ನವರಾತ್ರಿ ಸಮಯದಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ಎಲ್ಲೆಡೆ ಇದೆ. ಆದರೆ ಈ ಸಂಪ್ರದಾಯ ಇತ್ತೀಚೆಗೆ ಕಣ್ಮರೆ ಆಗ್ತಿದೆ. ಆದ್ರೆ ಕೆಲವೊಂದು ಕುಟುಂಬಗಳು ಇಂದಿಗೂ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರ್ತಿದೆ. ಅದ್ರಲ್ಲೂ ಆಧುನಿಕ ಕಾಲಕ್ಕೆ ತಕ್ಕಂತೆ ಈ ಗೊಂಬೆ ಕೂರಿಸುವ ಸಂಪ್ರದಾಯವನ್ನು ಕಳೆದ 40 ವರ್ಷಗಳಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಈ ದಂಪತಿ ಕುಟುಂಬ ಇಂದಿಗೂ ಮುಂದುವರೆಸಿಕೊಂಡು ಬರ್ತಿದ್ದಾರೆ. ಇವರ ಈ ಸಂಪ್ರದಾಯ ಈಗಿನ ಮಾಡ್ರನ್ ಜನರ ಜನರ ಮೆಚ್ಚುಗೆಗೆ ಪಾತ್ರವಾಗಿ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಹೌದು!ನವರಾತ್ರಿ ಸಂಧರ್ಭದಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ಆಚರಣೆಯಲ್ಲಿದೆ. ಈ ಸಂಪ್ರದಾಯ ಇಂದಿಗೂ ಕೆಲವು ಕುಟುಂಬಗಳು ಆಚರಿಸಿಕೊಂಡು ಬರ್ತಿದೆ. ಇಂತಹ ಸಂಪ್ರದಾಯದ ಆಚರಣೆಗಳು ಇತ್ತೀಚೆಗೆ ಮರೆಯಾಗಿವೆ.ಇಂತಹ ನಶಿಸಿ ಹೋಗ್ತಿರೋ ಸಂಪ್ರದಾಯವನ್ನು ಶ್ರೀರಂಗಪಟ್ಟಣ ದಂಪತಿ ಕುಟುಂಬವೊಂದು ಈ ಆಚರಣೆ ಮಾಡುತ್ತಾ ಬರ್ತಿದೆ. ಇಂದಿಗೂ ಈ ಕುಟುಂಬ ಈ ಸಂಪ್ರದಾಯವನ್ನು ಕಳೆದ 40 ವರ್ಷಗಳಿಂದ ತಮ್ಮ ಕುಟುಂಬದ ತಲೆ ಮಾರಿನಿಂದ ಬಂದ ಈ ಬಳುವಳಿಯನ್ನು ಮುನ್ನಡೆಸಿಕೊಂಡು ಬರ್ತಿದ್ದಾರೆ.
ಇನ್ನು ಶ್ರೀರಂಗಪಟ್ಟಣದ ಲಕ್ಷ್ಮೀ ದೇವಿ ದೇಗುಲದ ಅರ್ಚಕರಾದ ಕೃಷ್ಣಭಟ್ ಶರ್ಮಾ ಮತ್ತು ಅವರ ಪತ್ನಿ ಮಂಗಳ ಕಳೆದ 40 ವರ್ಷ ಗಳಿಂದ ತಮ್ಮ ಮನೆಯಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ಆಚರಿಸಿಕೊಂಡು ಬರ್ತಿದ್ದಾರೆ.ಇವರ ಮನೆಯಲ್ಲಿ ಬಗೆ ಬಗೆಯ ಸುಮಾರು 3 ಸಾವಿರಕ್ಕೂ ಹೆಚ್ಚು ಮಾದರಿಯ ಗೊಂಬೆ ಗಳಿದ್ದುಇವುಗಳನ್ನು ದೇಶದ ವಿವಿಧ ಭಾಗಗಳಿಂದ ತರಿಸಿದ್ದು ಇವುಗಳ ಮೌಲ್ಯ ಬರೋಬ್ಬರಿ 60 ಲಕ್ಷ ದಾಟಿದೆ. ಪ್ರತಿವರ್ಷ ನವರಾತ್ರಿ ಸಂಧರ್ಭ ದಲ್ಲಿ ತಮ್ಮ ಮನೆಯಲ್ಲಿ ಈ ಗೊಂಬೆಗಳನ್ನು ಅಲಂಕಾರ ಮಾಡಿ ಕೂರಿಸಿ ಗೊಂಬೆ ಪ್ರದರ್ಶನ ಏರ್ಪಡಿಸುತ್ತಾ ಬರ್ತಿದ್ದಾರೆ.
ಇನ್ನು ಇವರ ಮನೆಯಲ್ಲಿ ಹಲವಾರು ವರ್ಷಗಳಿಂದ ಬೊಂಬೆ ಕೂರಿಸ್ತಿರೋದ್ರಿಂದ ಇವರ ಮನೆ ಬೊಂಬೆಮನೆ ಎಂದೇ ಪ್ರಸಿದ್ದಿ ಆಗಿದೆ.ಇನ್ನು ಇವರ ಮನೆಯಲ್ಲಿ ಪ್ರತಿ ವರ್ಷ ಕೂರಿಸುವ ಬೊಂಬೆ ಪ್ರದರ್ಶನಕ್ಕೆ ಸ್ಥಳೀಯ ಸುತ್ತಮುತ್ತಲ ಗ್ರಾಮದ ಜನರು ಸೇರಿದಂತೆ ರಾಜ್ಯದ ಹಲವು ಕಡೆಯಿಂದ ಜನರು ಇವರ ಮನೆಗೆ ನವರಾತ್ರಿಯ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಇಲ್ಲಿನ ಗೊಂಬೆಗಳನ್ನು ಕಂಡು ಸಂಭ್ರಮಿಸ್ತಾರೆ. ಅಲ್ಲದೆ ಇಲ್ಲಿನ ಗೊಂಬೆಗಳ ಅಲಂಕಾರ ಕಂಡು ಸೆಲ್ಪಿ ತೆಗೆದುಕೊಳ್ತಿದ್ದಾರೆ.
ಇನ್ನು ಇವರ ಮನೆಯಲ್ಲಿ ಕೂರಿಸುವ ಗೊಂಬೆಗಳಂತು ಒಂದಕ್ಕಿಂತ ಒಂದು ಸುಂದರ ವಾಗಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಇವರ ಗೊಂಬೆ ಪ್ರದರ್ಶನದಲ್ಲಿ ಪುರಾತನ ಕಾಲದ ಆಟಿಕೆ ಪ್ರತಿಕೃತಿ,ನವದುರ್ಗೆ ಅವತಾರ, ಸೇರಿ ಇಂದಿನ ಕಾಲದ ಮೊಬೈಲ್, ಕಂಪ್ಯೂಟರ್ ನಂತಹ ಮಾಡ್ರನ್ ಪ್ರತಿಕೃಯತಿಯ ಆಟಿಕೆ ಗಳು ಇವೆ.ಎಲ್ಲಕ್ಕಿಂತ ಹೆಚ್ಚಾಗಿ ಇವರ ಗೊಂಬೆ ಪ್ರದರ್ಶನದಲ್ಲಿ ವಿಷ್ಣುವಿನ ದಶಾವತಾರ, ತಿರುಪತಿ ತಿಮ್ಮಪ್ಪ ಹಾಗೂ ಪದ್ಮಾವತಿ ದೇವರದ ಪ್ರತಿಕೃತಿ ವಿಗ್ರ ಹ ಹೆಚ್ಚು ಆಕರ್ಷಣೀಯವಾಗಿದೆ.ದಸರಾ ಜಂಜೂ ಸವಾರಿ ಮೆರವಣಿಗೆ, ದರ್ಬಾರ್ ಹಾಲ್ ನ ಮಾಡೆಲ್ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದು ಈ ಬೊಂಬೆ ಮನೆಯ ಸೊಬಗಿಗೆ ಫಿಧಾ ಆಗಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಮಂಡ್ಯದ ಶ್ರೀರಂಗಪಟ್ಟಣ ದಲ್ಲಿ ಈ ದಂಪತಿ ಕೂರಿಸಿರುವ ಈ ಬೊಂಬೆ ಮನೆ ಇದೀಗ ಎಲ್ಲರನ್ನು ಸೂಜಿಗಲ್ಲಿ ನಂತೆ ಆಕರ್ಷಣೆ ಮಾಡುತ್ತಿದೆ. ಇಂತಹ ಸಂಪ್ರದಾಯವನ್ನು ಉಳಿಸಿ ಬೆಳಸುತ್ತಿರುವ ಈ ದಂಪತಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಇಲ್ಲಿನ ಗೊಂಬೆಗಳ ಸೌಂದರ್ಯಕ್ಕೆ ಫಿಧಾ ಆಗಿದ್ದಾರೆ.