• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಪ್ರೇಮದ ಊರಲಿ ಸಿನಿಮಾ ನೋಡೋಕೆ ಹೋದಾಗ ಕಳ್ಳನ ಕೈಚಳಕ! 130 ಗ್ರಾಂ ಚಿನ್ನ ಎಗರಿಸಿದ ಖದೀಮ ಕೊನೆಗೂ ಲಾಕ್‌!

ಪ್ರೇಮದ ಊರಲಿ ಸಿನಿಮಾ ನೋಡೋಕೆ ಹೋದಾಗ ಕಳ್ಳನ ಕೈಚಳಕ! 130 ಗ್ರಾಂ ಚಿನ್ನ ಎಗರಿಸಿದ ಖದೀಮ ಕೊನೆಗೂ ಲಾಕ್‌!

Family watched premada urali movie thief caught hiding under cot: ಸಿನಿಮಾ ನೋಡಲು ಹೋದ ಕುಟುಂಬದ ಮನೆಗೆ ಕನ್ನ ಹಾಕಿದ ಖದೀಮನೊಬ್ಬ, ಇನ್ನೇನು ಕದ್ದ ಚಿನ್ನದೊಂದಿಗೆ ಎಸ್ಕೇಪ್ ಆಗಬೇಕು ಅನ್ನುವಷ್ಟರಲ್ಲಿ ಮನೆ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಾನೆ.

Written ByRamya. R. Gowda
Published: Oct 11, 2026, 05:08 PM IST|Updated: Oct 11, 2026, 05:16 PM IST
joinshare
ಪ್ರೇಮದ ಊರಲಿ ಸಿನಿಮಾ ನೋಡೋಕೆ ಹೋದಾಗ ಕಳ್ಳನ ಕೈಚಳಕ! 130 ಗ್ರಾಂ ಚಿನ್ನ ಎಗರಿಸಿದ ಖದೀಮ ಕೊನೆಗೂ ಲಾಕ್‌!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ರಿಕ್ಷಾ ತುಳಿದು ಪತ್ನಿಯನ್ನ ಪೊಲೀಸ್‌ ಮಾಡಿದ ಗಂಡನಿಗೆ ಶಾಕ್‌! ಖಾಕಿ ತೊಟ್ಟ ಬಳಿಕ ಕೈಕೊಟ್ಟ ಪತ್ನಿ...

ರಿಕ್ಷಾ ತುಳಿದು ಪತ್ನಿಯನ್ನ ಪೊಲೀಸ್‌ ಮಾಡಿದ ಗಂಡನಿಗೆ ಶಾಕ್‌! ಖಾಕಿ ತೊಟ್ಟ ಬಳಿಕ ಕೈಕೊಟ್ಟ ಪತ್ನಿ...

2

ರಾಯಚೂರು PWD ಕಚೇರಿಯಲ್ಲಿ ಕಪ್ಪು ಗೊಂಬೆ ಪ್ರತ್ಯಕ್ಷ! ವಾಮಾಚಾರದ ಶಂಕೆ, ಇದರ ಹಿಂದಿರುವರ್ಯಾರು?

3

ಸಿಜೆಪಿ ಪ್ರತಿಭಟನೆ ನಟ ಇಮ್ರಾನ್ ಖಾನ್ ಸೇರಿ 400 ಕ್ಕೂ ಹೆಚ್ಚು ಜನರ ಬಂಧನ

4

ನಮ್ಮ ಮೆಟ್ರೋದಲ್ಲಿ ಯುವತಿಯ ಪುಲ್ ಅಪ್ ಸ್ಟಂಟ್ : BMRCL ಮೌನ, ವಿಡಿಯೋ ವೈರಲ್‌

5

ನವರಾತ್ರಿಯ 9 ದಿನ.. ದೇವಿಗೆ 9 ಬಗೆಯ ನೈವೇದ್ಯ ಮನೆಯಲ್ಲೇ ಮಾಡಿ, ಅಮ್ಮನ ಆಶೀರ್ವಾದ ಪಡೆಯಿರಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಸಿನಿಮಾ ನೋಡಲು ಹೋದ ಕುಟುಂಬದ ಮನೆಗೆ ಕನ್ನ ಹಾಕಿದ ಖದೀಮನೊಬ್ಬ, ಇನ್ನೇನು ಕದ್ದ ಚಿನ್ನದೊಂದಿಗೆ ಎಸ್ಕೇಪ್ ಆಗಬೇಕು ಅನ್ನುವಷ್ಟರಲ್ಲಿ ಮನೆ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಮನೆಯವರೆಲ್ಲರೂ ಸಿನಿಮಾ ನೋಡಲು ಹೋಗಿದ್ದ ಸಮಯವನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಕಳ್ಳ, ಬರೋಬ್ಬರಿ 130 ಗ್ರಾಂ ಚಿನ್ನ ಕಳವು ಮಾಡಿದ್ದಾನೆ. ಆದ್ರೆ ಮನೆಗೆ ವಾಪಸ್ ಬಂದ ಮಾಲೀಕನಿಗೆ ಬಾಗಿಲು ಲಾಕ್ ಆಗಿದ್ದನ್ನು ಕಂಡು ಅನುಮಾನ ಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳನ ಕೃತ್ಯ ಬಯಲಾಗಿದೆ. ಅಷ್ಟಕ್ಕೂ ಮನೆಯೊಳಗೆ ಅವಿತಿದ್ದ ಕಳ್ಳ ಸಿಕ್ಕಿಬಿದ್ದಿದ್ದೇಗೆ? ಈ ಸ್ಟೋರಿ ನೋಡಿ.

ಸಿನಿಮಾ ನೋಡಲು ಹೋದ ಕುಟುಂಬದ ಮನೆಯಲ್ಲಿ ಕಳ್ಳನ ಕೈಚಳಕ!
ಹೌದು.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣಪ್ಪ ಎಂಬುವವರ ಕುಟುಂಬದವರು 'ಪ್ರೇಮದ ಊರಲಿ' ಸಿನಿಮಾ ನೋಡಲು ತೆರಳಿದ್ದರು. ಇದೇ ಸಮಯವನ್ನು ಬಳಸಿಕೊಂಡ ಖದೀಮ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾನೆ.ಮನೆಯಲ್ಲಿದ್ದ ಬರೋಬ್ಬರಿ 130 ಗ್ರಾಂ ಚಿನ್ನವನ್ನು ಕಳವು ಮಾಡಿದ್ದಾನೆ. ಕಳ್ಳತನ ಮಾಡಿ ಅಲ್ಲಿಂದ ಪರಾರಿಯಾಗಲು ಸಿದ್ಧನಾಗಿದ್ದ ಖದೀಮನಿಗೆ, ಮನೆ ಮಾಲೀಕ ವಾಪಸ್ ಬಂದಿದ್ದೇ ದೊಡ್ಡ ಸಂಕಷ್ಟವಾಗಿದೆ.


ಮನೆಗೆ ಬಂದ ಮಾಲೀಕನಿಗೆ ಒಳಗಿನಿಂದ ಬಾಗಿಲು ಲಾಕ್ ಆಗಿರುವುದು ಕಂಡು ಅನುಮಾನ ಬಂದಿದೆ. ತಕ್ಷಣ ಸಿಸಿಟಿವಿ ಪರಿಶೀಲಿಸಿದಾಗ ಮನೆಯೊಳಗೆ ಕಳ್ಳ ನುಗ್ಗಿರುವ ವಿಚಾರ ಬೆಳಕಿಗೆ ಬಂದಿದೆ.ಕೂಡಲೇ ಮನೆಗೆ ತೆರಳಿ ಹುಡುಕಾಟ ನಡೆಸಿದ ಕುಟುಂಬಸ್ಥರಿಗೆ ಮಂಚದ ಕೆಳಗೆ ಅವಿತು ಕುಳಿತಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ. ಕದ್ದಿದ್ದ 130 ಗ್ರಾಂ ಚಿನ್ನದ ಸಮೇತ ಆರೋಪಿಯನ್ನು ಹಿಡಿದ ಮನೆಯವರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಿನಿಮಾ ಮುಗಿಸಿ ಮನೆಗೆ ಬಂದ ಕುಟುಂಬಕ್ಕೆ ಕಳ್ಳನನ್ನು ಹಿಡಿಯುವ ಅನಿರೀಕ್ಷಿತ ಸನ್ನಿವೇಶ ಎದುರಾಗಿತ್ತು.

ಬಂಧಿತ ಆರೋಪಿಯನ್ನು ಕೇರಳ ಮೂಲದ ಅಜಯ್ ಎಂದು ಗುರುತಿಸಲಾಗಿದೆ. ಕೇರಳದ ಚಿತ್ತಿಲಪಲ್ಲಿ ಮೂಲದ ಈತ, ಯಲಹಂಕ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತರೊಂದಿಗೆ ವಾಸವಿದ್ದ ಎನ್ನಲಾಗಿದೆ.ಓಲಾ, ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ, ಕಳ್ಳತನಕ್ಕೂ ಮುನ್ನ ಎರಡರಿಂದ ಮೂರು ದಿನಗಳ ಕಾಲ ಮನೆಯವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಎನ್ನಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯ ವಿಚಾರಣೆ ಮುಂದುವರಿದಿದೆ.

ಸಿನಿಮಾ ನೋಡಲು ಹೋದ ಕುಟುಂಬದ ಮನೆಗೆ ಕನ್ನ ಹಾಕಲು ಬಂದಿದ್ದ ಕಳ್ಳ, ಕೊನೆಗೆ ಮಂಚದ ಕೆಳಗೆ ಅವಿತು ಕುಳಿತು ಸಿಕ್ಕಿಬಿದ್ದಿದ್ದಾನೆ. ಕಳ್ಳತನಕ್ಕೆ ಮುನ್ನವೇ ಮನೆಯವರ ಚಲನವಲನ ಗಮನಿಸಿದ್ದ ಎನ್ನಲಾದ ಆರೋಪಿಯನ್ನು ಕುಟುಂಬಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮನೆಗೆ ಬೀಗ ಹಾಕುವಾಗ ಭದ್ರತೆ ಬಗ್ಗೆ ಎಚ್ಚರ ವಹಿಸುವುದು ಎಷ್ಟು ಮುಖ್ಯ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

 

Add Zee News as a Preferred Source
TAGS:
Kannada News