• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಹನುಮಾನ್‌ ಅಂಶ್‌ ಮಾದರಿಯಲ್ಲಿ ಸಿದ್ಧವಾಯ್ತು ಸಾಯಿಬಾಬಾ ಭಕ್ತರ ಸಿನಿಮಾ! ರಾಧಾಕೃಷ್ಣ ಸ್ವಾಮೀಜಿ ಜೀವನಗಾಥೆ ತೆರೆಗೆ

ಹನುಮಾನ್‌ ಅಂಶ್‌ ಮಾದರಿಯಲ್ಲಿ ಸಿದ್ಧವಾಯ್ತು ಸಾಯಿಬಾಬಾ ಭಕ್ತರ ಸಿನಿಮಾ! ರಾಧಾಕೃಷ್ಣ ಸ್ವಾಮೀಜಿ ಜೀವನಗಾಥೆ ತೆರೆಗೆ

ಸಾಯಿಬಾಬಾ ಅವರ ತತ್ವ, ಆದರ್ಶಗಳನ್ನ ಜನರಿಗೆ ತಲುಪಿಸಿದ ಮಹಾನ್‌ ಆಧ್ಯಾತ್ಮಿಕ ಗುರು ರಾಧಾಕೃಷ್ಣ ಸ್ವಾಮೀಜಿ ಅವರ ಜೀವನಗಾಥೆ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

Written ByRamya. R. Gowda
Published: Oct 20, 2026, 06:22 PM IST|Updated: Oct 20, 2026, 06:31 PM IST
joinshare
ಹನುಮಾನ್‌ ಅಂಶ್‌ ಮಾದರಿಯಲ್ಲಿ ಸಿದ್ಧವಾಯ್ತು ಸಾಯಿಬಾಬಾ ಭಕ್ತರ ಸಿನಿಮಾ! ರಾಧಾಕೃಷ್ಣ ಸ್ವಾಮೀಜಿ ಜೀವನಗಾಥೆ ತೆರೆಗೆ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
3 ವರ್ಷ ಟೀಮ್ ಇಂಡಿಯಾದಲ್ಲಿ ಅವಕಾಶವೇ ಸಿಗಲಿಲ್ಲ! ಈಗ ಒಂದೇ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಹಿತ 10 ವಿಕೆಟ್‌ ಬೇಟೆ!

3 ವರ್ಷ ಟೀಮ್ ಇಂಡಿಯಾದಲ್ಲಿ ಅವಕಾಶವೇ ಸಿಗಲಿಲ್ಲ! ಈಗ ಒಂದೇ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಹಿತ 10 ವಿಕೆಟ್‌ ಬೇಟೆ!

2

ದಸರಾ ಸಂಭ್ರಮದಲ್ಲಿ ರಣವೀರ್‌–ದೀಪಿಕಾ ಸಿಹಿ ಸುದ್ದಿ! ಎರಡನೇ ಮಗಳ ಹೆಸರು ರಿವೀಲ್‌, ಮುದ್ದು ಕಂದಮ್ಮನ ದರ್ಶನ ಮಾಡಿಸಿದ ಜೋಡಿ!

3

ಮಂಗಳನ ಚಂದ್ರನಿಂದ ಮಣ್ಣು ತರಲು ಜಪಾನ್‌ ಮೆಗಾ ಮಿಷನ್‌! H3 ರಾಕೆಟ್‌ ಯಶಸ್ವಿ ಉಡಾವಣೆ

4

ಹನುಮಾನ್‌ ಅಂಶ್‌ ಮಾದರಿಯಲ್ಲಿ ಸಿದ್ಧವಾಯ್ತು ಸಾಯಿಬಾಬಾ ಭಕ್ತರ ಸಿನಿಮಾ! ರಾಧಾಕೃಷ್ಣ ಸ್ವಾಮೀಜಿ ಜೀವನಗಾಥೆ ತೆರೆಗೆ

5

ಸಿಎಂ ಸಿದ್ದರಾಮಯ್ಯಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ಕೇಸ್‌ ಸ್ಲೋ..! ತನಿಖೆ ಮಂದಗತಿಗೆ ಕಾರಣವೇನು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಸಾಯಿಬಾಬಾ ಅವರ ತತ್ವ, ಆದರ್ಶಗಳನ್ನ ಜನರಿಗೆ ತಲುಪಿಸಿದ ಮಹಾನ್‌ ಆಧ್ಯಾತ್ಮಿಕ ಗುರು ರಾಧಾಕೃಷ್ಣ ಸ್ವಾಮೀಜಿ ಅವರ ಜೀವನಗಾಥೆ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಸಾಯಿಬಾಬಾ ಅವರ ಅನುಯಾಯಿಗಳೇ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರೇಮರೂಪ ಸಾಯಿಪಾದಾನಂದ ಎಂದು ಹೆಸರಿಡಲಾಗಿದೆ. ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬಂದಿರುವ ಈ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪ್ರದರ್ಶನ ಹಾಗೂ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್‌ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸಾಯಿಬಾಬಾ ಅವರ ತತ್ವಗಳನ್ನ ನಾಡಿನಾದ್ಯಂತ ಪಸರಿಸಿದ ಆಧ್ಯಾತ್ಮಿಕ ಗುರು ರಾಧಾಕೃಷ್ಣ ಸ್ವಾಮೀಜಿ. ಅಪಾರ ಸಂಖ್ಯೆಯ ಶಿಷ್ಯರನ್ನ ಹೊಂದಿದ್ದ ಅವಧೂತ ಸಾಯಿ ಪಾದಾನಂದ ರಾಧಾಕೃಷ್ಣ ಸ್ವಾಮೀಜಿ ಅವರ ಜೀವನದ ಕಥೆಯೇ ಈಗ ಬೆಳ್ಳಿತೆರೆಗೆ ಬರ್ತಿದೆ. ಅದುವೇ ಪ್ರೇಮರೂಪ ಸಾಯಿಪಾದಾನಂದ ಸಿನಿಮಾ. ಸ್ವಾಮೀಜಿಯವರ ಶಿಷ್ಯರಾದ ಟಿ. ಕೃಷ್ಣಕುಮಾರ್ ಅವರು ಖ್ಯಾತ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್ ಸಹಕಾರದೊಂದಿಗೆ ಈ ಸಿನಿಮಾವನ್ನ ನಿರ್ಮಿಸಿದ್ದಾರೆ. ಬಿ. ನಿತ್ಯಾನಂದ ನಿರ್ದೇಶನದ ಈ ಚಿತ್ರದಲ್ಲಿ ಆನಂದ್ ಮೌಳಿ ಅವರು ಸ್ವಾಮೀಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ರಾಜು ಸಂಗೀತ ನಿರ್ದೇಶನ ಮಾಡಿದ್ದು, ತಮಿಳುನಾಡು, ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.

ಇನ್ನು ಚಿತ್ರದ ಪ್ರದರ್ಶನ ಹಾಗೂ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ಕರ್ನಾಟಕದಲ್ಲಿ ಸಾಯಿಬಾಬಾ ಅವರ ತತ್ವಗಳನ್ನ ಪ್ರಚಾರ ಮಾಡಿದ ರಾಧಾಕೃಷ್ಣ ಸ್ವಾಮೀಜಿ ಅವರ ಜೀವನದ ಸಂದೇಶವನ್ನ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಾಯಿಬಾಬಾ ಅವರ ತತ್ವಗಳನ್ನ ಜನರಿಗೆ ತಲುಪಿಸಿದ ಕೀರ್ತಿ ಸ್ವಾಮೀಜಿಗೆ ಸಲ್ಲಬೇಕು. ಈ ಸಿನಿಮಾದಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸ್ವಾಮೀಜಿ ಅವರೊಂದಿಗಿನ ಒಡನಾಟವನ್ನ ನೆನಪಿಸಿಕೊಂಡ ನಿರ್ಮಾಪಕ ಟಿ. ಕೃಷ್ಣಕುಮಾರ್ ಭಾವುಕರಾಗಿ ಕಣ್ಣೀರಿಟ್ಟರು. ಕಾರ್ಯಕ್ರಮದಲ್ಲಿ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಶ್ರೀ ಶ್ರೀಚಂದ್ ರಾಜ್‌ಪಾಲ್, ಕನ್ನಡ ಸಾಯಿ ಸಚ್ಚರಿತೆಯ ಬರಹಗಾರ ಅನಂತ ರಾಮು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಒಟ್ಟಿನಲ್ಲಿ, ಆಧ್ಯಾತ್ಮಿಕ ಗುರು ರಾಧಾಕೃಷ್ಣ ಸ್ವಾಮೀಜಿ ಅವರ ಜೀವನ, ಸಾಯಿಬಾಬಾ ಅವರ ತತ್ವಗಳು ಹಾಗೂ ಭಕ್ತಿಯ ಸಂದೇಶವನ್ನ ಜನರಿಗೆ ತಲುಪಿಸುವ ಉದ್ದೇಶದಿಂದ ಸಿದ್ಧವಾಗಿರುವ ಪ್ರೇಮರೂಪ ಸಾಯಿಪಾದಾನಂದ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರವನ್ನ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

 

 

Add Zee News as a Preferred Source
TAGS:
Cinema