SOCIAL MEDIA

Newsletter

PARTNER SITES
Select Language Select State

ನಾಲ್ಕನೇ ದಿನವೂಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ... ಭಕ್ತಾಧಿಗಳಿಗೆ ವಸತಿ ವ್ಯವಸ್ಥೆ.. 3 ದಿನಕ್ಕೆ 5 ಕೋಟಿ ರೂ. ಆದಾಯ!

Hassanamba Temple Income: ಹಾಸನದ ಅಧಿದೇವತೆ ಹಾಸನಾಂಬೆ ದೇಗುಲದಲ್ಲಿ ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ದೇಗುಲದ ಬಾಗಿಲು ತೆರೆದ ನಾಲ್ಕನೇ ದಿನವೂ ಅಮ್ಮನ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿದೆ.

Written By Ramya. R. Gowda
Published: Nov 02, 2026, 01:44 PM IST | Updated: Nov 02, 2026, 01:49 PM IST
Join

Hassanamba Temple: ಹಾಸನದ ಅಧಿದೇವತೆ ಹಾಸನಾಂಬೆ ದೇಗುಲದಲ್ಲಿ ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ದೇಗುಲದ ಬಾಗಿಲು ತೆರೆದ ನಾಲ್ಕನೇ ದಿನವೂ ಅಮ್ಮನ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿದೆ.

ಹಾಸನದ ಅಧಿದೇವತೆ ಹಾಸನಾಂಬೆ ದೇಗುಲದಲ್ಲಿ ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ದೇಗುಲದ ಬಾಗಿಲು ತೆರೆದ ನಾಲ್ಕನೇ ದಿನವೂ ಅಮ್ಮನ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿದೆ. ಧರ್ಮದರ್ಶನ ಹಾಗೂ ವಿಶೇಷ ದರ್ಶನದ ಸರತಿ ಸಾಲುಗಳು ಭರ್ತಿಯಾಗಿದ್ದು, ಗಂಟೆಗಟ್ಟಲೆ ಕಾದು ನಿಂತು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇನ್ನು ಕೇವಲ ಮೂರು ದಿನಗಳಲ್ಲೇ ಬರೋಬ್ಬರಿ 5 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಇಂದು ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವು ಗಣ್ಯರು ಹಾಸನಾಂಬೆಯ ದರ್ಶನ ಪಡೆಯಲಿದ್ದಾರೆ. ಹಾಗಾದ್ರೆ, ಹಾಸನಾಂಬೆ ಸನ್ನಿಧಿಯಲ್ಲಿ ಹೇಗಿದೆ ಭಕ್ತರ ಸಂಭ್ರಮ? ಇಲ್ಲಿದೆ ಕಂಪ್ಲೀಟ್

ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ದೇಗುಲದ ಬಾಗಿಲು ತೆರೆದ ನಾಲ್ಕನೇ ದಿನವೂ ಅಮ್ಮನ ದರ್ಶನಕ್ಕೆ ಭಕ್ತರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.ಧರ್ಮದರ್ಶನದ ಒಂದು ಸಾವಿರ ರೂಪಾಯಿ ಹಾಗೂ 300 ರೂಪಾಯಿ ವಿಶೇಷ ದರ್ಶನದ ಸರತಿ ಸಾಲುಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಭಕ್ತರು ತಾಳ್ಮೆಯಿಂದ ಅಮ್ಮನ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ದರ್ಶನಕ್ಕೆ ಕೊಂಚ ವಿಳಂಬವಾದರೂ ಭಕ್ತರ ನಂಬಿಕೆ ಮತ್ತು ಉತ್ಸಾಹಕ್ಕೆ ಮಾತ್ರ ಯಾವುದೇ ಕೊರತೆಯಿಲ್ಲ.

ಇನ್ನು ಹಾಸನಾಂಬೆ ದೇಗುಲಕ್ಕೆ ಭಕ್ತರ ಆಗಮನದ ಜೊತೆಗೆ ಆದಾಯವೂ ಹೆಚ್ಚಾಗುತ್ತಿದೆ. ಕೇವಲ ಮೂರು ದಿನಗಳಲ್ಲೇ ಬರೋಬ್ಬರಿ 5 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಆನ್‌ಲೈನ್ ಟಿಕೆಟ್, ನೇರ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ದೇಗುಲಕ್ಕೆ ಭರ್ಜರಿ ಆದಾಯ ಹರಿದುಬಂದಿದೆ.

ಅಷ್ಟೇ ಅಲ್ಲ, ಹಲವು ಗಣ್ಯರು, ಮಠಾಧೀಶರು ಹಾಗೂ ನ್ಯಾಯಾಧೀಶರು ಕೂಡ ಈಗಾಗಲೇ ಅಮ್ಮನ ದರ್ಶನ ಪಡೆದು ಪುನೀತರಾಗಿದ್ದಾರೆ. ಮುಂದಿನ ದಿನಗಳಲ್ಲೂ ಗಣ್ಯರ ಭೇಟಿ ಹಾಗೂ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಮಾತ್ರವಲ್ಲದೇ ರಾಜ್ಯದ ಎಲ್ಲೆಡೆಯಿಂದ ಭಕ್ತಾಧಿಗಳ ದೌಡು ಹರಿದು ಬರುತ್ತಿದ್ದು, ಈ ಬಾರಿ ಭಕ್ತಾಧಿಗಳಿಗಾಗಿಯೇ ವಸತಿ ವ್ಯವಸ್ಥೆ ಕಲ್ಪಿಸಿ ಭಕ್ತಾಧಿಗಳ ಬಗ್ಗೆ ಕಾಳಜಿ ವಹಿಸಲಾಗುತ್ತಿದ್ದು, ಮತ್ತಷ್ಟು ಭಕ್ತಾಧಿಗಳ ಸಂಖ್ಯೆ ಹೆಚ್ಚಳ ಆಗಲಿದೆ.


ಒಟ್ಟಿನಲ್ಲಿ ಹಾಸನಾಂಬೆ ಸನ್ನಿಧಿಯಲ್ಲಿ ಭಕ್ತಿಯ ಮಹಾಪೂರವೇ ಹರಿದುಬರುತ್ತಿದೆ. ಗಂಟೆಗಟ್ಟಲೆ ಕಾದರೂ ಅಮ್ಮನ ದರ್ಶನ ಪಡೆಯಬೇಕೆಂಬ ಭಕ್ತರ ಆಸೆ ಮಾತ್ರ ಕಡಿಮೆಯಾಗಿಲ್ಲ. ಭಕ್ತರ ಸಂಖ್ಯೆಯ ಜೊತೆಗೆ ದೇಗುಲದ ಆದಾಯವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES