Shukravara 27th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಶುಕ್ರವಾರದ ಈ ದಿನ ಆರ್ದ್ರಾ ನಕ್ಷತ್ರ, ಶುಭ ಯೋಗ, ಬವ ಕರಣ ಇರಲಿದೆ.
ಮೇಷ ರಾಶಿ:
ಮೇಷ ರಾಶಿಯ ಜನರಿಗೆ ಶುಭ ಯೋಗವು ಅದೃಷ್ಟವನ್ನು ಹೊತ್ತು ತರಲಿದ್ದು ಇಂದು ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ವೃತ್ತಿ ಬದುಕು ಸುಗಮವಾಗಿರಲಿದೆ. ವ್ಯವಹಾರಗಳು ಅನುಕೂಲಕರವಾಗಿರಲಿವೆ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಸುಸೂತ್ರವಾಗಿ ಬಗೆಹರಿಯಲಿವೆ.
ವೃಷಭ ರಾಶಿ:
ಶುಕ್ರವಾರದಂದು ಶುಭ ಯೋಗವು ವೃಷಭ ರಾಶಿಯ ಜನರಿಗೆ ಅತ್ಯುತ್ತಮವಾಗಿದ್ದು ಇಂದು ವೃತ್ತಿಯಲ್ಲಿ ಯಶಸ್ಸು ಗಳಿಸುವಿರಿ. ಯಾವುದೇ ಕೆಲಸದಲ್ಲಿ ಅಲ್ಪ ಪ್ರಯತ್ನವೂ ಕೂಡ ಉತ್ತಮ ಫಲಗಳನ್ನು ನೀಡಲಿದೆ. ವ್ಯವಹಾರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಹೆಚ್ಚಿನ ಚಿಂತೆ ಅಗತ್ಯವಿಲ್ಲ.
ಮಿಥುನ ರಾಶಿ:
ಶುಭ ಯೋಗದ ಪ್ರಭಾವದಿಂದ ಮಿಥುನ ರಾಶಿಯವರಿಗೆ ಕೆಲಸದಲ್ಲಿ ಪ್ರತಿ ಹೆಜ್ಜೆಗೂ ಜಯ ಸಿಗಲಿದೆ. ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಲಾಭದಯಕವಾಗಿರಲಿವೆ. ವೈಯಕ್ತಿಕ ಜೀವನದಲ್ಲಿ ಇದ್ದ ಒತ್ತಡಗಳು ನಿವಾರಣೆ ಆಗಲಿವೆ. ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವ ಅವಕಾಶಗಳಿವೆ.
ಕರ್ಕಾಟಕ ರಾಶಿ:
ಶುಭ ಯೋಗವು ಕರ್ಕಾಟಕ ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿಯನ್ನು ತರಲಿದೆ. ನಿರೀಕ್ಷಿತ ಶುಭ ಸುದ್ದಿಗಳು ನಿಮ್ಮ ಮನಸ್ಸಿನ ಖುಷಿಯನ್ನು ಹೆಚ್ಚಿಸಲಿದೆ. ಮದುವೆ ಮಾತುಕತೆಗಳು ಮುಂದಿನ ಹಂತಕ್ಕೆ ಹೋಗಲಿವೆ. ನಿರುದ್ಯೋಗಿಗಳಿಗೂ ಒಳ್ಳೆಯ ಸುದ್ದಿ ಸಿಗುವ ಸೂಚನೆಗಳಿವೆ.
ಸಿಂಹ ರಾಶಿ:
ಸಿಂಹ ರಾಶಿಯುವರಿಗೆ ವೃತ್ತಿ, ವ್ಯವಹಾರಗಳು ಅನುಕೂಲಕರವಾಗಿ ಮುಂದುವರೆಯಲಿವೆ. ಕುಟುಂಬದಲ್ಲೂ ಸಂತೋಷದ ವಾತಾವರಣ ಇರಲಿದೆ. ನಿರುದ್ಯೋಗಿಗಳಿಗೆ ನಿರೀಕ್ಷಿತ ಶುಭ ಸಮಾಚಾರ ಕೇಳುವ ಸೂಚನೆಗಳಿವೆ. ಸಂಗಾತಿಯೊಂದಿಗೆ ದೂರದೂರಿಗೆ ಪ್ರಯಾಣ ಬೆಳೆಸಬೇಕಾಗಬಹುದು.
ಕನ್ಯಾ ರಾಶಿ:
ಶುಭ ಯೋಗವು ಕನ್ಯಾ ರಾಶಿಯವರಿಗೆ ಆಸ್ತಿ ವಿವಾದಗಳಲ್ಲಿ ಗೆಲುವನ್ನು ನೀಡಲಿದೆ. ವ್ಯವಹಾರಗಳು ಲಾಭದಾಯಕವಾಗಿ ಮುಂದುವರೆಯಲಿವೆ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಕೌಟುಂಬಿಕ ಸಮಸ್ಯೆಗಳಿಂದ ಪರಿಹಾರ ಪಡೆಯುವ ಸೂಚನೆಗಳಿವೆ. ಆದಾಯವೂ ಹೆಚ್ಚಾಗಲಿದೆ.
ತುಲಾ ರಾಶಿ:
ತುಲಾ ರಾಶಿಯವರಿಗೆ ಇಂದು ಇಡೀ ದಿನ ಉಲ್ಲಾಸಭರಿತವಾಗಿರಲಿದೆ. ಕೆಲಸದಲ್ಲಿ ನಿರೀಕ್ಷಿತ ಪ್ರೋತ್ಸಾಹ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಆಶಾದಾಯಕವಾಗಿರಲಿದೆ. ಸಂಬಂಧಿಕರೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆದಾಯದ ಹೊಸ ಮೂಲಗಳು ಹೊರ ಹೊಮ್ಮಲಿವೆ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಜನರಿಗೆ ಇಂದು ಕೆಲಸದಲ್ಲಿ ನಿಮ್ಮ ಗುರಿಗಳು, ಜವಾಬ್ದಾರಿಗಳು ಹೆಚ್ಚಾಗುವ ನಿರೀಕ್ಷೆ ಇದೆ. ವೃತ್ತಿ, ವ್ಯವಹಾರಗಳು ಲಾಭದಾಯಕವಾಗಿರಲಿವೆ. ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗಲಿದೆ. ನಿಮ್ಮ ಪ್ರಮುಖ ಯೋಜನೆಗಳು ಕನಿಷ್ಠ ಖರ್ಚಿನಲ್ಲಿ ಪೂರ್ಣಗೊಳ್ಳಲಿವೆ. ಆದಾಯ ಇಮ್ಮಡಿಗೊಳ್ಳುವ ಸೂಚನೆಗಳಿವೆ. ಉತ್ತಮ ಸಂಪರ್ಕಗಳು ಬೆಳೆಯಲಿವೆ.
ಧನು ರಾಶಿ:
ಧನು ರಾಶಿಯವರಿಗೆ ಇಂದು ಕೆಲಸದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ವೃತ್ತಿಪರ ಜೀವನದಲ್ಲಿ ಸ್ವಲ್ಪ ಕೆಲಸಗಳು ಹೆಚ್ಚಾಗಬಹುದು. ವ್ಯವಹಾರವು ಲಾಭಾಂಶದೊಂದಿಗೆ ಮುಂದುವರೆಯಲಿವೆ. ಯಾವುದೇ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿವೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರಲಿದೆ. ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ ಶುಭ ದಿನ.
ಮಕರ ರಾಶಿ:
ಮಕರ ರಾಶಿಯವರು ಇಂದು ಶುಭ ಯೋಗದ ಪ್ರಭಾವದಿಂದ ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ವಿದೇಶ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು.
ಕುಂಭ ರಾಶಿ:
ಕುಂಭ ರಾಶಿಯವರು ಇಂದು ವ್ಯವಹಾರದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಜಯ ಸಾಧಿಸುವಿರಿ. ಆದಾಯದ ಕೊರತೆ ಇರುವುದಿಲ್ಲ. ಆದರೆ, ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುವುದರಿಂದ ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ವೈಯಕ್ತಿಕ ವಿಚಾರಗಳಲ್ಲಿ ವಿಶೇಷ ಗಮನ ಅಗತ್ಯವಾಗಿದೆ.
ಮೀನ ರಾಶಿ:
ಮೀನ ರಾಶಿಯವರಿಗೆ ಶುಭ ಯೋಗವು ಕೆಲಸದಲ್ಲಿ ಮೇಲಧಿಕಾರಿಗಳ ಬೆಂಬಲವನ್ನು ನೀಡಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಆಸ್ತಿ ವಿಷಯಗಳು ಅನುಕೂಲಕರವಾಗಿ ಮುಂದುವರೆಯಲಿವೆ. ವ್ಯವಹಾರಕ್ಕೆ ಅಗತ್ಯವಿರುವ ಹಣ ದೊರೆಯಲಿವೆ. ವಿವಾಹ ಪ್ರಯತ್ನಗಳಲ್ಲಿ ಶುಭಫಲಗಳನ್ನು ನಿರೀಕ್ಷಿಸಬಹುದು.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.