• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಹೆಣ್ಣೂರು ಬಾಗಲೂರು ರಸ್ತೆ ವೈಟ್ ಟ್ಯಾಪಿಂಗ್ ಕಾಮಗಾರಿ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ

ಹೆಣ್ಣೂರು ಬಾಗಲೂರು ರಸ್ತೆ ವೈಟ್ ಟ್ಯಾಪಿಂಗ್ ಕಾಮಗಾರಿ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ

ಇದೇ ವೇಳೆ ಕಾಮಗಾರಿ‌ ನಿಧಾನಗತಿ ನೋಡಿ ಗುತ್ತಿಗೆದಾರನಿಗೆ ಕೆಬಿಜಿ ತೀವ್ರ ತರಾಟೆ ತೆಗೆದೊಕೊಂಡರು. ಜೊತೆಗೆ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕೆಬಿಜಿ ಡೆಡ್ ಲೈನ್ ನೀಡಿದ್ರು.

Written ByChetana Devarmani
Published: Oct 26, 2026, 06:32 PM IST|Updated: Oct 26, 2026, 06:34 PM IST
joinshare
ಹೆಣ್ಣೂರು ಬಾಗಲೂರು ರಸ್ತೆ ವೈಟ್ ಟ್ಯಾಪಿಂಗ್ ಕಾಮಗಾರಿ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಮೊಬೈಲ್ ಬಳಕೆದಾರರೇ... ನವೆಂಬರ್ 1 ರಿಂದ ಬದಲಾಗಿವೆ ಈ ನಿಯಮಗಳು

ಮೊಬೈಲ್ ಬಳಕೆದಾರರೇ... ನವೆಂಬರ್ 1 ರಿಂದ ಬದಲಾಗಿವೆ ಈ ನಿಯಮಗಳು

2

ದಸರಾ ಆಚರಣೆ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಸಮಾಧಾನ.!

3

ಸಲ್ಮಾನ್ ಖಾನ್ ಹೆಸರಲ್ಲಿ ₹2,500 ಕೋಟಿ ಮೆಗಾ ಪ್ರಾಜೆಕ್ಟ್‌! ಐಷಾರಾಮಿ ಗೋಪುರಗಳ ನಿರ್ಮಾಣಕ್ಕೆ ಸಜ್ಜು

4

10,000mAh ಬೃಹತ್ ಬ್ಯಾಟರಿ, 120Hz AMOLED ಡಿಸ್‌ಪ್ಲೇ! ವಿವೋ Y600 5G ಫೋನ್ ಬಿಡುಗಡೆ

5

ಪತಿ ಮೃತಪಟ್ಟರೆ ಪತ್ನಿ ಕ್ರೆಡಿಟ್ ಕಾರ್ಡ್ ಸಾಲ ತೀರಿಸಬೇಕಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕಳೆದ 1 ವರ್ಷ ಆರು ತಿಂಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಹೆಣ್ಣೂರು - ಬಾಗಲೂರು ವೈಟ್ ಟಾಪಿಂಗ್ ಕಾಮಗಾರಿಯನ್ನು ಖುದ್ದು ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಇಂದು ಪರಿಶೀಲನೆ ನಡೆಸಿದರು. ಇದೇ ವೇಳೆ ಕಾಮಗಾರಿ‌ ನಿಧಾನಗತಿ ನೋಡಿ ಗುತ್ತಿಗೆದಾರನಿಗೆ ಕೆಬಿಜಿ ತೀವ್ರ ತರಾಟೆ ತೆಗೆದೊಕೊಂಡರು. ಜೊತೆಗೆ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕೆಬಿಜಿ ಡೆಡ್ ಲೈನ್ ನೀಡಿದ್ರು.

ಜಿಬಿಎ ಅಧಿಕಾರಿಗಳಿಗೆ ಚಳಿ ಬಿಡುಸುತ್ತಿರುವ ಕೃಷ್ಣ ಬೈರೇಗೌಡ ಇಂದು ಕೂಡ ಹೆಣ್ಣೂರು ಬಾಗಲೂರು ರಸ್ತೆ ವೈಟ್ ಟ್ಯಾಪಿಂಗ್ ಕಾಮಗಾರಿ ಪರಿಶೀಲನೆ ನಡೆಸಿದರು...ಇದೇ ವೇಳೆ ಗುತ್ತಿಗೆದಾರನಿಗೆ ತೀವ್ರ ತರಾಟೆ ತೆಗೆದುಕೊಂಡ ಕೆಬಿಜಿ, ಪರಿಶೀಲನೆ ವೇಳೆ ಗುತ್ತಿಗೆದಾರರಿಗೆ ತೀವ್ರ ತರಾಟೆಗೆ ತೆಗೆಉಕೊಂಡ ಕೆಬಿಜಿ,ರಸ್ತೆ ಹೀಗಿದ್ರೆ ಜನ ಬೈದೆ ಏನ್ಮಾಡ್ತಾರೆ? ಕಂಟ್ರಾಕ್ಟರ್ ಗಳು ಮಾಡೋ ತಪ್ಪಿಗೆ ನಾವು ಜನರಿಂದ ಬೈಸ್ಕೋಬೇಕು. ಸರ್ಕಾರ ತಲೆ ತಗ್ಗಿಸಬೇಕಾ? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಕೆಬಿಜಿ ಹೆಣ್ಣೂರು-ಬಾಗಲೂರು ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೀತಾ ಇದೆ. ಕಾಮಗಾರಿ ಮಾಡ್ತಾ ಇರೋ ಗುತ್ತಿಗೆದಾರ ಗುಣಮಟ್ಟ ಕೆಲಸ ಮಾಡ್ತಾ ಇದಾರೆ..ಆದರೆ ಕಾಮಗಾರಿ ಬಹಳ ಸ್ಲೋ ಇದೆ. ವಿಳಂಬದಿಂದ ನೂರಾರು ದೂರು ದಿನನಿತ್ಯವಬರ್ತಾ ಇದೆ.
ಕೆಲಸ ಮತ್ತಷ್ಟು ವೇಗ ಮಾಡಲು ಮತ್ತೋಂದು ಎಂಡ್ ನಿಂದ ಮತ್ತೊಬ್ಬ ಗುತ್ತಿಗೆದಾರನಿಗೆ ನೀಡಲು ಕಮಿಷನರ್ ಗೆ ಸೂಚನೆ ನೀಡಿದ್ದೇನೆ..ಎರಡು ತಿಂಗಳಲ್ಲಿ ಕೆಲಸ ಮುಗಿಸಬೇಕು ಎಂದರು.

ಇದೇ ವೇಳೆ ಕೆಲಸ ಶುರುವಾಗಿ ಈಗಾಗಲೇ 1ವರ್ಷ ಆರು‌ ತಿಂಗಳು ಆಗಿದೆ .ಡಿಕೆಶಿಯವರು 4.6 km ವೈಟ್ ಟ್ಯಾಪಿಂಗ್ ಗೆ ಚಾಲನೆ ಕೊಟ್ಟಿದ್ದರು..ಇದೀಗ ಹೆಚ್ಚುವರಿ 400  ಮೀಟರ್ ವಿಸ್ತರಿಸಲು ಶಾಸಕ ಭೈರತಿ ಬಸವರಾಜ್ ಕೇಳಿದ್ದಾರೆ. ಈ ವಿಸ್ತರಣೆಗೆ ನಾನು ಒಪ್ಪಿಗೆ ಸೂಚಿಸಿದ್ದೇನೆ. ಈ ಕಾಮಗಾರಿಯನ್ನು ನಾನು ಖುದ್ದು ನಿಗಾ ಇಡ್ತೀನಿ. ಬೈಕ್ ಸವಾರರು ಬಿದ್ದು ಗಾಯಗೊಳ್ತಾ ಇದಾರೆ. ಎರಡು ತಿಂಗಳಲ್ಲಿ ಹೆಣ್ಣೂರು ಬಾಗಲೂರು ವೈಟ್ ಟ್ಯಾಪಿಂಗ್ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ನಗರದಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಮ್ಮ ಸ್ಪೀಡ್ ಗೆ ತಕ್ಕಂತೆ ಆಗಿಲ್ಲ. ಮಳೆಯಿಂದ ಕಾಮಗಾರಿ ಸ್ಲೋ ಆಗಿದೆ..ಡಿಸೆಂಬರ್ ಅಂತ್ಯದೊಳಗೆ 90 km ವೈಟ್ ಟ್ಯಾಪಿಂಗ್ ಮುಗಿಸಬೇಕಿತ್ತು ಆದ್ರೆ ಮಳೆಯಿಂದ 70 km. ವೈಟ್ ಟ್ಯಾಫಿಂಗ್ ಆಗಿದೆ. ಡಿಸೆಂಬರ್ ಎಂಡ್ ಒಳಗೆ ಮ್ಯಾಕ್ಸಿಮಮ್  ಕವರ್ ಮಾಡ್ತೇವೆ .ಜನವರಿಯಲ್ಲಿ ಮುಂದಿನ ಹಂತದ ವೈಟ್ ಟ್ಯಾಪಿಂಗ್ ಆರಂಭ ಮಾಡ್ತೇವೆ. ಈಗಾಗಲೇ ಈ ಕುರಿತು ಕ್ಯಾಬಿನೆಟ್ ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೆಬಿಜಿ ಮಾಹಿತಿ‌ ನೀಡಿದ್ದಾರೆ.

ಒಟ್ಟಾರೆ ಕೆಬಿಜಿ ಸಿಟಿ ರೌಂಡ್ಸ್ ನಿಂದ ಕಾಮಗಾರಿಗಳಿಗೆ ಹಿಡಿದ ಗ್ರಹಣ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿದೆ..ಸೋಮಾರಿ ಅಧಿಕಾರಿಗಳು ಹಾಗು ನಿಧಾನ ಕಾಮಗಾರಿ ನಡೆಸೋ ಗುತ್ತಿಗೆದಾರರಿಗೆ ಕೆಬಿಜಿ ಹೊಣೆಗಾರಿಕೆ ಫಿಕ್ಸ್ ಮಾಡ್ತಾ ಇರೋದು ಜನಮೆಚ್ಚುಗೆಗೆ ಪಾತ್ರ ವಾಗುತ್ತಿದೆ ..

 

Add Zee News as a Preferred Source
TAGS:
Kannada News