ಕೋಟ್ಯಾಂತರ ರೂ. ಆಸ್ತಿಯ ಒಡೆಯ ವಕೀಲ ಮಂಜುನಾಥ್ ಶೂಟೌಟ್... ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಪಾಯಿಂಟ್ ಬ್ಲಾಕ್‌ನಲ್ಲಿಟ್ಟು ವಕೀಲ ಮಂಜುನಾಥ ಎಂಬಾತನನ್ನು ಬರ್ಬರವಾಗಿ ಹ*ತ್ಯೆಗೈದಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ. ಬಾಡಿಗೆ ನೀಡುವ ನೆಪದಲ್ಲಿ ಬಂದಿದ್ದ ಇಬ್ಬರು ಬಿಹಾರಿಗಳು ಮಾಡಿದ್ದೇನು ಎಂಬ ವಿವರ ಇಲ್ಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ನಿನ್ನೆ ರಾತ್ರಿ ನಡೆದಿರುವ ಕೋಟ್ಯಾಂತರ ರೂಪಾಯಿ ಆಸ್ತಿಯೊಡೆಯ ವಕೀಲ ಮಂಜುನಾಥ್ ಹ**ತ್ಯೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಯಾರು ಈ ಲಾಯರ್ ಮಂಜುನಾಥ್, ಬಾಡಿಗೆ ಕೊಡುವ ನೆಪದಲ್ಲಿ ಮಂಜನಾಥ್ ಮನೆಗೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮಾಡಿದ್ದೇನು? ಮಂಜುನಾಥ್ ಹ**ತ್ಯೆ ಹಿಂದಿನ ಅಸಲಿ ಕಾರಣ ಏನು ಎಂಬ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..
ಹೌದು, ಅವರೊಬ್ಬರು ವೃತ್ತಿಯಲ್ಲಿ ವಕೀಲರಾಗಿದ್ರು. ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯ.. ಬರುವಂತ ಬಾಡಿಗೆ ಹಣದಲ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದ ವ್ಯಕ್ತಿ. ಆದರೆ, ನಿನ್ನೆ (ಅಕ್ಟೋಬರ್ 18, ಭಾನುವಾರದಂದು) ಬಾಡಿಗೆ ನೀಡುವ ನೆಪದಲ್ಲಿ ಮಂಜುನಾಥ್ ಮನೆಗೆ ಬಂದಿದ್ದ ಆ ಇಬ್ಬರು ಬಿಹಾರಿಗಳು ವಕೀಲನ ತಲೆಗೆ ಗುರಿಯಿಟ್ಟು ಶೂಟ್ ಮಾಡಿ ಎಸ್ಕೇಪ್ ಆಗಿದ್ದಾರೆ.
ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ:
ಮೃತ ಮಂಜುನಾಥ್ ಸುಮಾರು 40 ಕ್ಕೂ ಹೆಚ್ಚು ಮನೆಗಳನ್ನು ಹೊಂದಿದ್ದು ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಬಿಹಾರ ಮೂಲದ ನಾಲ್ಕು ಯುವಕರು ಕೂಡ ಮಂಜುನಾಥ್ ಅವರ ಒಂದು ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಆದರೆ, ಈ ಯುವಕರು ಕಳೆದ ಮೂರು ತಿಂಗಳಿನಿಂದಲೂ ಸರಿಯಾಗಿ ಬಾಡಿಗೆ ಕೊಡದೆ ಮನೆ ಮಾಲೀಕರನ್ನು ಸತಾಯಿಸುತ್ತಿದ್ದರು. ಇದರಿಂದಾಗಿ ಕುಪಿತಗೊಂಡಿದ್ದ ಮಂಜುನಾಥ್ ನಿನ್ನೆ ಆ ಯುವಕರಿಗೆ ಆದಷ್ಟು ಬೇಗ ಬಾಡಿಗೆ ಹಣವನ್ನು ನೀಡುವಂತೆ ಎಚ್ಚರಿಕೆ ನೀಡಿ ಬಂದಿದ್ದರು. ಈ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಸುಮಾರು 11:30 ರ ಸುಮಾರಿಗೆ ಬಿಹಾರಿ ಯುವಕರು ಬಾಡಿಗೆ ನೀಡುವ ನೆಪದಲ್ಲಿ ಮನೆಗೆ ಬಂದು ಡೋರ್ ಬೆಲ್ ಮಾಡಿದ್ದರು. ಆಗ ಬಂದು ಡೋರ್ ಓಪನ್ ಮಾಡಿದಾಗ ಓರ್ವ ಹಣವನ್ನು ಕೊಡಲು ನೋಟನ್ನು ಎಣಿಸಲು ಮುಂದಾಗಿದ್ದಾನೆ. ಈ ವೇಳೆ ಮತ್ತೊಬ್ಬ ಗನ್ ಹೊರತೆಗೆದು ಮಂಜುನಾಥ್ ಅವರ ತಲೆಗೆ ಶೂಟ್ ಮಾಡಿದ್ದು, ಬಳಿಕ ಬಾಡಿಗೆ ನೀಡಲೆಂದು ಬಂದಿದ್ದ ಇಬ್ಬರೂ ದುಷ್ಕರ್ಮಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಸ್ವಿಗ್ಗಿಯಲ್ಲಿ ಡೆಲಿವರಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು:
ಲಭ್ಯವಿರುವ ಮಾಹಿತಿಗಳ ಪ್ರಕಾರ, ವಕೀಲ ಮಂಜುನಾಥ್ ಭೀಕರ ಹ*ತ್ಯೆಯಲ್ಲಿ ಭಾಗಿಯಾಗಿರುವ ಆ ಇಬ್ಬರೂ ಆರೋಪಿಗಳು ಫುಡ್ ಡೆಲಿವರಿ ಆಪ್ ಸ್ವಿಗ್ಗಿಯಲ್ಲಿ ಡೆಲಿವರಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ಮಂಜುನಾಥ್ ಮನೆಗೆ ಬಂದಾಗ ಇಬ್ಬರೂ ಕೂಡ ಒಂದೊಂದು ಗಾಡಿಯಲ್ಲಿ ಬಂದಿದ್ದರು. ಕೃತ್ಯ ಎಸಗಿ ಹಿಂದಿರುಗುವಾಗ ಯಾವುದೇ ಭಯವಿಲ್ಲದೆ ರಾಜರೋಷವಾಗಿ ಬೈಕ್‌ನಲ್ಲಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಶೂಟೌಟ್ ಆಗುತ್ತಿದ್ದಂತೆ ಗಾಬರಿಗೊಂಡ ಮನೆಯಲ್ಲಿದ್ದವರು ಓಡಿ ಬಂದು ನೋಡಿದಾಗ ಮಂಜುನಾಥ್ ಕುಸಿದು ನೆಲದ ಮೇಲೆ ಬಿದ್ದದ್ದರು. ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಘಟನೆ ಸಂಬಂಧ ಮಂಜುನಾಥ್ ಸಹೋದರ ಮುನಿರಾಜು ಕೊಟ್ಟ ದೂರಿನ ಮೇರೆಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿ ಹ*ತ್ಯೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವೈಟ್ ಫೀಲ್ಡ್ ಪೋಲಿಸರ ಜೊತೆ ಸಿಸಿಬಿ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಆರೋಪಿಗಳು ವಾಸವಿದ್ದ ಮನೆಯಲ್ಲೂ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಕೆಲವು ಖಾಲಿ ಮದ್ಯದ ಬಾಟಲಿಗಳು ಹಾಗೂ ಹೆಲ್ಮೆಟ್‌ಗಳಷ್ಟೇ ಪತ್ತೆ ಆಗಿವೆ ಎನ್ನಲಾಗಿದೆ.
ಅದೇನೇ ಇರಲಿ ಕೇವಲ 5 ಸಾವಿರಕ್ಕೆ ಆರೋಪಿಗಳು ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹ*ತ್ಯೆಗೈದಿರುವುದು ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಕೋಟ್ಯಾಂತರ ರೂಪಾಯಿ ಒಡೆಯನ ಈ ಹ*ತ್ಯೆಯ ಹಿಂದೆಸುಪಾರಿ ಹಂತಕರ ಕೈವಾಡ ಇದ್ಯಾ ಅನ್ನೋದನ್ನ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.