ಹೆಣ್ಣೂರು ಬಾಗಲೂರು ರಸ್ತೆ ವೈಟ್ ಟ್ಯಾಪಿಂಗ್ ಕಾಮಗಾರಿ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ
ಇದೇ ವೇಳೆ ಕಾಮಗಾರಿ ನಿಧಾನಗತಿ ನೋಡಿ ಗುತ್ತಿಗೆದಾರನಿಗೆ ಕೆಬಿಜಿ ತೀವ್ರ ತರಾಟೆ ತೆಗೆದೊಕೊಂಡರು. ಜೊತೆಗೆ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕೆಬಿಜಿ ಡೆಡ್ ಲೈನ್ ನೀಡಿದ್ರು.
ಕಳೆದ 1 ವರ್ಷ ಆರು ತಿಂಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಹೆಣ್ಣೂರು - ಬಾಗಲೂರು ವೈಟ್ ಟಾಪಿಂಗ್ ಕಾಮಗಾರಿಯನ್ನು ಖುದ್ದು ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಇಂದು ಪರಿಶೀಲನೆ ನಡೆಸಿದರು. ಇದೇ ವೇಳೆ ಕಾಮಗಾರಿ ನಿಧಾನಗತಿ ನೋಡಿ ಗುತ್ತಿಗೆದಾರನಿಗೆ ಕೆಬಿಜಿ ತೀವ್ರ ತರಾಟೆ ತೆಗೆದೊಕೊಂಡರು. ಜೊತೆಗೆ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕೆಬಿಜಿ ಡೆಡ್ ಲೈನ್ ನೀಡಿದ್ರು.
ಜಿಬಿಎ ಅಧಿಕಾರಿಗಳಿಗೆ ಚಳಿ ಬಿಡುಸುತ್ತಿರುವ ಕೃಷ್ಣ ಬೈರೇಗೌಡ ಇಂದು ಕೂಡ ಹೆಣ್ಣೂರು ಬಾಗಲೂರು ರಸ್ತೆ ವೈಟ್ ಟ್ಯಾಪಿಂಗ್ ಕಾಮಗಾರಿ ಪರಿಶೀಲನೆ ನಡೆಸಿದರು...ಇದೇ ವೇಳೆ ಗುತ್ತಿಗೆದಾರನಿಗೆ ತೀವ್ರ ತರಾಟೆ ತೆಗೆದುಕೊಂಡ ಕೆಬಿಜಿ, ಪರಿಶೀಲನೆ ವೇಳೆ ಗುತ್ತಿಗೆದಾರರಿಗೆ ತೀವ್ರ ತರಾಟೆಗೆ ತೆಗೆಉಕೊಂಡ ಕೆಬಿಜಿ,ರಸ್ತೆ ಹೀಗಿದ್ರೆ ಜನ ಬೈದೆ ಏನ್ಮಾಡ್ತಾರೆ? ಕಂಟ್ರಾಕ್ಟರ್ ಗಳು ಮಾಡೋ ತಪ್ಪಿಗೆ ನಾವು ಜನರಿಂದ ಬೈಸ್ಕೋಬೇಕು. ಸರ್ಕಾರ ತಲೆ ತಗ್ಗಿಸಬೇಕಾ? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಕೆಬಿಜಿ ಹೆಣ್ಣೂರು-ಬಾಗಲೂರು ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೀತಾ ಇದೆ. ಕಾಮಗಾರಿ ಮಾಡ್ತಾ ಇರೋ ಗುತ್ತಿಗೆದಾರ ಗುಣಮಟ್ಟ ಕೆಲಸ ಮಾಡ್ತಾ ಇದಾರೆ..ಆದರೆ ಕಾಮಗಾರಿ ಬಹಳ ಸ್ಲೋ ಇದೆ. ವಿಳಂಬದಿಂದ ನೂರಾರು ದೂರು ದಿನನಿತ್ಯವಬರ್ತಾ ಇದೆ.
ಕೆಲಸ ಮತ್ತಷ್ಟು ವೇಗ ಮಾಡಲು ಮತ್ತೋಂದು ಎಂಡ್ ನಿಂದ ಮತ್ತೊಬ್ಬ ಗುತ್ತಿಗೆದಾರನಿಗೆ ನೀಡಲು ಕಮಿಷನರ್ ಗೆ ಸೂಚನೆ ನೀಡಿದ್ದೇನೆ..ಎರಡು ತಿಂಗಳಲ್ಲಿ ಕೆಲಸ ಮುಗಿಸಬೇಕು ಎಂದರು.
ಇದೇ ವೇಳೆ ಕೆಲಸ ಶುರುವಾಗಿ ಈಗಾಗಲೇ 1ವರ್ಷ ಆರು ತಿಂಗಳು ಆಗಿದೆ .ಡಿಕೆಶಿಯವರು 4.6 km ವೈಟ್ ಟ್ಯಾಪಿಂಗ್ ಗೆ ಚಾಲನೆ ಕೊಟ್ಟಿದ್ದರು..ಇದೀಗ ಹೆಚ್ಚುವರಿ 400 ಮೀಟರ್ ವಿಸ್ತರಿಸಲು ಶಾಸಕ ಭೈರತಿ ಬಸವರಾಜ್ ಕೇಳಿದ್ದಾರೆ. ಈ ವಿಸ್ತರಣೆಗೆ ನಾನು ಒಪ್ಪಿಗೆ ಸೂಚಿಸಿದ್ದೇನೆ. ಈ ಕಾಮಗಾರಿಯನ್ನು ನಾನು ಖುದ್ದು ನಿಗಾ ಇಡ್ತೀನಿ. ಬೈಕ್ ಸವಾರರು ಬಿದ್ದು ಗಾಯಗೊಳ್ತಾ ಇದಾರೆ. ಎರಡು ತಿಂಗಳಲ್ಲಿ ಹೆಣ್ಣೂರು ಬಾಗಲೂರು ವೈಟ್ ಟ್ಯಾಪಿಂಗ್ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ನಗರದಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಮ್ಮ ಸ್ಪೀಡ್ ಗೆ ತಕ್ಕಂತೆ ಆಗಿಲ್ಲ. ಮಳೆಯಿಂದ ಕಾಮಗಾರಿ ಸ್ಲೋ ಆಗಿದೆ..ಡಿಸೆಂಬರ್ ಅಂತ್ಯದೊಳಗೆ 90 km ವೈಟ್ ಟ್ಯಾಪಿಂಗ್ ಮುಗಿಸಬೇಕಿತ್ತು ಆದ್ರೆ ಮಳೆಯಿಂದ 70 km. ವೈಟ್ ಟ್ಯಾಫಿಂಗ್ ಆಗಿದೆ. ಡಿಸೆಂಬರ್ ಎಂಡ್ ಒಳಗೆ ಮ್ಯಾಕ್ಸಿಮಮ್ ಕವರ್ ಮಾಡ್ತೇವೆ .ಜನವರಿಯಲ್ಲಿ ಮುಂದಿನ ಹಂತದ ವೈಟ್ ಟ್ಯಾಪಿಂಗ್ ಆರಂಭ ಮಾಡ್ತೇವೆ. ಈಗಾಗಲೇ ಈ ಕುರಿತು ಕ್ಯಾಬಿನೆಟ್ ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೆಬಿಜಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಕೆಬಿಜಿ ಸಿಟಿ ರೌಂಡ್ಸ್ ನಿಂದ ಕಾಮಗಾರಿಗಳಿಗೆ ಹಿಡಿದ ಗ್ರಹಣ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿದೆ..ಸೋಮಾರಿ ಅಧಿಕಾರಿಗಳು ಹಾಗು ನಿಧಾನ ಕಾಮಗಾರಿ ನಡೆಸೋ ಗುತ್ತಿಗೆದಾರರಿಗೆ ಕೆಬಿಜಿ ಹೊಣೆಗಾರಿಕೆ ಫಿಕ್ಸ್ ಮಾಡ್ತಾ ಇರೋದು ಜನಮೆಚ್ಚುಗೆಗೆ ಪಾತ್ರ ವಾಗುತ್ತಿದೆ ..