SOCIAL MEDIA

Newsletter

PARTNER SITES
Select Language Select State

ಅದಾನಿ ಸಂಸ್ಥೆಯ ಮಂಗಳೂರು ಏರ್ ಪೋರ್ಟ್ ನಲ್ಲಿ ಹಗಲು ದರೋಡೆ ಮಾಜಿ ಶಾಸಕ ರಘುಪತಿ ಭಟ್ ಆರೋಪ

Mangalore airport: ಅದಾನಿ ಸಂಸ್ಥೆ ನಿರ್ವಹಿಸುತ್ತಿರುವ ಮಂಗಳೂರು ಏರ್ ಪೋರ್ಟ್ ನಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಆರೋಪ ಮಾಡಿದ್ದಾರೆ.

Written By Ramya. R. Gowda
Published: Oct 13, 2026, 03:25 PM IST | Updated: Oct 13, 2026, 03:34 PM IST
Join

Mangalore airport:  ಅದಾನಿ ಸಂಸ್ಥೆ ನಿರ್ವಹಿಸುತ್ತಿರುವ ಮಂಗಳೂರು ಏರ್ ಪೋರ್ಟ್ ನಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಆರೋಪ ಮಾಡಿದ್ದಾರೆ. ಮಂಗಳೂರು ಪತ್ರಿಕಾಭವನದಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಅವರು, ಪ್ರವಾಸಿ ಕಾರುಗಳು ಸಾರ್ವಜನಿಕರಿಗೆ ಅತ್ಯುತ್ತಮ ಗುಣಮಟ್ಟದ, ತ್ವರಿತ ಮತ್ತು ಸಂಪೂರ್ಣ ಸುರಕ್ಷಾ ಮಾನದಂಡಗಳನ್ನು ಪಾಲಿಸುತ್ತಾ ಯಾವುದೇ ಸಂಚಾರ ನಿಯಮಗಳನ್ನು ಹಾಗೂ ಪೊಲೀಸ್ ನಿಯಮಗಳನ್ನೂ ಉಲ್ಲಂಘಿಸದೆ ಪರಿಪೂರ್ಣ ಸೇವೆಯನ್ನು ನೀಡುತ್ತ ದೇಶ ವಿದೇಶಗಳಿಂದ ಬರುವಂತಹ ಪ್ರವಾಸಿಗರಿಗೆ ಉತ್ತಮ ಸಾರಿಗೆ ಸೇವೆಯನ್ನು ನೀಡುತ್ತಾ ಬಂದಿರುತ್ತೇವೆ.

ಜಿಲ್ಲೆಯಲ್ಲಿ ಆಗ್ರಿಗೇಟರ್ ಇದ್ದರೂ ಇಲ್ಲಿಯ ಜನಸಾಮಾನ್ಯರು ಆಯ್ಕೆ ಮಾಡುವುದು ನಮ್ಮ ಸಂಪ್ರದಾಯಿಕ ಟ್ಯಾಕ್ಸಿಗಳನ್ನು. ವಸ್ತು ಸ್ಥಿತಿ ಈ ರೀತಿ ಇರುವಾಗ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮಗೆ ನಮ್ಮ ಗ್ರಾಹಕರನ್ನು ಏರ್‌ಪೋರ್ಟ್ ಗೆ ಕರೆತರುವ ಮತ್ತು ಬಿಡುವ ಸೇವೆಯನ್ನು ಮಾಡುವಾಗ ಅಲ್ಲಿ ನಮಗಾಗುತ್ತಿರುವ ತೊಂದರೆ ಮತ್ತು ಆವೈಜ್ಞಾನಿಕ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದೆ ಮತ್ತು ಖಾಸಗಿ ಕಾರು ಮತ್ತು ಪ್ರವಾಸಿ ವಾಹನಗಳ ಮಧ್ಯ ನಡೆಸುವಂತಹ ತಾರತಮ್ಯದ ವಿಚಾರದಲ್ಲಿ ನಾವು ಕಾವೂರು ಜಂಕ್ಷನ್ ನಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಮಾಡಿದ್ದರೂ ಏರ್ ಪೋರ್ಟ್  ಪೂರಕವಾದ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ವಿಚಾರಣೆ ನೋಡುತ್ತಿರುವ ಅದಾನಿ ಸಂಸ್ಥೆಯಿಂದ ಇನ್ನೊಂದು ವಸೂಲಿ ದಂಧೆಯಾದ ನಮ್ಮ ಪ್ರವಾಸಿ ವಾಹನಗಳು ನಮ್ಮ ಗ್ರಾಹಕರನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೋದರೆ ನಮ್ಮ ಗ್ರಾಹಕರನ್ನು ಡ್ರಾಪ್ ಮಾಡಿ ಹೊರಗೆ ಬರುವಾಗ ನಮ್ಮಿಂದ ರೂ 50/- ರೂಪಾಯಿಗಳ ಮೊತ್ತವನ್ನು ವಸೂಲಿ ಮಾಡಲು ಪ್ರಾರಂಭ ಮಾಡಿದ್ದಾರೆ. ಈ ವಸೂಲಿಯು ಖಾಸಗಿ ಕಾರುಗಳಿಗೆ ಸಂಬಂಧಪಟ್ಟಿಲ್ಲಇದು ತೀರಾ ಅನ್ಯಾಯವಾಗಿದೆ.

ಮೊದಲೇ ನಾವು ಪಾರ್ಕಿಂಗ್ ಲಾಟ್ ಗೆ ಹೋಗದೆ ಇದ್ದರೂ ನಮ್ಮ ಗ್ರಾಹಕರನ್ನು ಪಿಕ್ ಅಪ್ ಮಾಡುವಂತ ಸಂದರ್ಭದಲ್ಲಿ ನಾವು ದುಬಾರಿ ರೂ 180/- ರೂಪಾಯಿಗಳ ಶುಲ್ಕವನ್ನು ಪಾವತಿ ಮಾಡಬೇಕು. ಈಗ ಡ್ರಾಪ್ ಮಾಡಿ ಹೋಗುವಾಗಲೂ ರೂ 50/- ರೂಪಾಯಿಗಳ ಶುಲ್ಕವನ್ನು ಕೊಡಬೇಕಾಗಿದೆ. ಇದು ನಮ್ಮ ಸ್ವ ಉದ್ಯೋಗವಾದ ಟೂರಿಸ್ಟ್ ವಾಹನ ಬಾಲಕ ಮಾಲಕರ ಮೇಲೆ ಮಾಡುತ್ತಿರುವಂತಹ ಅನ್ಯಾಯವಾಗಿದೆ. ಈ ವಸೂಲಿಯು ಖಾಸಗಿ ಕಾರುಗಳಿಗೆ ಇಲ್ಲದೆ ಪ್ರವಾಸಿ ವಾಹನಗಳಿಗೆ ಮಾತ್ರ ಏಕೆ ಎಂದು ನಾವು ಚಿಂತಿಸಬೇಕಾಗಿದೆ.

ಯಾಕೆಂದರೆ ಇದು ಸ್ವ- ಉದ್ಯೋಗವಾದ ನಮ್ಮ ಪ್ರವಾಸಿ ಟ್ಯಾಕ್ಸಿ ವೃತ್ತಿಯನ್ನು ನಿರ್ನಾಮ ಮಾಡುವ ಹುನ್ನಾರವಾಗಿದೆ. ಆದ್ದರಿಂದ ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ನಮ್ಮ ಸ್ವ ಉದ್ಯೋಗ ವಾದ ಟ್ಯಾಕ್ಸಿವೃತ್ತಿಯನ್ನು ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸುತ್ತಾ ಮುಂದಿನ ದಿನಗಳಲ್ಲಿ ನಾವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕಾಬ್ ಎಸೋಸಿಯೇಷನ್ ನಮ್ಮೆಲ್ಲ ಉಭಯ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳನ್ನು ಒಟ್ಟುಗೂಡಿಸಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ವಿಚಾರಣೆ ಮಾಡುತ್ತಿರುವಂತಹ ಅದಾನಿ ಸಂಸ್ಥೆಗೆ ಹತ್ತು ದಿನಗಳ ಗಡುವು ನೀಡುತ್ತೇವೆ. ಆವಾಗಲೂ ಬೇಡಿಕೆ ಈಡೇರದಿದ್ರೆ ಏರ್ ಪೋರ್ಟ್ ಸಮೀಪ‌ ಪ್ರತಿಭಟನೆ ನಡೆಸ್ತೀವಿ ಎಂದರು.

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES