SOCIAL MEDIA

Newsletter

PARTNER SITES
Select Language Select State

“ವಾರ್ಡ್ ಒನ್” ಅಭಿಯಾನಕ್ಕೆ ಚಾಲನೆ! ಇಂದಿನಿಂದ ಖಾತಾ ಮೇಳ ಆರಂಭ

ಬೆಂಗಳೂರಿನಲ್ಲಿ ಮತ್ತೆ ʼನನ್ನ ಇ-ಖಾತಾ ನನ್ನ ಹಕ್ಕುʼ ಕಾರ್ಯಕ್ರಮಕ್ಕೆ ಇಂದಿನಿಂದ ಮತ್ತೆ ಚಾಲನೆ ಸಿಗಲಿದ್ದು, ನಾಳೆಯಿಂದ (ನ. 1) ʼವಾರ್ಡ್‌ ಒನ್ʼ ಎಂಬ ವಿನೂತನ ಅಭಿಯಾನವೂ ಆರಂಭವಾಗಲಿದೆ.

Written By Yashaswini V
Published: Oct 31, 2026, 09:46 AM IST | Updated: Oct 31, 2026, 09:48 AM IST
Join

ಅಕ್ಟೋಬರ್‌ 31ರಂದು ಬೆಂಗಳೂರಿನಲ್ಲಿ ʼನನ್ನ ಇ-ಖಾತಾ ನನ್ನ ಹಕ್ಕುʼ ಯೋಜನೆಯಡಿ ಖಾತಾ ಮೇಳವು ಮತ್ತೆ ಆರಂಭಗೊಳ್ಳಲಿದೆ. ನವೆಂಬರ್‌ 1ರಿಂದ ವಾರ್ಡ್‌ ಒನ್‌ ಎಂಬ ನೂತನ ಅಭಿಯಾನಕ್ಕೆ ಚಾಲನೆ ಸಿಗಲಿದೆ.

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ 62 ಸ್ಥಳಗಳಲ್ಲಿ ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನವೂ ಮತ್ತೆ ಆರಂಭ:
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 62 ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಇಂದಿನಿಂದ ಮತ್ತೆ ʼನನ್ನ ಇ-ಖಾತಾ ನನ್ನ ಹಕ್ಕುʼ ಅಭಿಯಾನವೂ ಮತ್ತೆ ಆರಂಭವಾಗಲಿದೆ. ನಾಗರಿಕರು ಇ-ಖಾತಾಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಸುಲಭವಾಗಿ ಪಡೆಯಲು ಖಾತಾ ಮೇಳ ಆಯೋಜನೆ ಮಾಡಲಾಗಿದುದ ನಗರದಾದ್ಯಂತ
62 ಸ್ಥಳಗಳಲ್ಲಿ ಈ ಮೇಳ ನಡೆಯಲಿದೆ.

ನಾಗರಿಕರು ಇದರ ಪ್ರಯೋಜನವನ್ನು ಪಡೆಯಲು https://gba.karnataka.gov.in/download/openhousevenues.pdf ಲಿಂಕ್‌ ಗೆ ಭೇಟಿ ನೀಡಿ ಹತ್ತಿರವಿರುವ ಅಭಿಯಾನದ ಸ್ಥಳಗಳಿಗೆ ಭೇಟಿ ನೀಡಬಹುದು. ಇ-ಖಾತಾ ಮಾಹಿತಿಗಾಗಿ ಪಾಲಿಕೆ ಕಂದಾಯ ವಿಭಾಗದ ಸಹಾಯವಾಣಿ ಸಂಖ್ಯೆ 9480683695 ಕರೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.

ಇ-ಖಾತಾ ಸೇವೆಗಳನ್ನು ಪಡೆಯುವ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ನೀಡುವ ವಿಡಿಯೋಗಳನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಯೂಟ್ಯೂಬ್ https://youtube.com/@revenuebmp?si=8Jh4AVM18g-stdgf ಲಿಂಕ್ ಮೂಲಕ ಈ ಕುರಿತ ಮಾಹಿತಿಯನ್ನೂ ಪಡೆಯಬಹುದು. ನಾಗರಿಕರು ಈ ವಿಡಿಯೋಗಳನ್ನು ವೀಕ್ಷಿಸುವ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಬಹುದು.

ಸಾರ್ವಜನಿಕರು ಜಿಬಿಎ ಇ-ಆಸ್ತಿ ಪೋರ್ಟಲ್‌ಗೆ ಭೇಟಿ ನೀಡಿ ಸ್ವತಃ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಜೊತೆಗೆ ನಾಗರಿಕರು ತಮ್ಮ ಸಮೀಪದ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ, ₹45 ಶುಲ್ಕ ಪಾವತಿಸುವ ಮೂಲಕ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು.

“ವಾರ್ಡ್ ಒನ್” ಅಭಿಯಾನ:
ವಾರ್ಡ್ ಮಟ್ಟದಿಂದ ಅಭಿವೃದ್ದಿಗೆ ಸಹಾಯವಾಗುವ ನಿಟ್ಟಿನಲ್ಲಿ ಇಂದಿನಿಂದ “ವಾರ್ಡ್ ಒನ್” ಹೊಸ ಅಭಿಯಾನಕ್ಕೆ ಸಿಗಲಿದೆ ಚಾಲನೆ. 43 ವಾರ್ಡ್‌ಗಳಲ್ಲಿ ಇಂದು “ವಾರ್ಡ್ ಒನ್” ಅಭಿಯಾನಕ್ಕೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಳಿ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರಿಂದ ಇಂದು ಚಾಲನೆ ನೀಡಲಿದ್ದಾರೆ.

 

ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದೊಂದಿಗೆ ನಡೆಯಲಿರುವ ವಾರ್ಡ್ ಒನ್ ಅಭಿಯಾನದಲ್ಲಿ ಆಯಾ ನಗರ ಪಾಲಿಕೆಗಳು ಬೆಸ್ಕಾಂ, ಜಲಮಂಡಳಿ, ಮೆಟ್ರೋ, ಸಾರಿಗೆ, ಸಂಚಾರ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯದೊಂದಿಗೆ ಜಂಕ್ಷನ್‌ಗಳ ಸ್ವಚ್ಛತೆ, ರಸ್ತೆ ಗುಂಡಿಗಳ ಮುಚ್ಚುವಿಕೆ, ರಸ್ತೆ ಮೇಲ್ಮೈ ದುರಸ್ತಿ, ಪಾದಚಾರಿ ಕ್ರಾಸಿಂಗ್ ಸೇರಿದಂತೆ ಅಗತ್ಯ ಕಾಮಗಾರಿಗಳು ನಡೆಲಿದೆ.

“ವಾರ್ಡ್ ಒನ್” ಅಭಿಯಾನದಲ್ಲಿ ನಾಗರಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಭಾಗವಹಿಸಲಿದ್ದಾರೆ. ಐದು ನಗರ ಪಾಲಿಕೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಆಯ್ಕೆ ಮಾಡಿರುವ ವಾರ್ಡ್‌ಗಳ ವಿವರ ಈ ಕೆಳಕಂಡಂತಿದೆ:

- ಕೇಂದ್ರ ನಗರ ಪಾಲಿಕೆ: 6 ವಾರ್ಡ್‌ಗಳು
- ಉತ್ತರ ನಗರ ಪಾಲಿಕೆ: 7 ವಾರ್ಡ್‌ಗಳು
- ದಕ್ಷಿಣ ನಗರ ಪಾಲಿಕೆ: 12 ವಾರ್ಡ್‌ಗಳು
- ಪಶ್ಚಿಮ ನಗರ ಪಾಲಿಕೆ: 10 ವಾರ್ಡ್‌ಗಳು
- ಪೂರ್ವ ನಗರ ಪಾಲಿಕೆ: 8 ವಾರ್ಡ್‌ಗಳು
ಸೇರಿದಂತೆ ಒಟ್ಟು: 43 ವಾರ್ಡ್‌ಗಳ ಆಯ್ಕೆ

ಅಭಿಯಾನದಲ್ಲಿ ಮೆಟ್ರೋ, ಬೆಸ್ಕಾಂ, ಕೆಎಸ್‌ಆರ್‌ಟಿಸಿ, ಜಲಮಂಡಳಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES