• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಕೆನರಾ ಬ್ಯಾಂಕ್‌ನಲ್ಲಿ 365 ದಿನ FD ಮಾಡಿದರೆ ಎಷ್ಟು ಲಾಭ? ಹಿರಿಯ ನಾಗರಿಕರಿಗೆ ಬಡ್ಡಿ ಹೆಚ್ಚು!

ಕೆನರಾ ಬ್ಯಾಂಕ್‌ನಲ್ಲಿ 365 ದಿನ FD ಮಾಡಿದರೆ ಎಷ್ಟು ಲಾಭ? ಹಿರಿಯ ನಾಗರಿಕರಿಗೆ ಬಡ್ಡಿ ಹೆಚ್ಚು!

ಕೆನರಾ ಬ್ಯಾಂಕ್‌ನ 365 ದಿನಗಳ ಫಿಕ್ಸೆಡ್‌ ಡೆಪಾಸಿಟ್‌ (FD) ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಬಡ್ಡಿ ಆದಾಯ ಪಡೆಯುವ ಅವಕಾಶವಿದೆ. ಸಾಮಾನ್ಯ ಗ್ರಾಹಕರಿಗೆ ಶೇ.6.25 ಮತ್ತು ಹಿರಿಯ ನಾಗರಿಕರಿಗೆ ಶೇ.6.75 ಬಡ್ಡಿದರವನ್ನ ನೀಡಲಾಗುತ್ತಿದೆ ಉದಾಹರಣೆಗೆ ₹1 ಲಕ್ಷ ಹೂಡಿಕೆಗೆ ವರ್ಷಕ್ಕೆ ಸುಮಾರು ₹6,250 ಅಥವಾ ₹6,750 ಬಡ್ಡಿ ಸಿಗಬಹುದು.

Written ByPuttaraj K Alur
Published: Oct 20, 2026, 07:19 PM IST|Updated: Oct 20, 2026, 08:09 PM IST
joinshare
ಕೆನರಾ ಬ್ಯಾಂಕ್‌ನಲ್ಲಿ 365 ದಿನ FD ಮಾಡಿದರೆ ಎಷ್ಟು ಲಾಭ? ಹಿರಿಯ ನಾಗರಿಕರಿಗೆ ಬಡ್ಡಿ ಹೆಚ್ಚು!
Image Credit: Canara Bank FD

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಷೇರು ಮಾರುಕಟ್ಟೆಯಲ್ಲಿ AI ಕ್ರಾಂತಿ : ಹೂಡಿಕೆದಾರರಿಗೆ ಈ ತಂತ್ರಜ್ಞಾನ ನಿಜಕ್ಕೂ ಸಹಕಾರಿಯೇ?

ಷೇರು ಮಾರುಕಟ್ಟೆಯಲ್ಲಿ AI ಕ್ರಾಂತಿ : ಹೂಡಿಕೆದಾರರಿಗೆ ಈ ತಂತ್ರಜ್ಞಾನ ನಿಜಕ್ಕೂ ಸಹಕಾರಿಯೇ?

2

ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮಹತ್ವದ ಸಭೆ : ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರದ ಹೆಜ್ಜೆ

3

ಮನೆಯ ಮುಂದೆ ನಿಂಬೆ ಮರ ಇರುವುದು ಒಳ್ಳೆಯದೇ

4

ದ್ವೇಷ ಮರೆತು ಸಾಮರಸ್ಯ ಬೆಳೆಸೋಣ, ರೈತ-ಯುವಕರ ಬದುಕು ಬೆಳಗಲಿ : ಸಿಎಂ ಡಿ.ಕೆ. ಶಿವಕುಮಾರ್

5

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ದಸರಾ ರಜೆ ವಿಸ್ತರಣೆ.. ಎಷ್ಟು ದಿನ ಗೊತ್ತೆ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Canara Bank 365 Days FD: ಉಳಿತಾಯದ ಹಣಕ್ಕೆ ಸುರಕ್ಷಿತ ಹಾಗೂ ನಿಗದಿತ ಆದಾಯ ಪಡೆಯಲು ಬಯಸುವವರಿಗೆ ಫಿಕ್ಸೆಡ್‌ ಡೆಪಾಸಿಟ್‌ (FD) ಜನಪ್ರಿಯ ಆಯ್ಕೆಯಾಗಿದೆ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್‌ನಲ್ಲಿ 365 ದಿನಗಳ ಅವಧಿಗೆ ಎಫ್‌ಡಿ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತದೆ? ಹಿರಿಯ ನಾಗರಿಕರಿಗೆ ಎಷ್ಟು ಹೆಚ್ಚುವರಿ ಆದಾಯ ದೊರೆಯುತ್ತದೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

65 ದಿನಗಳ FDಗೆ ಎಷ್ಟು ಬಡ್ಡಿ?

ಕೆನರಾ ಬ್ಯಾಂಕ್‌ನ 365 ದಿನಗಳ FD ಕುರಿತು ಸೆಪ್ಟೆಂಬರ್‌ 16, 2026ರಂದು ಪ್ರಕಟವಾದ ವರದಿಯ ಪ್ರಕಾರ, ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.6.25ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ.6.75ರಷ್ಟು ಬಡ್ಡಿದರವನ್ನ ನೀಡಲಾಗುತ್ತಿದೆ. ಆದರೆ ಬಡ್ಡಿದರಗಳು ಬ್ಯಾಂಕ್‌ನ ಪರಿಷ್ಕರಣೆಗಳಿಗೆ ಅನುಗುಣವಾಗಿ ಬದಲಾಗಬಹುದು. ಹೀಗಾಗಿ FD ತೆರೆಯುವ ಮುನ್ನ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ ಅಥವಾ ಶಾಖೆಯಲ್ಲಿ ಅನ್ವಯವಾಗುವ ದರವನ್ನ ಖಚಿತಪಡಿಸಿಕೊಳ್ಳುವುದು ಅಗತ್ಯ.  

₹1 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗಬಹುದು?

ಉದಾಹರಣೆಗೆ ನೀವು ₹1 ಲಕ್ಷವನ್ನ 365 ದಿನಗಳ ಅವಧಿಗೆ FD ಮಾಡಿದರೆ, ಶೇ.6.25ರ ವಾರ್ಷಿಕ ಬಡ್ಡಿದರದ ಆಧಾರದಲ್ಲಿ ಸರಳ ಲೆಕ್ಕಾಚಾರದಲ್ಲಿ ಸುಮಾರು ₹6,250 ಬಡ್ಡಿ ದೊರೆಯಬಹುದು. ಇದೇ ಮೊತ್ತಕ್ಕೆ ಶೇ.6.75ರ ದರ ಅನ್ವಯಿಸಿದರೆ ಸುಮಾರು ₹6,750 ಬಡ್ಡಿ ಸಿಗಬಹುದು. ಇವು ಅಂದಾಜು ಲೆಕ್ಕಾಚಾರಗಳು ಮಾತ್ರ. ಬ್ಯಾಂಕ್‌ನ ಬಡ್ಡಿ ಲೆಕ್ಕಾಚಾರದ ವಿಧಾನ, ತ್ರೈಮಾಸಿಕ ಸಂಯೋಜಿತ ಬಡ್ಡಿ, ಪಾವತಿ ಆಯ್ಕೆ ಮತ್ತು ಅನ್ವಯಿಸುವ ನಿಯಮಗಳ ಪ್ರಕಾರ ಅಂತಿಮ ಮೆಚ್ಯೂರಿಟಿ ಮೊತ್ತ ಬದಲಾಗಬಹುದು. ತೆರಿಗೆ ಕಡಿತ ಅನ್ವಯಿಸಿದರೆ ಕೈಗೆ ಸಿಗುವ ಮೊತ್ತವೂ ಬದಲಾಗುತ್ತದೆ.

ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ ಸೌಲಭ್ಯ

ಹಿರಿಯ ನಾಗರಿಕರು ತಮ್ಮ ನಿವೃತ್ತಿಯ ನಂತರದ ಉಳಿತಾಯಕ್ಕೆ ನಿಯಮಿತ ಆದಾಯ ಪಡೆಯಲು FDಗಳನ್ನ ಆಯ್ಕೆ ಮಾಡುತ್ತಾರೆ. ಕೆನರಾ ಬ್ಯಾಂಕ್‌ನ ಅಧಿಕೃತ ಮಾಹಿತಿಯ ಪ್ರಕಾರ, ಅರ್ಹ ದೇಶೀಯ ಟರ್ಮ್‌ ಡೆಪಾಸಿಟ್‌ಗಳಿಗೆ 180 ದಿನ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ, ₹3 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚುವರಿ ಶೇ.0.50 ಬಡ್ಡಿ ನೀಡುವ ಸೌಲಭ್ಯವಿದೆ. ಕೆಲವು ಠೇವಣಿ ವರ್ಗಗಳಿಗೆ ಪ್ರತ್ಯೇಕ ನಿಯಮಗಳು ಅನ್ವಯಿಸಬಹುದು. ಹೆಚ್ಚುವರಿ ಬಡ್ಡಿಯಿಂದ ಹಿರಿಯ ನಾಗರಿಕರಿಗೆ ಅದೇ ಮೊತ್ತದ ಹೂಡಿಕೆಯಲ್ಲಿ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಆದಾಯ ದೊರೆಯುವ ಸಾಧ್ಯತೆ ಇದೆ. ಆದರೂ ಹೂಡಿಕೆಯ ಅವಧಿ, ಠೇವಣಿಯ ವಿಧ ಮತ್ತು ಅನ್ವಯಿಸುವ ಬಡ್ಡಿದರವನ್ನ ಪರಿಶೀಲಿಸಬೇಕು.

FD ಮಾಡುವ ಮೊದಲು ಈ ಅಂಶಗಳನ್ನ ಗಮನಿಸಿ

FD ತೆರೆಯುವಾಗ ಕೇವಲ ಬಡ್ಡಿದರವನ್ನ ಮಾತ್ರ ಗಮನಿಸುವುದಕ್ಕಿಂತ ಕೆಲವು ಪ್ರಮುಖ ಅಂಶಗಳನ್ನ ಪರಿಶೀಲಿಸುವುದು ಉತ್ತಮ.

ಅವಧಿ: 365 ದಿನಗಳ ಠೇವಣಿಯು ಒಂದು ವರ್ಷದ ಹೂಡಿಕೆ ಯೋಜನೆಗೆ ಸೂಕ್ತವಾಗಬಹುದು.
ಬಡ್ಡಿ ಪಾವತಿ: ಬಡ್ಡಿಯನ್ನ ಮಾಸಿಕ, ತ್ರೈಮಾಸಿಕ ಅಥವಾ ಮೆಚ್ಯೂರಿಟಿ ಸಂದರ್ಭದಲ್ಲಿ ಪಡೆಯುವ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ.
ಅವಧಿಗೂ ಮುನ್ನ ಹಣ ಹಿಂಪಡೆಯುವಿಕೆ: ನಿಗದಿತ ಅವಧಿ ಮುಗಿಯುವ ಮೊದಲು FD ಮುಚ್ಚಿದರೆ ದಂಡ ಅಥವಾ ಕಡಿಮೆ ಬಡ್ಡಿ ಅನ್ವಯಿಸಬಹುದು. 
ತೆರಿಗೆ: FD ಬಡ್ಡಿಗೆ ಅನ್ವಯಿಸುವ ತೆರಿಗೆ ನಿಯಮಗಳನ್ನ ಪರಿಶೀಲಿಸಿ.
ಪ್ರಸ್ತುತ ಬಡ್ಡಿದರ: FD ತೆರೆಯುವ ದಿನದಂದು ಅನ್ವಯಿಸುವ ದರವೇ ನಿಮ್ಮ ಹೂಡಿಕೆಯ ಆದಾಯವನ್ನ ನಿರ್ಧರಿಸುತ್ತದೆ.

ಉಳಿತಾಯಕ್ಕೆ ಸೂಕ್ತ ಆಯ್ಕೆಯೇ?

ನಿಗದಿತ ಅವಧಿಗೆ ಹಣವನ್ನ ಇಟ್ಟು ಬಡ್ಡಿ ಆದಾಯ ಪಡೆಯಲು ಬಯಸುವವರಿಗೆ FD ಒಂದು ಆಯ್ಕೆಯಾಗಬಹುದು. ಆದರೆ ತುರ್ತು ಅಗತ್ಯಗಳಿಗೆ ಬೇಕಾಗುವ ಹಣವನ್ನ ಸಂಪೂರ್ಣವಾಗಿ ದೀರ್ಘಾವಧಿಯ ಠೇವಣಿಯಲ್ಲಿ ಇಡುವ ಮೊದಲು ತಮ್ಮ ಆರ್ಥಿಕ ಅಗತ್ಯಗಳನ್ನ ಪರಿಗಣಿಸಬೇಕು. ಒಟ್ನಲ್ಲಿ ಕನರಾ ಬ್ಯಾಂಕ್‌ನ 365 ದಿನಗಳ FDಯಲ್ಲಿ ಸಿಗುವ ನಿಖರ ಬಡ್ಡಿ ಹೂಡಿಕೆಯ ಮೊತ್ತ, ಅನ್ವಯಿಸುವ ಬಡ್ಡಿದರ ಮತ್ತು ಬ್ಯಾಂಕ್‌ನ ನಿಯಮಗಳನ್ನ ಅವಲಂಬಿಸಿರುತ್ತದೆ. ಹೂಡಿಕೆ ಮಾಡುವ ಮೊದಲು ಅಧಿಕೃತ ಬಡ್ಡಿದರ ಪಟ್ಟಿಯನ್ನ ಪರಿಶೀಲಿಸಿ, ತಮ್ಮ ಅಗತ್ಯಗಳಿಗೆ ತಕ್ಕ ನಿರ್ಧಾರ ಕೈಗೊಳ್ಳುವುದು ಉತ್ತಮ.

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)

Add Zee News as a Preferred Source
TAGS:
Business
Kannada News