SOCIAL MEDIA

Newsletter

PARTNER SITES
Select Language Select State

ಕೃಷಿ ಭೂಮಿ ಬಿಟ್ಟುಕೊಡದ ಅನ್ನದಾತರ ಮೇಲೆ ಎಫ್‌ಐಆರ್‌ ದಾಖಲು: ಸೋಲಾರ್‌ ಯೋಜನೆ ವಿರುದ್ಧ ರೈತರ ಪ್ರತಿಭಟನೆ

ಸೋಲಾರ್‌ ಕಂಪನಿಗೆ ಜಮೀನು ಬಿಟ್ಟು ಕೊಡದ ಹಿನ್ನಲೆಯಲ್ಲಿ ಅನ್ನದಾತರ ಮೇಲೆ ಎಫ್‌.ಐ.ಆರ್‌ ದಾಖಲಿಸಲಾಗಿದ್ದು, ಇದೀಗ ಸೋಲಾರ್‌ ಯೋಜನೆ ವಿರುದ್ಧ ರೈತರು ಸಿಡಿದೆದ್ದಿದ್ದಾರೆ.

Written By Yashaswini V
Published: Nov 27, 2026, 08:36 IST | Updated: Nov 27, 2026, 09:07 IST
Join

ಸೋಲಾರ್ ಕಂಪನಿಗೆ ರೈತರು ಜಮೀನು ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಸೋಲಾರ್‌ ಕಂಪನಿ ಅನ್ನದಾತರ ಮೇಲೆ ಎಫ್.ಐ.ಆರ್ ದಾಖಲಿಸಿ ದರ್ಪ ತೋರಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೇವೂರು ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ರೈತರ ವಿರುದ್ಧ ಎಫ್‌ಐಆರ್‌:
ಹೌದು, ಸೋಲಾರ್‌ ಘಟಕಕ್ಕೆ ಜಮೀನು ನೀಡಲು ಒಪ್ಪದ ರೈತರನ್ನು ಬಲವಂತವಾಗಿ ಒಪ್ಪಿಸಲು ಟೊರೆಂಟ್‌ ಸೋಲಾರ್ ಕಂಪನಿಯು ರೈತರ ವಿರುದ್ಧ ಎಫ್‌ಐಆರ್‌ ಅಸ್ತ್ರವನ್ನು ಪ್ರಯೋಗಿಸಿದ್ದು, ರೈತರು ತಮ್ಮ ಬದುಕು ಕಟ್ಟಿಕೊಟ್ಟಿರುವ ಜಮೀನನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಸೋಲಾರ್‌ ಕಂಪನಿಗೆ ಪೊಲೀಸರ ಸಾಥ್:
ಸೋಲಾರ್‌ ಯೋಜನೆಯ ಕೆಲಸಕ್ಕೆ ರೈತರು ಅಡ್ಡಿಪಡಿಸಿರುವುದು ಸೇರಿದಂತೆ ಅವಾಚ್ಯ ಶಬ್ದ ನಿಂದನೆ‌ ಮಾಡಿದ್ದಾರೆಂದು ಆರೋಪಿಸಿ ಸೋಲಾರ್‌ ಕಂಪನಿ ರೈತರ ವಿರುದ್ಧ ಎಫ್.ಐ.ಆರ್
ದಾಖಲಿಸಿದ್ದು, ಟೊರೆಂಟ್‌‌ ಸೋಲಾರ್‌ ಕಂಪನಿಗೆ ಪೊಲೀಸರು ಸಾಥ್ ನೀಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಘಟನೆ ಹಿನ್ನಲೆ ಏನು? 
ಕೊಪ್ಪಳ ಜಿಲ್ಲೆಯ ಕುಕನೂರಿನ ಮಂಗಳೂರು ಗ್ರಾಮದಲ್ಲಿ ಟೊರೆಂಟ್‌ ಸೋಲಾರ್ ಕಂಪನಿ ಕಂಬಗಳನ್ನು ಹಾಕಲು ಮುಂದಾಗಿತ್ತು. ರೈತರ ಒಪ್ಪಿಗೆ ಪಡೆಯದೇ ಕಾಮಗಾರಿ ನಡೆಸಲು ಮುಂದಾಗಿದ್ದ ಕಂಪನಿ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಲಾರ್‌ ಯೋಜನೆ ವಿರುದ್ಧ ರೈತರ ಪ್ರತಿಭಟನೆ:
ಸೋಲಾರ್‌ ಯೋಜನೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಕಂಪನಿ ಜೊತೆಗೂಡಿ ನಮಗೆ ರಕ್ಷಣೆ ನೀಡಬೇಕಿದ್ದ ಪೊಲೀಸರೇ ರೈತರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ರೈತರಲ್ಲಿ ಜಮೀನು ಕಳೆದುಕೊಳ್ಳುವ ಆತಂಕ ಹೆಚ್ಚಾಗಿದೆ. ಇಲ್ಲಿ ನಮಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ಸಚಿವರು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಒಂದೊಮ್ಮೆ ಸಚಿವರು ನಮ್ಮ ರಕ್ಷಣೆಗೆ ಬರದಿದ್ದರೆ ನಮಗೆ ಬೇರೆ ದಾರಿಯೇ ಇಲ್ಲ. ವಿ*ಷಸೇವಿಸಿ ಆತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ನಮಗೆ ಅನ್ನ ನೀಡುವ ಜಮೀನನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ, ಬೇಕಿದ್ದರೆ  ಜಿಲ್ಲಾಧಿಕಾರಿಗಳೇ‌ ನೋಟಿಸ್ ನೀಡಲಿ ಎಂದು ರೈತರು ಆಕ್ರೋಶ ಹೊರಹಾಕಿದ್ದರು. ಇದೀಗ ಸೋಲಾರ್‌ ಟೊರೆಂಟ್‌ ಸೋಲಾರ್ ಕಂಪನಿ ಪೊಲೀಸರ ಕುಮ್ಮಕ್ಕಿನಿಂದ ಎಂಟು ಜನ ರೈತರ ಮೇಲೆ ಎಫ್.ಐ.ಆರ್ ಅಸ್ತ್ರ ಪ್ರಯೋಗಿಸಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೇವೂರು ಠಾಣೆ ವ್ಯಾಪ್ತಿಯಲ್ಲಿ ಎಫ್.ಐ.ಆರ್ ದರ್ಪ ತೋರಿಸಿ ರೈತರನ್ನು ಬೆದರಿಸುತ್ತಿರೋ ಕಂಪನಿ ಹಾಗೂ ಪೊಲೀಸರ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ರೈತರ ವಿರುದ್ಧ ಎಫ್‌.ಐ.ಆರ್‌: ಸಚಿವರು ಗರಂ!


ಸೋಲಾರ್‌ ಯೋಜನೆಗೆ ಸಂಬಂಧಿಸಿದಂತೆ ರೈತರ ವಿರುದ್ಧ ಎಫ್.ಐ.ಆರ್ ದಾಖಲಾಗುತ್ತಿದ್ದಂತಯೇ ಅಧಿಕಾರಿಗಳ ಮೇಲೆ ಗರಂ ಆದ ಸಚಿವ ಶಿವರಾಜ್ ತಂಗಡಗಿ, ಈ ವಿಚಾರದಲ್ಲಿ ಪೊಲೀಸರು ಹಾಗೂ ನಮ್ಮ ಅಧಿಕಾರಿಗಳ ತಪ್ಪಿದೆ. ಕಂಪನಿಯವರು ದಬ್ಬಾಳಿಕೆ ಮಾಡ್ತಾ ಇರೋದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES