ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಅಟ್ಟಹಾಸ.. ರೈತನ ಮೇಲೆ 500ಕ್ಕೂ ಹೆಚ್ಚು ಹೆಜ್ಜೇನುಗಳ ದಾಳಿ!
Honeybees attack :ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಹಿಂಡು ರೈತನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಏಕಿ ಮುಗಿಬಿದ್ದ 500ಕ್ಕೂ ಅಧಿಕ ಹೆಜ್ಜೇನುಗಳು ದೇಹದ ತುಂಬೆಲ್ಲ ಕಚ್ಚಿವೆ. ಹೆಜ್ಜೇನುಗಳ ದಾಳಿಯಿಂದ ರೈತ ತೀವ್ರ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Honeybees attack : ಚಿಕ್ಕಮಗಳೂರಿನಲ್ಲಿ ಹೆಜ್ಜೇನುಗಳ ಹಿಂಡು ರೈತನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಏಕಿ ಮುಗಿಬಿದ್ದ 500ಕ್ಕೂ ಅಧಿಕ ಹೆಜ್ಜೇನುಗಳು ದೇಹದ ತುಂಬೆಲ್ಲ ಕಚ್ಚಿವೆ. ಹೆಜ್ಜೇನುಗಳ ದಾಳಿಯಿಂದ ರೈತ ತೀವ್ರ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ರೈತನ ಜೊತೆ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೂ ಹೆಜ್ಜೇನುಗಳು ದಾಳಿ ಮಾಡಿವೆ.
ಚಿಕ್ಕಮಗಳೂರು ಹೊರವಲಯದ ಹಿರೇಕೊಳಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಮಾರ್ ಎಂಬ ರೈತ ಎಂದಿನಂತೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ಜೊತೆ ಇಬ್ಬರು ಕಾರ್ಮಿಕರೂ ಕೆಲಸದಲ್ಲಿ ತೊಡಗಿದ್ದರು. ಆದರೆ ಇದ್ದಕ್ಕಿದ್ದಂತೆ ಹೆಜ್ಜೇನುಗಳ ಹಿಂಡು ದಾಳಿ ಮಾಡಿದೆ.
ನೂರಾರು ಸಂಖ್ಯೆಯಲ್ಲಿ ಬಂದ ಹೆಜ್ಜೇನುಗಳು ರೈತ ಕುಮಾರ್ ಅವರನ್ನು ಸುತ್ತುವರಿದು ದಾಳಿ ನಡೆಸಿವೆ. ಸುಮಾರು 500ಕ್ಕೂ ಅಧಿಕ ಹೆಜ್ಜೇನುಗಳು ಕುಮಾರ್ ಅವರ ದೇಹದ ತುಂಬೆಲ್ಲ ಕಚ್ಚಿವೆ. ಹೆಜ್ಜೇನುಗಳ ದಾಳಿಯಿಂದ ತೀವ್ರ ಅಸ್ವಸ್ಥಗೊಂಡ ಕುಮಾರ್ ಅವರನ್ನು ತಕ್ಷಣ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಕುಮಾರ್ ಜೊತೆ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೂ ಹೆಜ್ಜೇನುಗಳು ದಾಳಿ ನಡೆಸಿವೆ. ಏಕಾಏಕಿ ನಡೆದ ಹೆಜ್ಜೇನುಗಳ ದಾಳಿಯಿಂದ ತೋಟದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೆಜ್ಜೇನುಗಳ ಭೀಕರ ದಾಳಿಗೆ ರೈತ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರಲ್ಲಿ ಟ್ಯಾಕ್ಸಿ ಚಾಲಕರ ಹೋರಾಟಕ್ಕೆ ಜಯ.. ಅದಾನಿ ಸಂಸ್ಥೆಗೆ ಬಿಸಿ ಮುಟ್ಟಿಸಿದ ಸತ್ಯಾಗ್ರಹ!
ಇತ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಟ್ಯಾಕ್ಸಿ ಚಾಲಕರು ಅದಾನಿ ಸಂಸ್ಥೆಯ ವಿರುದ್ಧ ನಡೆಸಿದ ಏಳು ದಿನಗಳ ನಿರಂತರ ಧರಣಿ ಸತ್ಯಾಗ್ರಹ ಯಶಸ್ವಿಯಾಗಿದೆ. ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿದ್ದ ಬಂದ್ ಅನ್ನು ಟ್ಯಾಕ್ಸಿ ಚಾಲಕರು ಹಿಂಪಡೆದಿದ್ದಾರೆ.
ನವೆಂಬರ್ 15ರಿಂದ 23ರವರೆಗೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಸಮೀಪ ಟ್ಯಾಕ್ಸಿ ಚಾಲಕರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಅದಾನಿ ಸಂಸ್ಥೆಯ ವಿರುದ್ಧ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಭಯ ಜಿಲ್ಲೆಗಳ ಟ್ಯಾಕ್ಸಿ ಚಾಲಕರು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದಿದ್ದರು.
ಈ ಹೋರಾಟಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಟ್ಯಾಕ್ಸಿ ಸಂಘಟನೆಗಳ ಪದಾಧಿಕಾರಿಗಳು ಕೈಜೋಡಿಸಿದ್ದರು. ಅಲ್ಲದೆ, ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ಕೂಡ ಟ್ಯಾಕ್ಸಿ ಚಾಲಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.
ಏಳು ದಿನಗಳ ಕಾಲ ನಡೆದ ನಿರಂತರ ಸತ್ಯಾಗ್ರಹಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಹೋರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ಇಂದು ನಡೆಸಲು ಉದ್ದೇಶಿಸಿದ್ದ ಬಂದ್ ನಿರ್ಧಾರವನ್ನು ಚಾಲಕರು ಹಿಂಪಡೆದಿದ್ದಾರೆ. ಒಟ್ಟಿನಲ್ಲಿ, ತಮ್ಮ ಹಕ್ಕು ಮತ್ತು ನ್ಯಾಯಯುತ ಬೇಡಿಕೆಗಳಿಗಾಗಿ ಒಂದಾಗಿ ಹೋರಾಟ ನಡೆಸಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಟ್ಯಾಕ್ಸಿ ಚಾಲಕರ ಸತ್ಯಾಗ್ರಹ ಸದ್ಯಕ್ಕೆ ಯಶಸ್ಸು ಕಂಡಿದೆ.