• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಅರ್ಧಕ್ಕರ್ಧ ಬೆಲೆಗೆ Xiaomi Smart TV ಖರೀದಿಸಿ: ಕೇವಲ ₹12,999ಕ್ಕೆ 32 ಇಂಚಿನ Fire TV, Alexa, Dolby Audio ಸೌಲಭ್ಯ!

ಅರ್ಧಕ್ಕರ್ಧ ಬೆಲೆಗೆ Xiaomi Smart TV ಖರೀದಿಸಿ: ಕೇವಲ ₹12,999ಕ್ಕೆ 32 ಇಂಚಿನ Fire TV, Alexa, Dolby Audio ಸೌಲಭ್ಯ!

Xiaomi Smartchoice F Series 32 ಇಂಚಿನ Smart Fire TVಗೆ ಶೇ.48ರಷ್ಟು ರಿಯಾಯಿತಿ ಲಭ್ಯವಿದ್ದು, ₹24,999 ಮೂಲ ಬೆಲೆ ಹೊಂದಿರುವ ಟಿವಿ ಈಗ ₹12,999ಕ್ಕೆ ದೊರೆಯುತ್ತಿದೆ. HD Ready ಡಿಸ್‌ಪ್ಲೇ, Fire TV, Alexa ವಾಯ್ಸ್ ರಿಮೋಟ್, 20W Dolby Audio, Wi-Fi ಹಾಗೂ Bluetooth ಸೌಲಭ್ಯಗಳಿವೆ. Netflix, YouTube ಸೇರಿದಂತೆ 12,000ಕ್ಕೂ ಹೆಚ್ಚು ಆ್ಯಪ್‌ಗಳಿಗೆ ಬೆಂಬಲವಿದೆ. ಜೊತೆಗೆ ಒಂದು ವರ್ಷದ ವಾರಂಟಿಯೂ ಇದೆ.

Written ByPuttaraj K Alur
Published: Oct 24, 2026, 03:23 PM IST|Updated: Oct 24, 2026, 03:35 PM IST
joinshare
ಅರ್ಧಕ್ಕರ್ಧ ಬೆಲೆಗೆ Xiaomi Smart TV ಖರೀದಿಸಿ: ಕೇವಲ ₹12,999ಕ್ಕೆ 32 ಇಂಚಿನ Fire TV, Alexa, Dolby Audio ಸೌಲಭ್ಯ!
Image Credit: Xiaomi Smart TV

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಯಾದಗಿರಿಯಲ್ಲಿ ನೀರಿಗಾಗಿ ಬೃಹತ್ ಪ್ರತಿಭಟನೆ: ಬೀದರ್‌ - ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸವಾರರ ಪರದಾಟ

ಯಾದಗಿರಿಯಲ್ಲಿ ನೀರಿಗಾಗಿ ಬೃಹತ್ ಪ್ರತಿಭಟನೆ: ಬೀದರ್‌ - ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸವಾರರ ಪರದಾಟ

2

ಸ್ಟಿಂಗ್ ಆಪರೇಷನ್ : ಜೆಡಿಎಸ್ ಕಾರ್ಯಕರ್ತನ ಮನೆ ಮೇಲೆ ಸಿಸಿಬಿ ದಾಳಿ, ಪೆನ್‌ ಡ್ರೈವ್‌

3

ನಟ ದರ್ಶನ್ ಪತ್ನಿಗೆ ಕಿರುಕುಳ ಕೊಡಲೆಂದೇ ಹುಟ್ಟಿಕೊಂಡಿದೆಯಂತೆ ಒಂದು ತಂಡ..!

4

ಸುಂಕದ ಬೆದರಿಕೆ ಹಾಕಿ ಭಾರತ–ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ ಎಂದ ಡೊನಾಲ್ಡ್ ಟ್ರಂಪ್!

5

ಮಂಜು ಹೊರ ಬಂದ್ರೂ ನಿಲ್ಲುತ್ತಿಲ್ಲ ಬೈಗುಳಗಳು : ಎಂಥಾ ಮಾತು ಅಂದ್ರು ಆಸಿಯಾ.. ಕಿಚ್ಚನ ಕ್ಲಾಸ್ ಗ್ಯಾರಂಟಿ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Xiaomi 32 Inch Smart TV: ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಯೋಜಿಸುತ್ತಿರುವ ಗ್ರಾಹಕರಿಗೆ Xiaomi ಕಂಪನಿಯ 32 ಇಂಚಿನ Smartchoice F Series Smart LED Fire TV ಆಕರ್ಷಕ ಆಯ್ಕೆಯಾಗಿ ಕಾಣಿಸಿಕೊಂಡಿದೆ. ₹24,999 ಮೂಲ ಬೆಲೆ ಹೊಂದಿರುವ ಈ ಸ್ಮಾರ್ಟ್ ಟಿವಿ ಮೇಲೆ ಬರೋಬ್ಬರಿ ಶೇ.48ರಷ್ಟು ರಿಯಾಯಿತಿ ಲಭ್ಯವಿದೆ. ಹೀಗಾಗಿ ಕೇವಲ ₹12,999ಕ್ಕೆ ಈ ಟಿವಿಯನ್ನ ಮನೆಗೆ ತರಬಹುದು. ಅಂದರೆ MRPಗೆ ಹೋಲಿಸಿದರೆ ಸುಮಾರು ₹12,000 ಕಡಿಮೆ ಬೆಲೆಯಲ್ಲಿ ಟಿವಿ ಖರೀದಿಸುವ ಅವಕಾಶವಿದೆ. Xiaomi Smartchoice F Series HD Ready Smart LED Fire TV (L32MB-FIN) ಮಾದರಿಯು Fire TV, Alexa ವಾಯ್ಸ್ ರಿಮೋಟ್, Dolby Audio ಹಾಗೂ ಹಲವು ಸ್ಮಾರ್ಟ್ ವೈಶಿಷ್ಟ್ಯಗಳನ್ನ ಒಳಗೊಂಡಿದೆ.

32 ಇಂಚಿನ HD Ready ಡಿಸ್‌ಪ್ಲೇ

Xiaomi ಕಂಪನಿಯ ಈ ಸ್ಮಾರ್ಟ್ ಟಿವಿಯಲ್ಲಿ 80 ಸೆಂಟಿಮೀಟರ್ ಅಂದರೆ 32 ಇಂಚಿನ LED ಡಿಸ್‌ಪ್ಲೇ ನೀಡಲಾಗಿದೆ. ಇದು 1366 × 768 ಪಿಕ್ಸೆಲ್ HD Ready ರೆಸಲ್ಯೂಶನ್ ಹೊಂದಿದ್ದು, 60Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಟಿವಿಯಲ್ಲಿ HDR ಮತ್ತು HLG ತಂತ್ರಜ್ಞಾನಗಳ ಬೆಂಬಲವಿದ್ದು, Vivid Picture Engine ಕೂಡ ನೀಡಲಾಗಿದೆ. ಈ ವೈಶಿಷ್ಟ್ಯಗಳು ಚಿತ್ರಗಳ ಬಣ್ಣ ಮತ್ತು ದೃಶ್ಯ ಗುಣಮಟ್ಟವನ್ನ ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಇದಲ್ಲದೆ ಬೆಜೆಲ್-ಲೆಸ್ ವಿನ್ಯಾಸದಿಂದ ಟಿವಿಗೆ ಆಕರ್ಷಕ ನೋಟ ಸಿಗುತ್ತದೆ. ವೈಡ್ ವ್ಯೂಯಿಂಗ್ ಆ್ಯಂಗಲ್ ಮತ್ತು Eye Comfort Mode ವೈಶಿಷ್ಟ್ಯಗಳೂ ಇವೆ. ಆದರೆ ಇದು Full HD ಅಥವಾ 4K ಟಿವಿಯಲ್ಲ. HD Ready ರೆಸಲ್ಯೂಶನ್ ಹೊಂದಿರುವ ಮಾದರಿಯಾಗಿರುವುದರಿಂದ ಖರೀದಿದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

Fire TV ಸೌಲಭ್ಯ, 12,000ಕ್ಕೂ ಹೆಚ್ಚು ಆ್ಯಪ್‌ಗಳ ಬೆಂಬಲ

ಈ Xiaomi Smart TVಯ ಪ್ರಮುಖ ಆಕರ್ಷಣೆಯೆಂದರೆ ಇದರಲ್ಲಿ Fire TV ಅಂತರ್ನಿರ್ಮಿತವಾಗಿ ನೀಡಲಾಗಿದೆ. Prime Video, Netflix, Disney+ Hotstar ಹಾಗೂ YouTube ಸೇರಿದಂತೆ ಜನಪ್ರಿಯ OTT ಆ್ಯಪ್‌ಗಳನ್ನ ಬಳಸಬಹುದು. ಇದರ ಜೊತೆಗೆ Fire TV App Store ಮೂಲಕ 12,000ಕ್ಕೂ ಹೆಚ್ಚು ಆ್ಯಪ್‌ಗಳಿಗೆ ಪ್ರವೇಶ ಪಡೆಯುವ ಸೌಲಭ್ಯವಿದೆ. ಹೀಗಾಗಿ ಸಿನಿಮಾ, ವೆಬ್‌ಸಿರೀಸ್, ಮನರಂಜನಾ ಕಾರ್ಯಕ್ರಮಗಳು ಹಾಗೂ ಆನ್‌ಲೈನ್ ವಿಡಿಯೋಗಳನ್ನ ಒಂದೇ ಟಿವಿಯಲ್ಲಿ ವೀಕ್ಷಿಸಬಹುದು. ಆದರೆ ಕೆಲವು OTT ಸೇವೆಗಳ ಕಂಟೆಂಟ್‌ಗಳನ್ನ ವೀಕ್ಷಿಸಲು ಪ್ರತ್ಯೇಕ ಪಾವತಿಸಿದ ಚಂದಾದಾರಿಕೆ ಅಗತ್ಯವಾಗಬಹುದು.

Alexa ವಾಯ್ಸ್ ರಿಮೋಟ್ ವಿಶೇಷತೆ

Xiaomi Smartchoice F Series ಟಿವಿಯಲ್ಲಿ Alexa ವಾಯ್ಸ್ ರಿಮೋಟ್ ನೀಡಲಾಗಿದೆ. ಇದರಿಂದ ಬಳಕೆದಾರರು ಧ್ವನಿ ಆಜ್ಞೆಗಳ ಮೂಲಕ ಟಿವಿಯಲ್ಲಿ ಬೇಕಾದ ಕಂಟೆಂಟ್‌ಗಳನ್ನ ಹುಡುಕಬಹುದು. ರಿಮೋಟ್ ಮೂಲಕ ಆ್ಯಪ್‌ಗಳನ್ನ ತೆರೆಯುವುದು, ಸಿನಿಮಾಗಳನ್ನ ಹುಡುಕುವುದು ಹಾಗೂ ಇತರ ಬೆಂಬಲಿತ ಕಾರ್ಯಗಳನ್ನ ನಿರ್ವಹಿಸುವುದು ಸುಲಭವಾಗುತ್ತದೆ. ಇದಲ್ಲದೆ DTH Set-Top Box Integration ಸೌಲಭ್ಯವೂ ಇದೆ. ಇದರಿಂದ ಟಿವಿಯ ಹೋಮ್ ಸ್ಕ್ರೀನ್ ಮೂಲಕ DTH ಚಾನೆಲ್‌ಗಳು ಮತ್ತು OTT ಆ್ಯಪ್‌ಗಳ ನಡುವೆ ಬದಲಾಯಿಸಲು ಅನುಕೂಲವಾಗುತ್ತದೆ.

20 ವ್ಯಾಟ್ ಸ್ಪೀಕರ್, Dolby Audio ಸಪೋರ್ಟ್

ಕೇವಲ ಡಿಸ್‌ಪ್ಲೇ ಮಾತ್ರವಲ್ಲದೆ, ಸೌಂಡ್ ವಿಭಾಗದಲ್ಲೂ Xiaomi ಹಲವು ವೈಶಿಷ್ಟ್ಯಗಳನ್ನ ನೀಡಿದೆ. ಈ ಟಿವಿಯಲ್ಲಿ ಒಟ್ಟು 20 ವ್ಯಾಟ್ ಆಡಿಯೋ ಔಟ್‌ಪುಟ್ ಹೊಂದಿರುವ ಅಂತರ್ನಿರ್ಮಿತ ಸ್ಪೀಕರ್‌ಗಳಿವೆ. ಜೊತೆಗೆ Dolby Audio, DTS-HD ಹಾಗೂ DTS Virtual ತಂತ್ರಜ್ಞಾನಗಳ ಬೆಂಬಲವಿದೆ. ಈ ಆಡಿಯೋ ವೈಶಿಷ್ಟ್ಯಗಳು ಸಿನಿಮಾ, ಸಂಗೀತ ಹಾಗೂ ಟಿವಿ ಕಾರ್ಯಕ್ರಮಗಳನ್ನ ವೀಕ್ಷಿಸುವಾಗ ಉತ್ತಮ ಧ್ವನಿ ಅನುಭವ ನೀಡಲು ನೆರವಾಗಬಹುದು. ವಿಶೇಷವಾಗಿ ಪ್ರತ್ಯೇಕ ಸೌಂಡ್‌ಬಾರ್ ಇಲ್ಲದೆ ಟಿವಿ ಬಳಸಲು ಬಯಸುವ ಗ್ರಾಹಕರಿಗೆ 20 ವ್ಯಾಟ್ ಸ್ಪೀಕರ್ ವ್ಯವಸ್ಥೆ ಉಪಯುಕ್ತವಾಗಬಹುದು.

HDMI, USB ಮತ್ತು Bluetooth ಸಂಪರ್ಕ

ಈ ಸ್ಮಾರ್ಟ್ ಟಿವಿಯಲ್ಲಿ ವಿವಿಧ ಸಾಧನಗಳನ್ನ ಸಂಪರ್ಕಿಸಲು ಹಲವು ಆಯ್ಕೆಗಳಿವೆ. ಎರಡು HDMI ಪೋರ್ಟ್‌ಗಳನ್ನ ನೀಡಲಾಗಿದ್ದು, ಸೆಟ್‌ಟಾಪ್ ಬಾಕ್ಸ್, ಗೇಮಿಂಗ್ ಕನ್ಸೋಲ್ ಹಾಗೂ ಇತರ ಹೊಂದಾಣಿಕೆಯ ಸಾಧನಗಳನ್ನ ಸಂಪರ್ಕಿಸಬಹುದು. ಇದರ ಜೊತೆಗೆ ಎರಡು USB ಪೋರ್ಟ್‌ಗಳಿದ್ದು, ಪೆನ್‌ಡ್ರೈವ್ ಅಥವಾ ಇತರ USB ಸ್ಟೋರೇಜ್ ಸಾಧನಗಳನ್ನ ಬಳಸಲು ಅವಕಾಶವಿದೆ. ಟಿವಿಯಲ್ಲಿ Bluetooth ಹಾಗೂ ಅಂತರ್ನಿರ್ಮಿತ Wi-Fi ಸಂಪರ್ಕ ಸೌಲಭ್ಯವೂ ಇದೆ. ಇಂಟರ್ನೆಟ್ ಮೂಲಕ OTT ಸೇವೆಗಳನ್ನ ಬಳಸಲು Wi-Fi ಅನುಕೂಲವಾಗುತ್ತದೆ.

ಒಂದು ವರ್ಷದ ವಾರಂಟಿ

Xiaomi Smartchoice F Series Smart TVಗೆ ಒಂದು ವರ್ಷದ ಸಮಗ್ರ ವಾರಂಟಿ ನೀಡಲಾಗಿದೆ. ವಾರಂಟಿ ಸೇವೆ ಪಡೆಯಲು ಖರೀದಿಯ ಇನ್‌ವಾಯ್ಸ್ ಅಗತ್ಯವಾಗಬಹುದು. ಉತ್ಪನ್ನದ ಬಳಕೆದಾರರ ಕೈಪಿಡಿಯನ್ನ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಪಡೆಯಬಹುದು. ಉತ್ಪನ್ನವನ್ನ ಹಿಂದಿರುಗಿಸುವ ಸಂದರ್ಭ ಬಂದರೆ ಅದರ ಮೂಲ ಪ್ಯಾಕೇಜಿಂಗ್ ಹಾಗೂ ಸ್ಥಿತಿಯನ್ನ ಕಾಪಾಡಿಕೊಳ್ಳುವಂತೆ ನೀಡಿರುವ ಮಾಹಿತಿಯಲ್ಲಿ ಸೂಚಿಸಲಾಗಿದೆ.

₹12,999ಕ್ಕೆ Xiaomi Smart TV ಖರೀದಿಸಬಹುದೇ?

₹12,999 ಬೆಲೆಯಲ್ಲಿ 32 ಇಂಚಿನ HD Ready ಡಿಸ್‌ಪ್ಲೇ, Fire TV, Alexa ವಾಯ್ಸ್ ರಿಮೋಟ್, Dolby Audio ಮತ್ತು Wi-Fi ಸಂಪರ್ಕದಂತಹ ವೈಶಿಷ್ಟ್ಯಗಳನ್ನ ನೀಡಿರುವುದು ಈ ಮಾದರಿಯ ಪ್ರಮುಖ ಆಕರ್ಷಣೆಯಾಗಿದೆ. ವಿಶೇಷವಾಗಿ ಸಣ್ಣ ಕೊಠಡಿ, ಬೆಡ್‌ರೂಮ್ ಅಥವಾ ಸಾಮಾನ್ಯ ಟಿವಿ ವೀಕ್ಷಣೆಗೆ 32 ಇಂಚಿನ ಸ್ಮಾರ್ಟ್ ಟಿವಿ ಹುಡುಕುತ್ತಿರುವ ಗ್ರಾಹಕರು ಈ ಮಾದರಿಯನ್ನ ಪರಿಗಣಿಸಬಹುದು. ಆದರೆ ದೊಡ್ಡ ಪರದೆಯ ಅನುಭವ, Full HD ಅಥವಾ 4K ರೆಸಲ್ಯೂಶನ್ ಬಯಸುವವರಿಗೆ ಈ ಮಾದರಿ ಸೂಕ್ತವಾಗದಿರಬಹುದು.

Add Zee News as a Preferred Source
TAGS:
Tech
Kannada News