• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಆಯುಧ ಪೂಜೆ, ವಿಜಯದಶಮಿಗೆ ಹೂವು-ಹಣ್ಣಿನ ಬೆಲೆ ಎಷ್ಟು? ಇಲ್ಲಿದೆ ಇಂದಿನ ದರ ಪಟ್ಟಿ!

ಆಯುಧ ಪೂಜೆ, ವಿಜಯದಶಮಿಗೆ ಹೂವು-ಹಣ್ಣಿನ ಬೆಲೆ ಎಷ್ಟು? ಇಲ್ಲಿದೆ ಇಂದಿನ ದರ ಪಟ್ಟಿ!

ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನಲೆಯಲ್ಲಿ ಬೆಂಗಳೂರಿನ ಕೆಆರ್‌ ಮಾರುಕಟ್ಟೆಯಲ್ಲಿ ಭಾನುವಾರ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಮಳೆಯಿಂದ ಹೂವಿನ ಬೆಳೆ ಹಾನಿಯಾಗಿದ್ದು, ಪೂರೈಕೆಯ ಮೇಲೆ ಪರಿಣಾಮ ಬಿದ್ದಿರುವುದರಿಂದ ಹೂವುಗಳ ದರ ಏರಿಕೆಯಾಗಿದೆ ಹೂವು-ಹಣ್ಣುಗಳ ದರ ವಿವರ ಇಲ್ಲಿದೆ.

Written ByRamya. R. Gowda
Published: Oct 19, 2026, 02:39 PM IST|Updated: Oct 19, 2026, 02:51 PM IST
joinshare
ಆಯುಧ ಪೂಜೆ, ವಿಜಯದಶಮಿಗೆ ಹೂವು-ಹಣ್ಣಿನ ಬೆಲೆ ಎಷ್ಟು? ಇಲ್ಲಿದೆ ಇಂದಿನ ದರ ಪಟ್ಟಿ!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ಫೋಟೋ ಮಿಸ್ - ಕಾರ್ಯಕರ್ತರ ಮಧ್ಯೆ ತಳ್ಳಾಟ, ನೂಕಾಟ!

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ಫೋಟೋ ಮಿಸ್ - ಕಾರ್ಯಕರ್ತರ ಮಧ್ಯೆ ತಳ್ಳಾಟ, ನೂಕಾಟ!

2

ಆಯುಧ ಪೂಜೆ, ವಿಜಯದಶಮಿಗೆ ಹೂವು-ಹಣ್ಣಿನ ಬೆಲೆ ಎಷ್ಟು? ಇಲ್ಲಿದೆ ಇಂದಿನ ದರ ಪಟ್ಟಿ!

3

ರೈಲ್ವೆ ಇಲಾಖೆಯ ಮಹತ್ವದ ನಿಯಮ: ರೈಲಿನಲ್ಲಿ ಈ ತಪ್ಪು ಮಾಡಿದ್ರೆ 6 ತಿಂಗಳು ಜೈಲು, ₹5,000 ದಂಡ

4

ಕರ್ನಾಟಕದಲ್ಲಿ ‘ಬ್ಲ್ಯಾಕ್‌ಮೇಲ್ ಸರ್ಕಾರ’ದ ಆಡಳಿತ! ಸಿದ್ದರಾಮಯ್ಯ ರಾಜೀನಾಮೆ ವಿಚಾರವಾಗಿ ಶೋಭಾ ಕರಂದ್ಲಾಜೆ ಗಂಭೀರ ಆರೋಪ

5

ಸರ್ಕಾರಿ ವೈದ್ಯರಿಗೆ ಹೊಸ ರೂಲ್ಸ್‌.. ನವೆಂಬರ್‌ 1ರಿಂದ ರಾತ್ರಿ 9ಕ್ಕೆ ಆ್ಯಪ್‌ನಲ್ಲಿ ಹಾಜರಾತಿ ಕಡ್ಡಾಯ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನಲೆಯಲ್ಲಿ ಬೆಂಗಳೂರಿನ ಕೆಆರ್‌ ಮಾರುಕಟ್ಟೆಯಲ್ಲಿ ಭಾನುವಾರ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಮಳೆಯಿಂದ ಹೂವಿನ ಬೆಳೆ ಹಾನಿಯಾಗಿದ್ದು, ಪೂರೈಕೆಯ ಮೇಲೆ ಪರಿಣಾಮ ಬಿದ್ದಿರುವುದರಿಂದ ಹೂವುಗಳ ದರ ಏರಿಕೆಯಾಗಿದೆ ಹೂವು-ಹಣ್ಣುಗಳ ದರ ವಿವರ ಇಲ್ಲಿದೆ.

ನಾಡಿನಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಪೂಜೆಗೆ ಬೇಕಾದ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆಯಲ್ಲಿ ಜನಸಾಗರವೇ ಹರಿದುಬಂದಿತ್ತು. ಆದ್ರೆ ಹಬ್ಬದ ಸಂಭ್ರಮದ ನಡುವೆಯೇ ಹೂವು, ಹಣ್ಣುಗಳ ಬೆಲೆ ಏರಿಕೆ ಗ್ರಾಹಕರಿಗೆ ಶಾಕ್ ನೀಡಿದೆ. ಅದರಲ್ಲೂ ಮಳೆಯಿಂದ ಹೂವಿನ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಗೆ ಹೂವುಗಳ ಪೂರೈಕೆ ಕಡಿಮೆಯಾಗಿದೆ. ಹಾಗಾದ್ರೆ ಕೆ.ಆರ್‌. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ದರ ಎಷ್ಟಿದೆ? ಗ್ರಾಹಕರ ಜೇಬಿಗೆ ಎಷ್ಟು ಹೊರೆ ಬಿದ್ದಿದೆ? ಈ ಕುರಿತ ಕಂಪ್ಲೀಟ್‌ ಡೀಟೇಲ್ಸ್ ಇಲ್ಲಿದೆ ನೋಡಿ.

ಹಬ್ಬದ ಖರೀದಿಗೆ ಮುಗಿಬಿದ್ದ ಜನರು
ಆಯುಧ ಪೂಜೆ.. ವಿಜಯದಶಮಿ.. ನಾಡಿನಾದ್ಯಂತ ಹಬ್ಬದ ಕಳೆ ಜೋರಾಗಿದೆ. ಮನೆ, ಅಂಗಡಿ, ಕಚೇರಿಗಳಲ್ಲಿ ಆಯುಧ ಪೂಜೆಗೆ ಸಿದ್ಧತೆ ಜೋರಾಗಿದ್ದು, ಹೂವು, ಹಣ್ಣುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆಯಲ್ಲಂತೂ ಭಾನುವಾರ ಜನವೋ ಜನ. ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದ್ರು. ಆದ್ರೆ ಈ ಬಾರಿ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಹೂವುಗಳ ದರ ಕೇಳಿದ್ರೆ ಶಾಕ್!
ಹಬ್ಬದ ಪೂಜೆಗೆ ಪ್ರಮುಖವಾಗಿ ಬೇಕಾಗಿರುವ ಹೂವುಗಳ ಬೆಲೆ ಗಗನಕ್ಕೇರಿದೆ. ಮಳೆಯಿಂದ ಹೂವಿನ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಗೆ ಹೂವುಗಳ ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಹೀಗಾಗಿ ಹೂವುಗಳ ದರ ಹೆಚ್ಚಳವಾಗಿದೆ. ಸೇವಂತಿಗೆ ಒಂದು ಮಾರು 150 ರೂಪಾಯಿ, ಮಲ್ಲಿಗೆ ಒಂದು ಮಾರು 120 ರೂಪಾಯಿ, ಕನಕಾಂಬರ ಒಂದು ಮಾರು 120 ರೂಪಾಯಿ ದರವಿದೆ. ಇನ್ನು ಸಣ್ಣ ಮಿನಿ ರೋಸ್ ಹಾರಕ್ಕೆ 550 ರೂಪಾಯಿ, ದೊಡ್ಡ ರೋಸ್ ಹಾರಕ್ಕೆ 800 ರೂಪಾಯಿ, ಸುಗಂಧರಾಜ ಹಾರಕ್ಕೆ 300 ರೂಪಾಯಿ ದರವಿದೆ. ದೊಡ್ಡ ತೋಮಾಲೆಯ ಬೆಲೆ ಬರೋಬ್ಬರಿ 2,500 ರೂಪಾಯಿ ತಲುಪಿದೆ. ಹಬ್ಬಕ್ಕೆ ಹೂವು ಖರೀದಿಸಲೇಬೇಕಾದ ಅನಿವಾರ್ಯತೆ ಒಂದೆಡೆಯಾದ್ರೆ, ಬೆಲೆ ಏರಿಕೆ ಗ್ರಾಹಕರಿಗೆ ಮತ್ತೊಂದೆಡೆ ಹೊರೆಯಾಗಿದೆ.

ಹಣ್ಣುಗಳ ದರದಲ್ಲೂ ಏರಿಳಿತ
ಹೂವುಗಳಷ್ಟೇ ಅಲ್ಲ, ಹಣ್ಣುಗಳ ಖರೀದಿಗೂ ಜನರು ಮಾರುಕಟ್ಟೆಗೆ ಆಗಮಿಸಿದ್ದಾರೆ. ಕಪ್ಪು ದ್ರಾಕ್ಷಿ ಕೆಜಿಗೆ 200 ರೂಪಾಯಿ, ಹಸಿರು ದ್ರಾಕ್ಷಿ ಕೆಜಿಗೆ 280 ರೂಪಾಯಿ,ಕಿತ್ತಳೆ ಕೆಜಿಗೆ 100 ರೂಪಾಯಿ ದರವಿದೆ. ಸೇಬು ಕೆಜಿಗೆ 140ರಿಂದ 200 ರೂಪಾಯಿ, ಸಪೋಟ ಕೆಜಿಗೆ 100 ರೂಪಾಯಿ, ದಾಳಿಂಬೆ ಕೆಜಿಗೆ 200ರಿಂದ 250 ರೂಪಾಯಿ ದರವಿದೆ. ಇನ್ನು ಏಲಕ್ಕಿ ಬಾಳೆಹಣ್ಣಿನ ಬೆಲೆ 80 ರೂಪಾಯಿ ಇದೆ. ಹಬ್ಬದ ಪೂಜೆಗೆ ಬೇಕಾದ ಹಣ್ಣು, ಹೂವುಗಳನ್ನು ಖರೀದಿಸಲು ಬಂದ ಗ್ರಾಹಕರು ಬೆಲೆ ಏರಿಕೆಯಿಂದಾಗಿ ಖರ್ಚಿನ ಲೆಕ್ಕಾಚಾರ ಹಾಕುವಂತಾಗಿದೆ.

ಮಳೆಯಿಂದ ಹೂವಿನ ಬೆಳೆ ಹಾನಿ
ಕಳೆದ ಎರಡು ದಿನಗಳಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುರಿದ ಮಳೆ ಹೂವಿನ ಬೆಳೆಗಾರರಿಗೂ ಸಂಕಷ್ಟ ತಂದಿದೆ. ಮಳೆಯಿಂದ ಹೂವು ಕಟಾವು ಮಾಡಲು ರೈತರಿಗೆ ತೊಂದರೆಯಾಗಿದ್ದು, ಬೆಳೆ ಹಾನಿಯೂ ಸಂಭವಿಸಿದೆ. ಇದರಿಂದ ಮಾರುಕಟ್ಟೆಗೆ ಬರುವ ಹೂವುಗಳ ಪ್ರಮಾಣದ ಮೇಲೆ ಪರಿಣಾಮ ಬೀರಿದೆ. ಬೇಡಿಕೆ ಹೆಚ್ಚಿರುವ ಹಬ್ಬದ ಸಮಯದಲ್ಲೇ ಪೂರೈಕೆಗೆ ಅಡ್ಡಿಯಾಗಿರುವುದು ದರ ಏರಿಕೆಗೆ ಕಾರಣವಾಗಿದೆ. ಇನ್ನು ಹೂವು ಖರೀದಿಸಲು ಬಂದ ಗ್ರಾಹಕರೂ ಬೆಲೆ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಹಬ್ಬದ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಕೆ.ಆರ್‌. ಮಾರುಕಟ್ಟೆಯ ಸುತ್ತಮುತ್ತ ವಾಹನ ದಟ್ಟಣೆ ಉಂಟಾಗಿತ್ತು. ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ವಾಹನ ಸವಾರರು 
ಪರದಾಡುವಂತಾಯಿತು. ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ವಾಹನಗಳ ಓಡಾಟ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಟ್ಟರು.

ಒಟ್ಟಿನಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮದ ನಡುವೆ ಹೂವು, ಹಣ್ಣುಗಳ ಬೆಲೆ ಏರಿಕೆ ಗ್ರಾಹಕರಿಗೆ ಹೊರೆಯಾಗಿದೆ. ಮಳೆಯಿಂದ ಹೂವಿನ ಪೂರೈಕೆಗೆ ಹೊಡೆತ ಬಿದ್ದಿದ್ದು, ಹಬ್ಬದ ಖರೀದಿಯ ಖರ್ಚು ಹೆಚ್ಚಾಗಿದೆ. ಹೀಗಾಗಿ ಹಬ್ಬದ ಸಂಭ್ರಮದ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ಗ್ರಾಹಕರನ್ನು ಕಾಡುತ್ತಿದೆ.
 

Add Zee News as a Preferred Source
TAGS:
Kannada News