SOCIAL MEDIA

Newsletter

PARTNER SITES
Select Language Select State

SIR ಅಂತಿಮ ಪಟ್ಟಿ ಪ್ರಕಟ: ರಾಜ್ಯದಲ್ಲಿ ಬರೋಬ್ಬರಿ 99 ಲಕ್ಷ 32 ಸಾವಿರ ಮತದಾರರು ಡಿಲೀಟ್

ರಾಜ್ಯದಲ್ಲಿ SIR ನಲ್ಲಿ 99,32,303 ಮತದಾರರು ಡಿಲೀಟ್ ಆಗಿದ್ದು,ಬೆಂಗಳೂರು ನಗರದಲ್ಲಿ 44,80,212 ಮತದಾರರು ಡಿಲೀಟ್ ಆಗಿದೆ. ಬೆಂಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಒಟ್ಟು 54,52,091 ಮತದಾರರು ಡಿಲೀಟ್ ಆಗಿದೆ.

Written By Chetana Devarmani
Published: Oct 27, 2026, 05:15 PM IST | Updated: Oct 27, 2026, 05:16 PM IST
Join

ಬೆಂಗಳೂರು: ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಿರ್ಣಯಕ ಹಂತಕ್ಕೆ ಬಂದು ತಲುಪಿದೆ. ಎಸ್ ಐ ಆರ್ ಅಂತಿಮ ಪಟ್ಟಿ ಪ್ರಕಟಿಸಿರುವ ರಾಜ್ಯ ಚುನಾವಣಾ ಮುಖ್ಯ ಅಧಿಕಾರಿ ಅನ್ಬು ಕುಮಾರ್ , ರಾಜ್ಯದಲ್ಲಿ ಬರೋಬ್ಬರಿ 99 ಲಕ್ಷ 32 ಸಾವಿರ  ಮತದಾರರು ಡಿಲೀಟ್ ಆಗಿದ್ದಾರೆ. ಒಟ್ಟು ಡಿಲಿಟ್ ಆದ ಮತದಾರರ ಪೈಕಿ ಬೆಂಗಳೂರಿನಲ್ಲಿ ಹೆಚ್ಚು ಡಿಲೀಟ್ ಆಗಿದ್ದಾರೆ. ರಾಜ್ಯದಲ್ಲಿ SIR ನಲ್ಲಿ 99,32,303 ಮತದಾರರು ಡಿಲೀಟ್ ಆಗಿದ್ದು,ಬೆಂಗಳೂರು ನಗರದಲ್ಲಿ 44,80,212 ಮತದಾರರು ಡಿಲೀಟ್ ಆಗಿದೆ. ಬೆಂಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಒಟ್ಟು 54,52,091 ಮತದಾರರು ಡಿಲೀಟ್ ಆಗಿದೆ.

ಇದೇ ವೇಳೆ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಅನ್ಬು ಕುಮಾರ್, ಯಾವಾದಾದರೂ ಮತದಾರನ ಹೆಸರು ಇಲ್ಲದೆ ಇದ್ದರೆ ಸೇರ್ಪಡೆಗೆ ಅವಕಾಶ ಇದೆ. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿರಲಿದೆ. ಸೂಕ್ತ ದಾಖಲಾತಿಗಳು ಇದ್ದಲ್ಲಿ ಫಾರಂ ನಂಬರ್ 6 ಕೊಟ್ಟು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬಹುದು. ಈ ರೀತಿಯ ಸನ್ನಿವೇಶಗಳು ಹೆಚ್ಚು ಕಂಡುಬಂದಲ್ಲಿ ವಿಶೇಷ ಮತದಾರ ಸೇರ್ಪಡೆ ಆಂದೋಲನಾ ಆರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಫಾರಂ 7 ಬಲ್ಕ್ ಆಗಿ ಸಲ್ಲಿಕೆ ಆಗಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡ ಚುನಾವಣಾ ಆಯೋಗ, ಅಕ್ರಮ ವಲಸಿಗರಿಗೆ ಮತದಾರರ ಪಟ್ಟಿಯಲ್ಲಿ ಸಾವಿರಕ್ಕಿಂತ ಕಡಿಮೆ ಇದ್ದಾರೆ..ಇದರ ಬಗ್ಗೆ ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದ್ದೇವೆ ಎಂದರು. 

ಎಸ್ ಐಆರ್ ಅಂತಿಮ ಕರಡು ಮತಗಳ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 5,54,32,314ರ ಇದ್ದ ಸಂಖ್ಯೆ 4,55,00,011ಕ್ಕೆ ಇಳಿಕೆಯಾಗಿದೆ.99 ಲಕ್ಷದ 32 ಸಾವಿರದ 303 ಮತಗಳು ಡಿಲೀಟ್ ಆಗಿದ್ದು,2,25,50,493 ಪುರುಷ ಮತದಾರರು,2,29,12,355 ಮಹಿಳಾ ಮತದಾರರು,2841 ಟ್ರಾನ್ಸ್ ಜೆಂಡರ್ ಮತದಾರರು, 44,322 ಸೇವಾ ಮತದಾರರು, 3252 ಭಾರತದ ಪೌರತ್ವ ಹೊಂದಿರುವ ಹೊರದೇಶದಲ್ಲಿರುವ ಮತದಾರರು ಇದ್ದಾರೆ. ಜೊತೆಗೆ 5,65,340 ವಿಶೇಷಚೇತ ಮತದಾರರು,18-19 ವರ್ಷದೊಳಗಿನ 6,83,364 ಮತದಾರರು,85 ವರ್ಷದ ಮೇಲ್ಪಟ್ಟ 3,92,134 ಮತದಾರರು ಇದ್ದಾರೆ. ರಾಜ್ಯದಲ್ಲಿ ಪುರುಷ ಮತದಾರರಿಗಿಂದ ಮಹಿಳಾ ಮತದಾರರೇ ಅಧಿಕವಾಗಿದ್ದು ಒಟ್ಟು ಮತದಾರರ ಸಂಖ್ಯೆ 4,55,00,011 ,2,25,50,493 ಪುರುಷ ಮತದಾರರು 2,29,12,355 ಮಹಿಳಾ ಮತದಾರರು ಇದ್ದಾರೆ. ಒಟ್ಟಾರೆ ಎಸ್ ಐಆರ್ ಅಂತಿಮ‌ಪಟ್ಟಿ ಪ್ರಕಟವಾಗಿದ್ದು ಮತದಾರರು ತಮ್ಮ ಹೆಸರು ಪರಿಶೀಲಿಸುವಂತೆ ಅನ್ಬು ಕುಮಾರ್ ಆಗ್ರಹಿಸಿದ್ದಾರೆ .
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES