• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಜೆಟ್ಟಿ ಕಾಳಗ ಸ್ಥಗಿತಕ್ಕೆ ಕಾರಣವೇನು? ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?

ಜೆಟ್ಟಿ ಕಾಳಗ ಸ್ಥಗಿತಕ್ಕೆ ಕಾರಣವೇನು? ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಜೆಟ್ಟಿ ಕಾಳಗ ಸ್ಥಗಿತಗೊಂಡ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯಿಸಿದ್ದು, ಇದರಿಂದ ನಾಡಿಗೆ ಯಾವುದೇ ಕೆಡಕಾಗುವುದಿಲ್ಲ, ಯಾರೂ ಆತಂಕಪಡಬೇಕಿಲ್ಲ ಎಂದಿದ್ದಾರೆ. ಸಂಪೂರ್ಣ ಮಾಹಿತಿ ಪಡೆದು ಒಂದೆರಡು ದಿನಗಳಲ್ಲಿ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ. ಈ ಬಾರಿ ಅಂಬಾರಿ ಹೊತ್ತ ಆನೆ ಪ್ರಶಾಂತ್‌ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Written ByPuttaraj K Alur
Published: Oct 24, 2026, 01:44 PM IST|Updated: Oct 24, 2026, 01:57 PM IST
joinshare
ಜೆಟ್ಟಿ ಕಾಳಗ ಸ್ಥಗಿತಕ್ಕೆ ಕಾರಣವೇನು? ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
Image Credit: Pramoda Devi Wadiyar

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಕೇವಲ ಐದು ಸಾವಿರ ರೂಪಾಯಿ ಆಸೆಗೆ ಕೊಲೆ; ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್!

ಕೇವಲ ಐದು ಸಾವಿರ ರೂಪಾಯಿ ಆಸೆಗೆ ಕೊಲೆ; ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್!

2

ಅರ್ಧಕ್ಕರ್ಧ ಬೆಲೆಗೆ Xiaomi Smart TV ಖರೀದಿಸಿ: ಕೇವಲ ₹12,999ಕ್ಕೆ 32 ಇಂಚಿನ Fire TV, Alexa, Dolby Audio ಸೌಲಭ್ಯ!

3

ಸ್ಟಿಂಗ್ ಕಹಾನಿಯ ತನಿಖೆ ತೀವ್ರ.. ಆರೋಪಿ ಸೈಬರ್ ಪೊಲೀಸ್ ವಶಕ್ಕೆ

4

ಸಾಲದ ಸಂಕಷ್ಟಕ್ಕೆ ತಾಯಿ ಮಕ್ಕಳು ಆತ್ಮಹ*ತ್ಯೆ ಯತ್ನ..! ಮಗಳು ಸಾ*ವು, ಮೂವರ ಸ್ಥಿತಿ ಗಂಭೀರ

5

Lenovo ಲ್ಯಾಪ್‌ಟಾಪ್‌ ಮೇಲೆ 54% ಡಿಸ್ಕೌಂಟ್! ₹1.21 ಲಕ್ಷದ IdeaPad Slim 3 ಈಗ ₹55,990ಕ್ಕೆ ಖರೀದಿಸಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Mysuru Dasara Jetti Kallaga: ಈ ಬಾರಿ ಜೆಟ್ಟಿ ಕಾಳಗ ಸ್ಥಗಿತಗೊಂಡಿರುವ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಮುಂಡಿ ಬೆಟ್ಟದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜೆಟ್ಟಿ ಕಾಳಗ ರದ್ದಾದ ವಿಚಾರಕ್ಕೆ ಅನಗತ್ಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇದರಿಂದ ನಾಡಿಗೆ ಯಾವುದೇ ಕೆಡಕು ಆಗುವುದಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ನಾವು ದೇವರನ್ನ ನಂಬುತ್ತೇವೆಯೇ ಹೊರತು ಜ್ಯೋತಿಷ್ಯವನ್ನ ನಂಬಿ ಪೂಜೆ ಮಾಡುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಜ್ಯೋತಿಷಿಗಳ ಸಲಹೆ ಪಡೆದಿಲ್ಲ. ಎಲ್ಲವನ್ನೂ ದೇವರ ಮೇಲೆ ಭಾರ ಹಾಕಿದ್ದೇವೆ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ಜೆಟ್ಟಿ ಕಾಳಗದ ವಿಚಾರವಾಗಿ ಎಲ್ಲಾ ವರದಿಗಳನ್ನ ತರಿಸಿಕೊಳ್ಳುತ್ತಿದ್ದೇನೆ. ಎಲ್ಲಿ ಏನೇನು ನಡೆದಿದೆ ಎಂಬ ಮಾಹಿತಿ ನನಗೆ ಗೊತ್ತಾಗಿದೆ. ಆದರೂ ಸಂಪೂರ್ಣ ಮಾಹಿತಿ ಬಂದ ಬಳಿಕ ಮಾತನಾಡುತ್ತೇನೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ನಾನೇ ವಿವರಣೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ನಮ್ಮ ಮನೆಯ ವಿಧಿವಿಧಾನಗಳು ನಿಗದಿತ ಮುಹೂರ್ತದಲ್ಲೇ ನಡೆಯಬೇಕು. ಮುಹೂರ್ತ ಮೀರಿಸಿ ಯಾವುದೇ ಕಾರ್ಯ ನಡೆಸುವುದಿಲ್ಲ. ಹೀಗಾಗಿ ಜೆಟ್ಟಿ ಕಾಳಗಕ್ಕೂ ಮುನ್ನ ವಿಜಯಯಾತ್ರೆ ನಡೆಸಿದ್ದೇವೆಂದು ಅವರು ವಿವರಿಸಿದ್ದಾರೆ.

ಇದೇ ವೇಳೆ ಅಂಬಾರಿ ಆನೆ ಪ್ರಶಾಂತ್‌ ಬಗ್ಗೆಯೂ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಈ ಬಾರಿ ಆನೆ ಅಂಬಾರಿಯನ್ನ ಹೇಗೆ ಹೊತ್ತು ಸಾಗುತ್ತದೆ ಎಂಬ ಆತಂಕವಿತ್ತು. ಆದರೆ ಎಲ್ಲಾ ಆತಂಕಗಳನ್ನ ಮೀರಿ ಪ್ರಶಾಂತ್‌ ಉತ್ತಮವಾಗಿ ಅಂಬಾರಿ ಹೊತ್ತಿದ್ದಾನೆ. ಇದರಿಂದ ಬಹಳ ಸಂತೋಷವಾಗಿದೆ. ಚಾಮುಂಡಿ ತಾಯಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ದಸರಾ ಬಳಿಕ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ

ಮೈಸೂರು ದಸರಾ ಜಂಬೂಸವಾರಿ ಮುಗಿದ ಬಳಿಕ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ನಡೆದಿದೆ. ಅಲಂಕೃತ ರಥದಲ್ಲಿ ದೇವಿಯ ಮೆರವಣಿಗೆ ನಡೆದಿದೆ. ವಿಶೇಷ ಪೂಜೆಗಳ ಬಳಿಕ ಉತ್ಸವ ಮೂರ್ತಿಯನ್ನ ರಥದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ನಂತರ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಸಾಗಿತು. ರಾಜವಂಶಸ್ಥ ಯದುವೀರ್ ಒಡೆಯರ್ ರಥವನ್ನ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಸಾಗುವ ವೇಳೆ ಭಕ್ತರು ಹಣ್ಣು-ಜವನ ಅರ್ಪಿಸಿ, ದೇವಿಯನ್ನ ಸ್ಮರಿಸುತ್ತಾ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ರಥೋತ್ಸವದ ಸಂದರ್ಭದಲ್ಲಿ ಕುಶಾಲತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಲಾಯಿತು.

ದಸರಾ ಶಿಷ್ಟಾಚಾರಕ್ಕೆ ಫ್ರೇಮ್‌ವರ್ಕ್ ಬೇಕು! ಸರ್ಕಾರವೇ ನಿಯಮ ರೂಪಿಸಲಿ ಎಂದ ಯದುವೀರ್ ಒಡೆಯರ್

ಇನ್ನು ದಸರಾ ಶಿಷ್ಟಾಚಾರದ ವಿಚಾರವಾಗಿ ಚಾಮುಂಡಿ ಬೆಟ್ಟದಲ್ಲಿ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ಶಿಷ್ಟಾಚಾರ ಎಂದರೇನು ಎಂಬುದನ್ನ ಸ್ಪಷ್ಟಪಡಿಸಬೇಕು. ಪುಷ್ಪಾರ್ಚನೆ ಮತ್ತು ನಂದಿಧ್ವಜ ಪೂಜೆಯ ಸಂದರ್ಭದಲ್ಲಿ ಕಡಿಮೆ ಜನರಿದ್ದರೆ ಒಳ್ಳೆಯದು. ಮುಖ್ಯಮಂತ್ರಿ ಜೊತೆಗೆ ಒಂದಿಬ್ಬರು ಇದ್ದರೆ ಸಾಕು. ಪ್ರತಿಯೊಂದು ವಿಧಿವಿಧಾನಕ್ಕೂ ನಿಯಮಗಳಿರಬೇಕು. ಈ ಬಗ್ಗೆ ಸರ್ಕಾರವೇ ನಿಯಮ ರೂಪಿಸಲಿ ಎಂದು ಹೇಳಿದ್ದಾರೆ.

ಪುಷ್ಪಾರ್ಚನೆಗೆ ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ ವಿಚಾರದಲ್ಲಿ ಯಾವುದೇ ತಪ್ಪಿಲ್ಲ. ಅತಿಥಿಗಳಾಗಿ ಮುಖ್ಯಮಂತ್ರಿಗಳನ್ನ ಕರೆದ ಬಳಿಕ ಪುಷ್ಪಾರ್ಚನೆಗೂ ಆಹ್ವಾನಿಸದಿದ್ದರೆ ತಪ್ಪಾಗುತ್ತದೆ. ಆದರೆ ಅವರನ್ನ ಹೊರತುಪಡಿಸಿ ಉಳಿದವರು ಕಾರ್ಯಕ್ರಮಕ್ಕೆ ಬಂದಿರುವ ವಿಚಾರವಾಗಿ ಸರ್ಕಾರ ಸ್ಪಷ್ಟನೆ ನೀಡಲಿ ಎಂದು ತಿಳಿಸಿದ್ದಾರೆ. ಈ ವಿಚಾರದಲ್ಲಿ ನಾವು ಏನೇ ಮಾತನಾಡಿದರೂ ಅದು ರಾಜಕೀಯವಾಗುತ್ತದೆ. ನಂದಿಧ್ವಜ ಪೂಜೆ ಮತ್ತು ಪುಷ್ಪಾರ್ಚನೆಗೆ ಸೂಕ್ತ ಶಿಷ್ಟಾಚಾರದ ಚೌಕಟ್ಟು ರೂಪಿಸುವ ಅಗತ್ಯವಿದೆ ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.

Add Zee News as a Preferred Source
TAGS:
Karnataka Politics
Kannada News