• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /KSET 2026 : ಹಾಲ್ ಟಿಕೆಟ್‌ ಡೌನ್‌ಲೋಡ್, ಪರೀಕ್ಷೆಯ ದಿನಾಂಕ, ಸಮಯ, ದಾಖಲೆಗಳ ಪಟ್ಟಿ ಇಲ್ಲಿದೆ

KSET 2026 : ಹಾಲ್ ಟಿಕೆಟ್‌ ಡೌನ್‌ಲೋಡ್, ಪರೀಕ್ಷೆಯ ದಿನಾಂಕ, ಸಮಯ, ದಾಖಲೆಗಳ ಪಟ್ಟಿ ಇಲ್ಲಿದೆ

KSET 2026 : ಕೆಎಸ್‌ಇಟಿ ಪರೀಕ್ಷಾ ಅಭ್ಯರ್ಥಿಗಳಿಗೆ ಪ್ರಮುಖ ಸುದ್ದಿಯೊಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪರೀಕ್ಷೆಯ ಪ್ರವೇಶ ಪತ್ರಗಳನ್ನು (KSET Hall Tickets) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನ, ಪರೀಕ್ಷೆಯ ದಿನಾಂಕ, ಸಮಯ, ಬೇಕಾದ ದಾಖಲೆಗಳು ಇಲ್ಲಿವೆ..

Reported ByKrishna NKEdited ByKrishna NK
Published: Oct 05, 2026, 04:41 PM IST|Updated: Oct 05, 2026, 04:50 PM IST
joinshare
KSET 2026 : ಹಾಲ್ ಟಿಕೆಟ್‌ ಡೌನ್‌ಲೋಡ್, ಪರೀಕ್ಷೆಯ ದಿನಾಂಕ, ಸಮಯ, ದಾಖಲೆಗಳ ಪಟ್ಟಿ ಇಲ್ಲಿದೆ
Image Credit: KSET 2026 updates

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ರಾಜಧಾನಿ ಜಾನುವಾರು ಮಾಲೀಕರಿಗೆ ಶಾಕ್ : ರಸ್ತೆಗೆ ಹಸುಗಳನ್ನ ಬಿಟ್ಟರೆ ಬೀಳಲಿದೆ ಭಾರಿ ಫೈನ್

ರಾಜಧಾನಿ ಜಾನುವಾರು ಮಾಲೀಕರಿಗೆ ಶಾಕ್ : ರಸ್ತೆಗೆ ಹಸುಗಳನ್ನ ಬಿಟ್ಟರೆ ಬೀಳಲಿದೆ ಭಾರಿ ಫೈನ್

2

₹500 ನೋಟಿನಿಂದ ಮಾಡಿದ ಒಂದೇ ಒಂದು ರೀಲ್‌ಗೆ ಜೈಲು ಪಾಲು

3

ರಾಜ್ಯದಲ್ಲಿ ಹೆಚ್ಚಿದ ಬಿಯರ್ ಬೇಡಿಕೆ : ಸರ್ಕಾರಕ್ಕೆ ಹರಿದುಬಂತು ₹1,463 ಕೋಟಿ ಆದಾಯ!

4

ಪೈಲಟ್‌ಗಳಿಗೆ ಎಷ್ಟು ಸಂಬಳ ಸಿಗುತ್ತದೆ??

5

KSET 2026 : ಹಾಲ್ ಟಿಕೆಟ್‌ ಡೌನ್‌ಲೋಡ್, ಪರೀಕ್ಷೆಯ ದಿನಾಂಕ, ಸಮಯ, ದಾಖಲೆಗಳ ಪಟ್ಟಿ ಇಲ್ಲಿದೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

KSET 2026 updates : ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಮುಖ ಮಾಹಿತಿಯೊಂದನ್ನು ನೀಡಿದೆ. ಪರೀಕ್ಷೆಗೆ ಸಂಬಂಧಿಸಿದ ಹಾಲ್ ಟಿಕೆಟ್‌ಗಳನ್ನು (KSET 2026 hall ticket) ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಅಕ್ಟೋಬರ್ 11ರಂದು KSET ಪರೀಕ್ಷೆ
ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಕ್ಟೋಬರ್ 11, 2026 ರಂದು KSET ಪರೀಕ್ಷೆ ನಡೆಯಲಿದೆ. ಒಟ್ಟು 37 ವಿಷಯಗಳಿಗೆ ಪರೀಕ್ಷೆ ಆಯೋಜಿಸಲಾಗಿದ್ದು, ಆಫ್‌ಲೈನ್ (OMR) ಮಾದರಿಯಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ಒಂದೇ ಅವಧಿಯಲ್ಲಿ ಎರಡೂ ಪತ್ರಿಕೆಗಳ ಪರೀಕ್ಷೆಗಳು ಜರುಗಲಿವೆ.

ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವ ವಿಧಾನ
ಅಭ್ಯರ್ಥಿಗಳು ಕೆಇಎ ನ ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡಿ, KSET 2026 ಹಾಲ್ ಟಿಕೆಟ್ / ಅಡ್ಮಿಟ್ ಕಾರ್ಡ್ ಲಿಂಕ್ ಅನ್ನು ಆಯ್ಕೆ ಮಾಡಬೇಕು. ನಂತರ ಲಾಗಿನ್ ಪುಟದಲ್ಲಿ ನಿಮ್ಮ ಅಗತ್ಯ ವಿವರಗಳನ್ನು ನಮೂದಿಸಿ ಲಾಗಿನ್ ಆಗಬೇಕು. ಸ್ಕ್ರೀನ್ ಮೇಲೆ ಕಾಣಿಸುವ ಹಾಲ್‌ಟಿಕೆಟ್ ವಿವರಗಳನ್ನು ಪರಿಶೀಲಿಸಿ, PDF ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಂಡು ಸುರಕ್ಷಿತವಾಗಿಟ್ಟುಕೊಳ್ಳಬೇಕು.

ಹಾಲ್‌ಟಿಕೆಟ್‌ನಲ್ಲಿನ ವಿವರ ಪರಿಶೀಲನೆ ಕಡ್ಡಾಯ
ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಹೆಸರು, ರೋಲ್ ಸಂಖ್ಯೆ, ಫೋಟೊ, ಸಹಿ, ಪರೀಕ್ಷಾ ದಿನಾಂಕ, ಸಮಯ, ಪರೀಕ್ಷಾ ಕೇಂದ್ರದ ಹೆಸರು ಹಾಗೂ ವಿಳಾಸ ಸೇರಿದಂತೆ ಪ್ರಮುಖ ಮಾಹಿತಿಗಳಿರುತ್ತವೆ. ಇದರಲ್ಲಿ ಯಾವುದೇ ತಪ್ಪುಗಳು ಕಂಡುಬಂದಲ್ಲಿ ಅಭ್ಯರ್ಥಿಗಳು ತಕ್ಷಣವೇ ಪರೀಕ್ಷಾ ಪ್ರಾಧಿಕಾರದ (KEA) ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು.

ಪರೀಕ್ಷಾ ಕೇಂದ್ರಕ್ಕೆ ತರಬೇಕಾದ ಕಡ್ಡಾಯ ದಾಖಲೆಗಳು
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿದ KSET ಹಾಲ್ ಟಿಕೆಟ್ ಪ್ರಿಂಟ್ ಔಟ್ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಮೂಲ ಗುರುತಿನ ಚೀಟಿಯನ್ನು (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಅಥವಾ ಪಾಸ್‌ಪೋರ್ಟ್) ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

Add Zee News as a Preferred Source
TAGS:
Kannada News