• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಕಾವ್ಯ ಶಾ ಜೀವನದಲ್ಲಿ ನಡೆದ ಆ ದುರಂತವೇನು? ತಾಯಿಯ ಅಗಲಿಕೆಯ ನೋವಿನ ಕಥೆ ಬಹಿರಂಗ

ಕಾವ್ಯ ಶಾ ಜೀವನದಲ್ಲಿ ನಡೆದ ಆ ದುರಂತವೇನು? ತಾಯಿಯ ಅಗಲಿಕೆಯ ನೋವಿನ ಕಥೆ ಬಹಿರಂಗ

Kavya Sha's life: ಕಂಟೆಟ್‌ ಕ್ರಿಯೇಟರ್‌ ಕಾವ್ಯ ಶಾ ಅವರ ಜೀವನದಲ್ಲಿ ನಡೆದ ಕೆಲವೊಂದು ಘಟನೆ ಅವರ ಬದಕನ್ನೇ ಬದಲಾಯಿಸಿದೆ.

Written ByRamya. R. Gowda
Published: Oct 13, 2026, 11:08 AM IST|Updated: Oct 13, 2026, 11:17 AM IST
joinshare
ಕಾವ್ಯ ಶಾ ಜೀವನದಲ್ಲಿ ನಡೆದ ಆ ದುರಂತವೇನು? ತಾಯಿಯ ಅಗಲಿಕೆಯ ನೋವಿನ ಕಥೆ ಬಹಿರಂಗ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಯಾರು ಈ ಡಾ. ಸುಧಾ ಯಾದವ್? ಕಾರ್ಗಿಲ್ ವೀರನ ಪತ್ನಿಯಿಂದ ಕರ್ನಾಟಕದ ರಾಜ್ಯಪಾಲರವರೆಗೆ

ಯಾರು ಈ ಡಾ. ಸುಧಾ ಯಾದವ್? ಕಾರ್ಗಿಲ್ ವೀರನ ಪತ್ನಿಯಿಂದ ಕರ್ನಾಟಕದ ರಾಜ್ಯಪಾಲರವರೆಗೆ

2

ಕರ್ನಾಟಕದ ಹವಾಮಾನದಲ್ಲಿ ಭಾರೀ ಬದಲಾವಣೆ. ಈ ಮೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

3

FDA ದಾಳಿಯಲ್ಲಿ ಖಾಸಗಿ ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳ ಕರ್ಮಕಾಂಡ ಬಯಲು.. ರೋಗಿಗಳೇ ಹುಷಾರ್!‌

4

ಕಾವ್ಯ ಶಾ ಜೀವನದಲ್ಲಿ ನಡೆದ ಆ ದುರಂತವೇನು? ತಾಯಿಯ ಅಗಲಿಕೆಯ ನೋವಿನ ಕಥೆ ಬಹಿರಂಗ

5

ಬಿಗ್‌ ಬಾಸ್‌ ಮನೆಗೆ ಬಂದ ಲಕ್ಷ್ಮೀ ಗೌಡ ಯಾರು? ಒಂದೇ ದಿನ ಎರಡು ವೈಲ್ಡ್‌ ಕಾರ್ಡ್‌ ಎಂಟ್ರಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಯಾವಾಗಲೂ ನಗುನಗುತ್ತಾ ಇರೋ ಮುಖದ ಹಿಂದೆ ಎಷ್ಟೋ ನೋವುಗಳು ಅಡಗಿರುತ್ತವೆ ಅನ್ನೋದಕ್ಕೆ ನಟಿ ಕಾವ್ಯಾ ಶಾ ಅವರ ಬದುಕೇ ಸಾಕ್ಷಿಯಾಗಿದೆ. ಒಂದೆಡೆ ಭೀಕರ ಅಪಘಾತದ ಆಘಾತ.. ಮತ್ತೊಂದೆಡೆ ತಾಯಿಯನ್ನೇ ಕಳೆದುಕೊಂಡ ನೋವು.. ಈ ಘಟನೆಯಿಂದ ಕಾವ್ಯಾ ಶಾ ಅವರ ಬದುಕಿನ ದೃಷ್ಟಿಕೋನವೇ ಬದಲಾಗಿಬಿಟ್ಟಿದೆ. ಸಾವು ಬದುಕಿನ ನಡುವೆ ಹೋರಾಡಿ ಬಂದ ನಟಿ, ಇಂದು ಪ್ರತಿಯೊಂದು ಕ್ಷಣವನ್ನೂ ಕೃತಜ್ಞತೆಯಿಂದ ನೋಡುತ್ತಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಆ ಕರಾಳ ಘಟನೆಯ ಬಗ್ಗೆ ಕಾವ್ಯಾ ಶಾ ಮನಬಿಚ್ಚಿ ಮಾತನಾಡಿದ್ದಾರೆ. ಹಾಗಾದ್ರೆ, ಅಂದು ನಡೆದಿದ್ದೇನು? ಆ ನೋವಿನಿಂದ ಹೊರಬಂದು ಇಂದು ಬದುಕನ್ನು ಅವರು ನೋಡುತ್ತಿರುವ ರೀತಿ ಹೇಗಿದೆ? ನೋಡೋಣ ಈ ಸ್ಟೋರಿ.


ನಟಿ ಕಾವ್ಯ ಶಾ ಕನ್ನಡ ಕಿರುತೆರೆ ಹಾಗೂ ಹಿರಿತೆರಡ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರಾಗಿದೆ. ಡ್ಯಾನ್ಸ್‌ ಕೊರಿಯೋಗ್ರಾಫರ್‌ ಆಗಿ ಗುರುತಿಸಿಕೊಂಡಿದ್ದ ಕಾವ್ಯ ಶಾ ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ ಸಿನಿಮಾ ಮೂಲಕ ಗಮನ ಸೆಳೆದ್ದರು. ಬಳಿಕ ಹಲವು ಧಾರಾವಾಹಿಗಳಲ್ಲೂ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಸದ್ಯ ಸೋಷಿಯಲ್‌ ಮೀಡಿಯಾ ಇನ್‌ಫ್ಲ್ಯೂಯನ್ಸರ್‌ ಆಗಿಯೂ ಭಾರೀ ಜನಮನಗೆದಿದ್ದಾರೆ. ಕಾವ್ಯಾ ಶಾ ತಮ್ಮ ಬದುಕಿನ ಅನುಭವಗಳ ಮೂಲಕ ಅಭಿಮಾನಿಗಳಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.

ಬದಲಾದ ಬದಕಿನ ದಿಕ್ಕು!
ಆದರೆ, ಕಾವ್ಯಾ ಶಾ ಅವರ ಬದುಕಿನಲ್ಲೂ ಮರೆಯಲಾಗದ ಕರಾಳ ದಿನವೊಂದಿದೆ. ಸುಮಾರು ಐದು ವರ್ಷಗಳ ಹಿಂದೆ ನಡೆದ ಭೀಕರ ಅಪಘಾತ ಅವರ ಜೀವನವನ್ನೇ ಬದಲಿಸಿತ್ತು. ಈ ಅಪಘಾತದಲ್ಲಿ ತಂದೆ ಹಾಗೂ ಕಾವ್ಯಾ ಶಾ ಗಾಯಗೊಂಡಿದ್ದರು. ಆದರೆ, ಆ ಘಟನೆಯ ಬೆನ್ನಲ್ಲೇ ಹೃದಯಾಘಾತದಿಂದ ತಾಯಿಯನ್ನು ಕಳೆದುಕೊಳ್ಳುವ ದುಃಖ ಎದುರಾಯಿತು. ತಾಯಿಯ ಅಗಲಿಕೆಯ ನೋವು ಒಂದೆಡೆಯಾದರೆ, ತಾವೇ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇವೆ ಎಂಬ ಅಚ್ಚರಿ ಮತ್ತೊಂದೆಡೆ.


ತಮ್ಮ ಬದುಕಿನ ಆ ಕಹಿ ಘಟನೆಯನ್ನು ನೆನಪಿಸಿಕೊಂಡಿರುವ ಕಾವ್ಯಾ ಶಾ, ದೇವರು ತಮಗೆ ಬದುಕಲು ಎರಡನೇ ಅವಕಾಶ ನೀಡಿದ್ದಾನೆ ಎಂಬ ಭಾವನೆಯನ್ನು ಹಂಚಿಕೊಂಡಿದ್ದಾರೆ.ಭೀಕರ ಅಪಘಾತದಲ್ಲಿ ತಂದೆಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ತಮ್ಮ ತಲೆಗೆ ಏಟಾಗಿ ಹೊಲಿಗೆ ಹಾಕಿಸಿಕೊಳ್ಳಬೇಕಾಗಿತ್ತು. ಅಷ್ಟೊಂದು ಘೋರವಾದ ಅಪಘಾತದಿಂದ ತಾವು ಹೇಗೆ ಬದುಕುಳಿದೆವು ಎಂಬುದೇ ಇಂದಿಗೂ ಆಶ್ಚರ್ಯವಾಗಿದೆ.  ಆ ದಿನದಿಂದ ತಮ್ಮ ಜೀವನವನ್ನು ನೋಡುವ ದೃಷ್ಟಿಯೇ ಬದಲಾಗಿದೆ. ಬದುಕಿನಲ್ಲಿ ಸಿಗುವ ಪ್ರತಿಯೊಂದು ಅವಕಾಶವನ್ನೂ ದೇವರು ನೀಡಿದ ಉಡುಗೊರೆಯಂತೆ ಕಾಣುತ್ತಿದ್ದಾರೆ. ಸಣ್ಣಪುಟ್ಟ ಸಂತೋಷಗಳಿಗೂ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.


ಜೀವನದಲ್ಲಿ ಸಿಗುವ ಪ್ರತಿಯೊಂದು ಅವಕಾಶವನ್ನೂ ಗೌರವಿಸಬೇಕು. ಸಣ್ಣಪುಟ್ಟ ಸಂತೋಷಗಳನ್ನೂ ಸಂಭ್ರಮಿಸಬೇಕು ಎಂಬುದು ಕಾವ್ಯಾ ಶಾ ಅವರ ನಂಬಿಕೆ. ಹೀಗಾಗಿಯೇ ಪ್ರತಿದಿನ ತಮ್ಮ ಬದುಕಿನಲ್ಲಿರುವ ಒಳ್ಳೆಯ ಸಂಗತಿಗಳನ್ನು ನೆನಪಿಸಿಕೊಂಡು ಕೃತಜ್ಞತೆಯ ಪತ್ರ ಬರೆಯುತ್ತಾರಂತೆ. ಮರುಜೀವ ಸಿಕ್ಕಿದೆ.. ಜನರಿಗೆ ಇಷ್ಟವಾಗುವ ರೀತಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ.. ದೇವರು ಸಾಕಷ್ಟು ಅವಕಾಶಗಳನ್ನು ಕೊಟ್ಟಿದ್ದಾನೆ ಎಂಬ ಭಾವನೆ ಅವರಲ್ಲಿದೆ. ಕಷ್ಟಗಳು ಎದುರಾದಾಗ ಕುಗ್ಗದೆ, ಬದುಕಿನ ಪ್ರತಿಯೊಂದು ಕ್ಷಣವನ್ನೂ ಪ್ರೀತಿಯಿಂದ ಸ್ವೀಕರಿಸಬೇಕು ಎಂಬ ಸಂದೇಶವನ್ನು ತಮ್ಮ ಅನುಭವದ ಮೂಲಕ ನೀಡಿದ್ದಾರೆ.

ಇನ್ನು ಕಾವ್ಯಾ ಶಾ ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ, ಅವರು ಹಿರಿಯ ನಟ ನಾಗೇಂದ್ರ ಶಾ ಅವರ ಪುತ್ರಿ. ‘ಪಾರು’ ಧಾರಾವಾಹಿಯಲ್ಲಿ ಹನುಮಂತು ಪಾತ್ರದ ಮೂಲಕ ಗಮನ ಸೆಳೆದಿದ್ದ ನಾಗೇಂದ್ರ ಶಾ, ಸದ್ಯ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ವೀರಭದ್ರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಕಾವ್ಯಾ ಶಾ ಅವರ ಪತಿ ವರುಣ್ ಗೌಡ. ಜೀ ಕನ್ನಡ ವಾಹಿನಿಯಲ್ಲಿ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿರುವ ವರುಣ್ ಗೌಡ, ಖಾಸಗಿ ಕಾರ್ಯಕ್ರಮಗಳನ್ನೂ ನಿರ್ವಹಿಸುತ್ತಾರೆ. ನಿರೂಪಕಿ ಅನುಶ್ರೀ ಅವರ ಮದುವೆಯಲ್ಲಿ ಅಣ್ಣನ ಸ್ಥಾನದಲ್ಲಿ ನಿಂತು ಪ್ರಮುಖ ಪಾತ್ರ ವಹಿಸಿದ್ದವರು ವರುಣ್ ಗೌಡ.

ಒಟ್ಟಾರೆಯಾಗಿ ಬದುಕು ಯಾವ ಕ್ಷಣದಲ್ಲಿ ಯಾವ ತಿರುವು ಪಡೆಯುತ್ತೆ ಅನ್ನೋದನ್ನ ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ, ಎದುರಾಗುವ ನೋವಿನ ನಡುವೆಯೂ ಬದುಕನ್ನು ಪ್ರೀತಿಸುವುದು,ಸಿಗುವ ಅವಕಾಶಗಳಿಗೆ ಕೃತಜ್ಞರಾಗಿರುವುದು ಬಹಳ ಮುಖ್ಯ. ತಾಯಿಯನ್ನು ಕಳೆದುಕೊಂಡ ನೋವನ್ನು ಹೊತ್ತುಕೊಂಡೇ ಬದುಕಿನಲ್ಲಿ ಹೊಸ ಭರವಸೆಯೊಂದಿಗೆ ಮುನ್ನಡೆಯುತ್ತಿರುವ ಕಾವ್ಯಾ ಶಾ ಅವರ ಮಾತುಗಳು, ಜೀವನವನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡುತ್ತವೆ.
 

Add Zee News as a Preferred Source
TAGS:
Cinema