• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ! ಯಾವ್ಯಾವ ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟಿದೆ?

ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ! ಯಾವ್ಯಾವ ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟಿದೆ?

ಇಂದಿನ ಮಾರುಕಟ್ಟೆ ದರಗಳ ಪ್ರಕಾರ, ಸುಳ್ಯ ಎಪಿಎಂಸಿಯಲ್ಲಿ ಓಲ್ಡ್ ವೆರೈಟಿ ಅಡಿಕೆಗೆ ₹55,000 ಗರಿಷ್ಠ ದರ ದಾಖಲಾಗಿದೆ. ಹೊಸನಗರದಲ್ಲಿ ರಾಶಿ ಅಡಿಕೆಗೆ ₹49,395, ದೊಡ್ಡಬಳ್ಳಾಪುರದಲ್ಲಿ ಪುಡಿ ಅಡಿಕೆಗೆ ₹48,700 ಹಾಗೂ ಕುಂದಾಪುರದಲ್ಲಿ ಹಳೆ ಚಾಳಿ ಅಡಿಕೆಗೆ ₹47,500 ಗರಿಷ್ಠ ದರ ಲಭಿಸಿದೆ. ಮಾರುಕಟ್ಟೆ ಮತ್ತು ಅಡಿಕೆಯ ತಳಿಗೆ ಅನುಗುಣವಾಗಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.

Written ByPuttaraj K Alur
Published: Oct 19, 2026, 06:44 PM IST|Updated: Oct 19, 2026, 07:05 PM IST
joinshare
ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ! ಯಾವ್ಯಾವ ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟಿದೆ?
Image Credit: Arecanut Price

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
Rajinikanth Property: ಪತ್ನಿ.. ಮಕ್ಕಳಿಗೆ ಅಲ್ಲ, ₹430 ಕೋಟಿ ಆಸ್ತಿಯನ್ನು ಇವರ ಹೆಸರಿಗೆ ಬರೆಯಲು ಸಿದ್ಧರಾದ ನಟ ರಜನಿಕಾಂತ್‌ !

Rajinikanth Property: ಪತ್ನಿ.. ಮಕ್ಕಳಿಗೆ ಅಲ್ಲ, ₹430 ಕೋಟಿ ಆಸ್ತಿಯನ್ನು ಇವರ ಹೆಸರಿಗೆ ಬರೆಯಲು ಸಿದ್ಧರಾದ ನಟ ರಜನಿಕಾಂತ್‌ !

2

ಮನೆಯ ಪೇಟಿಂಗ್ ಕೆಲಸಕ್ಕೆ ಬಂದವನು ಮನೆಯೊಡತಿಯನ್ನೆ ಪಟಾಯಿಸಿದ್ದ, ಅನೈತಿಕ ಸಂಬಂಧಕ್ಕೆ ಗಂಡನ ಚಟ್ಟ ಕಟ್ಟಿದ ಹೆಂಡತಿ

3

ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ! ಯಾವ್ಯಾವ ಮಾರುಕಟ್ಟೆಯಲ್ಲಿ ಇಂದಿನ ದರ ಎಷ್ಟಿದೆ?

4

ದೀಪಾವಳಿಗೂ ಮುನ್ನ ರೈತರ ಖಾತೆಗಳಿಗೆ 2,000 ರೂಪಾಯಿ ಹಣ ಜಮೆ ಮಾಡುತ್ತಾ ಕೇಂದ್ರ ಸರ್ಕಾರ!?

5

IPL 2027 ಮಿನಿ ಹರಾಜಿಗೆ ಡೇಟ್ ಫಿಕ್ಸ್: RCBಯಿಂದ ನಾಲ್ವರು ಔಟ್? ಇಲ್ಲಿದೆ ಮಾಹಿತಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Arecanut Price Today: ರಾಜ್ಯದ ವಿವಿಧ ಎಪಿಎಂಸಿ ಮಾರುಕಟ್ಟೆಗಳಲ್ಲಿ ಅಡಿಕೆ ವಹಿವಾಟು ನಡೆದಿದ್ದು, ತಳಿ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಕ್ಟೋಬರ್ 19ರ ಮಾರುಕಟ್ಟೆ ದರಗಳ ಪ್ರಕಾರ, ಸುಳ್ಯ ಎಪಿಎಂಸಿಯಲ್ಲಿ ಓಲ್ಡ್ ವೆರೈಟಿ ಅಡಿಕೆಗೆ ಗರಿಷ್ಠ ₹55,000 ದರ ದಾಖಲಾಗಿದೆ. ಹೊಸನಗರದಲ್ಲಿ ರಾಶಿ ಅಡಿಕೆಗೆ ₹49,395 ಗರಿಷ್ಠ ದರ ದೊರೆತಿದ್ದು, ದೊಡ್ಡಬಳ್ಳಾಪುರದಲ್ಲಿ ಪುಡಿ ಅಡಿಕೆಯ ಗರಿಷ್ಠ ದರ ₹48,700 ತಲುಪಿದೆ.

ಸುಳ್ಯದಲ್ಲಿ ಅಡಿಕೆಗೆ ₹55 ಸಾವಿರ ಗರಿಷ್ಠ ದರ

ಸುಳ್ಯ ಎಪಿಎಂಸಿಯಲ್ಲಿ ಓಲ್ಡ್ ವೆರೈಟಿ ಅಡಿಕೆಗೆ ಕನಿಷ್ಠ ₹39,000, ಗರಿಷ್ಠ ₹55,000 ಹಾಗೂ ಮೋಡಲ್ ಬೆಲೆ ₹48,500 ದಾಖಲಾಗಿದೆ. ಬಂಟ್ವಾಳ ಮಾರುಕಟ್ಟೆಯಲ್ಲಿ ನ್ಯೂ ವೆರೈಟಿ ಅಡಿಕೆಗೆ ₹27,000ರಿಂದ ₹47,500ರವರೆಗೆ ಬೆಲೆ ದಾಖಲಾಗಿದ್ದು, ಮೋಡಲ್ ಬೆಲೆ ₹34,500 ಆಗಿದೆ. ಪುತ್ತೂರು ಎಪಿಎಂಸಿಯಲ್ಲಿ ಇದೇ ತಳಿಯ ಅಡಿಕೆಗೆ ಕನಿಷ್ಠ ₹30,000, ಗರಿಷ್ಠ ₹35,000 ಹಾಗೂ ಮೋಡಲ್ ಬೆಲೆ ₹32,500 ದಾಖಲಾಗಿದೆ.

ಹೊಸನಗರ, ಸಿದ್ದಾಪುರ ಮತ್ತು ಶಿರಸಿಯಲ್ಲಿ ರಾಶಿ ಅಡಿಕೆ ದರ

ಹೊಸನಗರ ಎಪಿಎಂಸಿಯಲ್ಲಿ ರಾಶಿ ಅಡಿಕೆಗೆ ಕನಿಷ್ಠ ₹46,321, ಗರಿಷ್ಠ ₹49,395 ಹಾಗೂ ಮೋಡಲ್ ಬೆಲೆ ₹47,941 ದಾಖಲಾಗಿದೆ. ಸಿದ್ದಾಪುರದಲ್ಲಿ ರಾಶಿ ಅಡಿಕೆಯ ಗರಿಷ್ಠ ದರ ₹46,099 ಮತ್ತು ಮೋಡಲ್ ಬೆಲೆ ₹45,899 ಆಗಿದೆ. ಶಿರಸಿ ಎಪಿಎಂಸಿಯಲ್ಲಿ ರಾಶಿ ಅಡಿಕೆಗೆ ಕನಿಷ್ಠ ₹43,599, ಗರಿಷ್ಠ ₹46,599 ಹಾಗೂ ಮೋಡಲ್ ಬೆಲೆ ₹45,464 ದಾಖಲಾಗಿದೆ. ಶಿಕಾರಿಪುರದಲ್ಲಿ ರಾಶಿ ಅಡಿಕೆಯ ಗರಿಷ್ಠ ದರ ₹40,500 ಆಗಿದ್ದು, ಮೋಡಲ್ ಬೆಲೆ ₹36,864 ದಾಖಲಾಗಿದೆ. ಈ ದರಗಳು ಮಾರುಕಟ್ಟೆ ಮತ್ತು ತಳಿಗೆ ಅನುಗುಣವಾಗಿ ಬದಲಾಗುತ್ತವೆ. ಆದ್ದರಿಂದ ರೈತರು ತಮ್ಮ ಅಡಿಕೆಯ ಗುಣಮಟ್ಟ, ತೇವಾಂಶ ಮತ್ತು ತಳಿಯನ್ನ ಪರಿಗಣಿಸಿ ಸ್ಥಳೀಯ ಮಾರುಕಟ್ಟೆಯ ದರಗಳನ್ನ ಪರಿಶೀಲಿಸುವುದು ಸೂಕ್ತ.

ಕುಂದಾಪುರ ಮತ್ತು ಹೊನ್ನಾವರದಲ್ಲಿ ಚಾಳಿ ಅಡಿಕೆ ವಹಿವಾಟು

ಕುಂದಾಪುರ ಎಪಿಎಂಸಿಯಲ್ಲಿ ಹಳೆ ಚಾಳಿ ಅಡಿಕೆಗೆ ಗರಿಷ್ಠ ₹47,500 ಮತ್ತು ಮೋಡಲ್ ಬೆಲೆ ₹47,000 ದಾಖಲಾಗಿದೆ. ಹೊಸ ಚಾಳಿ ಅಡಿಕೆಗೆ ಗರಿಷ್ಠ ₹33,000 ಹಾಗೂ ಮೋಡಲ್ ಬೆಲೆ ₹30,000 ಆಗಿದೆ. ಹೊನ್ನಾವರದಲ್ಲಿ ಹಳೆ ಚಾಳಿ ಅಡಿಕೆಗೆ ಗರಿಷ್ಠ ₹42,000 ಮತ್ತು ಮೋಡಲ್ ಬೆಲೆ ₹41,000 ದಾಖಲಾಗಿದೆ. ಹೊಸ ಚಾಳಿ ಅಡಿಕೆಗೆ ಗರಿಷ್ಠ ₹37,000 ಹಾಗೂ ಮೋಡಲ್ ಬೆಲೆ ₹36,000 ಆಗಿದೆ. ಕುಮಟಾ ಮಾರುಕಟ್ಟೆಯಲ್ಲಿ ಹಳೆ ಚಾಳಿ ಅಡಿಕೆಗೆ ಗರಿಷ್ಠ ₹43,399 ಮತ್ತು ಮೋಡಲ್ ಬೆಲೆ ₹41,759 ದಾಖಲಾಗಿದೆ. ಹೊಸ ಚಾಳಿ ಅಡಿಕೆಯ ಗರಿಷ್ಠ ದರ ₹32,300 ಆಗಿದ್ದು, ಮೋಡಲ್ ಬೆಲೆ ₹31,699 ಇದೆ.

ಇತರ ಮಾರುಕಟ್ಟೆಗಳ ಅಡಿಕೆ ದರ

ತೀರ್ಥಹಳ್ಳಿ ಎಪಿಎಂಸಿಯಲ್ಲಿ ರಾಶಿ ಅಡಿಕೆಗೆ ₹38,511 ಮತ್ತು ಗೋರಬಲು ಅಡಿಕೆಗೆ ₹29,232 ಮೋಡಲ್ ಬೆಲೆ ದಾಖಲಾಗಿದೆ. ಸಿಪ್ಪೆಗೋಟು ಅಡಿಕೆಯ ಮೋಡಲ್ ಬೆಲೆ ₹14,000 ಆಗಿದೆ. ಭದ್ರಾವತಿಯಲ್ಲಿ ಸಿಪ್ಪೆಗೋಟು ಅಡಿಕೆಗೆ ₹10,200ರಿಂದ ₹11,000ರವರೆಗೆ ದರ ದಾಖಲಾಗಿದ್ದು, ಹೊನ್ನಾಳಿಯಲ್ಲಿ ಮೋಡಲ್ ಬೆಲೆ ₹11,000 ಆಗಿದೆ. ಹೊಸನಗರದಲ್ಲಿ ಚಾಳಿ ಅಡಿಕೆಗೆ ₹35,689 ಗರಿಷ್ಠ ದರ ಮತ್ತು ₹33,707 ಮೋಡಲ್ ಬೆಲೆ ದಾಖಲಾಗಿದೆ.

ಸಿದ್ದಾಪುರದಲ್ಲಿ ಚಾಳಿ ಅಡಿಕೆಗೆ ಗರಿಷ್ಠ ₹43,899 ಮತ್ತು ಮೋಡಲ್ ಬೆಲೆ ₹42,699 ದಾಖಲಾಗಿದ್ದರೆ, ಕೆಂಪುಗೋಟು ಅಡಿಕೆಗೆ ಗರಿಷ್ಠ ₹31,099 ಮತ್ತು ಮೋಡಲ್ ಬೆಲೆ ₹30,399 ಆಗಿದೆ. ಶಿರಸಿಯಲ್ಲಿ ಚಾಳಿ ಅಡಿಕೆಯ ಗರಿಷ್ಠ ದರ ₹47,100 ಹಾಗೂ ಮೋಡಲ್ ಬೆಲೆ ₹43,321 ದಾಖಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಪುಡಿ ಅಡಿಕೆಗೆ ₹25,000ರಿಂದ ₹48,700ರವರೆಗೆ ದರ ದಾಖಲಾಗಿದ್ದು, ಮೋಡಲ್ ಬೆಲೆ ₹48,700 ಆಗಿದೆ. ಹೊಳಲ್ಕೆರೆಯಲ್ಲಿ ಇತರೆ ತಳಿಯ ಅಡಿಕೆಗೆ ಗರಿಷ್ಠ ₹27,000 ಮತ್ತು ಮೋಡಲ್ ಬೆಲೆ ₹26,140 ದಾಖಲಾಗಿದೆ.

ರೈತರು ಗಮನಿಸಬೇಕಾದ ಅಂಶ

ಒಟ್ನಲ್ಲಿ ಇಂದಿನ ಅಡಿಕೆಯ ದರಪಟ್ಟಿಯಲ್ಲಿ ಸುಳ್ಯದಲ್ಲಿ ಓಲ್ಡ್ ವೆರೈಟಿ ಅಡಿಕೆಗೆ ₹55,000 ಗರಿಷ್ಠ ದರ ದಾಖಲಾಗಿರುವುದು ಗಮನಾರ್ಹವಾಗಿದೆ. ಹೊಸನಗರ, ದೊಡ್ಡಬಳ್ಳಾಪುರ, ಕುಂದಾಪುರ, ಶಿರಸಿ ಮತ್ತು ಸಿದ್ದಾಪುರ ಮಾರುಕಟ್ಟೆಗಳಲ್ಲಿಯೂ ಕೆಲವು ತಳಿಗಳಿಗೆ ಉತ್ತಮ ಗರಿಷ್ಠ ದರಗಳು ದಾಖಲಾಗಿವೆ.

Add Zee News as a Preferred Source
TAGS:
Business
Kannada News