ಬೆಂಗಳೂರಿನಲ್ಲಿ ಸಿ-ಸೆಕ್ಷನ್ ಬದಲು ನಾರ್ಮಲ್ ಡೆಲಿವರಿಗೂ ಆದ್ಯತೆ ನೀಡುವ ವಿಶೇಷ ಆಸ್ಪತ್ರೆ
ಗರ್ಭಿಣಿ ಮಹಿಳೆಯರಿಗೆ ಸಿಸೇರಿಯನ್ ಇಲ್ಲದೆ ನಾರ್ಮಲ್ ಹೆರಿಗೆ ಮಾಡಿಸುವ ಉದ್ದೇಶದಿಂದ ಬೆಂಗಳೂರಿನ ಓವಂ ಆಸ್ಪತ್ರೆಯಲ್ಲಿ ನ್ಯಾಚುರಲ್ ಬರ್ತಿಂಗ್ ಸೆಂಟರ್ ತೆರೆಯಲಾಗಿದೆ.
ಬೆಂಗಳೂರಿನಲ್ಲಿ ಗರ್ಭಿಣಿ ಮಹಿಳೆಯರು ಸಿ-ಸೆಕ್ಷನ್ ಎಂದರೆ ಸಿಸೇರಿಯನ್ ಮಾಡಿಸಿ ಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಇಲ್ಲೊಂದು ಆಸ್ಪತ್ರೆ ಮಾತ್ರ ತಮ್ಮ ಹಿಂದಿನ ಕಾಲದಂತೆಯೇ ನಾರ್ಮಲ್ ಹೆರಿಗೆ ಮಾಡಿಸುವ ಉದ್ದೇಶದಿಂದಲೇ ತಮ್ಮ ಆಸ್ಪತ್ರೆಯ ಒಂದು ಪ್ಲೋರ್ ಅನ್ನೇ ಮೀಸಲಾಗಿಟ್ಟು ಒಂದು ನ್ಯಾಚುರಲ್ ಬರ್ತಿಂಗ್ ಸೆಂಟರ್ ಅನ್ನು ಆರಂಭಿಸಿದೆ. ಅದು ಯಾವ ಆಸ್ಪತ್ರೆ? ಅಲ್ಲಿ ಏನೆಲ್ಲಾ ಸೌಲಭ್ಯಗಳು ಸಿಗಲಿವೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ನಾರ್ಮಲ್ ಡೆಲಿವರಿ ಮಾಡಿಸುವ ಆಸ್ಪತ್ರೆ:
ಸಿ-ಸೆಕ್ಷನ್ ಪ್ರಕರಣಗಳೇ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಬೆಂಗಳೂರಿನಲ್ಲಿ ನಾರ್ಮಲ್ ಡೆಲಿವರಿಗಾಗಿಯೇ ʼನ್ಯಾಚುರಲ್ ಬರ್ತಿಂಗ್ ಸೆಂಟರ್ʼ ಹೆಸರಿನಲ್ಲಿ ವಿಶೇಷ ಫ್ಲೋರ್ ತೆರೆದಿರುವ ಈ ಆಸ್ಪತ್ರೆಯ ಹೆಸರು ʼಓವಂ ಆಸ್ಪತ್ರೆʼ. ಬೆಂಗಳೂರಿನ ಔಟರ್ ರಿಂಗ್ ರೋಡ್ ಬಳಿ ಈ ಆಸ್ಪತ್ರೆ 2014 ರಲ್ಲಿ ಆರಂಭವಾಗಿದ್ದು, ಬೆಂಗಳೂರಿನಾದ್ಯಂತ 7 ಬ್ರಾಂಚ್‌ಗಳನ್ನು ಹಾಗೂ ಕ್ಲಿನಿಕ್‌ಗಳನ್ನು ಹೊಂದಿದೆ. ಇದೀಗ ಇದೇ ಮೊದಲ ಬಾರಿಗೆ ಎಂಬಂತೆ ವಾಟರ್ ಬರ್ತಿಂಗ್ ಹಾಗೂ ನ್ಯಾಚುರಲ್ ಬರ್ತಿಂಗ್ ಸೆಂಟರ್ ತೆರೆಯುವ ಮೂಲಕ ಮಹಿಳೆಯರ ಕೋರಿಕೆಯನ್ನು ಈಡೇರಿಸಿದೆ.
ಓವಂ ಆಸ್ಪತ್ರೆಯಲ್ಲಿ ʼವಾಟರ್ ಬರ್ತಿಂಗ್ ಹಾಗೂ ನ್ಯಾಚುರಲ್ ಬರ್ತಿಂಗ್ ಸೆಂಟರ್ʼ ಉದ್ಘಾಟಿಸಿ ಮಾತನಾಡಿದ ಆಸ್ಪತ್ರೆಯ ಅಧ್ಯಕ್ಷರು, ಸಿಇಒ ಹಾಗೂ ಮಕ್ಕಳ ತಜ್ಞ ರಾದ ಡಾ.ಆದರ್ಶ್ ಸೋಮಶೇಖರ್, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸಿಸೇರಿಯನ್ ಹೆಚ್ಚಾಗಿದೆ. ಒಂದೆಡೆ ಗರ್ಭಿಣಿ ಮಹಿಳೆಯರಿಗೆ ಸಿ-ಸೆಕ್ಷನ್ ಎಂಬುದು ಒತ್ತಡವನ್ನು ಹೆಚ್ಚಿಸಿದರೆ, ಮಹಿಳೆಯರ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಹೆರಿಗೆ ಸಂದರ್ಭದಲ್ಲಿ ಸಿ- ಸೆಕ್ಷನ್ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ನಾರ್ಮಲ್ ಹೆರಿಗೆಯನ್ನು ಪ್ರೋತ್ಸಾಹಿಸುವ ಗುರಿಯೊಂದಿಗೆ ಆಸ್ಪತ್ರೆಯಲ್ಲಿ ʼವಾಟರ್ ಬರ್ತಿಂಗ್ ಹಾಗೂ ನ್ಯಾಚುರಲ್ ಬರ್ತಿಂಗ್ ಸೆಂಟರ್ʼ ಅನ್ನು ತೆರೆದಿರುವುದಾಗಿ ತಿಳಿಸಿದರು.
ನ್ಯಾಚುರಲ್ ಬರ್ತಿಂಗ್‌ಗೆ ಪೂರಕ ವಾತಾವರಣ:
ನಾರ್ಮಲ್ ಡೆಲಿವರಿ ಮಾಡಿಸಲು ನ್ಯಾಚುರಲ್ ಬರ್ತಿಂಗ್‌ನಲ್ಲಿ ಹೆರಿಗೆ ಮಾಡಿಸುವಾಗ ಯಾವುದೇ ರೀತಿಯ ಔಷಧಿಗಳನ್ನು ಕೊಡುವುದಿಲ್ಲ. ನಮ್ಮ ಉದ್ದೇಶ ನ್ಯಾಚುರಲ್ ಆಗಿ ಹೆರಿಗೆ ಮಾಡಿಸುವುದು. ಇದಕ್ಕೆ ಪೂರಕವಾಗುವಂತೆ ಮಹಿಳೆ ಗರ್ಭಿಣಿ ಆದ ಮೂರು ತಿಂಗಳಿನಿಂದ ಫಿಜೋಥೆರಪಿ, ಯೋಗ, ಕೆಲವು ವ್ಯಾಯಾಮಗಳನ್ನು ಮಾಡಿ ಅವರನ್ನು ನಾರ್ಮಲ್ ಹೆರಿಗೆಗೆ ತಯಾರು ಮಾಡಬೇಕಾಗುತ್ತದೆ. ತಮಗೆ ನ್ಯಾಚುರಲ್ ಆಗಿಯೇ ಹೆರಿಗೆ ಆಗುತ್ತೆ ಎಂಬ ಕಾನ್ಫಿಡೆನ್ಸ್ ಅವರಲ್ಲೇ ಬರುವ ರೀತಿ ಅವರನ್ನು ತಯಾರು ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ 25-35 ರೊಳಗಿನ ಗರ್ಭಿಣಿ ಮಹಿಳೆಯರಲ್ಲಿ ನಾರ್ಮಲ್ ಡೆಲಿವರಿ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದು, ಈ ಸಂಬಂಧ ಹೆಚ್ಚಿನ ವಿಚಾರಣೆಗಳು ಕೇಳಿ ಬರುತ್ತಿವೆ.
ನ್ಯಾಚುರಲ್ ಬರ್ತಿಂಗ್ ಒಬ್ಬರಿಂದ ನಡೆಯೋದಿಲ್ಲ, ವೈದ್ಯರು, ಡ್ಯುಟಿ ನರ್ಸಸ್, ಯೋಗ ಇನ್ಸ್ಟ್ರಕಟರ್, ಡೆಲವರಿ ಎಕ್ಸಪರ್ಟ್, ತಾಯಿ ಕೇರ್ ಮಾಡುವವರು ಹೀಗೆ ಗರ್ಭಿಣಿ ಆದ ಮಹಿಳೆಗೆ ಎಲ್ಲಾ ತಂಡದಿಂದಲೂ ಅಗತ್ಯ ಸಹಕಾರವನ್ನು ನೀಡಲಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡರು.