SOCIAL MEDIA

Newsletter

PARTNER SITES
Select Language Select State

ಕೋಟಿ ಕೋಟಿ ಆಸ್ತಿ ಒಡೆಯ ಸಾವಿರ ರೂಪಾಯಿ ಬಾಡಿಗೆಗೆ ಕೊಲೆಯಾದ್ರ..! ವಕೀಲನ ಮರ್ಡರ್ ಕೇಸ್ ನಲ್ಲಿ ಅನುಮಾನ..!

lowyer murder : ಅದು ಸಿಲಿಕಾನ್ ಸಿಟಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ವಕೀಲ್ ಸಾಬ್ ಮರ್ಡರ್.. ಆ ಸಾಹುಕಾರ್ ವಕೀಲ ಕೊಲೆಯ ಹಿಂದೆ ಹಲವು ಅನುಮಾನಗಳ ಹುತ್ತ ಬೆಳೆದಿದೆ.. ಕೇವಲ‌ ಬಾಡಿಗೆ ಹಣಕ್ಕಾಗಿಯೇ ಬರ್ಬರ ಹತ್ಯೆ ನಡೆಯಿತೇ..? ಇಲ್ಲ ಮರ್ಡರ್ ಮೇ ಬೇರೆಯದ್ದೇ ಕಹಾನಿ ಇದ್ಯಾ ಅನ್ನೋ ಡೌಟ್ ಹುಟ್ಟುಹಾಕಿದೆ.. ಅಷ್ಟಕ್ಕೂ ವಕೀಲನ‌ ಮರ್ಡರ್ ಮಸ್ಟರಿಯಲ್ಲಿ ಇರೋ ಅನುಮಾನವೇನು ಅನ್ನೋದ್ರ ರಿಪೋರ್ಟ್ ಇಲ್ಲಿದೆ....

Written By Ramya. R. Gowda
Published: Oct 20, 2026, 05:46 PM IST | Updated: Oct 20, 2026, 05:55 PM IST
Join

ಬೆಂಗಳೂರು: ಅದು ಸಿಲಿಕಾನ್ ಸಿಟಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ವಕೀಲ್ ಸಾಬ್ ಮರ್ಡರ್.. ಆ ಸಾಹುಕಾರ್ ವಕೀಲ ಕೊಲೆಯ ಹಿಂದೆ ಹಲವು ಅನುಮಾನಗಳ ಹುತ್ತ ಬೆಳೆದಿದೆ.. ಕೇವಲ‌ ಬಾಡಿಗೆ ಹಣಕ್ಕಾಗಿಯೇ ಬರ್ಬರ ಹತ್ಯೆ ನಡೆಯಿತೇ..? ಇಲ್ಲ ಮರ್ಡರ್ ಮೇ ಬೇರೆಯದ್ದೇ ಕಹಾನಿ ಇದ್ಯಾ ಅನ್ನೋ ಡೌಟ್ ಹುಟ್ಟುಹಾಕಿದೆ.. ಅಷ್ಟಕ್ಕೂ ವಕೀಲನ‌ ಮರ್ಡರ್ ಮಸ್ಟರಿಯಲ್ಲಿ ಇರೋ ಅನುಮಾನವೇನು ಅನ್ನೋದ್ರ ರಿಪೋರ್ಟ್ ಇಲ್ಲಿದೆ....

ಹೌದು ವೈಟ್ ಫೀಲ್ಡ್ ನಲ್ಲಿ ನಡೆದ  ವಕೀಲ ಮಂಜುನಾಥ್ ಮರ್ಡರ್ ಕೇಸು ಫೊಲೀಸರಲ್ಲಿ ಹತ್ತಾರು ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಹಲವು  ಅನುಮಾನಗಳಿಗೆ  ಕಾರಣವಾದ ಈ  ಕೊಲೆಯ ಆರೋಪಿಗಳನ್ನು  ಅರೆಷ್ಟ್ ಮಾಡುವುದು ಪೊಲೀಸರಿಗೆ ಸವಾಲಾಗಿದೆ ಈ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಮೂರು ಪ್ರತ್ಯೇಕ ತನಿಖಾ ತಂಡದಿಂದ ಹುಡುಕಾಟ ನಡೆಸುಲಾಗುತ್ತಿದೆ. ಈ ಕೊಲೆ ಪ್ರಕರಣದ ಆರೋಪಿಗಳ  ಪೊಲೀಸ್ರ ಕಣ್ತಪ್ಪಿಸಿ ಬೈಕ್ ಗಳಲ್ಲಿ ಪ್ರತ್ಯೇಕವಾಗಿ ಓಡಾಟ ನಡೆಸುತ್ತಿದ್ದಾರೆ.ಮಾರತ್ತಹಳ್ಳಿ ಎಸಿಪಿ ಸುಧಾಕರ್ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ  ಮೂರು ತಂಡಗಳು ಕಾರ್ಯಾಚರಣೆ‌ ನಡೆಸುತ್ತಿದ್ದಾರೆ.

ಕೋಟ್ಯಾಂತರ ರೂಪಾಯಿ ಆಸ್ತಿ ಒಡೆಯ ಕೇವಲ ಐದು ಸಾವಿರ ಬಾಡಿಗೆ ಹಣಕ್ಕೆ ಕೊಲೆಯಾಗಿರೋದು ಸಾಧ್ಯವೇ ಇಲ್ಲಾ ಅನ್ನೊದು ಪೋಲಿಸರ ಅನುಮಾನ ಹುಟ್ಟಿಸಿದೆ. ನಡುರಾತ್ರಿ ಕೊಲೆಯಾದ ವಕೀಲನಿಗೂ ಹಾಗೂ ಅವರ ದಾಯಾದಿಗಳಿಗೂ  ಜಮೀನಿನ ಸಂಭಂದ ನ್ಯಾಯಾಲಯದಲ್ಲಿ ಕೇಸು ನಡೆಯುತಿತ್ತು. ಕಾರಣ ಇದೊಂದು ಸುಪಾರಿ ಹತ್ಯೆ ಅನ್ನೋ ಆ್ಯಂಗಲ್ ನಲ್ಲಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ವಕೀಲ ಮಂಜುನಾಥ ಹತ್ಯೆ ಮಾಡಿರುವ  ಡೆಲಿವರಿ ಬಾಯ್ ಗಳು  ವಕೀಲರ ಮಾಲಿಕತ್ವದ  ಶೆಡ್ನಲ್ಲೆ ವಾಸವಾಗಿದ್ದರು. ಬಿಹಾರ ದಿಂದ ಈ ಆರೋಪಿಗಳು ರಾಜ್ಯಕ್ಕೆ ಬಂದಿದ್ದು ಹೊಟ್ಟೆಪಾಡಿಗೋ  ಅಥವಾ ಸುಪಾರಿ ಹಂತಕರೋ ಅನ್ನೊ ಅನುಮಾನಗಳು ಪೊಲೀಸರಿಗೆ ಕಾಡುತ್ತಾ ಇದೆ .  ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಕಂಪನಿಯ ಬಳಿ ಪೊಲೀಸರು ಅವರು ಪೋಟೊ ಹಾಗೂ ಸಾಕಷ್ಟು ಡಿಟೆಲ್ಸ ಕಲೆ ಹಾಕುತ್ತಿದ್ದಾರೆ.


ಡೆಲಿವರಿ ಬಾಯ್ ಗಳ ಕೈಗೆ ಕಂಟ್ರಿ ಮೇಡ್ ಪಿಸ್ತೂಲ್ ಬಂದಿದ್ದು ಹೇಗೆ ಅನ್ನೋದು ಪತ್ತೆ ಹಚ್ಚುವುದೆ ಪೊಲೀಸರಿಗೆ ತಲೆ ನೋವಾಗಿದೆ.ಫುಡ್ ಡೆಲಿವರಿ ಬಾಯ್ ಕೈಗೆ ಗನ್ ಸಪ್ಲೈ ಮಾಡಿದ್ದು ಯಾರೂ ತನಿಖೆಯಲ್ಲಿ ಬಯಲಾಗಬೇಕಿದೆ. ಹತ್ಯೆಗೂ ಮುನ್ನಾ ಹತ್ಯೆಯ ನಂತರವೂ ಪಕ್ಕಾ ಪ್ರೀ ಪ್ಲಾನ್ ಮಾಡಿ ಭೀಕರ ಹತ್ಯೆ ಮಾಡಲಾಗಿದೆ. ವಕೀಲನನ್ನು ರಾತ್ರಿ  ಮನೆ ಮುಂದೆ ಬಂದು ಬಾಡಿಗೆ ಕೊಡುವ ನೆಪದಲ್ಲಿ ಬಂದು ಹತ್ಯೆಗೆ ಪಕ್ಕಾ ಸ್ಕೆಚ ಹಾಕಲಾಗಿತ್ತು. ರಾತ್ರಿ 11:30 ರ ನಂತರ ಮನೆಯ ಹೊಸ್ತಿಲಲ್ಲೇ ಅರೋಪಿಗಳು ಶೂಟ್ ಮಾಡಿದ್ದರು.ಬಾಡಿಗೆ ಹಣ ನೀಡಲು ಆರೋಪಿಗಳು  ಇದೊಂದು ಪ್ಲಾನ್ಡ್ ಮರ್ಡರ  ವಕೀಲರ ಮನೆಯ ಮುಂದೆ ಸಾಕಷ್ಟು ಜನ ಓಡಾಟವಿದ್ದು  ಜನ ನಿದ್ರೆಗೆ ಜಾರಿದ ನಂತರ ಹಂತಕರು ಬಾಗಿಲು ಬಡಿದು  ಬಾಡಿಗೆ ಹಣ ಕೈಗಿಟ್ಟು  ಏಕಾಏಕಿ  ಫೈರಿಂಗ ಮಾಡಿದ್ದಾರೆ .ಮಂಜುನಾಥ್ ಕುಟುಂಬಸ್ಥರು ಬಾಗಿಲ ಬಳಿ ಬರೋ ಅಷ್ಟರಲ್ಲಿ ಹಂತಕರು ಬೈಕನ್ನು ರಸ್ತೆಯಲ್ಲಿಯೇ  ಬಿಟ್ಟು ಪರಾರಿಯಾಗಿದ್ದಾರೆ.

ಸದ್ಯ ವೈಟ್ ಫೀಲ್ಡ್ ಪೊಲೀರು ಎಸಿಪಿ ನೇತೃತ್ವದ ತಂಡ ಬೇರೆ ಬೇರೆ ಆ್ಯಂಗಲ್ ನಲ್ಲಿ ತನಿಖೆಗೆ ಇಳಿದಿದೆ. ಅದೇನಾದ್ರು ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಬಯಲಾಗಬೇಕಿದೆ..
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES