SOCIAL MEDIA

Newsletter

PARTNER SITES
Select Language Select State

ಪುಟ್ಟಪ್ಪನ ಕ್ಯಾಂಪ್ ಬಳಿ ದುರಂತ!.. ತುಂಗಾ ನದಿಯಲ್ಲಿ ಯುವಕ ನಾಪತ್ತೆ

Boy missing Tunga River: ತುಂಗಾ ನದಿಯಲ್ಲಿ ಈಜಲು ಇಳಿದಿದ್ದ ಯುವಕನೋರ್ವ ನೀರುಪಾಲಾಗಿ ನಾಪತ್ತೆಯಾಗಿದ್ದಾನೆ.ಶಿವಮೊಗ್ಗದ ಪುಟ್ಟಪ್ಪನ ಕ್ಯಾಂಪ್‌ ಬಳಿ ಈ ಘಟನೆ ನಡೆದಿದ್ದು, ನಾಪತ್ತೆಯಾಗಿರುವ ಯುವಕನಿಗಾಗಿ ಪೊಲೀಸರು, ಸ್ಥಳೀಯರು ಹಾಗೂ ಈಜು ತಜ್ಞರು ತೀವ್ರ ಶೋಧ ನಡೆಸುತ್ತಿದ್ದಾರೆ. ಇನ್ನು ನದಿಯ ನೀರಿನ ಹರಿವು ಹಾಗೂ ಆಳ ಶೋಧ ಕಾರ್ಯಕ್ಕೆ ಸವಾಲಾಗಿ ಪರಿಣಮಿಸಿದೆ.

Written By Ramya. R. Gowda
Published: Oct 08, 2026, 12:01 PM IST | Updated: Oct 08, 2026, 12:07 PM IST
Join

ತುಂಗಾ ನದಿಯಲ್ಲಿ ಈಜಲು ಇಳಿದಿದ್ದ ಯುವಕನೋರ್ವ ನೀರುಪಾಲಾಗಿ ನಾಪತ್ತೆಯಾಗಿದ್ದಾನೆ.ಶಿವಮೊಗ್ಗದ ಪುಟ್ಟಪ್ಪನ ಕ್ಯಾಂಪ್‌ ಬಳಿ ಈ ಘಟನೆ ನಡೆದಿದ್ದು, ನಾಪತ್ತೆಯಾಗಿರುವ ಯುವಕನಿಗಾಗಿ ಪೊಲೀಸರು, ಸ್ಥಳೀಯರು ಹಾಗೂ ಈಜು ತಜ್ಞರು ತೀವ್ರ ಶೋಧ ನಡೆಸುತ್ತಿದ್ದಾರೆ. ಇನ್ನು ನದಿಯ ನೀರಿನ ಹರಿವು ಹಾಗೂ ಆಳ ಶೋಧ ಕಾರ್ಯಕ್ಕೆ ಸವಾಲಾಗಿ ಪರಿಣಮಿಸಿದೆ.

ತುಂಗಾ ನದಿಯಲ್ಲಿ ಈಜಲು ಇಳಿದಿದ್ದ ಯುವಕ ನೀರುಪಾಲು ಪುಟ್ಟಪ್ಪನ ಕ್ಯಾಂಪ್‌ ಬಳಿ ಸ್ನೇಹಿತರ ಜೊತೆ ತೆರಳಿದ್ದ 20 ವರ್ಷದ ಫೈಜಾನ್ ಇದೀಗ ನಾಪತ್ತೆಯಾಗಿದ್ದಾನೆ.ಫೈಜಾನ್ ಜೊತೆಯಲ್ಲಿದ್ದ 25 ವರ್ಷದ ಯಾಸಿನ್ ಅರಾಫತ್ ಕೂಡ ನದಿಗೆ ಇಳಿದಿದ್ದ ಎನ್ನಲಾಗಿದ್ದು, ಈ ವೇಳೆ ಆತ ಸುರಕ್ಷಿತವಾಗಿ ದಡ ಸೇರಿದ್ದಾನೆ.

ಘಟನೆ ತಿಳಿಯುತ್ತಿದ್ದಂತೆ ತುಂಗ ನಗರ ಠಾಣೆ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನದಿಯಲ್ಲಿ ಫೈಜಾನ್‌ಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ನದಿಯ ನೀರಿನ ಹರಿವು ಹೆಚ್ಚಿರುವುದು ಹಾಗೂ ಕೆಲವೆಡೆ ಆಳ ಹೆಚ್ಚಾಗಿರುವುದರಿಂದ ಶೋಧ ಕಾರ್ಯಕ್ಕೆ ಸವಾಲು ಎದುರಾಗಿದೆ. ಇನ್ನು ನಾಪತ್ತೆಯಾದ ಫೈಜಾನ್‌ಗಾಗಿ ಈಜು ತಜ್ಞ ಈಶ್ವರ್ ಮಲ್ಪೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.ಹಗಲು ಮಾತ್ರವಲ್ಲದೇ ರಾತ್ರಿಯ ವೇಳೆಯೂ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಇನ್ನು ನದಿಯ ದಡದಲ್ಲಿ ಯುವಕರ ತಂಡ ಪಾರ್ಟಿ ಮಾಡಿತ್ತು ಎನ್ನಲಾಗುತ್ತಿದ್ದು, ಬಳಿಕ ಈಜಲು ನದಿಗೆ ಇಳಿದಿದ್ದರೇ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಘಟನೆ ಸಂಬಂಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ತುಂಗಾ ನದಿಯಲ್ಲಿ ನಾಪತ್ತೆಯಾಗಿರುವ ಫೈಜಾನ್‌ಗಾಗಿ ಸತತವಾಗಿ ಶೋಧ ಕಾರ್ಯ ನಡೆಯುತ್ತಿದೆ.ನೀರಿನ ವೇಗದ ಹರಿವು ಹಾಗೂ ನದಿಯ ಆಳದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಈಜು ತಜ್ಞರು ಹಾಗೂ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಇತ್ತ ಫೈಜಾನ್ ಕುಟುಂಬಸ್ಥರು ನದಿಯ ದಡದಲ್ಲೇ ಆತಂಕದಿಂದ ಕಾದು ಕುಳಿತಿದ್ದಾರೆ. ಈಜಲು ಹೋಗಿ ನಾಪತ್ತೆಯಾದ ಫೈಜಾನ್‌ಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಯುವಕ ಪತ್ತೆಯಾಗಲಿ ಎಂದು ಕುಟುಂಬಸ್ಥರು ಆತಂಕದಿಂದ ಕಾಯುತ್ತಿದ್ದಾರೆ.ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
 

ಘಟನೆ ತಿಳಿಯುತ್ತಿದ್ದಂತೆ ತುಂಗ ನಗರ ಠಾಣೆ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನದಿಯಲ್ಲಿ ಫೈಜಾನ್‌ಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ನದಿಯ ನೀರಿನ ಹರಿವು ಹೆಚ್ಚಿರುವುದು ಹಾಗೂ ಕೆಲವೆಡೆ ಆಳ ಹೆಚ್ಚಾಗಿರುವುದರಿಂದ ಶೋಧ ಕಾರ್ಯಕ್ಕೆ ಸವಾಲು ಎದುರಾಗಿದೆ. ಇನ್ನು ನಾಪತ್ತೆಯಾದ ಫೈಜಾನ್‌ಗಾಗಿ ಈಜು ತಜ್ಞ ಈಶ್ವರ್ ಮಲ್ಪೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.ಹಗಲು ಮಾತ್ರವಲ್ಲದೇ ರಾತ್ರಿಯ ವೇಳೆಯೂ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES