• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಪಿಂಕ್ ಆಟೋ ಯೋಜನೆಗೆ ಮನಸ್ಸು ಮಾಡದ ಮಹಿಳೆಯರು: ಗಟ್ಟಿಗಿತ್ತೀಯರಾಗಾಗಿ ಖಾಲಿ ಬಿದ್ದಿದೆ ₹4 ಕೋಟಿ ಅನುದಾನ!

ಪಿಂಕ್ ಆಟೋ ಯೋಜನೆಗೆ ಮನಸ್ಸು ಮಾಡದ ಮಹಿಳೆಯರು: ಗಟ್ಟಿಗಿತ್ತೀಯರಾಗಾಗಿ ಖಾಲಿ ಬಿದ್ದಿದೆ ₹4 ಕೋಟಿ ಅನುದಾನ!

ಮಹಿಳೆಯರು ಸ್ವ ಉದ್ಯೋಗ ಮೂಲಕ ಸ್ವಾವಲಂಬಿ ಬದುಕು ಸಾಗಿಸಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಜಾರಿಗೆ ತಂದಿದ್ದ ಮಹತ್ವದ ಯೋಜನೆಗೆ ಸೂಕ್ತ ಸ್ಪಂದನೆಯೇ ಸಿಗುತ್ತಿಲ್ಲ.

Written ByYashaswini V
Published: Nov 04, 2026, 12:23 PM IST|Updated: Nov 04, 2026, 12:25 PM IST
joinshare
ಪಿಂಕ್ ಆಟೋ ಯೋಜನೆಗೆ ಮನಸ್ಸು ಮಾಡದ ಮಹಿಳೆಯರು: ಗಟ್ಟಿಗಿತ್ತೀಯರಾಗಾಗಿ ಖಾಲಿ ಬಿದ್ದಿದೆ ₹4 ಕೋಟಿ ಅನುದಾನ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಪಿಂಕ್ ಆಟೋ ಯೋಜನೆಗೆ ಮನಸ್ಸು ಮಾಡದ ಮಹಿಳೆಯರು: ಗಟ್ಟಿಗಿತ್ತೀಯರಾಗಾಗಿ ಖಾಲಿ ಬಿದ್ದಿದೆ ₹4 ಕೋಟಿ ಅನುದಾನ!

ಪಿಂಕ್ ಆಟೋ ಯೋಜನೆಗೆ ಮನಸ್ಸು ಮಾಡದ ಮಹಿಳೆಯರು: ಗಟ್ಟಿಗಿತ್ತೀಯರಾಗಾಗಿ ಖಾಲಿ ಬಿದ್ದಿದೆ ₹4 ಕೋಟಿ ಅನುದಾನ!

2

ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಟೆಕ್ನಿಕಲ್ ಎವಿಡೆನ್ಸ್ ಬೆನ್ನತ್ತ ಸಿಸಿಬಿ ಪೊಲೀಸರು!

3

ದುಬಾರಿ ದುನಿಯಾ ನಡುವೆ ಮತ್ತೊಂದು ಶಾಕ್! ನಂದಿನಿ ಬೆನ್ನಲ್ಲೇ ಖಾಸಗಿ ಹಾಲಿನ ದರ ಏರಿಕೆ

4

BBK 13 : ಸೇಡಿಗಾಗಿ ಕೀಳುಮಟ್ಟದ ಆಟವಾಡಿದ್ರಾ ಶಾಸ್ತ್ರಿ! ಫಿನಾಲೆ ಅವಕಾಶವನ್ನೇ ಕಳೆದುಕೊಳ್ತಾರಾ?

5

ದೀಪಾವಳಿ ಹೊತ್ತಲ್ಲೇ ಮಿಂಟೋ ಆಸ್ಪತ್ರೆಯಿಂದ ಪಟಾಕಿಯಿಂದ ಉಂಟಾದ ಅವಘಡಗಳ ಅಂಕಿ ಅಂಶ ಬಿಡುಗಡೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ 2026-27 ರ ಬಜೆಟ್‌ನಲ್ಲಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟುವ ಉದ್ದೇಶದಿಂದ ಪಿಂಕ್‌ ಆಟೋಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿತ್ತು. ಈ ಯೋಜನೆಗಾಗಿ 4.10 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದ್ದರೂ ಕೂಡ ಮಹಿಳೆಯರಿಂದ ಇದಕ್ಕೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.

ಹೌದು, ಜೀವನೋಪಾಯದ ಅವಕಾಶಗಳನ್ನು ಒದಗಿಸಲು ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಅರ್ಹ ಮಹಿಳಾ ಫಲಾನುಭವಿಗಳಿಗೆ ಪಿಂಕ್‌ ಆಟೋಗಳನ್ನು ವಿತರಿಸುವ ಉದ್ದೇಶದಿಂದ ಹು- ಧಾ ಮಹಾನಗರ ಪಾಲಿಕೆ ತನ್ನ ಬಜೆಟ್‌ನಲ್ಲಿ ಈ ಉಪಕ್ರಮವನ್ನು ಘೋಷಿಸಿತ್ತು. ಆದರೆ, ಈ ಮಹತ್ವಾಕಾಂಕ್ಷೆಯ ಪಿಂಕ್ ಅಟೋ ಯೋಜನೆ ಮೂಲಕ ಮಹಿಳೆಯರಿಗೆ ಅನುಕೂಲ ಆಗಬಹುದೆಂದು ಇದನ್ನು ಜಾರಿಗೊಳಿಸಲು ಕೋಟ್ಯಾಂತರ ರೂಪಾಯಿ ಮೀಸಲು ಇಟ್ಟರೂ ಕೂಡ ಇದರ ಸೌಲಭ್ಯ ಪಡೆಯಲು ಮಹಿಳೆಯರು, ಯುವತಿಯರು ಮುಂದೆ ಬರ್ತಾ ಇಲ್ಲ ಎಂದು ತಿಳಿದುಬಂದಿದೆ.

ಪಿಂಕ್ ಅಟೋ ಯೋಜನೆಯು ಮಹಿಳೆಯರು ಮತ್ತು  ಬಾಲಕಿಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಜೊತೆಗೆ ಮಹಿಳೆಯರಿಗೆ ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಒದಗಿಸುವ ಉದ್ದೇಶ‌ ಹೊಂದಿದೆ. ಆದರೆ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ 'ಪಿಂಕ್ ಆಟೋ' ಯೋಜನೆಗೆ ಆರಂಭದಲ್ಲೇ ಅರ್ಜಿದಾರರ ಕೊರತೆ ಎದುರಾಗಿದೆ. ಇದರಿಂದಾಗಿ ಯೋಜನೆಯಡಿ ಮಹಾನಗರ ಪಾಲಿಕೆ ಅವಳಿ ನಗರದ 82 ವಾರ್ಡ್‌ಗಳಿಗೆ ತಲಾ ಒಂದು ಪಿಂಕ್ ಆಟೋ ವಿತರಿಸಲು ಪಾಲಿಕೆ ಮೀಸಲಿಟ್ಟಿರುವ ₹4 ಕೋಟಿ ಅನುದಾನವೂ ಕೂಡ ಖಾಲಿ ಬಿದ್ದಿದೆ.

ಪಿಂಕ್ ಅಟೋ ಯೋಜನೆ ಅನುಷ್ಠಾನಕ್ಕೆ ಹಿನ್ನಡೆ:
ನಿರೀಕ್ಷಿತ ಸಂಖ್ಯೆಯಲ್ಲಿ ಮಹಿಳೆಯರು ಅರ್ಜಿ ಸಲ್ಲಿಸದಿರುವುದು ಪಿಂಕ್ ಅಟೋ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆ ಆಗಿದೆ. ಪಿಂಕ್ ಯೋಜನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಠರಾವು ಅಂಗೀಕರಿಸಲಾಗಿದೆ.‌ ಆದರೆ ಯೋಜನೆಯ ಪ್ರಯೋಜನ ಪಡೆಯಲು ಅರ್ಹ ಮಹಿಳೆಯರು ಮುಂದೆ ಬಾರದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಪಿಂಕ್ ಅಟೋ ಯೋಜನೆ ಹಿನ್ನಡೆಗೆ ಕಾರಣ:
ಸೂಕ್ತ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಹಾಗೂ ಅರ್ಜಿ ಸಲ್ಲಿಸಲು ಅಧಿಕೃತ ಕಾರ್ಯವಿಧಾನ ಇಲ್ಲದಿರುವುದೇ ಪಿಂಕ್ ಅಟೋ ಯೋಜನೆ ಹಿನ್ನಡೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಪಿಂಕ್‌ ಆಟೋ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದ ಬಳಿಕ ಹು-ಧಾ ಮಹಾನಗರ ಪಾಲಿಕೆಯ ಎಲ್ಲಾ 82 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಈ ಬಗ್ಗೆ ಅರಿವು ಮೂಡಿಸಬೇಕಿತ್ತು. ಈ ಕುರಿತಂತೆ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕೆಲವರು ಆರೋಪಿಸಿದ್ದರೆ, ಪಿಂಕ್‌ ಆಟೋ ಪ್ರಯೋಜನ ಪಡೆಯಲು ಮಹಿಳೆಯರಿಂದ ಅರ್ಜಿ ಆಹ್ವಾನ, ವಾರ್ಡ್‌ವಾರು ಸಂಪರ್ಕ ನಡೆಸುವುದು, ಅರ್ಜಿ ಪರಿಶೀಲನೆ, ಪಿಂಕ್‌ ಆಟೋ ಖರೀದಿಗೆ ಟೆಂಡರ್‌ ಕರೆಯುವಿಕೆ ಹೀಗೆ ಯೋಜನೆ ಅನುಷ್ಠಾನ ಕುರಿತಂತೆ ಜರುಗಿಸಬೇಕಾದ ಕ್ರಮಗಳ ಕ್ರಮಗಳ ಕುರಿತಾಗಿಯೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮಹಿಳಾ ಮೇಯರ್‌ ಹೊಂದಿದ್ದರೂ ಸಹ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸದುದ್ದೇಶದಿಂದ ಆರಂಭವಾಗಿರುವ ಮಹಿಳಾ ಕೇಂದ್ರಿತವಾದ ಈ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಇನ್ನೂ ಅನುಷ್ಠಾನಕ್ಕೆ ತರದಿರುವ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ಅಟೋ ಚಾಲಕಿಯರಾದ ಮಂಜುಳಾ ಹಾಗೂ ದಾವಲಬಿ ಪ್ರತಿಕ್ರಿಯೆ ನೀಡಿ, ಮಹಿಳೆಯರೇ ಆಟೋ ಚಾಲನೆ ಮಾಡಬೇಕು. ಇದರಿಂದ ವಿದ್ಯಾರ್ಥಿನಿಯರು, ಹಿರಿಯ ಮಹಿಳೆಯರು ಸೇರಿದಂತೆ  ಮಹಿಳಾ ಪ್ರಯಾಣಿಕರಲ್ಲಿ ಸುರಕ್ಷತೆಯ ಭಾವನೆ ಹೆಚ್ಚಲಿದೆ. ಆಟೋ ಚಾಲನೆಗೆ ಆಸಕ್ತಿ ಹೊಂದಿರುವ ಮಹಿಳೆಯರಿಗೆ ಸ್ವಂತ ಉದ್ಯೋಗದ ಅವಕಾಶ ಸಿಗಲಿದ್ದು, ಕುಟುಂಬಗಳ ಆರ್ಥಿಕ ಸ್ಥಿತಿಗೂ ನೆರವಾಗುವ ಉದ್ದೇಶವಿದೆ ಎಂದಿದ್ದಾರೆ. 
 

Add Zee News as a Preferred Source
TAGS:
Govt Schemes
Kannada News