SOCIAL MEDIA

Newsletter

PARTNER SITES
Select Language Select State

ಸಾವು ಬದುಕಿನ ನಡುವೆ ಹೋರಾಡಿದ ಕಾಳಿಂಗ ಸರ್ಪ ರಕ್ಷಣೆ

Chikamangaluru rescues king cobra: ಚೀಲದಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡಿದ ಕಾಳಿಂಗ ಸರ್ಪ ರಕ್ಷಣೆ ಮಾಡಲಾಗಿದೆ.

Written By Ramya. R. Gowda
Published: Oct 05, 2026, 02:35 PM IST | Updated: Oct 05, 2026, 02:44 PM IST
Join

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಅರೆಕೊಡಿಗೆ ಗ್ರಾಮದಲ್ಲಿ ಪ್ಲಾಸ್ಟಿಕ್ ಜಾಲದಲ್ಲಿ ಸಿಲುಕಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬೃಹತ್ ಕಾಳಿಂಗ ಸರ್ಪವನ್ನು ಉರಗ ತಜ್ಞ ಆರಿಫ್ ಯಶಸ್ವಿಯಾಗಿ ರಕ್ಷಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅರೆಕೊಡಿಗೆ ಗ್ರಾಮದ ನಿತಿನ್ ಎಂಬುವವರಿಗೆ ಸೇರಿದ ಕಾಫಿ ನರ್ಸರಿಯಲ್ಲಿ ಅಳವಡಿಸಲಾಗಿದ್ದ ಜಾಲದಲ್ಲಿ ಆಕಸ್ಮಿಕವಾಗಿ ಕಾಳಿಂಗ ಸರ್ಪ ಸಿಕ್ಕಿಹಾಕಿಕೊಂಡಿತು. ಹಾವು ತೀವ್ರವಾಗಿ ಹೆಣಗಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಉರಗ ತಜ್ಞ ಆರಿಫ್ ಅವರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಧಾವಿಸಿದ ಆರಿಫ್, ಅತ್ಯಂತ ಎಚ್ಚರಿಕೆಯಿಂದ ಜಾಲವನ್ನು ಕತ್ತರಿಸಿ ಯಾವುದೇ ಗಾಯಗಳಿಲ್ಲದೆ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹೊರತೆಗೆದರು. ಮಾರಕ ಅಪಾಯದಿಂದ ಪಾರಾದ ಕಾಳಿಂಗ ಸರ್ಪವನ್ನು ನಂತರ ಚಾರ್ಮಾಡಿ ಘಾಟ್‌ನ ದಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಯಿತು. ಈ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಸಚಿನ್, ಸಾಗರ್, ಪ್ರಶಾಂತ್ ಮತ್ತು ವಿನಯ್ ಸೇರಿದಂತೆ ಸ್ಥಳೀಯರು ಹಾಜರಿದ್ದರು ಮತ್ತು ಉರಗ ತಜ್ಞರ ಮನಸ್ಸಿನ ಉಪಸ್ಥಿತಿ ಮತ್ತು ಸಮಯೋಚಿತ ಸಹಾಯವನ್ನು ಶ್ಲಾಘಿಸಿದರು.

ಇತ್ತ ಚಿಕ್ಕಮಗಳೂರಿನ ಕಳಸ ತಾಲೂಕಿನ ಕಾರ್ಗದ್ದೆ ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ಮನೆಯ ಅಂಗಳದಲ್ಲೇ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅಚ್ಚರಿಯ ಸಂಗತಿ ಅಂದ್ರೆ ನಾಗರಹಾವನ್ನೇ ನುಂಗಿ ಅಂಗಳದಲ್ಲೇ ಕಾಳಿಂಗ ಸರ್ಪ ನಿದ್ರೆಗೆ ಜಾರಿತ್ತು.ಇದನ್ನು ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು ತಕ್ಷಣ ಸ್ನೇಕ್ ರಿಜ್ವಾನ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿ ಬೃಹತ್ ಕಾಳಿಂಗನನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಾರ್ಗದ್ದೆ ಗ್ರಾಮದಲ್ಲಿ ಮನೆಯ ಅಂಗಳದಲ್ಲೇ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ನಾಗರಹಾವನ್ನು ನುಂಗಿದ ಬಳಿಕ ಅಂಗಳದಲ್ಲೇ ಕಾಳಿಂಗ ಸರ್ಪ ವಿಶ್ರಾಂತಿಗೆ ಜಾರಿತ್ತು. ಹಾವು ಹಾವನ್ನೇ ನುಂಗಿರುವ ದೃಶ್ಯ ಕಂಡು ಸ್ಥಳೀಯರು ಅಚ್ಚರಿಗೆ ಒಳಗಾಗಿದ್ದಾರೆ. ಬೃಹತ್ ಗಾತ್ರದ ಕಾಳಿಂಗನನ್ನು ಕಂಡು ಗ್ರಾಮಸ್ಥರಲ್ಲಿ ಆತಂಕವೂ ಮನೆಮಾಡಿತ್ತು.

ತಕ್ಷಣವೇ ಗ್ರಾಮಸ್ಥರು ಸ್ನೇಕ್ ರಿಜ್ವಾನ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಸ್ನೇಕ್ ರಿಜ್ವಾನ್, ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಕಾಳಿಂಗ ಸರ್ಪ ಸೆರೆ ಕಾರ್ಯಾಚರಣೆ ನಡೆಸಿದ್ದಾರೆ.ಬಳಿಕ ಸಾಕಷ್ಟು ಎಚ್ಚರಿಕೆಯಿಂದ ಸುಮಾರು 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಬಳಿಕ ಕುದುರೆಮುಖ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.ಮನೆಯ ಅಂಗಳದಲ್ಲೇ ಬೃಹತ್ ಕಾಳಿಂಗ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡಿದ್ದ ಗ್ರಾಮಸ್ಥರು, ಹಾವು ಸುರಕ್ಷಿತವಾಗಿ ಸೆರೆ ಸಿಕ್ಕ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.
ಹಾವು ಹಾವನ್ನೇ ನುಂಗಿ ಅಂಗಳದಲ್ಲೇ ನಿದ್ರೆಗೆ ಜಾರಿದ್ದ ಅಪರೂಪದ ದೃಶ್ಯ ಇದೀಗ ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಒಟ್ಟಿನಲ್ಲಿ, ಮನೆಯ ಅಂಗಳಕ್ಕೆ ಬಂದಿದ್ದ ಬೃಹತ್ ಕಾಳಿಂಗ ಸರ್ಪವನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.ಕಾಳಿಂಗನನ್ನು ಕಂಡು ಬೆಚ್ಚಿಬಿದ್ದಿದ್ದ ಕಾರ್ಗದ್ದೆ ಗ್ರಾಮಸ್ಥರು ಇದೀಗ ನಿರಾಳರಾಗಿದ್ದಾರೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES