• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಬೆಂಗಳೂರು ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟಕ ವಸ್ತುಗಳಿದ್ದ ಪಾರ್ಸೆಲ್ ಎಲ್ಲಿಂದ ಬಂತು?

ಬೆಂಗಳೂರು ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟಕ ವಸ್ತುಗಳಿದ್ದ ಪಾರ್ಸೆಲ್ ಎಲ್ಲಿಂದ ಬಂತು?

ಮತ್ತೊಂದೆಡೆ, ಸ್ಫೋಟಕ ವಸ್ತುಗಳಿದ್ದ ಪಾರ್ಸೆಲ್ ಎಲ್ಲಿಂದ ಬಂತು..? ಅದನ್ನ ತಂದುಕೊಟ್ಟವರು ಯಾರು..? ಈ ಕೃತ್ಯದ ಹಿಂದೆ ಯಾರಿದ್ದಾರೆ ಅನ್ನೋದನ್ನ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Written ByChetana Devarmani
Published: Oct 23, 2026, 05:11 PM IST|Updated: Oct 23, 2026, 05:13 PM IST
joinshare
ಬೆಂಗಳೂರು ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟಕ ವಸ್ತುಗಳಿದ್ದ ಪಾರ್ಸೆಲ್ ಎಲ್ಲಿಂದ ಬಂತು?

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
45 ನಿಮಿಷಕ್ಕೆ ಹಣ ಪಡೆದು 12 ಮಿನಿಟ್ ಡ್ಯಾನ್ಸ್ ..! "ಕಚ್ಚಾ ಬದಾಮ್‌" ಗರ್ಲ್‌ ಅಂಜಲಿ ವಿರುದ್ಧ ದೂರು

45 ನಿಮಿಷಕ್ಕೆ ಹಣ ಪಡೆದು 12 ಮಿನಿಟ್ ಡ್ಯಾನ್ಸ್ ..! "ಕಚ್ಚಾ ಬದಾಮ್‌" ಗರ್ಲ್‌ ಅಂಜಲಿ ವಿರುದ್ಧ ದೂರು

2

ಇನ್ನೊಂದು ವಾರದಲ್ಲಿ ಸ್ಟಿಂಗ್ ಆಪರೇಷನ್ ಅಸಲಿ ಸತ್ಯ ಹೊರಕ್ಕೆ : ಸಚಿವ ಪ್ರಿಯಾಂಕ್ ಖರ್ಗೆ

3

Kwala Intel: ದಲಾಲ್ ಸ್ಟ್ರೀಟ್‌ನಲ್ಲಿ AI ಕ್ರಾಂತಿ; ಷೇರು ಮಾರುಕಟ್ಟೆ ರಿಸರ್ಚ್‌ ಈಗ ಇನ್ನಷ್ಟು ಸುಲಭ!

4

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

5

ವಿಜಯಲಕ್ಷ್ಮಿ ದರ್ಶನ್‌ ಮ್ಯಾನೇಜರ್‌ಗೆ ಬೆದರಿಕೆ ಆರೋಪ : ನಟ ಧನ್ವೀರ್ ವಿರುದ್ಧ ದೂರು ದಾಖಲು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ಕುತೂಹಲ ಮೂಡಿಸಿದೆ. ಸ್ಫೋಟಕ್ಕೆ ನಿಖರ ಕಾರಣವೇನು ಅನ್ನೋದು ಎಫ್‌ಎಸ್‌ಎಲ್ ವರದಿಯಿಂದ ಸ್ಪಷ್ಟವಾಗಬೇಕಿದೆ. ಮತ್ತೊಂದೆಡೆ, ಸ್ಫೋಟಕ ವಸ್ತುಗಳಿದ್ದ ಪಾರ್ಸೆಲ್ ಎಲ್ಲಿಂದ ಬಂತು..? ಅದನ್ನ ತಂದುಕೊಟ್ಟವರು ಯಾರು..? ಈ ಕೃತ್ಯದ ಹಿಂದೆ ಯಾರಿದ್ದಾರೆ ಅನ್ನೋದನ್ನ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಷ್ಟಕ್ಕೂ ಈ ಪಾರ್ಸೆಲ್ ಹಿಂದಿನ ರಹಸ್ಯವೇನು ಅಂತೀರಾ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಒಂದೆಡೆ ಸ್ಫೋಟದ ನಿಖರ ಕಾರಣ ತಿಳಿಯಲು ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರ ಕಾಯುವಿಕೆ. ಮತ್ತೊಂದೆಡೆ ಪಾರ್ಸೆಲ್‌ನ ಮೂಲ ಪತ್ತೆಹಚ್ಚಿ,ಇದರ ಹಿಂದೆ ಇರುವವರ ಹೆಡೆಮುರಿ ಕಟ್ಟಲು ತನಿಖೆಯ ವೇಗ ಹೆಚ್ಚಳ. ಇದು ಸದ್ಯ ಪುಲಕೇಶಿ 
ನಗರದಲ್ಲಿ ನಡೆದ ಅನುಮಾಸ್ಪದ ಸ್ಪೋಟದ ತನಿಖೆಯ ಹೈಲೆಟ್. ಈ ಪ್ರಕರಣದ ತನಿಖೆ ಹಲವು ಆಯಾಮಗಳಲ್ಲಿ ಮುಂದುವರೆದಿದೆ. ಪೂರ್ವ ವಿಭಾಗದ ಪೊಲೀಸರಿಂದ ಐದಕ್ಕೂ ಹೆಚ್ಚು ವಿಶೇಷ ತಂಡಗಳ ರಚನೆಯಾಗಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನ ಪರಿಶೀಲಿಸಲಾಗಿದೆ. ಹೊರಗಿನಿಂದಲೇ ಸ್ಫೋಟಕ ವಸ್ತುಗಳು ಬಂದಿರುವ ಶಂಕೆಯ ಹಿನ್ನೆಲೆ, ಅವುಗಳ ಮೂಲ ಪತ್ತೆಹಚ್ಚಲು ಪೊಲೀಸರು ಸಾಕ್ಷ್ಯಗಳನ್ನ ಕಲೆಹಾಕುತ್ತಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಪೊಲೀಸರಿಗೆ ಪ್ರಮುಖ ಸುಳಿವು ಸಿಗಬೇಕಿರೋದು ಪಾರ್ಸೆಲ್ ತಂದುಕೊಟ್ಟ ವ್ಯಕ್ತಿಯಿಂದ. ಗಿಫ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಿದರೆ ತೊಂದರೆಯಾಗಬಹುದು ಅನ್ನೋ ಕಾರಣಕ್ಕೆ ಆರೋಪಿಗಳ ತಂಡದ ಯಾರೋ ಒಬ್ಬರು ನೇರವಾಗಿ ಪಾರ್ಸೆಲ್ ತಂದುಕೊಟ್ಟಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪಾರ್ಸೆಲ್ ನೀಡಿದ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಗಳನ್ನ ಜಾಲಾಡಲಾಗುತ್ತಿದೆ. ಆದರೆ,ಪ್ರಕರಣದ ತನಿಖೆಗೆ ಗಾಯಾಳುಗಳ ಹೇಳಿಕೆಗಳು ನಿರ್ಣಾಯಕವಾಗಿವೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್, ಪಾರ್ಸೆಲ್ ವಿಚಾರವಾಗಿ ನೀಡುತ್ತಿರುವ ಹೇಳಿಕೆಗಳಲ್ಲಿ ಗೊಂದಲವಿದೆ.ಒಂದು ಬಾರಿ ಯಾರೋ ಪಾರ್ಸೆಲ್ ಕೊಟ್ಟರು ಎಂದರೆ, ಮತ್ತೊಮ್ಮೆ ಅದನ್ನ ಎಲ್ಲೋ ಇಟ್ಟು ಹೋಗಿದ್ದರು ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.

ಇನ್ನು ಮತ್ತೊಬ್ಬ ಗಾಯಾಳು ಸೂರಜ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಸದ್ಯ ಅವರು ಸರಿಯಾಗಿ ಹೇಳಿಕೆ ದಾಖಲಿಸುವ ಸ್ಥಿತಿಯಲ್ಲಿಲ್ಲ.ಮತ್ತೊಂದೆಡೆ ಕಟ್ಟಡದ ಮಾಲೀಕ ರೆಹಮಾನ್ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.ಈ ಘಟನೆಗೂ ತನಗೂ ಸಂಬಂಧವಿಲ್ಲ,ಏನಾಗಿದೆ ಅನ್ನೋದೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ವೈಯಕ್ತಿಕ ದ್ವೇಷದ ಆಯಾಮದ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಪೂರ್ವ ವಿಭಾಗದ ಡಿಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು, ಪಾರ್ಸೆಲ್ ತಂದುಕೊಟ್ಟ ವ್ಯಕ್ತಿಯ ಪತ್ತೆಯೇ ಪ್ರಕರಣದ ಹಿಂದಿರುವವರ ಸುಳಿವು ನೀಡುವ ಪ್ರಮುಖ ಕೊಂಡಿಯಾಗುವ ಸಾಧ್ಯತೆಯಿದೆ. ಎಫ್‌ಎಸ್‌ಎಲ್ ವರದಿ ಮತ್ತು ಗಾಯಾಳುಗಳ ಸ್ಪಷ್ಟ ಹೇಳಿಕೆಗಳ ಬಳಿಕ ಸ್ಫೋಟದ ಹಿಂದಿನ ರಹಸ್ಯ ಬಯಲಾಗುವ ನಿರೀಕ್ಷೆಯಿದೆ.

Add Zee News as a Preferred Source
TAGS:
Crime