• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಅಕ್ರಮ ಮದ್ಯ ಮಾರಾಟದಿಂದ ಕಂಗೆಟ್ಟ ಕಾಕುಬಾಳ ಗ್ರಾಮಸ್ಥರು: ಅಬಕಾರಿ ಇಲಾಖೆ ವಿರುದ್ಧ ಮಹಿಳೆಯರ ಆಕ್ರೋಶ

ಅಕ್ರಮ ಮದ್ಯ ಮಾರಾಟದಿಂದ ಕಂಗೆಟ್ಟ ಕಾಕುಬಾಳ ಗ್ರಾಮಸ್ಥರು: ಅಬಕಾರಿ ಇಲಾಖೆ ವಿರುದ್ಧ ಮಹಿಳೆಯರ ಆಕ್ರೋಶ

ವಿಜಯನಗರ ಜಿಲ್ಲೆಯ ಕಾಕುಬಾಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಇದರ ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

Written ByYashaswini V
Published: Oct 29, 2026, 04:17 PM IST|Updated: Oct 29, 2026, 04:22 PM IST
joinshare
ಅಕ್ರಮ ಮದ್ಯ ಮಾರಾಟದಿಂದ ಕಂಗೆಟ್ಟ ಕಾಕುಬಾಳ ಗ್ರಾಮಸ್ಥರು: ಅಬಕಾರಿ ಇಲಾಖೆ ವಿರುದ್ಧ ಮಹಿಳೆಯರ ಆಕ್ರೋಶ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಹಾಲಿನ ದರ ಏರಿಕೆ ಬೆನ್ನಲ್ಲೇ ಜನರಿಗೆ ಬಿಗ್ ಶಾಕ್ : ಹೋಟೆಲ್ ತಿಂಡಿ-ಕಾಫಿ ದರ ಹೆಚ್ಚಳ

ಹಾಲಿನ ದರ ಏರಿಕೆ ಬೆನ್ನಲ್ಲೇ ಜನರಿಗೆ ಬಿಗ್ ಶಾಕ್ : ಹೋಟೆಲ್ ತಿಂಡಿ-ಕಾಫಿ ದರ ಹೆಚ್ಚಳ

2

2011ರ ಘಟನೆ, 2023ರಲ್ಲಿ ಶೂಟಿಂಗ್ : ಸಿಸಿಬಿ "ಸ್ಟಿಂಗ್‌ ಆಪರೇಷನ್‌" ತನಿಖೆಯಲ್ಲಿ ಮಾಜಿ ಸಿಎಂಗೆ ಕ್ಲೀನ್​ಚಿಟ್

3

ಕಿಚನ್ ಸಿಂಕ್‌ನಲ್ಲಿ ನೀರು ನಿಲ್ಲುತ್ತಿದೆಯೇ? ಪ್ಲಂಬರ್ ಕರೆಯುವ ಮುನ್ನ ಈ ಟ್ರಿಕ್‌ ಟ್ರೈ ಮಾಡಿ!

4

ಜೈಲಿನಿಂದಲೇ ಧನ್ವೀರ್‌ ವಿರುದ್ಧ "ತಡೆಯಾಜ್ಞೆ ಅಸ್ತ್ರ" ಪ್ರಯೋಗಿಸಿದ ಡಿ ಬಾಸ್‌.! ಸಂಚಲನ ಸೃಷ್ಟಿಸಿದ ದರ್ಶನ್‌ ನಡೆ

5

ಕಬ್ಬಿನ ದರ ಏರಿಕೆಗಾಗಿ ಮಂಡ್ಯದಲ್ಲಿ ರೈತರ ರಣಕಹಳೆ.. ಮೈಶುಗರ್ ಸಕ್ಕರೆ ಗೋದಾಮಿಗೆ ಅನ್ನದಾತರ ಮುತ್ತಿಗೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳ ಎಂಬ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರಿಂದ ರೋಸಿ ಹೋಗಿರುವ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಮನೆ, ಮನೆಗಳಲ್ಲಿ, ಕಿರಾಣಿ, ಬೀಡಾ ಅಂಗಡಿಗಳಲ್ಲಿ ಎಗ್ಗಿಲ್ಲದೇ ಸಾಗಿದ ಅಕ್ರಮ ಮದ್ಯ ಮಾರಾಟದ ಬಗ್ಗೆ ತಿಳಿದಿದ್ದರೂ ಕಂಡೂ ಕಾಣದಂತೆ ಕುಳಿತಿರುವ ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾಕುಬಾಳ ಗ್ರಾಮದ ಗ್ರಾಮಸ್ಥರು, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ಜನ:
ಕಾಕುಬಾಳ ಗ್ರಾಮದಲ್ಲಿ ಸಲೀಸಾಗಿ ಸಿಗುವ ಅಕ್ರಮ ಮದ್ಯ ಮಾರಾಟದಿಂದಾಗಿ ನಮ್ಮ ಗ್ರಾಮದಲ್ಲಿ ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳು, ಕೂಲಿ ಕಾರ್ಮಿಕರು ಕೆಟ್ಟ ಚಟಕ್ಕೆ ದಾಸರಾಗುತ್ತಿದದ್ದಾರೆ. ಹೆಣ್ಣು ಮಕ್ಕಳ ತಾಳಿ ಮಾರಿ ಸಾಲ ಸೋಲ ಮಾಡಿ ಕುಡಿತದ ಚಟಕ್ಕೆ ಬಿದ್ದು ಗ್ರಾಮಸ್ಥರು ಆರ್ಥಿಕ ಸಂಕಷ್ಟ‌ ಎದುರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿರುವ ಮಹಿಳೆಯರು, ರೈತರು ಅಬಕಾರಿ ಇಲಾಖೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಸೊಸೆ, ಮಕ್ಕಳ ಜೀವ ಉಳಿಸಿ:
ನಮ್ಮ ಕಾಕುಬಾಳ ಗ್ರಾಮದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ನಮ್ಮ ಗ್ರಾಮದ ಸೊಸೆಯಂದಿರು ಹಾಗೂ ಮಕ್ಕಳ ಜೀವನ ಉಳಿಸಿ ಎಂದು ರೈತ ಮಹಿಳೆಯರು ಜಿಲ್ಲಾಧಿಕಾರಿಗಳ ಬಳಿ ಕೋರಿದ್ದಾರೆ.

ಕಾಕುಬಾಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಹಲವು ಬಾರಿ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದರೂ, ಅಬಕಾರಿ ಇಲಾಖೆ ಅಧಿಕಾರಿಗಳ ಕಿಮ್ಮಕ್ಕಿನಿಂದ ಲೈಸೆನ್ಸ್‌ ಇಲ್ಲದಿದ್ದರೂ ಎಗ್ಗಲ್ಲದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಕುಡಿಯ ಬೇಡಿ ಎಂದರೆ ನಮ್ಮ ಮಕ್ಕಳು ಕುಡಿತದ ನಿಶೆಯಲ್ಲಿ ನಮ್ಮನ್ನೇ ಹೊಡೆಯುತ್ತಾರೆ. ನಮ್ಮ‌ ಮಕ್ಕಳ ಕಿರುಕುಳಕ್ಕೆ ಬೇಸತ್ತು ನಮ್ಮ ಸೊಸೆಯಂದಿರು ಮನೆ ಬಿಟ್ಟು ತವರು ಮನೆ ಸೇರಿದ್ದಾರೆ. ಸಣ್ಣ ಸಣ್ಣ ಮಕ್ಕಳು, ಕುಡಿದು ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಂಡು ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. 
 

Add Zee News as a Preferred Source
TAGS:
Kannada News