SOCIAL MEDIA

Newsletter

PARTNER SITES
Select Language Select State

ದಸರಾ ವೇಳೆ ಮೈಸೂರಿಗೆ ಹೋಗಲು ಪ್ಲಾನ್‌ ಮಾಡುವವರಿಗಾಗಿ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್‌

ನೀವು ದಸರಾ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ನೀಡಲು ಯೋಚಿಸುತ್ತಿದ್ದೀರಾ.. ಹಾಗಿದ್ದರೆ, ಈ ಸುದ್ದಿ ನಿಮಗೆ ಪ್ರಯೋಜಕಾರಿ ಆಗಿದ್ದು, ಮೈಸೂರು ಪ್ಯಾಕೇಜ್‌ ಟೂರ್‌ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.

Written By Yashaswini V
Published: Oct 13, 2026, 09:20 AM IST | Updated: Oct 13, 2026, 09:22 AM IST
Image Credit: AI Image
Join

ವಿಶ್ವ ವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಯೋಜಿಸುತ್ತಿರುವವರಿಗಾಗಿ ಕೆಎಸ್‌ಆರ್‌ಟಿಸಿ ಒಂದು ದಿನದ ವಿಶೇಷ ಮೈಸೂರು ಪ್ಯಾಕೇಜ್‌ ಟೂರ್‌ ಘೋಷಿಸಿದೆ. ಈ ಟೂರ್‌ ಪ್ಯಾಕೇಜ್‌ ಎಲ್ಲಿಂದ ಎಲ್ಲಿಯವರೆಗೆ ಲಭ್ಯವಿದೆ? ದರ ಎಷ್ಟು? ಯಾವೆಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೈಸೂರು ಪ್ಯಾಕೇಜ್ ಟೂರ್ ಎಲ್ಲಿಂದ ಎಲ್ಲಿಗೆ?
ಕೆಎಸ್‌ಆರ್‌ಟಿಸಿ ಘೋಷಿಸಿರುವ ಈ ವಿಶೇಷ ಟೂರ್‌ ಪ್ಯಾಕೇಜ್‌ ಬೆಂಗಳೂರಿನಿಂದ ಮೈಸೂರಿಗೆ ಭೇಟಿ ನೀಡಲು ಬಯಸುವವರಿಗಾಗಿ ಆಗಿದೆ.

ಈ ವಿಶೇಷ ಮೈಸೂರು ಪ್ಯಾಕೇಜ್ ಟೂರ್ ಸೌಲಭ್ಯ ಎಷ್ಟು ದಿನಗಳವರೆಗೆ ಇರಲಿದೆ?
ಕೆಎಸ್‌ಆರ್‌ಟಿಸಿ ನೀಡಿರುವ ಮಾಹಿತಿಯ ಪ್ರಕಾರ, ವಿಶ್ವ ವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಘೋಷಿಸಲಾಗಿರುವ ಈ ಮೈಸೂರು ಪ್ಯಾಕೇಜ್ ಟೂರ್ ಸೌಲಭ್ಯವು ಅಕ್ಟೋಬರ್‌ 13ರ ಬುಧವಾರದಿಂದ ಎರಡು ವಾರಗಳವರೆಗೆ ಎಂದರೆ ಅಕ್ಟೋಬರ್ 28ರವರೆಗೆ ಲಭ್ಯವಿರುತ್ತದೆ.

ಈ ಮೈಸೂರು ಪ್ಯಾಕೇಜ್‌ ಟೂರ್ ಯಾವೆಲ್ಲಾ ಸ್ಥಳಗಳನ್ನು ಒಳಗೊಂಡಿರುತ್ತದೆ?
ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ಮೈಸೂರಿಗೆ ‘ಅಶ್ವಮೇಧ ಕ್ಲಾಸಿಕ್’ ಬಸ್‌ಗಳಲ್ಲಿ 
ಮೈಸೂರು ಪ್ಯಾಕೇಜ್ ಟೂರ್‌ ಅನ್ನು ಘೋಷಿಸಿದೆ. ಈ ಪ್ಯಾಕೇಜ್‌ ಟೂರ್‌ನಲ್ಲಿ ಭೇಟಿ ನೀಡಲಾಗುವ ಪ್ರಮುಖ ಸ್ಥಳಗಳೆಂದರೆ..
* ನಿಮಿಷಾಂಬ
* ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ
* ದರಿಯಾ ದೌಲತ್‌
* ಗುಂಬಜ್‌ 
* ಸಂಗಮ
* ಸೈಂಟ್‌ ಫಿಲೋಮಿನಾ ಚರ್ಚ್‌
* ಕಾವೇರಿ ಆರ್ಟ್‌ ಗ್ಯಾಲರಿ & ಕ್ರಾಫ್ಟ್‌ ಎಂಪೋರಿಯಂ
* ಮೈಸೂರು ಅರಮನೆ
* ಚಾಮರಾಜೇಂದ್ರ ಮೃಗಾಲಯ (ಮೈಸೂರು ಝೂ)
* ಚಾಮುಂಡಿ ಬೆಟ್ಟ

ಮೈಸೂರು ಪ್ಯಾಕೇಜ್‌ ಟೂರ್ ಬಸ್‌ ವೇಳಾಪಟ್ಟಿ? 
* ಬೆಳಿಗ್ಗೆ  6:00 ಗಂಟೆಗೆ ಬೆಂಗಳೂರಿನ ಸ್ಯಾಟಿಲೈಟ್‌ ಬಸ್‌ ನಿಲ್ದಾಣದಿಂದ ಹೊರಡಲಿರುವ ಅಶ್ವಮೇಧ ಕ್ಲಾಸಿಕ್‌ ಬಸ್‌ ಎಕ್ಸ್‌ಪ್ರೆಸ್‌ವೇ ಮಾರ್ಗವಾಗಿ ಸಾಗಿ ಬೆಳಿಗ್ಗೆ  8:00 ಗಂಟೆಗೆ ನಿಮಿಷಾಂಬ ದೇವಾಲಯಕ್ಕೆ ತೆರಳಲಿದೆ. ಇಲ್ಲಿ ಒಂದು ಗಂಟೆಯ ಸಮಯಾವಕಾಶ ಇರಲಿದ್ದು ದೇವಾಲಯದ ವೀಕ್ಷಣೆಯ ಜೊತೆಗೆ ಉಪಾಹಾರಕ್ಕೂ ಸಮಯ ನೀಡಲಾಗುತ್ತದೆ. 
* ಬಳಿಕ ಬೆಳಗ್ಗೆ 9:00 ಗಂಟೆಗೆ ನಿಮಿಷಾಂಬ ದೇವಾಲಯದಿಂದ ಹೊರಟು ಮೊದಲಿಗೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಅಲ್ಲಿಂದ ದರಿಯಾ ದೌಲತ್, ಗುಂಬಜ್‌, ಸಂಗಮಗಳನ್ನು ವೀಕ್ಷಿಸಿ 11:00 ಗಂಟೆಗೆ ಮೈಸೂರಿನತ್ತ ಪ್ರಯಾಣ.
* ಬೆಳಗ್ಗೆ 11:30 ಪ್ರಸಿದ್ಧ ಸೈಂಟ್‌ ಫಿಲೋಮಿನಾ ಚರ್ಚ್‌ಗೆ ಭೇಟಿ
* ಮಧ್ಯಾಹ್ನ 12:00 ಯಿಂದ 01:00 ಗಂಟೆವರೆಗೆ ಊಟದ ವಿರಾಮ ಇರಲಿದೆ. 
* ಮಧ್ಯಾಹ್ನ 1:00 – 02:00    ಕಾವೇರಿ ಆರ್ಟ್ ಗ್ಯಾಲರಿ & ಕ್ರಾಫ್ಟ್ ಎಂಪೋರಿಯಂ
* ಮಧ್ಯಾಹ್ನ 2:00 – ಸಂಜೆ 04:00 ಮೈಸೂರು ಅರಮನೆ ವೀಕ್ಷಣೆ
* ಸಂಜೆ 04:00 ಗಂಟೆಗೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ. 
* ಸಂಜೆ  5:30ಕ್ಕೆ ಚಾಮುಂಡಿಬೆಟ್ಟಕ್ಕೆ ಭೇಟಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ.
* ರಾತ್ರಿ 8:00 ಗಂಟೆಗೆ ಮೈಸೂರಿನಿಂದ ಎಕ್ಸ್‌ಪ್ರೆಸ್‌ವೇ ಮೂಲಕ ಬೆಂಗಳೂರಿನ ಕಡೆಗೆ ಪ್ರಯಾಣ.

ಮೈಸೂರು ಪ್ಯಾಕೇಜ್‌ ಟೂರ್ ದರ ವಿವರ:
ಮೈಸೂರು ಪ್ಯಾಕೇಜ್‌ ಟೂರ್‌ಗಾಗಿ ಕೆಎಸ್‌ಆರ್‌ಟಿಸಿ ವಯಸ್ಕರಿಗೆ 950 ರೂ. ಹಾಗೂ ಮಕ್ಕಳಿಗೆ (6 ರಿಂದ 12 ವರ್ಷ): 750 ರೂ. ದರವನ್ನು ನಿಗದಿಪಡಿಸಿದೆ. ಆದಾಗ್ಯೂ, ಈ ದರವು ಕೇವಲ ಬಸ್‌ ಚಾರ್ಜ್‌ ಮಾತ್ರ ಆಗಿರುತ್ತದೆ. ಪ್ರಯಾಣಿಕರು ತಮ್ಮ ಆಹಾರ, ಪ್ರೇಕ್ಷಣೀಯ ಸ್ಥಳಗಳಲ್ಲಿ ಎಂಟ್ರಿ ಟಿಕೆಟ್‌ ದರಗಳನ್ನು ತಾವೇ ಭರಿಸಬೇಕಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.

1 ದಿನದ ಮೈಸೂರು ಪ್ಯಾಕೇಜ್ ಟೂರ್‌ಗೆ ಟಿಕೆಟ್‌ ಬುಕಿಂಗ್‌ ಮಾಡುವುದು ಹೇಗೆ:
1 ದಿನದ ಮೈಸೂರು ಪ್ಯಾಕೇಜ್ ಟೂರ್ ಪ್ರವಾಸದ ಪ್ರಯೋಜನವನ್ನು ಪಡೆಯಲು ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಇದಕ್ಕಾಗಿ ವೆಬ್‌ಸೈಟ್: http://www.ksrtc.in ಮತ್ತು http://www.ksrtc.karnataka.gov.in ಗೆ ಭೇಟಿ ನೀಡಿ ಟಿಕೆಟ್‌ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
080-26252625, 7760990100, 7760990560, 7760990287
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES