• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ರಾಜ್ಯದಲ್ಲಿ ಹೆಚ್ಚಿದ ಬಿಯರ್ ಬೇಡಿಕೆ : ಸರ್ಕಾರಕ್ಕೆ ಹರಿದುಬಂತು ₹1,463 ಕೋಟಿ ಆದಾಯ!

ರಾಜ್ಯದಲ್ಲಿ ಹೆಚ್ಚಿದ ಬಿಯರ್ ಬೇಡಿಕೆ : ಸರ್ಕಾರಕ್ಕೆ ಹರಿದುಬಂತು ₹1,463 ಕೋಟಿ ಆದಾಯ!

ಅಬಕಾರಿ ಇಲಾಖೆಯ 2ನೇ ತ್ರೈಮಾಸಿಕದ ಇತ್ತೀಚಿನ ಅಂಕಿಅಂಶಗಳು ಬಹಿರಂಗಗೊಂಡಿದ್ದು, ರಾಜ್ಯದ ಮದ್ಯ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆ ಕಂಡುಬಂದಿದೆ. 2026ರ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಅಬಕಾರಿ ರಾಜಸ್ವ ಸಂಗ್ರಹವು ಗಮನಾರ್ಹ ಏರಿಕೆ ಕಂಡಿದ್ದು, ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಆದಾಯ ಹರಿದುಬಂದಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Oct 05, 2026, 05:17 PM IST|Updated: Oct 05, 2026, 05:22 PM IST
joinshare
ರಾಜ್ಯದಲ್ಲಿ ಹೆಚ್ಚಿದ ಬಿಯರ್ ಬೇಡಿಕೆ : ಸರ್ಕಾರಕ್ಕೆ ಹರಿದುಬಂತು ₹1,463 ಕೋಟಿ ಆದಾಯ!
Image Credit: Kannada News today

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ರಾಜಧಾನಿ ಜಾನುವಾರು ಮಾಲೀಕರಿಗೆ ಶಾಕ್ : ರಸ್ತೆಗೆ ಹಸುಗಳನ್ನ ಬಿಟ್ಟರೆ ಬೀಳಲಿದೆ ಭಾರಿ ಫೈನ್

ರಾಜಧಾನಿ ಜಾನುವಾರು ಮಾಲೀಕರಿಗೆ ಶಾಕ್ : ರಸ್ತೆಗೆ ಹಸುಗಳನ್ನ ಬಿಟ್ಟರೆ ಬೀಳಲಿದೆ ಭಾರಿ ಫೈನ್

2

₹500 ನೋಟಿನಿಂದ ಮಾಡಿದ ಒಂದೇ ಒಂದು ರೀಲ್‌ಗೆ ಜೈಲು ಪಾಲು

3

ರಾಜ್ಯದಲ್ಲಿ ಹೆಚ್ಚಿದ ಬಿಯರ್ ಬೇಡಿಕೆ : ಸರ್ಕಾರಕ್ಕೆ ಹರಿದುಬಂತು ₹1,463 ಕೋಟಿ ಆದಾಯ!

4

ಪೈಲಟ್‌ಗಳಿಗೆ ಎಷ್ಟು ಸಂಬಳ ಸಿಗುತ್ತದೆ??

5

KSET 2026 : ಹಾಲ್ ಟಿಕೆಟ್‌ ಡೌನ್‌ಲೋಡ್, ಪರೀಕ್ಷೆಯ ದಿನಾಂಕ, ಸಮಯ, ದಾಖಲೆಗಳ ಪಟ್ಟಿ ಇಲ್ಲಿದೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: 2026ರ ಜುಲೈನಿಂದ ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ರಾಜ್ಯದ ಅಬಕಾರಿ ಇಲಾಖೆಯ ರಾಜಸ್ವ ಸಂಗ್ರಹಣೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಈ ಅವಧಿಯಲ್ಲಿ ಸರ್ಕಾರದ ಅಬಕಾರಿ ರಾಜಸ್ವವು ಶೇಕಡಾ 12.54ರಷ್ಟು ಹೆಚ್ಚಳ ಕಂಡಿದ್ದು, ಒಟ್ಟಾರೆಯಾಗಿ ₹11,595.88 ಕೋಟಿ ರಾಜಸ್ವವು ರಾಜ್ಯದ ಬೊಕ್ಕಸಕ್ಕೆ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅಬಕಾರಿ ಇಲಾಖೆಯ ಈ ಆದಾಯದ ಪ್ರಗತಿಗೆ ಮುಖ್ಯವಾಗಿ ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿ ಕಂಡುಬಂದ ಭಾರಿ ಪ್ರಮಾಣದ ಏರಿಕೆಯೇ ಪ್ರಮುಖ ಕಾರಣವಾಗಿದೆ.

ಬಿಯರ್ ಮಾರಾಟದಲ್ಲಿ ಶೇಕಡಾ 49.69ರಷ್ಟು ಭಾರಿ ಜಿಗಿತ
ಕಳೆದ ಸಾಲಿನ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದ ಅವಧಿಗೆ ಹೋಲಿಕೆ ಮಾಡಿ ನೋಡಿದರೆ, ಪ್ರಸಕ್ತ ಸಾಲಿನಲ್ಲಿ ಬಿಯರ್ ಮಾರಾಟದಲ್ಲಿ ಶೇಕಡಾ 49.69ರಷ್ಟು ಬೃಹತ್ ಮಟ್ಟದ ಏರಿಕೆ ದಾಖಲಾಗಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿಯೇ ರಾಜ್ಯಾದ್ಯಂತ ಬರೋಬ್ಬರಿ 42.05 ಲಕ್ಷ ಪೆಟ್ಟಿಗೆಗಳಷ್ಟು ಹೆಚ್ಚುವರಿ ಬಿಯರ್ ಮಾರಾಟವಾಗಿದೆ. ಮದ್ಯ ಮಾರಾಟದ ಒಟ್ಟಾರೆ ಪ್ರಗತಿಯಲ್ಲಿ ಬಿಯರ್‌ನ ಕೊಡುಗೆ ಅತ್ಯಂತ ಪ್ರಮುಖವಾಗಿದ್ದು, ಈ ವಿಭಾಗದಿಂದಲೇ ಸರ್ಕಾರಕ್ಕೆ ₹1,463.07 ಕೋಟಿ ರಾಜಸ್ವ ಹರಿದುಬಂದಿದೆ. ಇದರೊಂದಿಗೆ ಬಿಯರ್ ವಿಭಾಗದಿಂದ ಬರುವ ಆದಾಯದಲ್ಲೂ ಸಹ ಶೇಕಡಾ 18.52ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.

ಐಎಮ್‌ಎಲ್‌ ಮದ್ಯ ಮಾರಾಟದಲ್ಲಿ ಅತ್ಯಲ್ಪ ಬೆಳವಣಿಗೆ
ಒಂದೆಡೆ ಬಿಯರ್ ಮಾರಾಟವು ಭಾರಿ ವೇಗದಲ್ಲಿ ಮುನ್ನುಗ್ಗುತ್ತಿದ್ದರೆ, ಇನ್ನೊಂದೆಡೆ ಭಾರತೀಯ ತಯಾರಿತ ವಿದೇಶಿ ಮದ್ಯ ಅಥವಾ ಐಎಮ್‌ಎಲ್‌ (IML) ಮಾರಾಟದ ವೇಗವು ತೀರಾ ಮಂದಗತಿಯಲ್ಲಿದೆ. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ 169.12 ಲಕ್ಷ ಪೆಟ್ಟಿಗೆಗಳಷ್ಟಿದ್ದ IML ಮಾರಾಟವು ಈ ಬಾರಿ 171.69 ಲಕ್ಷ ಪೆಟ್ಟಿಗೆಗಳಿಗೆ ತಲುಪಿದೆ. ಅಂದರೆ IML ಮಾರಾಟದ ಪ್ರಮಾಣದಲ್ಲಿ ದಾಖಲಾಗಿರುವುದು ಕೇವಲ ಶೇಕಡಾ 1.52ರಷ್ಟು ಅಲ್ಪ ಬೆಳೆವಣಿಗೆ ಮಾತ್ರ. ಆದಾಗ್ಯೂ, ಬೆಲೆ ಹಾಗೂ ತೆರಿಗೆ ರಚನೆಯ ಕಾರಣದಿಂದಾಗಿ IML ವಲಯದಿಂದ ಸಂಗ್ರಹವಾದ ಒಟ್ಟು ರಾಜಸ್ವವು ₹9,033.21 ಕೋಟಿಗೆ ಏರಿಕೆಯಾಗಿದ್ದು, ಆದಾಯದಲ್ಲಿ ಶೇಕಡಾ 13.36ರಷ್ಟು ಪ್ರಗತಿ ಕಂಡುಬಂದಿದೆ.

ಬಿಯರ್ ಬೇಡಿಕೆ ಮತ್ತು ಮಾರುಕಟ್ಟೆಯ ವಾಸ್ತವ
ಬಿಯರ್ ಮಾರಾಟದಲ್ಲಿ ಶೇಕಡಾ 49.69ರಷ್ಟು ಭಾರಿ ಏರಿಕೆ ಮತ್ತು IML ಮಾರಾಟದಲ್ಲಿ ಕೇವಲ ಶೇಕಡಾ 1.52ರಷ್ಟು ಏರಿಕೆ ಕಂಡುಬಂದಿರುವುದು ಎರಡೂ ವಿಭಾಗಗಳ ನಡುವಿನ ಅಗಾಧ ವ್ಯತ್ಯಾಸವನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ. ಅಬಕಾರಿ ಇಲಾಖೆಯ ಈ ಅಂಕಿಅಂಶಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಬಿಯರ್‌ಗೆ ಇದ್ದಕ್ಕಿದ್ದಂತೆ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆಯೇ ಎಂಬ ಕುತೂಹಲಕಾರಿ ಪ್ರಶ್ನೆ ಎದುರಾಗಿದೆ. ಆದರೆ, ಅಬಕಾರಿ ಇಲಾಖೆಯ ತಜ್ಞರ ಪ್ರಕಾರ ಶೇಕಡಾ 49.69ರಷ್ಟು ಏರಿಕೆಯು ಕೇವಲ ಮಾರಾಟವಾದ ಪೆಟ್ಟಿಗೆಗಳ ಅಥವಾ ದಾಸ್ತಾನಿನ ಅಂಕಿಅಂಶಕ್ಕೆ ಸಂಬಂಧಿಸಿದೆ. ಆದ್ದರಿಂದ ರಾಜ್ಯದಲ್ಲಿ ಬಿಯರ್ ಕುಡಿಯುವವರ ಸಂಖ್ಯೆಯೂ ನಿಖರವಾಗಿ ಇದೇ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ನೇರವಾಗಿ ತೀರ್ಮಾನಿಸಲು ಸಾಧ್ಯವಿಲ್ಲದಿದ್ದರೂ, ಮಾರುಕಟ್ಟೆಯಲ್ಲಿ ಬಿಯರ್ ಬಳಕೆಯ ಪ್ರಮಾಣ ಗಣನೀಯವಾಗಿ ಹೆಚ್ಚಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

Add Zee News as a Preferred Source
TAGS:
Kannada News