SOCIAL MEDIA

Newsletter

PARTNER SITES
Select Language Select State

ಮಗನ ಕೊ*ಲೆಗೆ ನ್ಯಾಯ ಕೇಳಿದ್ದ ತಾಯಿ, ರೋಚಕ ಸತ್ಯ ಬಿಚ್ಚಿಟ್ಟ CCTV : ಅಮ್ಮನೇ ಇಲ್ಲಿ ಯಮ.. ಏನಾಯ್ತು?

ಮಗನ ಕೊಲೆಗೆ ನ್ಯಾಯ ಬೇಕೆಂದು ಕಣ್ಣೀರಿಟ್ಟ ತಾಯಿಯೇ, ಆತನನ್ನು ಕೊಂದ ಕೊಲೆಗಾತಿಯೆಂಬ ಸತ್ಯ ಬಯಲಾಗಿದೆ. 33 ವರ್ಷದ ಮಗ ಮುತ್ತುರಾಜ್‌ನ ಅಕ್ರಮ ಸಂಬಂಧ ಮತ್ತು ಮತ್ತೊಂದು ಮದುವೆಯಾಗುವ ನಿರ್ಧಾರದಿಂದ ಬೇಸತ್ತ ತಾಯಿ ಶಿವಮ್ಮ... ಮಗನ ಪಾಲಿಗೆ ಯಮಳಾಗಿದ್ದಾಳೆ.. ಅಸಲಿಗೆ ಏನಾಯ್ತು..? ಸಂಪೂರ್ಣ ವಿವರ ಇಲ್ಲಿದೆ..

Written By Krishna NK
Published: Nov 25, 2026, 22:20 IST | Updated: Nov 25, 2026, 22:21 IST
Image Credit: tumkur News
Join

ತುಮಕೂರು : ಹೆತ್ತ ತಾಯಿಯೇ ತನ್ನ ಮಗನ ಪಾಲಿಗೆ ಯಮನಾದ ಘೋರ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆಯೇ ನಡೆದ ಈ ಭೀಕರ ಕೊಲೆ, ಇಡೀ ಊರನ್ನೇ ಬೆಚ್ಚಿಬೀಳಿಸಿದೆ. ಮಗನ ಸಾವಿಗೆ ನ್ಯಾಯ ಬೇಕು ಅಂತ ಕಣ್ಣೀರಿಟ್ಟಿದ್ದ ತಾಯಿಯೇ, ಕಟ್ಟಿಗೆಯಿಂದ ಹೊಡೆದು ಮಗನ ಪ್ರಾಣ ತೆಗೆದಿದ್ದಾಳೆ. ಎಲ್ಲಿ ಯಾಕಿಗಾಯ್ತು.? ಈ ಸ್ಟೋರಿ ನೋಡಿ..

ಬೆಳ್ಳಂಬೆಳಗ್ಗೆ ಕಸ ಗುಡಿಸಲು ಮನೆಯಿಂದ ಹೊರಬಂದ ತಾಯಿಗೆ ಎದುರಾಗಿದ್ದು ಮಗನ ರಕ್ತಸಿಕ್ತ ಶವ. ತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ 33 ವರ್ಷದ ಮುತ್ತುರಾಜ್ ಎಂಬ ಯುವಕನನ್ನು ಯಾರೋ ದುಷ್ಕರ್ಮಿಗಳು ತಲೆಗೆ ಬಲವಾಗಿ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದರು. ಬೆಂಗಳೂರಿನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಮುತ್ತುರಾಜ್, ವಾರಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದ. ಮಗನ ಶವ ನೋಡಿ ಶಾಕ್ ಆಗಿದ್ದ ತಾಯಿ ಶಿವಮ್ಮ, ನನ್ನ ಮಗನನ್ನು ಕೊಂದವರಿಗೆ ಶಿಕ್ಷೆಯಾಗಬೇಕು, ನಮಗೆ ನ್ಯಾಯ ಬೇಕು ಅಂತ ಪೊಲೀಸರ ಮುಂದೆ ಗೋಳಾಡಿದ್ದಳು.

ತಾಯಿಯ ಕಣ್ಣೀರು ಕಂಡು ಕೊಲೆಗಾರರ ಪತ್ತೆಗೆ ಬಲೆ ಬೀಸಿದ ತುಮಕೂರು ಗ್ರಾಮಾಂತರ ಪೊಲೀಸರಿಗೆ, ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಒಂದು ಭಯಾನಕ ದೃಶ್ಯ ಕಾಣಸಿಕ್ಕಿತ್ತು. ಆ ದೃಶ್ಯ ನೋಡಿ ಖಾಕಿಯೇ ಒಂದು ಕ್ಷಣ ಬೆಚ್ಚಿಬಿದ್ದಿತ್ತು. ಯಾಕಂದ್ರೆ, ಮುತ್ತುರಾಜ್‌ನನ್ನು ಕಟ್ಟಿಗೆಯಿಂದ ಬರ್ಬರವಾಗಿ ಹೊಡೆದು ಕೊಂದಿದ್ದು ಬೇರೆ ಯಾರೂ ಅಲ್ಲ, ಒಬ್ಬ ಮಹಿಳೆ ಹೌದು.. ಸಿಸಿಟಿವಿ ಸುಳಿವು ಸಿಗುತ್ತಿದ್ದಂತೆ ಪೊಲೀಸರು ನೇರವಾಗಿ ಕುಟುಂಬಸ್ಥರ ಮೇಲೆಯೇ ಅನುಮಾನ ವ್ಯಕ್ತಪಡಿಸಿ ತನಿಖೆಯನ್ನು ತೀವ್ರಗೊಳಿಸಿದ್ರು..

​ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ತಾಯಿ ಶಿವಮ್ಮಳನ್ನು ವಿಚಾರಣೆಗೆ ಒಳಪಡಿಸಿದಾಗ, ಆಕೆ ಬಾಯ್ಬಿಟ್ಟ ಸತ್ಯ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದರು. ನನ್ನ ಮಗನನ್ನು ನಾನೇ ಕೊಂದಿದ್ದು ಅಂತ ಶಿವಮ್ಮ ತಪ್ಪೊಪ್ಪಿಕೊಂಡಿದ್ದಳು. ಹೌದು, ಹೆತ್ತ ತಾಯಿಯೇ ತನ್ನ ಸ್ವಂತ ಮಗನನ್ನು ಇಷ್ಟು ಕ್ರೂರವಾಗಿ ಕೊಲ್ಲುತ್ತಾಳೆ ಅಂದ್ರೆ ಯಾರಾದ್ರೂ ನಂಬೋಕೆ ಸಾಧ್ಯನಾ? ಆದ್ರೆ, ಸಿಸಿಟಿವಿ ಸಾಕ್ಷಿ ಹಾಗೂ ತಾಯಿಯ ತಪ್ಪೊಪ್ಪಿಗೆ ಹೇಳಿಕೆ ಈ ಕರಾಳ ಸತ್ಯವನ್ನು ಬಯಲು ಮಾಡಿತ್ತು..

​ಅಷ್ಟಕ್ಕೂ ತಾಯಿ ಇಂಥದ್ದೊಂದು ಕಠಿಣ ನಿರ್ಧಾರಕ್ಕೆ ಬರಲು ಕಾರಣ ಮಗನ ಅಕ್ರಮ ಸಂಬಂಧ. ಮುತ್ತುರಾಜ್ ಅದೇ ಗ್ರಾಮದ ಇಬ್ಬರು ಮಕ್ಕಳ ತಾಯಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಅಷ್ಟೇ ಅಲ್ಲದೆ, ಆಕೆಯನ್ನೇ ಮದುವೆಯಾಗಲು ಮುಂದಾಗಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಪ್ರತಿದಿನ ಜಗಳ ನಡೆಯುತ್ತಿತ್ತು. ಮಗನ ಈ ನಡೆಯಿಂದ ರೋಸಿಹೋಗಿದ್ದ ತಾಯಿ ಶಿವಮ್ಮ, ಮಗನನ್ನು ಮುಗಿಸಲೇಬೇಕು ಅಂತ ಸ್ಕೆಚ್ ಹಾಕಿದ್ದಳು. ಅದರಂತೆ ಮುತ್ತುರಾಜ್ ಗಾಢ ನಿದ್ರೆಯಲ್ಲಿದ್ದಾಗ, ಕಟ್ಟಿಗೆಯಿಂದ ನಾಲ್ಕು ಬಾರಿ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾಳೆ. ಸದ್ಯ ಆರೋಪಿ ತಾಯಿ ಶಿವಮ್ಮ ಪೊಲೀಸರ ಅತಿಥಿಯಾಗಿದ್ದಾಳೆ.

ಒಟ್ಟಾರೆಯಾಗಿ ಹಡೆದ ಜೀವದ ಕೈಯಿಂದಲೇ ಮಗ ಮುಗಿದುಹೋದ ಈ ಘಟನೆ, ಇಡೀ ಜಕ್ಕೇನಹಳ್ಳಿ ಗ್ರಾಮದಲ್ಲಿ ತಲ್ಲಣ ಮೂಡಿಸಿದೆ.. ಅಕ್ರಮ ಸಂಬಂಧದ ವ್ಯಾಮೋಹಕ್ಕೆ ಬಿದ್ದು ಹಾದಿ ತಪ್ಪಿದ ಮಗ, ಕೊನೆಗೆ ಕರುಳುಬಳ್ಳಿಯ ಕೈಯಲ್ಲೇ ಹತ್ಯೆಯಾಗಿದ್ದು ಮಾತ್ರ ವಿಪರ್ಯಾಸ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES