ಬೆಳಗಾವಿ: 202 ನೇ ಚನ್ನಮ್ಮನ ಕಿತ್ತೂರು ಉತ್ಸವದ ಅದ್ಧೂರಿಯಾಗಿ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಕೋಟೆ ಆವರಣದಲ್ಲಿ ಎರಡನೇ ದಿನ ಹತ್ತು ಹಲವು ಕಾರ್ಯಕ್ರಮ ನಡೆದವು. ಫಲಪುಷ್ಪ ಪ್ರದರ್ಶನ ಹಾಗೂ ವಸ್ತು ಪ್ರದರ್ಶನ ಗಮನ ಸೆಳೆಯಿತು. ಇನ್ನೂ ಮುಖ್ಯ ವೇದಿಕೆಯಲ್ಲಿ ಖ್ಯಾತ ಗಾಯಕ ರಾಜೇಶ ಕೃಷ್ಣನ್ ಹಾಡಿಗೆ ಜನ ಮನಸೋತರು
ಎಲ್ಲಿ ನೋಡಿದ್ರು ಜನ ಸಾಗರ, ಒಂದು ಕಡೆದ ಖ್ಯಾತ ಗಾಯಕ ರಾಜೇಶ ಕೃಷ್ಣನ್ ಸಂಗೀತ ಸಂಜೆ ಮತ್ತೊಂದು ಕಡೆದ ವಸ್ತು ಪ್ರದರ್ಶನ ನೋಡಲು ಬಂದ ಜನ. ಯಸ್ ಇದು ಬೆಳಗಾವಿ ಚನ್ನಮ್ಮನ ಕಿತ್ತೂರು ಉತ್ಸವದ ಎರಡನೇ ದಿನದ ಸಂಭ್ರಮ. ರಾಣಿ ಚನ್ನಮ್ಮ ಬ್ರಿಟಷರ್ ವಿರುದ್ಧ ಜಯ ಸಾಧಿಸಿದ ನೆನಪಿಗಾಗಿ ಪ್ರತಿ ವರ್ಷ ಚನ್ನಮ್ಮನ ಉತ್ಸವ ಆಚರಣೆ ಮಾಡಲಾಗುತ್ತದೆ. ಕಿತ್ತೂರು ಕೋಟೆ ಆವರಣದಲ್ಲಿ ಮೂರು ದಿನ ಉತ್ಸವ ನಡೆಯುತ್ತದೆ. ಈ ಇದೇ ಮೊದಲ ಸಲ ಕಿತ್ತೂರು ಉತ್ಸವಕ್ಕೆ ಪ್ರತಿಪರ ರೈತ ಮಹಿಳೆ ಚುಕ್ಕಿ ನಂಜುಂಡಸ್ವಾಮಿಯಿಂದ ಚಾಲನೆ ನೀಡಲಾಯಿತು. ಇದೇ ವರ್ಷದಿಂದ ಹೊಸ ಸಂಪ್ರದಾಯಕ್ಕೆ ಚಾಲನೆ ನೀಡಲಾಗಿದೆ. ಇನ್ನೂ ಎರಡನೇ ದಿನವೂ ಭರತನಾಟ್ಯ ಭಕ್ತಿ, ಕಾಮಿಡಿ ಅಪ್ಪಣ ಸೇರಿ ಹಲವು ಕಲಾವಿದರಿಂದ ಮನೊರಂಜನೆ ಕಾರ್ಯಕ್ರಮ ನಡೆಯಿತು. ಇನ್ನೂ ಖ್ಯಾತ ಗಾಯಕ ರಾಜೇಶ ಕೃಷ್ಣನ್ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಮನಸೊತರು.
ಇನ್ನೂ ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಸ್ತು ಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನ ನಡೆಯಿತು. ವಸ್ತು ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಹಿಂಡಲಗಾ ಹಾಗೂ ಧಾರವಾಡ ಕಾರಾಗೃಹ ಕೈದಿಗಳು ತಯಾರಿಸಿದ ಬಟ್ಟೆಗಳ ಮಾರಾಟ ನಡೆಯಿತು. ಉತ್ತಮ ಗುಟ್ಟಮಟ್ಟದ ಹ್ಯಾಂಡ್ ಬ್ಯಾಗ್, ಕೈವಸ್ತ್ರ, ಟವಲ್, ಜಮಖಾನೆ ಸೇರಿ ಹಲವು ವಸ್ತುಗಳು ಇದ್ದವು. ಇನ್ನೂ ಫಲಪುಷ್ಪ ಪ್ರದರ್ಶನದಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಬುದ್ಧ, ಪುನಿತ್ ರಾಜಕುಮಾರ್ ಸೇರಿ ಹಲವರು ಪ್ರಮುಖರ ಕಲಾಕೃತಿ ಗಮನ ಸೆಳೆಯಿತು. ಪ್ರಗತಿಪರ ರೈತರು ಬೆಳೆದ ವಿದೇಶಿಯ ತಾಳೆ ಹಣ್ಣುಗಳನ್ನು ಪ್ರದರ್ಶಿಸಿದರು. ಇದು ವಸ್ತುಪದರ್ಶನದಲ್ಲಿ ಗಮನ ಸೆಳೆಯಿತು.
ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಇಂದು ಅದ್ಧೂರಿ ತೆರೆ ಬಿಳಲಿದೆ. ಮೌಡ್ಯಕ್ಕೆ ಸೆಡ್ಡು ಹೊಡೆದು ಸಿಎಂ ಡಿ ಕೆ ಶಿವಕುಮಾರ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳಿದ್ದಾರೆ. ಜೊತೆಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಹಾಗೂ ನಟ ಶರಣ್ ತಂಡದಿಂದ ರಸಮಂಜರಿ ಕಾರ್ಯಕ್ರಮಗಳ ಗಮನ ಸೆಳೆಯಲಿವೆ. ಒಟ್ಟಾರೆಯಾಗಿ ಕಿತ್ತೂರು ಉತ್ಸವ ಈ ಭಾಗದಲ್ಲಿ ಜನಪ್ರಿಯತೆ ಗಳಿಸಿದ್ದು, ಮತ್ತೊಮ್ಮೆ ಜನರ ಸೆಳೆದಿದೆ.