• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /'ರಾಮಾಯಣ' ಮುಂಗಡ ಬುಕಿಂಗ್‌ನಲ್ಲಿ ದಾಖಲೆ ಕಲೆಕ್ಷನ್! ಕರ್ನಾಟಕದಿಂದ ಎಷ್ಟು ಕೋಟಿ ಬಂದಿದೆ ಗೊತ್ತಾ?

'ರಾಮಾಯಣ' ಮುಂಗಡ ಬುಕಿಂಗ್‌ನಲ್ಲಿ ದಾಖಲೆ ಕಲೆಕ್ಷನ್! ಕರ್ನಾಟಕದಿಂದ ಎಷ್ಟು ಕೋಟಿ ಬಂದಿದೆ ಗೊತ್ತಾ?

ದೇಶದ 134 ನಗರಗಳಲ್ಲಿ ಒಟ್ಟು 4,352 ಪ್ರದರ್ಶನಗಳನ್ನ ಟ್ರ್ಯಾಕ್ ಮಾಡಲಾಗಿದ್ದು, ಸುಮಾರು 1.81 ಲಕ್ಷ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ. ಸಿನಿಮಾ ಬಿಡುಗಡೆಗೆ ಇನ್ನೂ 12 ದಿನಗಳು ಬಾಕಿ ಇರುವ ಸಂದರ್ಭದಲ್ಲಿಯೇ ಈ ಪ್ರಮಾಣದ ಟಿಕೆಟ್ ಮಾರಾಟ ದಾಖಲಾಗಿದೆ.

Written ByPuttaraj K Alur
Published: Oct 25, 2026, 12:43 PM IST|Updated: Oct 25, 2026, 12:58 PM IST
joinshare
'ರಾಮಾಯಣ' ಮುಂಗಡ ಬುಕಿಂಗ್‌ನಲ್ಲಿ ದಾಖಲೆ ಕಲೆಕ್ಷನ್! ಕರ್ನಾಟಕದಿಂದ ಎಷ್ಟು ಕೋಟಿ ಬಂದಿದೆ ಗೊತ್ತಾ?
Image Credit: Ramayana Advance Booking

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಕಿತ್ತೂರು ಉತ್ಸವದ ಎರಡನೇ ದಿನ ವಿವಿಧ ಮನರಂಜನೆ ಕಾರ್ಯಕ್ರಮ

ಕಿತ್ತೂರು ಉತ್ಸವದ ಎರಡನೇ ದಿನ ವಿವಿಧ ಮನರಂಜನೆ ಕಾರ್ಯಕ್ರಮ

2

SBI FD: 365 ದಿನಗಳ ಠೇವಣಿಗೆ ಎಷ್ಟು ಬಡ್ಡಿ ಸಿಗುತ್ತೆ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ

3

ಸಿದ್ದರಾಮಯ್ಯ ಸ್ಟಿಂಗ್‌ ಆಪರೇಷನ್:‌ ಸಿಸಿಬಿ ಮುಂದೆ ಕೃಪಾ ಅಳ್ವಾ ಹೇಳಿದ್ದು ಇದೊಂದೇ ಮಾತು!

4

ದೀಪಾವಳಿ ಹಬ್ಬಕ್ಕೂ ಮುನ್ನ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್.. ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

5

'ರಾಮಾಯಣ' ಮುಂಗಡ ಬುಕಿಂಗ್‌ನಲ್ಲಿ ದಾಖಲೆ ಕಲೆಕ್ಷನ್! ಕರ್ನಾಟಕದಿಂದ ಎಷ್ಟು ಕೋಟಿ ಬಂದಿದೆ ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Ramayana Box Office Collection: ಬಾಲಿವುಡ್‌ ನಟ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಸಿನಿಮಾ ಬಿಡುಗಡೆಗೂ ಮುನ್ನವೇ ಮುಂಗಡ ಟಿಕೆಟ್ ಮಾರಾಟದಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ನವೆಂಬರ್ 5ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದ್ದು, ದೇಶದಾದ್ಯಂತ ಮುಂಗಡ ಬುಕಿಂಗ್ ಮೂಲಕ 10 ಕೋಟಿ ರೂಪಾಯಿಗೂ ಅಧಿಕ ಮೊತ್ತ ದಾಖಲಿಸಿದೆ. ವಿಶೇಷವಾಗಿ ಹಿಂದಿ ಆವೃತ್ತಿಯ ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

ಭಾರತೀಯ ಚಿತ್ರೋದ್ಯಮದ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಸಂಸ್ಥೆ ಸಕ್ನಿಲ್ಕ್ ವರದಿ ಮಾಡಿರುವ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 24ರ ಮಧ್ಯಾಹ್ನ 3 ಗಂಟೆಯ ವೇಳೆಗೆ 'ರಾಮಾಯಣ' ಚಿತ್ರದ ಮುಂಗಡ ಬುಕಿಂಗ್ ಒಟ್ಟು 10.15 ಕೋಟಿ ರೂಪಾಯಿ ತಲುಪಿದೆ. ಈ ಮೊತ್ತದಲ್ಲಿ ಬ್ಲಾಕ್ ಮಾಡಲಾದ ಸೀಟುಗಳ ಮೌಲ್ಯವೂ ಸೇರಿದೆ. ಬ್ಲಾಕ್ ಮಾಡಲಾದ ಸೀಟುಗಳನ್ನ ಹೊರತುಪಡಿಸಿದರೆ, ಮುಂಗಡ ಟಿಕೆಟ್ ಮಾರಾಟದಿಂದ 7.98 ಕೋಟಿ ರೂಪಾಯಿ ಸಂಗ್ರಹವಾಗಿದೆ.

1.81 ಲಕ್ಷ ಟಿಕೆಟ್ ಮಾರಾಟ!

ದೇಶದ 134 ನಗರಗಳಲ್ಲಿ ಒಟ್ಟು 4,352 ಪ್ರದರ್ಶನಗಳನ್ನ ಟ್ರ್ಯಾಕ್ ಮಾಡಲಾಗಿದ್ದು, ಸುಮಾರು 1.81 ಲಕ್ಷ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ. ಸಿನಿಮಾ ಬಿಡುಗಡೆಗೆ ಇನ್ನೂ 12 ದಿನಗಳು ಬಾಕಿ ಇರುವ ಸಂದರ್ಭದಲ್ಲಿಯೇ ಈ ಪ್ರಮಾಣದ ಟಿಕೆಟ್ ಮಾರಾಟ ದಾಖಲಾಗಿದೆ. ಚಿತ್ರದ ಮುಂಗಡ ಬುಕಿಂಗ್‌ನಲ್ಲಿ ಹಿಂದಿ ಆವೃತ್ತಿಯೇ ಮುಂಚೂಣಿಯಲ್ಲಿದೆ. ಹಿಂದಿ ಭಾಷೆಯ ಪ್ರದರ್ಶನಗಳಿಂದ ಸುಮಾರು 8.91 ಕೋಟಿ ರೂಪಾಯಿ ಮುಂಗಡ ಮಾರಾಟ ದಾಖಲಾಗಿದ್ದು, ಇದು ಒಟ್ಟು ಬುಕಿಂಗ್ ಮೊತ್ತದ ಸುಮಾರು ಶೇ.88ರಷ್ಟಿದೆ. ಉಳಿದ ಭಾಷೆಗಳ ಆವೃತ್ತಿಗಳೂ ಮುಂಗಡ ಟಿಕೆಟ್ ಮಾರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ.

ಕನ್ನಡ ಆವೃತ್ತಿಯಿಂದ 96.57 ಲಕ್ಷ ರೂ.!

ಹಿಂದಿ ಆವೃತ್ತಿಯ ನಂತರ ಕನ್ನಡ ಭಾಷೆಯ ಆವೃತ್ತಿಯಲ್ಲೂ ಟಿಕೆಟ್ ಮಾರಾಟ ದಾಖಲಾಗಿದೆ. ಕನ್ನಡ ಆವೃತ್ತಿಯಿಂದ ಸುಮಾರು 96.57 ಲಕ್ಷ ರೂಪಾಯಿ ಮುಂಗಡ ಬುಕಿಂಗ್ ಆಗಿದೆ. ತೆಲುಗು ಆವೃತ್ತಿಯು ಸುಮಾರು 28.11 ಲಕ್ಷ ರೂಪಾಯಿ ಸಂಗ್ರಹಿಸಿದೆ. ಹೀಗೆ ಹಿಂದಿ ಭಾಷೆಯ ಜೊತೆಗೆ ಕನ್ನಡ ಮತ್ತು ತೆಲುಗು ಆವೃತ್ತಿಗಳ ಮುಂಗಡ ಟಿಕೆಟ್ ಮಾರಾಟವೂ ಚಿತ್ರದ ಒಟ್ಟಾರೆ ಬುಕಿಂಗ್ ಮೊತ್ತದಲ್ಲಿ ಸೇರಿಕೊಂಡಿದೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಗಡ ಟಿಕೆಟ್ ಮಾರಾಟದ ಅಂಕಿಅಂಶಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಕರ್ನಾಟಕದಿಂದ 1.45 ಕೋಟಿ ರೂ. ಮುಂಗಡ ಬುಕಿಂಗ್!

 

🚨 #RAMAYANA ADVANCE BOOKING UPDATE – 7 AM 🏹🔥 The EPIC is gathering momentum : • ₹9.85 CRORE GROSS • 1.73 LAKH TICKETS SOLD • ₹7.75 Cr Gross (Excluding Blocked Seats) • 70.8K Tickets Sold in National Chains ⏳ 12 DAYS TO GO! With almost two weeks still remaining, the advance booking journey has just begun. The BIG SURGE is what everyone will be watching.

— Pan India Review (@PanIndiaReview) October 24, 2026

 ರಾಜ್ಯವಾರು ಮುಂಗಡ ಬುಕಿಂಗ್ ಅಂಕಿಅಂಶಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಿಂದ ಸುಮಾರು 2.31 ಕೋಟಿ ರೂಪಾಯಿ ಮುಂಗಡ ಟಿಕೆಟ್ ಮಾರಾಟ ದಾಖಲಾಗಿದೆ. ಎರಡನೇ ಸ್ಥಾನದಲ್ಲಿರುವ ದೆಹಲಿಯಿಂದ 2.13 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನು ಕರ್ನಾಟಕವೂ ಮುಂಗಡ ಬುಕಿಂಗ್‌ನಲ್ಲಿ ಗಮನಾರ್ಹ ಮೊತ್ತ ದಾಖಲಿಸಿದೆ. ರಾಜ್ಯದಿಂದ ಸುಮಾರು 1.45 ಕೋಟಿ ರೂಪಾಯಿ ಮುಂಗಡ ಟಿಕೆಟ್ ಮಾರಾಟವಾಗಿದ್ದು, ಪ್ರಮುಖ ಮಾರುಕಟ್ಟೆಗಳ ಪೈಕಿ ಕರ್ನಾಟಕವೂ ಸ್ಥಾನ ಪಡೆದಿದೆ.

 

ಬೆಂಗಳೂರೊಂದರಲ್ಲೇ 1.20 ಕೋಟಿ ರೂ. ಕಲೆಕ್ಷನ್!

ನಗರವಾರು ಟಿಕೆಟ್ ಮಾರಾಟವನ್ನ ಗಮನಿಸಿದರೆ, ರಾಷ್ಟ್ರೀಯ ರಾಜಧಾನಿ ಪ್ರದೇಶವಾದ ಎನ್‌ಸಿಆರ್ ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಟ್ಟು 27,177 ಟಿಕೆಟ್‌ಗಳು ಮಾರಾಟವಾಗಿದ್ದು, ಸುಮಾರು 2.13 ಕೋಟಿ ರೂಪಾಯಿ ಮುಂಗಡ ಬುಕಿಂಗ್ ದಾಖಲಾಗಿದೆ. ಮುಂಬೈ ನಗರದಲ್ಲಿ 22,864 ಟಿಕೆಟ್‌ಗಳ ಮಾರಾಟದ ಮೂಲಕ ಸುಮಾರು 1.60 ಕೋಟಿ ರೂಪಾಯಿ ಸಂಗ್ರಹವಾಗಿದೆ. ಬೆಂಗಳೂರಿನಲ್ಲಿಯೂ 'ರಾಮಾಯಣ' ಚಿತ್ರದ ಮುಂಗಡ ಟಿಕೆಟ್‌ಗಳಿಗೆ ಉತ್ತಮ ಬೇಡಿಕೆ ಕಂಡುಬಂದಿದೆ.

ಬೆಂಗಳೂರಿನಲ್ಲಿ ಒಟ್ಟು 18,147 ಟಿಕೆಟ್‌ಗಳು ಮಾರಾಟವಾಗಿದ್ದು, ಸುಮಾರು 1.20 ಕೋಟಿ ರೂಪಾಯಿ ಮುಂಗಡ ಬುಕಿಂಗ್ ದಾಖಲಾಗಿದೆ. ಕರ್ನಾಟಕದ ಒಟ್ಟು 1.45 ಕೋಟಿ ರೂಪಾಯಿ ಮುಂಗಡ ಮಾರಾಟದಲ್ಲಿ ಬೆಂಗಳೂರಿನ ಕೊಡುಗೆ ಪ್ರಮುಖವಾಗಿದೆ. ಇದೇ ವೇಳೆ ಹೈದರಾಬಾದ್‌ನಲ್ಲಿ ಸುಮಾರು 62 ಲಕ್ಷ ರೂಪಾಯಿ ಮುಂಗಡ ಬುಕಿಂಗ್ ದಾಖಲಾಗಿದ್ದರೆ, ಪುಣೆಯಲ್ಲಿ ಸುಮಾರು 45.72 ಲಕ್ಷ ರೂಪಾಯಿ ಟಿಕೆಟ್ ಮಾರಾಟವಾಗಿದೆ.

ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್' ಸಿನಿಮಾ ನವೆಂಬರ್ 5ರಂದು ಬಿಡುಗಡೆಯಾಗಲಿದೆ. ಅಕ್ಟೋಬರ್ 24ರವರೆಗಿನ ಮುಂಗಡ ಬುಕಿಂಗ್ ಅಂಕಿಅಂಶಗಳಲ್ಲಿ ಹಿಂದಿ ಆವೃತ್ತಿ ಮುಂಚೂಣಿಯಲ್ಲಿದ್ದು, ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕ ಪ್ರಮುಖ ಕೊಡುಗೆ ನೀಡಿರುವ ರಾಜ್ಯಗಳಾಗಿವೆ.

Add Zee News as a Preferred Source
TAGS:
Cinema
Kannada News