SOCIAL MEDIA

Newsletter

PARTNER SITES
Select Language Select State

ರಾಯಚೂರಿನಲ್ಲಿ ಈರುಳ್ಳಿ ಲಾರಿ ಪಲ್ಟಿ: ಬಾದಾಮಿಯಲ್ಲಿ ಹೃದಯಘಾತದಿಂದ ವಿದೇಶಿ ಪ್ರಜೆ ಸಾವು

ರಾಯಚೂರಿನಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿದೆ. ಇನ್ನೊಂದೆಡೆ ಬಾದಾಮಿಯಲ್ಲಿ ಹೃದಯಘಾತದಿಂದ ಫ್ರಾನ್ಸ್ ಪ್ರಜೆ ಸಾವಿಗೀಡಾಗಿರುವ ಘಟನೆ ನಡೆದಿದೆ.

Written By Yashaswini V
Published: Oct 17, 2026, 08:29 AM IST | Updated: Oct 17, 2026, 08:32 AM IST
Join

ರಾಯಚೂರು ಜಿಲ್ಲೆಯಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ ಆಗಿದ್ದು ಈ ದುರ್ಘಟನೆಯಲ್ಲಿ ಮಾನವೀಯತೆ ಮರೆತು ಸಾರ್ವಜನಿಕರು ಈರುಳ್ಳಿ ಲೂಟಿಗೆ ಮುಗಿಬಿದ್ದಿರುವ ಬಗ್ಗೆ ವರದಿ ಆಗಿದೆ. ಇನ್ನೊಂದೆಡೆ ಬಾದಾಮಿಯಲ್ಲಿ ಹಾರ್ಟ್‌ ಅಟ್ಯಾಕ್‌ನಿಂದಾಗಿ ಫ್ರಾನ್ಸ್‌ ಪ್ರಜೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.

ರಾಯಚೂರಿನಲ್ಲಿ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಅಪಘಾತ: 
ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಡೆದಿದೆ.

ಈರುಳ್ಳಿ ಲಾರಿ ಪಲ್ಟಿ.. ಇಬ್ಬರಿಗೆ ಗಾಯ:-
ಕಪಗಲ್ ಗ್ರಾಮದ ಬಳಿ ತಿರುವಿನಲ್ಲಿ ಈರುಳ್ಳಿ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಬದಿಯ ಗುಂಡಿಗೆ ಬಿದ್ದು ಪಲ್ಟಿ ಆಗಿದೆ. ಈ ಅಪಘಾತದಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದಾರೆ.

ಮಾನವೀಯತೆ ಮರೆತು ಈರುಳ್ಳಿಗೆ ಮುಗಿಬಿದ್ದ ಸಾರ್ವಜನಿಕರು..
ಈರುಳ್ಳಿ ಲಾರಿ ಉರುಳಿಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಕನಿಷ್ಠ ಪಕ್ಷ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆಯ ಬಗ್ಗೆಯೂ ಕಾಳಜಿ ವಹಿಸದೆ, ಗಾಯಗೊಂಡ ಚಾಲಕ ಮತ್ತು ಕ್ಲೀನರ್ ಅನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡದ ಜನ ಈರುಳ್ಳಿ ಕದಿಯಲು ಮುಂದಾಗಿದ್ದರು ಎಂದು ವರದಿ ಆಗಿದೆ.

15 ನಿಮಿಷದಲ್ಲಿ ದೊಡ್ಡ ಲಾರಿ ಈರುಳ್ಳಿ ಖಾಲಿ:
ಗಾಯಗೊಂಡವರನ್ನ ನೋಡದೆ ಈರುಳ್ಳಿ ಕದಿಯಲು ಮುಂದಾದ ಗ್ರಾಮಸ್ಥರು ಚೀಲಗಟ್ಟಲ ಈರುಳ್ಳಿಗಳನ್ನು ಹೊತ್ತೊಯ್ದಿದ್ದಾರೆ. ಹೀಗಾಗಿ, ಕೇವಲ 15 ನಿಮಿಷದಲ್ಲಿ ಒಂದು ದೊಡ್ಡ ಲಾರಿಯ ಈರುಳ್ಳಿ ಲೋಡ್ ಅನ್ನು ಸಾರ್ವಜನಿಕರು ಖಾಲಿ ಮಾಡಿದ್ದಾರೆ ಎನ್ನಲಾಗಿದೆ.

ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಬಾದಾಮಿಯಲ್ಲಿ ಹೃದಯಘಾತದಿಂದ ಫ್ರಾನ್ಸ್ ಪ್ರಜೆ ಸಾವು:


ದೇಶ ಸುತ್ತಲೆಂದು ಫ್ರಾನ್ಸ್‌ನಿಂದ ಭಾರತಕ್ಕೆ ಬಂದಿದ್ದ ಫ್ರಾನ್ಸ್ ಪ್ರಜೆಯೊಬ್ಬರು ಹೃದಯಘಾತದಿಂದ ಸಾವಿಗೀಡಾಗಿರುವ ಘಟನೆ ಬಾದಾಮಿಯ ಮಯೂರ ಹೋಟೆಲ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೃತಪಟ್ಟಿರುವ ಫ್ರಾನ್ಸ್‌ ಪ್ರಜೆಯನ್ನು ಎಲೆನ್ ಡಗೆರೊ (66)  ಎಂದು ಗುರುತಿಸಲಾಗಿದೆ.

ಯಾರು ಈ ಎಲೆನ್ ಡಗೆರೊ:
ಲಭ್ಯವಿರುವ ಮಾಹಿತಿಯ ಪ್ರಕಾರ, ಹೃದಯಾಘಾತದಿಂದ ಮೃತಪಟ್ಟಿರುವ ಎಲೆನ್ ಡಗೆರೊ ಪ್ರಾನ್ಸ್ ನ ಕೆಲಾಸ್ ಮೂಲದ ನಿವಾಸಿ ಎಂದು ತಿಳಿದು ಬಂದಿದೆ.

ಎಲೆನ್ ಡಗೆರೊ 08 ಸೆಪ್ಟೆಂಬರ್‌ 2026ರಂದು ತಮ್ಮ ಮಗನ ಸಮೇತ ಭಾರತಕ್ಕೆ ಆಗಮಿಸಿದ್ದರು. 10 ಅಕ್ಟೋಬರ್ 2026 ರಂದು ಬಾದಾಮಿಗೆ ಆಗಮಿಸಿದ್ದರು. ನಿನ್ನೆ (ಅಕ್ಟೋಬರ್‌ 16) ಮಧ್ಯಾಹ್ನ 3 ಗಂಟೆಗೆ ಎಲೆನ್ ಡಗೆರೊ ಅವರಿಗೆ ಹೃದಯಾಘಾತ ಉಂಟಾಗಿತ್ತು. ಕೂಡಲೇ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದಾಗ್ಯೂ, ಚಿಕಿತ್ಸೆ ಫಲಿಸದೆ ಎಲೆನ್ ಡಗೆರೊ ನಿನ್ನೆ ಸಂಜೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಫ್ರಾನ್ಸ್‌ ಪ್ರಜೆ ಎಲೆನ್ ಡಗೆರೊ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ಬಾದಾಮಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದುವರೆಗೆ ಏಳು ಬಾರಿಗೆ ಭಾರತಕ್ಕೆ ಬಂದಿರುವ ವ್ಯಕ್ತಿ: 
ಲಭ್ಯವಿರುವ ಮಾಹಿತಿಗಳ ಪ್ರಕಾರ, ಫ್ರಾನ್ಸ್‌ ಪ್ರಜೆ ಎಲೆನ್ ಡಗೆರೊ ಇದುವರೆಗೆ ಏಳು ಬಾರಿಗೆ ಭಾರತಕ್ಕೆ ಬಂದಿದ್ದರು. ಈ ಹಿಂದೆಯೂ ಬಾಗಲಕೋಟೆ ಜಿಲ್ಲೆ ಬಾದಾಮಿಗೆ ಬಂದಿದ್ದ ಎಲೆನ್ ಡಗೆರೊ, ಇದೀಗ ಎರಡನೇ ಬಾರಿಗೆ ಬಾದಾಮಿ ಪ್ರವಾಸಿ ತಾಣ ವೀಕ್ಷಿಸಲು ಮಗನ ಜೊತೆ ಬಂದಿದ್ದರು ಎನ್ನಲಾಗಿದೆ. 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES