• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಆರ್. ಆರ್. ನಗರ ಪೊಲೀಸರ ಮುಂದೆ ನಟ ಧನ್ವೀರ್ ಹಾಜರು, ಸುದೀರ್ಘ ವಿಚಾರಣೆ!

ಆರ್. ಆರ್. ನಗರ ಪೊಲೀಸರ ಮುಂದೆ ನಟ ಧನ್ವೀರ್ ಹಾಜರು, ಸುದೀರ್ಘ ವಿಚಾರಣೆ!

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ಧನ್ವೀರ್ ಕೊನೆಗೂ ರಾಜರಾಜೇಶ್ವರಿ ನಗರ (ಆರ್. ಆರ್. ನಗರ) ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Nov 25, 2026, 20:32 IST|Updated: Nov 25, 2026, 20:33 IST
joinshare
ಆರ್. ಆರ್. ನಗರ ಪೊಲೀಸರ ಮುಂದೆ ನಟ ಧನ್ವೀರ್ ಹಾಜರು, ಸುದೀರ್ಘ ವಿಚಾರಣೆ!
Image Credit: Dhanveer Gowda

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಆರ್. ಆರ್. ನಗರ ಪೊಲೀಸರ ಮುಂದೆ ನಟ ಧನ್ವೀರ್ ಹಾಜರು, ಸುದೀರ್ಘ ವಿಚಾರಣೆ!

ಆರ್. ಆರ್. ನಗರ ಪೊಲೀಸರ ಮುಂದೆ ನಟ ಧನ್ವೀರ್ ಹಾಜರು, ಸುದೀರ್ಘ ವಿಚಾರಣೆ!

2

ದಕ್ಷಿಣ ಭಾರತದ ಟಾಪ್ 10 ಶ್ರೀಮಂತ ನಟರ ಪಟ್ಟಿ ಬಿಡುಗಡೆ: ಅಗ್ರಸ್ಥಾನದಲ್ಲಿ ಯಾರಿದ್ದಾರೆ ಗೊತ್ತೆ?

3

ಐಷಾರಾಮಿ ಜೀವನಕ್ಕಾಗಿ ಪ್ರೇಮಿಗಳಿಂದ ಡ್ರಗ್ ಪೆಡ್ಲಿಂಗ್..! 11 ಕೋಟಿ 44 ಲಕ್ಷ ರೂ. ಮಾದಕ ವಶ

4

"ಬದುಕಿನ ಹೋರಾಟಕ್ಕೆ ಪರಿಹಾರ ಸಿಗುತ್ತೆ": ಆಶಾ ಕಾರ್ಯಕರ್ತೆಯರಿಗೆ ವಿನೋದ್ ರಾಜ್ ಬೆಂಬಲ

5

ಕ್ಷುಲ್ಲಕ ಕಾರಣಕ್ಕೆ ಹೋದ ಪ್ರಾಣ: ಸ್ನೇಹಿತನನ್ನೇ ಕೊಂ*ದು ಜೈಲು ಸೇರಿದ ಯುವಕರು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಹಾಗೂ ನಟ ದರ್ಶನ್ ಅವರ ಆಪ್ತರೆಂದು ಗುರುತಿಸಿಕೊಂಡಿದ್ದ ಧನ್ವೀರ್ ಕೊನೆಗೂ ವಿಚಾರಣೆಗೆ ಹಾಜರಾಗಿದ್ದಾರೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ದೂರವಾಣಿ ಕರೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಧನ್ವೀರ್ ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್. ಆರ್. ನಗರ) ಪೊಲೀಸ್ ಠಾಣೆಗೆ ತೆರಳಿ ವಿಚಾರಣೆಯನ್ನು ಎದುರಿಸಿದ್ದಾರೆ.  

ಆರ್. ಆರ್. ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರ ಮುಂದೆ ಹಾಜರಾದ ಧನ್ವೀರ್ ಅವರನ್ನು ಪೊಲೀಸರು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ದೂರುದಾರ ನಾಗರಾಜ್ ಅವರು ಸಲ್ಲಿಸಿರುವ ಆಡಿಯೋ ಸಾಕ್ಷ್ಯಾಧಾರಗಳು, ಕರೆ ವಿವರಗಳು ಹಾಗೂ ಘಟನೆಯ ವೇಳೆ ನಡೆದ ಬೆಳವಣಿಗೆಗಳ ಕುರಿತು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರು ಧನ್ವೀರ್ ಅವರಿಂದ ಮಾಹಿತಿ ಕಲೆಹಾಕಿದ್ದಾರೆ. ನಿಂದನೆ ಆರೋಪದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು ಎನ್ನಲಾಗಿದ್ದು, ಅದರಂತೆ ಧನ್ವೀರ್ ಠಾಣೆಗೆ ಬಂದು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.  

ಪ್ರಕರಣದ ಹಿನ್ನೆಲೆ   
ಈ ವಿವಾದವು ನಟ ದರ್ಶನ್ ಅವರ ಆಪ್ತ ವಲಯ, ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ನಡುವಿನ ಬಿರುಕಿನಿಂದ ಆರಂಭವಾಯಿತು. ಕೆಲವು ವಿಚಾರಗಳ ಕುರಿತು ಚರ್ಚಿಸಲು ವಿಜಯಲಕ್ಷ್ಮಿ ಅವರೊಂದಿಗೆ ಮ್ಯಾನೇಜರ್ ನಾಗರಾಜ್ ಅವರು ಧನ್ವೀರ್ ಅವರ ಮನೆಗೆ ತೆರಳಿದ್ದಾಗ ಧನ್ವೀರ್ ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಅದಾದ ಬಳಿಕ ನಡೆದ ದೂರವಾಣಿ ಸಂಭಾಷಣೆಯಲ್ಲಿ ಧನ್ವೀರ್ ಏಕವಚನದಲ್ಲಿ ನಿಂದಿಸಿ, ಅವಾಚ್ಯ ಪದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಾಗರಾಜ್ ಅವರು ಆರ್. ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ವೇಳೆ ಮೊಬೈಲ್ ಕರೆಯ ಆಡಿಯೋ ದಾಖಲೆಯನ್ನೂ ಪೊಲೀಸರಿಗೆ ಸಾಕ್ಷಿಯಾಗಿ ಸಲ್ಲಿಸಿದ್ದರು.  

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷ ಪೋಸ್ಟ್‌ಗಳ ಮೂಲಕ ಮಾತಿನ ಚಕಮಕಿ ನಡೆಯಿತು. ದರ್ಶನ್ ಹೆಸರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬರ್ಥದ ಪೋಸ್ಟ್‌ಗಳು ಮತ್ತು ಅದಕ್ಕೆ ಪ್ರತಿಯಾಗಿ 'ಶಕುನಿ' ಎಂಬರ್ಥದ ಪೋಸ್ಟ್‌ಗಳು ಗಮನ ಸೆಳೆದಿದ್ದವು. ಮತ್ತೊಂದೆಡೆ, ವಿಜಯಲಕ್ಷ್ಮಿ ಮತ್ತು ನಾಗರಾಜ್ ಕೆಲವರೊಂದಿಗೆ ತಮ್ಮ ಮನೆಗೆ ಬಂದು ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಧನ್ವೀರ್ ತಂದೆ ತಿಮ್ಮೇಗೌಡ ಅವರು ಕೂಡ ಪ್ರತಿದೂರು ದಾಖಲಿಸಿದ್ದರು.  

ಮುಂದುವರಿದಂತೆ ಈ ಜಟಾಪಟಿ ಕಾನೂನು ಮತ್ತು ನ್ಯಾಯಾಲಯದ ಮೆಟ್ಟಿಲಿಗೂ ಏರಿದ್ದು, ಮಾನಹಾನಿಕರ ಹೇಳಿಕೆ ನೀಡದಂತೆ ನ್ಯಾಯಾಲಯದ ಮೊರೆ ಹೋಗುವುದು, ಇತರ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗುವುದು ಹಾಗೂ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುವುದು ಸೇರಿದಂತೆ ಹಲವು ಬೆಳವಣಿಗೆಗಳು ಘಟಿಸಿವೆ. ಈ ಎಲ್ಲಾ ಹಿನ್ನೆಲೆಯ ನಡುವೆ ನಾಗರಾಜ್ ನೀಡಿರುವ ನಿಂದನೆ ದೂರಿಗೆ ಸಂಬಂಧಿಸಿದಂತೆ ಧನ್ವೀರ್ ಈಗ ಆರ್. ಆರ್. ನಗರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

Add Zee News as a Preferred Source
TAGS:
Cinema