• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಕೋಟ್ಯಾಂತರ ರೂ. ಆಸ್ತಿಯ ಒಡೆಯ ವಕೀಲ ಮಂಜುನಾಥ್‌ ಶೂಟೌಟ್...‌ ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

ಕೋಟ್ಯಾಂತರ ರೂ. ಆಸ್ತಿಯ ಒಡೆಯ ವಕೀಲ ಮಂಜುನಾಥ್‌ ಶೂಟೌಟ್...‌ ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

ಪಾಯಿಂಟ್ ಬ್ಲಾಕ್‌ನಲ್ಲಿಟ್ಟು ವಕೀಲ ಮಂಜುನಾಥ ಎಂಬಾತನನ್ನು ಬರ್ಬರವಾಗಿ ಹ*ತ್ಯೆಗೈದಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ. ಬಾಡಿಗೆ ನೀಡುವ ನೆಪದಲ್ಲಿ ಬಂದಿದ್ದ ಇಬ್ಬರು ಬಿಹಾರಿಗಳು ಮಾಡಿದ್ದೇನು ಎಂಬ ವಿವರ ಇಲ್ಲಿದೆ.

Written ByYashaswini V
Published: Oct 19, 2026, 04:18 PM IST|Updated: Oct 19, 2026, 04:24 PM IST
joinshare
ಕೋಟ್ಯಾಂತರ ರೂ. ಆಸ್ತಿಯ ಒಡೆಯ ವಕೀಲ ಮಂಜುನಾಥ್‌ ಶೂಟೌಟ್...‌ ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಮಧುಮೇಹಕ್ಕೆ ಮದ್ದು ಈ ತರಕಾರಿಯ ರಸ... ಈ ರೀತಿ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್‌ ಕೂಡ ಕರಗುವುದು!

ಮಧುಮೇಹಕ್ಕೆ ಮದ್ದು ಈ ತರಕಾರಿಯ ರಸ... ಈ ರೀತಿ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್‌ ಕೂಡ ಕರಗುವುದು!

2

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಧರಿಸುವ ಮೈಕ್‌ ಬೆಲೆ ಎಷ್ಟು ಗೊತ್ತಾ?

3

Viral Video: ಪ್ರಾರ್ಥನೆ ವೇಳೆಯೇ ಪಾದ್ರಿಯ ಮೇಲೆ ಬಿದ್ದ ಬೃಹತ್ ಶಿಲುಬೆ! ಮುಂದೇನಾಯ್ತು ನೋಡಿ

4

ಸಿಕ್ಸ್ ಪ್ಯಾಕ್ ಹಿಂದಿದೆ ಈ ಸೀಕ್ರೆಟ್‌! ಟೈಗರ್ ಶ್ರಾಫ್ ದಿನಚರಿ ಹೇಗಿದೆ ಗೊತ್ತಾ?

5

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋ*ಟ: 6 ಮಂದಿಗೆ ಗಂಭೀರ ಗಾಯ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಸಿಲಿಕಾನ್‌ ಸಿಟಿ ಬೆಂಗಳೂರಿನ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ನಿನ್ನೆ ರಾತ್ರಿ ನಡೆದಿರುವ ಕೋಟ್ಯಾಂತರ ರೂಪಾಯಿ ಆಸ್ತಿಯೊಡೆಯ ವಕೀಲ ಮಂಜುನಾಥ್‌ ಹ**ತ್ಯೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಯಾರು ಈ ಲಾಯರ್‌ ಮಂಜುನಾಥ್‌, ಬಾಡಿಗೆ ಕೊಡುವ ನೆಪದಲ್ಲಿ ಮಂಜನಾಥ್‌ ಮನೆಗೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮಾಡಿದ್ದೇನು? ಮಂಜುನಾಥ್‌ ಹ**ತ್ಯೆ ಹಿಂದಿನ ಅಸಲಿ ಕಾರಣ ಏನು ಎಂಬ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..

ಹೌದು, ಅವರೊಬ್ಬರು ವೃತ್ತಿಯಲ್ಲಿ ವಕೀಲರಾಗಿದ್ರು. ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯ.. ಬರುವಂತ ಬಾಡಿಗೆ ಹಣದಲ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದ ವ್ಯಕ್ತಿ. ಆದರೆ, ನಿನ್ನೆ (ಅಕ್ಟೋಬರ್‌ 18, ಭಾನುವಾರದಂದು) ಬಾಡಿಗೆ ನೀಡುವ ನೆಪದಲ್ಲಿ ಮಂಜುನಾಥ್‌ ಮನೆಗೆ ಬಂದಿದ್ದ ಆ ಇಬ್ಬರು ಬಿಹಾರಿಗಳು ವಕೀಲನ ತಲೆಗೆ ಗುರಿಯಿಟ್ಟು ಶೂಟ್ ಮಾಡಿ ಎಸ್ಕೇಪ್ ಆಗಿದ್ದಾರೆ.  

ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ:
ಮೃತ ಮಂಜುನಾಥ್‌ ಸುಮಾರು 40 ಕ್ಕೂ ಹೆಚ್ಚು ಮನೆಗಳನ್ನು ಹೊಂದಿದ್ದು ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಬಿಹಾರ ಮೂಲದ ನಾಲ್ಕು ಯುವಕರು ಕೂಡ ಮಂಜುನಾಥ್‌ ಅವರ ಒಂದು ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಆದರೆ, ಈ ಯುವಕರು ಕಳೆದ ಮೂರು ತಿಂಗಳಿನಿಂದಲೂ ಸರಿಯಾಗಿ ಬಾಡಿಗೆ ಕೊಡದೆ ಮನೆ ಮಾಲೀಕರನ್ನು ಸತಾಯಿಸುತ್ತಿದ್ದರು. ಇದರಿಂದಾಗಿ ಕುಪಿತಗೊಂಡಿದ್ದ ಮಂಜುನಾಥ್‌ ನಿನ್ನೆ ಆ ಯುವಕರಿಗೆ ಆದಷ್ಟು ಬೇಗ ಬಾಡಿಗೆ ಹಣವನ್ನು ನೀಡುವಂತೆ ಎಚ್ಚರಿಕೆ ನೀಡಿ ಬಂದಿದ್ದರು. ಈ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಸುಮಾರು 11:30 ರ ಸುಮಾರಿಗೆ ಬಿಹಾರಿ ಯುವಕರು ಬಾಡಿಗೆ ನೀಡುವ ನೆಪದಲ್ಲಿ ಮನೆಗೆ ಬಂದು ಡೋರ್ ಬೆಲ್ ಮಾಡಿದ್ದರು. ಆಗ ಬಂದು ಡೋರ್‌ ಓಪನ್ ಮಾಡಿದಾಗ ಓರ್ವ ಹಣವನ್ನು ಕೊಡಲು ನೋಟನ್ನು ಎಣಿಸಲು ಮುಂದಾಗಿದ್ದಾನೆ. ಈ ವೇಳೆ ಮತ್ತೊಬ್ಬ ಗನ್ ಹೊರತೆಗೆದು ಮಂಜುನಾಥ್‌ ಅವರ ತಲೆಗೆ ಶೂಟ್‌ ಮಾಡಿದ್ದು, ಬಳಿಕ ಬಾಡಿಗೆ ನೀಡಲೆಂದು ಬಂದಿದ್ದ ಇಬ್ಬರೂ ದುಷ್ಕರ್ಮಿಗಳು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.

ಸ್ವಿಗ್ಗಿಯಲ್ಲಿ ಡೆಲಿವರಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು:
ಲಭ್ಯವಿರುವ ಮಾಹಿತಿಗಳ ಪ್ರಕಾರ, ವಕೀಲ ಮಂಜುನಾಥ್‌ ಭೀಕರ ಹ*ತ್ಯೆಯಲ್ಲಿ ಭಾಗಿಯಾಗಿರುವ ಆ ಇಬ್ಬರೂ ಆರೋಪಿಗಳು ಫುಡ್‌ ಡೆಲಿವರಿ ಆಪ್‌ ಸ್ವಿಗ್ಗಿಯಲ್ಲಿ ಡೆಲಿವರಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ಮಂಜುನಾಥ್‌ ಮನೆಗೆ ಬಂದಾಗ ಇಬ್ಬರೂ ಕೂಡ ಒಂದೊಂದು ಗಾಡಿಯಲ್ಲಿ ಬಂದಿದ್ದರು. ಕೃತ್ಯ ಎಸಗಿ ಹಿಂದಿರುಗುವಾಗ ಯಾವುದೇ ಭಯವಿಲ್ಲದೆ ರಾಜರೋಷವಾಗಿ ಬೈಕ್‌ನಲ್ಲಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಶೂಟೌಟ್‌ ಆಗುತ್ತಿದ್ದಂತೆ ಗಾಬರಿಗೊಂಡ ಮನೆಯಲ್ಲಿದ್ದವರು ಓಡಿ ಬಂದು ನೋಡಿದಾಗ ಮಂಜುನಾಥ್‌ ಕುಸಿದು ನೆಲದ ಮೇಲೆ ಬಿದ್ದದ್ದರು. ಕೂಡಲೇ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಘಟನೆ ಸಂಬಂಧ ಮಂಜುನಾಥ್ ಸಹೋದರ ಮುನಿರಾಜು ಕೊಟ್ಟ ದೂರಿನ ಮೇರೆಗೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿ ಹ*ತ್ಯೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವೈಟ್ ಫೀಲ್ಡ್ ಪೋಲಿಸರ ಜೊತೆ ಸಿಸಿಬಿ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಆರೋಪಿಗಳು ವಾಸವಿದ್ದ ಮನೆಯಲ್ಲೂ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಕೆಲವು ಖಾಲಿ ಮದ್ಯದ ಬಾಟಲಿಗಳು ಹಾಗೂ ಹೆಲ್ಮೆಟ್‌ಗಳಷ್ಟೇ ಪತ್ತೆ ಆಗಿವೆ ಎನ್ನಲಾಗಿದೆ.

ಅದೇನೇ ಇರಲಿ ಕೇವಲ 5 ಸಾವಿರಕ್ಕೆ ಆರೋಪಿಗಳು ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹ*ತ್ಯೆಗೈದಿರುವುದು ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಕೋಟ್ಯಾಂತರ ರೂಪಾಯಿ ಒಡೆಯನ ಈ ಹ*ತ್ಯೆಯ ಹಿಂದೆಸುಪಾರಿ ಹಂತಕರ ಕೈವಾಡ ಇದ್ಯಾ ಅನ್ನೋದನ್ನ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. 

Add Zee News as a Preferred Source
TAGS:
Crime
Kannada News