SOCIAL MEDIA

Newsletter

PARTNER SITES
Select Language Select State

ಬೆಂಗಳೂರಿನಂದ ಬಿಡದಿ, ಹಾರೋಹಳ್ಳಿ, ತುಮಕೂರು ಸೇರಿದಂತೆ 6 ಹೊಸ ಏರಿಯಾಗಳಿಗೆ ನಮ್ಮ ಮೆಟ್ರೋ ಸಂಚಾರ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಸಿಕಿದ್ದು ಬೆಂಗಳೂರಿನ ಪ್ರಮುಖ ಕೈಗಾರಿಕಾ ವಲಯಗಳಿಗೆ ಮೆಟ್ರೋ ಕನೆಕ್ಟಿವಿಟಿ ಕಲ್ಪಿಸುವ ಕಾರ್ಯಸಾಧ್ಯತಾ ವರದಿ ಸಿದ್ಧವಾಗಿದೆ.

Written By Yashaswini V
Published: Oct 02, 2026, 03:51 PM IST | Updated: Oct 02, 2026, 03:54 PM IST
Join

ರಾಜ್ಯ ರಾಜಧಾನಿ ಬೆಂಗಳೂರಿನಿಂದ ವಿವಿಧ ಏರಿಯಾಗಳಿಗೆ ಹಾಗೂ ಅಕ್ಕ-ಪಕ್ಕದ ಊರುಗಳಿಗೆ ಮೆಟ್ರೋ ಕನೆಕ್ಟಿವಿಟಿಗಾಗಿ ಕಾರ್ಯಸಾಧ್ಯತಾ ವರದಿ ಸಿದ್ಧವಾಗಿದ್ದು, ಈ ಕುರಿತಂತೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ ಶುಭ ಸುದ್ದಿವೊಂದನ್ನು ನೀಡಿದೆ.

ಬಿಎಂಆರ್ಸಿಎಲ್ ಕೈಸೇರಿದ ಫಿಸಿಬಿಲಿಟಿ ಸ್ಟಡಿ ವರದಿ
ಬೆಂಗಳೂರಿನ 6 ಹೊಸ ಪ್ರದೇಶಗಳಿಗೆ ಮೆಟ್ರೋ ವಿಸ್ತರಣೆ ಕಾರ್ಯಸಾಧ್ಯತಾ ವರದಿ ಬಿಎಂಆರ್‌ಸಿಎಲ್‌ ಕೈಸೇರಿದ್ದು, ಶೀಘ್ರದಲ್ಲೇ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆದಿದೆ. ಆ ನಂತರ ಡಿಪಿಆರ್ ಸಿದ್ಧಪಡಿಸಲಿದೆ.

ಬೆಂಗಳೂರಿನಿಂದ 6 ಏರಿಯಾ, ಊರುಗಳಿಗೆ ಮೆಟ್ರೋ ಸಂಚಾರ: 
ಲಭ್ಯವಿರುವ ಮಾಹಿತಿಗಳ ಪ್ರಕಾರ, ನಮ್ಮ ಮೆಟ್ರೋ ಬೆಂಗಳೂರಿನಿಂದ ಬಿಡದಿ, ಹಾರೋಹಳ್ಳಿ, ತುಮಕೂರು ಸೇರಿದಂತೆ 6 ಹೊಸ ಏರಿಯಾಗಳಿಗೆ ನಮ್ಮ ಮೆಟ್ರೋ ಸಂಚಾರ ವಿಸ್ತರಣೆಗೆ ಯೋಜನೆ ರೂಪಿಸಿದೆ. ಇದರನ್ವಯ ಚಲ್ಲಘಟ್ಟ-ಬಿಡದಿ, ಸಿಲ್ಕ್ ಇನ್‌ಸ್ಟಿಟ್ಯೂಟ್-ಹಾರೋಹಳ್ಳಿ ಸೇರಿದಂತೆ ಪ್ರಮುಖ ಕೈಗಾರಿಕಾ ವಲಯಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಆರು ಮಾರ್ಗಗಳಲ್ಲಿ ಮೆಟ್ರೋ ವಿಸ್ತರಣೆಗೆ ಪ್ಲಾನ್‌ ಮಾಡಲಾಗುತ್ತಿದೆ.

ಈ ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಬಿಎಂಆರ್​ಸಿಎಲ್​ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್​​​ ನೀಡುತ್ತಿದ್ದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಆ ವರದಿಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದೆ.

ನಗರದ ಪ್ರಮುಖ ಕೈಗಾರಿಕಾ ವಲಯಗಳಿಗೆ ಸಂಪರ್ಕ ಕಲ್ಪಿಸುವುದಕ್ಕೆ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಈ ಮೆಟ್ರೋ ವಿಸ್ತರಣೆ ತುಂಬಾ ಸಹಕಾರಿ ಆಗುತ್ತದೆ. ಆರು ಪ್ರಮುಖ ನಮ್ಮ ಮೆಟ್ರೋ ಮಾರ್ಗಗಳ ವಿಸ್ತರಣೆಗೆ ಪ್ರಸ್ತಾಪ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಸ್ತಾವಿತ 6 ಮಾರ್ಗಗಳು ಯಾವವು?
1. ಚಲ್ಲಘಟ್ಟದಿಂದ ಬಿಡದಿ ವರೆಗೆ, ಮಾರ್ಗದ ಅಂದಾಜು ಉದ್ದ 15 ಕಿ.ಮೀ (ಸದ್ಯ ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)

2. ಸಿಲ್ಕ್ ಇನ್ಸ್ಟಿಟ್ಯೂಟ್ ಟು ಹಾರೋಹಳ್ಳಿ ವರೆಗೆ, ಮಾರ್ಗದ ಅಂದಾಜು ಉದ್ದ 24 ಕಿ.ಮೀ (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)

3. ಬೊಮ್ಮಸಂದ್ರ ಟು ಅತ್ತಿಬೆಲೆ ವರೆಗೆ, ಮಾರ್ಗದ ಅಂದಾಜು ಉದ್ದ 11 ಕಿ.ಮೀ (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)

4. ಕಾಳೇನ ಅಗ್ರಹಾರ ಟು ಕಾಡುಗೋಡಿ ಟ್ರೀ ಪಾರ್ಕ್ ವರೆಗೆ, ಮಾರ್ಗದ ಅಂದಾಜು ಉದ್ದ 68 ಕಿ.ಮೀ. ಇದು ಅತಿ ಉದ್ದದ ಮಾರ್ಗವಾಗಿದೆ. (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)

5. ಮಾದವಾರ ಟು ತುಮಕೂರು ವರೆಗೆ, ಮಾರ್ಗದ ಅಂದಾಜು ಉದ್ದ 60 ಕಿ.ಮೀ (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)

6. ಕೆ.ಆರ್ ಪುರಂ ಟು ಹೊಸಕೋಟೆ ಬೂದಿಗೆರೆ ಕ್ರಾಸ್​​ ವರೆಗೆ, ಮಾರ್ಗದ ಅಂದಾಜು ಉದ್ದ 16 ಕಿ.ಮೀ. (ಕಾರ್ಯ ಸಾಧ್ಯತಾ ವರದಿ ಹಂತದಲ್ಲಿದೆ.)

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES