SOCIAL MEDIA

Newsletter

PARTNER SITES
Select Language Select State

ದಸರಾ ಸಂಭ್ರಮಕ್ಕೆ ಹೊಸ ಕಾರು ಖರೀದಿ.. ಡೆಲಿವರಿ ವೇಳೆ ಭೀಕರ ಅಪಘಾತ!

ದಸರಾ ಹಬ್ಬಕ್ಕೆ ಹೊಸ ಕಾರು ಖರೀದಿಸಿ, ಸಂಭ್ರಮದಿಂದ ಮನೆಗೆ ತೆರಳಬೇಕಿದ್ದ ಕುಟುಂಬಕ್ಕೆ ಶೋರೂಮ್‌ನಿಂದ ಹೊರಬರುವ ವೇಳೆಯೇ ಆಘಾತ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಮಾರುತಿ ಶೋರೂಮ್ ಬಳಿ ಹೊಸ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್‌ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಶೋರೂಮ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Written By Ramya. R. Gowda
Published: Oct 20, 2026, 04:09 PM IST | Updated: Oct 20, 2026, 04:24 PM IST
Join

ದಸರಾ ಹಬ್ಬಕ್ಕೆ ಹೊಸ ಕಾರು ಖರೀದಿಸಿ, ಸಂಭ್ರಮದಿಂದ ಮನೆಗೆ ತೆರಳಬೇಕಿದ್ದ ಕುಟುಂಬಕ್ಕೆ ಶೋರೂಮ್‌ನಿಂದ ಹೊರಬರುವ ವೇಳೆಯೇ ಆಘಾತ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಮಾರುತಿ ಶೋರೂಮ್ ಬಳಿ ಹೊಸ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್‌ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಶೋರೂಮ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದಸರಾ ಹಬ್ಬದ ಸಂಭ್ರಮ.. ಹೊಸ ಕಾರು ಖರೀದಿಸಿದ ಸಂಭ್ರಮ .. ಕಾರು ಡೆಲಿವರಿ ಪಡೆದು ಮನೆಗೆ ಹೊರಡುವ ಸಮಯ.. ಆದ್ರೆ, ಇದೇ ವೇಳೆ ಭೀಕರ ಅಪಘಾತ ಸಂಭವಿಸಿದೆ. ಸಾಗರ ನಗರದ ಮಾರುತಿ ಕಾರು ಶೋರೂಮ್‌ನಿಂದ ಹೊಸ ಕಾರು ಏಕಾಏಕಿ ರಸ್ತೆಗೆ ನುಗ್ಗಿದೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಹೊಸ ಕಾರಿನ ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರ ಹಾಗೂ ಹಿಂಬದಿ ಸವಾರನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಸರಾ ಹಬ್ಬದ ಸಂಭ್ರಮದ ನಡುವೆಯೇ ನಡೆದ ಈ ಅಪಘಾತ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಇನ್ನು ಅಪಘಾತದ ಭಯಾನಕ ದೃಶ್ಯ ಶೋರೂಮ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.. ಹೊಸ ಕಾರು ಶೋರೂಮ್‌ನಿಂದ ಹೊರಬರುವ ವೇಳೆ ನಡೆದ ಈ ಅವಘಡದ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನವರಾತ್ರಿ ಸಂಭ್ರಮದಲ್ಲಿ ನಯನಾ ಮೋಟಮ್ಮ ದಾಂಡಿಯಾ ಡ್ಯಾನ್ಸ್!


ನವರಾತ್ರಿ ಅಂದ್ರೆ ಬರೀ ಪೂಜೆ, ಪುನಸ್ಕಾರ ಅಷ್ಟೇ ಅಲ್ಲ.. ಬಣ್ಣ ಬಣ್ಣದ ಉಡುಗೆ, ದಾಂಡಿಯಾ ನೃತ್ಯ, ಸಡಗರ ಸಂಭ್ರಮವೂ ಹೌದು. ಅದರಲ್ಲೂ ನವರಾತ್ರಿ ಹಬ್ಬದ ವೇಳೆ ನಡೆಯುವ ದಾಂಡಿಯಾ ನೃತ್ಯಕ್ಕೆ ಎಲ್ಲಿಲ್ಲದ ಕಳೆ. ಇದೀಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ಶರನ್ನವರಾತ್ರಿ ಉತ್ಸವದಲ್ಲಿ ಶಾಸಕಿ ನಯನಾ ಮೋಟಮ್ಮ ಕೂಡ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಶಾಸಕಿ, ಮಹಿಳೆಯರ ಜೊತೆ ಲವಲವಿಕೆಯಿಂದ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಈ ಸಂಭ್ರಮ ನಡೆದಿದ್ದು ಎಲ್ಲಿ? ಹೇಗಿತ್ತು ಕಾರ್ಯಕ್ರಮ? ತೋರಿಸ್ತೀವಿ ನೋಡಿ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿತ್ತು.. ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ 23ನೇ ವರ್ಷದ ಶರನ್ನವರಾತ್ರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಈ ಉತ್ಸವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು.

ಇನ್ನು ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು ಮಹಿಳೆಯರ ದಾಂಡಿಯಾ ನೃತ್ಯ.. ಈ ನೃತ್ಯ ಸಂಭ್ರಮದಲ್ಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕೂಡ ಭಾಗಿಯಾಗಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಶಾಸಕಿ, ಕೈಯಲ್ಲಿ ದಾಂಡಿಯಾ ಕೋಲು ಹಿಡಿದು ಹಾಡಿನ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.

ಮಹಿಳೆಯರ ಜೊತೆ ಬೆರೆತು ಲವಲವಿಕೆಯಿಂದ ದಾಂಡಿಯಾ ನೃತ್ಯ ಮಾಡಿದ ಶಾಸಕಿ ನಯನಾ ಮೋಟಮ್ಮ ಅವರ ಉತ್ಸಾಹ ಎಲ್ಲರ ಗಮನ ಸೆಳೆಯಿತು. ಶಾಸಕಿ ಸರಳವಾಗಿ ಮಹಿಳೆಯರೊಂದಿಗೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ನಯನಾ ಮೋಟಮ್ಮ ಅವರ ನೃತ್ಯದಿಂದ ನವರಾತ್ರಿ ಉತ್ಸವದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು.

ಒಟ್ಟಿನಲ್ಲಿ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳೂ ಮೇಳೈಸಿದ್ದ 23ನೇ ವರ್ಷದ ಶರನ್ನವರಾತ್ರಿ ಉತ್ಸವ ಮೂಡಿಗೆರೆ ಜನರಿಗೆ ಸಂಭ್ರಮದ ಕ್ಷಣಗಳನ್ನು ನೀಡಿತು. ದಾಂಡಿಯಾ ನೃತ್ಯ, ಸಾಂಪ್ರದಾಯಿಕ ಉಡುಗೆ ಹಾಗೂ ಜನರ ಉತ್ಸಾಹದೊಂದಿಗೆ ಉತ್ಸವ ಅದ್ಧೂರಿಯಾಗಿ ನೆರವೇರಿತು.

ಮಹಿಳೆಯರ ಜೊತೆ ಬೆರೆತು ಲವಲವಿಕೆಯಿಂದ ದಾಂಡಿಯಾ ನೃತ್ಯ ಮಾಡಿದ ಶಾಸಕಿ ನಯನಾ ಮೋಟಮ್ಮ ಅವರ ಉತ್ಸಾಹ ಎಲ್ಲರ ಗಮನ ಸೆಳೆಯಿತು. ಶಾಸಕಿ ಸರಳವಾಗಿ ಮಹಿಳೆಯರೊಂದಿಗೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ನಯನಾ ಮೋಟಮ್ಮ ಅವರ ನೃತ್ಯದಿಂದ ನವರಾತ್ರಿ ಉತ್ಸವದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದೆ.

ಹೀಗೆ ನವರಾತ್ರಿ ಸಂಭ್ರಮದಲ್ಲಿ ಮಹಿಳೆಯರ ಜೊತೆ ದಾಂಡಿಯಾ ನೃತ್ಯ ಮಾಡಿ ಗಮನ ಸೆಳೆದ ಶಾಸಕಿ ನಯನಾ ಮೋಟಮ್ಮ, ಮೂಡಿಗೆರೆಯ ಶರನ್ನವರಾತ್ರಿ ಉತ್ಸವಕ್ಕೆ ಮತ್ತಷ್ಟು ಮೆರುಗು ತಂದರು.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES