• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸಾಲದ ಸಂಕಷ್ಟಕ್ಕೆ ತಾಯಿ ಮಕ್ಕಳು ಆತ್ಮಹ*ತ್ಯೆ ಯತ್ನ..! ಮಗಳು ಸಾ*ವು, ಮೂವರ ಸ್ಥಿತಿ ಗಂಭೀರ

ಸಾಲದ ಸಂಕಷ್ಟಕ್ಕೆ ತಾಯಿ ಮಕ್ಕಳು ಆತ್ಮಹ*ತ್ಯೆ ಯತ್ನ..! ಮಗಳು ಸಾ*ವು, ಮೂವರ ಸ್ಥಿತಿ ಗಂಭೀರ

ಸಾಲದ ಸುಳಿಗೆ ಸಿಲುಕಿ ನೊಂದಿದ್ದ ತಾಯಿಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿರುವ ಅತ್ಯಂತ ದಾರುಣ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Written ByKrishna NK
Published: Oct 24, 2026, 03:17 PM IST|Updated: Oct 24, 2026, 03:57 PM IST
joinshare
ಸಾಲದ ಸಂಕಷ್ಟಕ್ಕೆ ತಾಯಿ ಮಕ್ಕಳು ಆತ್ಮಹ*ತ್ಯೆ ಯತ್ನ..! ಮಗಳು ಸಾ*ವು, ಮೂವರ ಸ್ಥಿತಿ ಗಂಭೀರ
Image Credit: hubli Dharwad News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಯಾದಗಿರಿಯಲ್ಲಿ ನೀರಿಗಾಗಿ ಬೃಹತ್ ಪ್ರತಿಭಟನೆ: ಬೀದರ್‌ - ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸವಾರರ ಪರದಾಟ

ಯಾದಗಿರಿಯಲ್ಲಿ ನೀರಿಗಾಗಿ ಬೃಹತ್ ಪ್ರತಿಭಟನೆ: ಬೀದರ್‌ - ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸವಾರರ ಪರದಾಟ

2

ಸ್ಟಿಂಗ್ ಆಪರೇಷನ್ : ಜೆಡಿಎಸ್ ಕಾರ್ಯಕರ್ತನ ಮನೆ ಮೇಲೆ ಸಿಸಿಬಿ ದಾಳಿ, ಪೆನ್‌ ಡ್ರೈವ್‌

3

ನಟ ದರ್ಶನ್ ಪತ್ನಿಗೆ ಕಿರುಕುಳ ಕೊಡಲೆಂದೇ ಹುಟ್ಟಿಕೊಂಡಿದೆಯಂತೆ ಒಂದು ತಂಡ..!

4

ಸುಂಕದ ಬೆದರಿಕೆ ಹಾಕಿ ಭಾರತ–ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ ಎಂದ ಡೊನಾಲ್ಡ್ ಟ್ರಂಪ್!

5

ಮಂಜು ಹೊರ ಬಂದ್ರೂ ನಿಲ್ಲುತ್ತಿಲ್ಲ ಬೈಗುಳಗಳು : ಎಂಥಾ ಮಾತು ಅಂದ್ರು ಆಸಿಯಾ.. ಕಿಚ್ಚನ ಕ್ಲಾಸ್ ಗ್ಯಾರಂಟಿ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಧಾರವಾಡ: ಸಾಲದ ಸಂಕಷ್ಟಕ್ಕೆ ಸಿಲುಕಿ ನೊಂದಿದ್ದ ತಾಯಿಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿರುವ ಅತ್ಯಂತ ದಾರುಣ ಹಾಗೂ ಮನಕಲಕುವ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಹಾಗೂ ಉಳಿದ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ.

ಗ್ರಾಮದ ನಿವಾಸಿ 42 ವರ್ಷದ ಸವಿತಾ ಎಂಬುವವರೇ ಈ ದುರಂತ ಕೃತ್ಯಕ್ಕೆ ಮುಂದಾದ ದುರ್ದೈವಿ ತಾಯಿ. ಸವಿತಾ ಅವರು ಕುಟುಂಬದ ಸಂಕಷ್ಟ ನಿವಾರಣೆಗಾಗಿ ಗ್ರಾಮದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಇತರೆಡೆಗಳಲ್ಲಿ ಸುಮಾರು ಮೂರು ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ನಡೆದಿದ್ದೇನು?
ದಿನೇ ದಿನೇ ಹೆಚ್ಚುತ್ತಿದ್ದ ಸಾಲದ ಹೊರೆ ಮತ್ತು ಅದನ್ನು ಮರುಪಾವತಿಸುವಂತೆ ಸಾಲ ನೀಡಿದವರಿಂದ ಬರುತ್ತಿದ್ದ ನಿರಂತರ ಒತ್ತಡವನ್ನು ತಾಳಲಾರದೆ ಸವಿತಾ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಘಟನೆ ನಡೆದ ದಿನ ಪತಿ ಎಂದಿನಂತೆ ಕೆಲಸಕ್ಕೆಂದು ಮನೆಯಿಂದ ಹೊರಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಸವಿತಾ, ಈ ಕರಳುಬಳ್ಳಿಯ ಕೃತ್ಯಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳಲು ಮನೆಯಿಂದ ತೆರಳುವ ಮುನ್ನ ಸವಿತಾ ತಮ್ಮ ಮಕ್ಕಳ ಬಳಿ ಕೊನೆಯ ಮಾತುಗಳನ್ನು ಆಡಿದ್ದರು ಎಂದು ತಿಳಿದುಬಂದಿದೆ.  

ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
ಈ ಆಘಾತಕಾರಿ ಘಟನೆಯಲ್ಲಿ ನಿವೇದಿತಾ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಇನ್ನುಳಿದಂತೆ ಮಕ್ಕಳಾದ ಹರ್ಷಿತ್, ಭಾಗ್ಯಶ್ರೀ ಹಾಗೂ ತಾಯಿ ಸವಿತಾ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಕೂಡಲೇ ಅವರನ್ನು ಸ್ಥಳೀಯರ ಸಹಾಯದಿಂದ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದೆ.

ಸಣ್ಣಪುಟ್ಟ ಸಾಲದ ಸುಳಿಗೆ ಸಿಲುಕಿ ಒಂದು ಇಡೀ ಕುಟುಂಬವೇ ಅಧೋಗತಿಗೆ ಇಳಿದಿರುವ ಈ ಹೃದಯ ವಿದ್ರಾವಕ ಘಟನೆಯು ಕರಡಿಗುಡ್ಡ ಗ್ರಾಮಸ್ಥರಷ್ಟೇ ಅಲ್ಲದೆ, ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಆರ್ಥಿಕ ಸಂಕಷ್ಟಗಳು ಜೀವನದಲ್ಲಿ ಎದುರಾಗುವುದು ಸಹಜ, ಆದರೆ ಅದಕ್ಕೆ ಆತ್ಮಹತ್ಯೆಯೇ ಪರಿಹಾರವಲ್ಲ ಎಂಬ ಕಟುಸತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಒಂಟಿತನ ಅಥವಾ ತೀವ್ರ ಸಾಲದ ಬಾಧೆಯಿಂದ ಬಳಲುತ್ತಿರುವವರು ಯಾವುದೇ ಕಠಿಣ ನಿರ್ಧಾರ ಕೈಗೊಳ್ಳುವ ಮುನ್ನ ಕುಟುಂಬದವರು, ಹಿತೈಷಿಗಳು, ಆಪ್ತ ಸ್ನೇಹಿತರು ಅಥವಾ ಸರ್ಕಾರದ ಮಾನಸಿಕ ಆರೋಗ್ಯ ಸಹಾಯವಾಣಿಗಳನ್ನು ಸಂಪರ್ಕಿಸಿ ಸೂಕ್ತ ಸಲಹೆ ಹಾಗೂ ನೆರವು ಪಡೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಕೆಎಂಸಿಆರ್ ಆಸ್ಪತ್ರೆ ಅಧೀಕ್ಷಕ ಡಾ.‌ಈಶ್ವರ ಹಸಬಿ ಘಟನೆ ಕುರಿತು ಮಾಹಿತಿ

ತಾಯಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದ ಘಟನೆ ಕುರಿತು ಕೆಎಂಸಿಆರ್ ಆಸ್ಪತ್ರೆ ಅಧೀಕ್ಷಕ ಡಾ.‌ಈಶ್ವರ ಹಸಬಿ ಘಟನೆ ಕುರಿತು ಮಾಹಿತಿ ನೀಡಿದರು‌. ಸ್ವಸಹಾಯ ಸಂಘಗಳಲ್ಲಿ ಸುಮಾರು ಮೂರು ಲಕ್ಷ ರೂಪಾಯಿ ಸಾಲ ಮಾಡಿದ್ದ ಸವಿತಾ, ಸಾಲ ಮರುಪಾವತಿಸಲಾಗದೆ ಪರದಾಡುತ್ತಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ನಿವೇದಿತಾ ಎಂಬ ಬಾಲಕಿ ಮೃತಪಟ್ಟಿದ್ದು, ತಾಯಿ ಸೇರಿದಂತೆ ಉಳಿದ ಮೂವರಿಗೂ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ‌ ಎಂದರು.

Add Zee News as a Preferred Source
TAGS:
Kannada News