್ಲಿ ಮಾರಾಟ
Image Credit: Donkey Milk Farm

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

2

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

3

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

4

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

5

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಕತ್ತೆ ಹಾಲು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚರಿ ಮೂಡಿಸುವ ವಿಷಯ. ಆದರೆ, ಸೌಂದರ್ಯವರ್ಧಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಭಾರಿ ಬೇಡಿಕೆಯನ್ನು ಮನಗಂಡು ಹಿಮಾಚಲ ಪ್ರದೇಶದಲ್ಲಿ ಕತ್ತೆ ಹಾಲಿನ ಉದ್ಯಮವು ಇದೀಗ ಹೊಸ ಕ್ರಾಂತಿ ಮೂಡುತ್ತಿದೆ. ಹೌದು.. ರಾಜ್ಯದ ಬಿಲಾಸ್ಪುರ ಜಿಲ್ಲೆಯ ಕಂದರೋರ್‌ ಗ್ರಾಮದಲ್ಲಿ ಹಿಮಾಚಲ ಪ್ರದೇಶದ ಮೊದಲ ಕತ್ತೆ ಫಾರ್ಮ್‌ ಆರಂಭವಾಗಿದ್ದು, ಇಲ್ಲಿ ಕತ್ತೆ ಹಾಲನ್ನು ಲೀಟರ್‌ಗೆ ಸುಮಾರು 7,000 ದರದಲ್ಲಿ ಮಾರಾಟ ಮಾಡುವ ಗುರಿಯಿದೆ.

ಸಂಜೀವ್ ಸಿಂಗ್ ಠಾಕೂರ್ ಮತ್ತು ಸಹ-ಸ್ಥಾಪಕಿ ಸೀರತ್ ತೂರ್ ಅವರು ಸೇರಿ ‘ಡೈರಿಕಾ ಫಾರ್ಮ್ಸ್’ ಎಂಬ ಈ ವಿನೂತನ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ದೇಶದಲ್ಲಿ ಕತ್ತೆಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿರುವುದನ್ನು ಗಮನಿಸಿದ ಇವರು, ಹಿಮಾಚಲ ಪ್ರದೇಶದ ಸ್ಥಳೀಯ ‘ಸ್ಪಿತಿ’ ತಳಿಯ ಕತ್ತೆಗಳನ್ನು ಸಂರಕ್ಷಿಸುವ ಮತ್ತು ಸಾಕುವ ನಿರ್ಧಾರಕ್ಕೆ ಬಂದರು. ಆರಂಭದಲ್ಲಿ 12 ಕತ್ತೆಗಳೊಂದಿಗೆ ಶುರುವಾಗಿರುವ ಈ ಫಾರ್ಮ್‌ನಲ್ಲಿ ಶೀಘ್ರದಲ್ಲೇ ಕತ್ತೆಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸುವ ಯೋಜನೆಯಿದೆ. ಇತ್ತೀಚೆಗೆ ನಡೆದ ‘ಡೈರಿ ಕಾನ್ಕ್ಲೇವ್ 2026’ ಸಂದರ್ಭದಲ್ಲಿ ರಾಜ್ಯದ ತಾಂತ್ರಿಕ ಶಿಕ್ಷಣ ಸಚಿವ ರಾಜೇಶ್ ಧರ್ಮಾನಿ ಅವರು ಈ ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಸಾಮಾನ್ಯ ಹಾಲಿಗೆ ಹೋಲಿಸಿದರೆ ಕತ್ತೆ ಹಾಲು ಹಲವು ಪಟ್ಟು ದುಬಾರಿಯಾಗಿದೆ. ಮಾರುಕಟ್ಟೆಯಲ್ಲಿ ಕತ್ತೆ ಹಾಲು ಪ್ರತಿ ಲೀಟರ್‌ಗೆ ₹5,000 ದಿಂದ ₹7,000 ವರೆಗೆ ಮಾರಾಟವಾಗುತ್ತದೆ. ಇನ್ನು ಕತ್ತೆ ಹಾಲಿನ ಪುಡಿಗೆ ಚಿನ್ನದಂತಹ ಬೆಲೆಯಿದ್ದು, ಗುಣಮಟ್ಟಕ್ಕೆ ಅನುಗುಣವಾಗಿ ಒಂದು ಕೆ.ಜಿ. ಪುಡಿ ₹20,000 ದಿಂದ ₹80,000 ವರೆಗೆ ಮಾರಾಟವಾಗುತ್ತದೆ.

ಕತ್ತೆ ಹಾಲಿನಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಪ್ರೋಟೀನ್ ಹೇರಳವಾಗಿದ್ದು, ಇದರ ಸಂಯೋಜನೆಯು ಮಾನವನ ಎದೆಹಾಲಿಗೆ ಹೋಲಿಕೆಯಾಗುತ್ತದೆ. ತ್ವಚೆಯ ತೇವಾಂಶವನ್ನು ಕಾಪಾಡುವ ವಿಶೇಷ ಗುಣ ಇದರಲ್ಲಿರುವುದರಿಂದ ದೇಶೀಯ ಹಾಗೂ ವಿದೇಶಿ ಕಂಪನಿಗಳು ಸೋಪ್, ಕ್ರೀಮ್, ಲೋಷನ್ ಮುಂತಾದ ದುಬಾರಿ ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಇದನ್ನು ಬಳಸುತ್ತವೆ. (ಆದರೆ, ಇದರಿಂದ ನಿರ್ದಿಷ್ಟ ಕಾಯಿಲೆಗಳು ಗುಣವಾಗುತ್ತವೆ ಎಂಬುದಕ್ಕೆ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳ ಅಗತ್ಯವಿದೆ.)

ಡೈರಿಕಾ ಫಾರ್ಮ್ಸ್ ತನ್ನ ಸ್ವಂತ ಕತ್ತೆಗಳ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಪಶುಪಾಲಕರಿಂದಲೂ ಹಾಲು ಸಂಗ್ರಹಿಸುತ್ತಿದ್ದು, ಸ್ಥಳೀಯ ರೈತರಿಗೆ ಹೆಚ್ಚುವರಿ ಆದಾಯದ ದಾರಿ ತೋರಿಸಿದೆ. ಅಲ್ಲದೆ, ಕತ್ತೆ ಸಾಕಾಣಿಕೆಯನ್ನು ಉತ್ತೇಜಿಸಲು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ವಿಶೇಷ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಿದೆ. ಅರ್ಹ ಉದ್ಯಮಿಗಳು ಕತ್ತೆ, ಕುದುರೆ, ಒಂಟೆ, ಕುರಿ, ಮೇಕೆ ಸಾಕಾಣಿಕೆ ಫಾರ್ಮ್‌ಗಳನ್ನು ಸ್ಥಾಪಿಸಲು ₹50 ಲಕ್ಷದವರೆಗೆ ಸಬ್ಸಿಡಿ ಪಡೆಯಬಹುದಾಗಿದೆ.

ಈಗಾಗಲೇ ದೇಶಾದ್ಯಂತ ಇಂತಹ 3,843 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಸಾವಿರಾರು ಉದ್ಯಮಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ, ಕತ್ತೆ ಹಾಲಿನ ಉದ್ಯಮವು ಗ್ರಾಮೀಣ ಭಾಗದ ರೈತರು ಮತ್ತು ಯುವ ಉದ್ಯಮಿಗಳಿಗೆ ಲಾಭದಾಯಕ ಪರ್ಯಾಯ ಆದಾಯದ ಮೂಲವಾಗಿ ಹೊರಹೊಮ್ಮುತ್ತಿದೆ.

Add Zee News as a Preferred Source
TAGS:
News