• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಕಷ್ಟಪಟ್ಟು ದುಡಿದು ಬದುಕುತ್ತಿದ್ದವರ ಮೇಲೆಯೇ ಪುಂಡರ ದೌಲತ್ತು! ಬೇಕರಿ, ಕಾಂಡಿಮೆಂಟ್ಸ್ ಅಂಗಡಿಯಲ್ಲಿ ಕಿರಿಕ್ ಮಾಡಿ ರಂಪಾಟ.. ಅಸಲಿಗೆ ನಡೆದಿದ್ದೇನು?

ಕಷ್ಟಪಟ್ಟು ದುಡಿದು ಬದುಕುತ್ತಿದ್ದವರ ಮೇಲೆಯೇ ಪುಂಡರ ದೌಲತ್ತು! ಬೇಕರಿ, ಕಾಂಡಿಮೆಂಟ್ಸ್ ಅಂಗಡಿಯಲ್ಲಿ ಕಿರಿಕ್ ಮಾಡಿ ರಂಪಾಟ.. ಅಸಲಿಗೆ ನಡೆದಿದ್ದೇನು?

ಅವರು ಜೀವನಕ್ಕಾಗಿ ಸಣ್ಣ ಬೇಕರಿ, ಕಾಂಡಿಮೆಂಟ್ಸ್ ಅಂಗಡಿ ಇಟ್ಕೊಂಡು ಜೀವನ ಮಾಡುತ್ತಿದ್ರು. ಕಷ್ಟಪಟ್ಟು ದುಡಿದು ತಿನ್ನೋರ ಮೇಲೆನೇ ಪುಂಡರು ದೌಲತ್ತು ತೋರಿಸೋದು. ಹಾಗೇ ಕಾಂಡಿಮೆಂಟ್ಸ್ ಬಳಿ ಬಂದವರು ಕಿರಿಕ್ ಮಾಡಿ ದೊಡ್ಡ ಗಲಾಟೆ ಮಾಡಿದ್ದಾರೆ. ಹಾಗಾದ್ರೆ ಅಲ್ಲಿ ಆಗಿದ್ದೇನೂ ಎಂಬುದನ್ನ ಕಂಪ್ಲೀಟ್ ಆಗಿ ಹೇಳ್ತಿವಿ ನೋಡಿ.

Written ByRamya. R. Gowda
Published: Oct 28, 2026, 06:50 PM IST|Updated: Oct 28, 2026, 06:53 PM IST
joinshare
ಕಷ್ಟಪಟ್ಟು ದುಡಿದು ಬದುಕುತ್ತಿದ್ದವರ ಮೇಲೆಯೇ ಪುಂಡರ ದೌಲತ್ತು! ಬೇಕರಿ, ಕಾಂಡಿಮೆಂಟ್ಸ್ ಅಂಗಡಿಯಲ್ಲಿ ಕಿರಿಕ್ ಮಾಡಿ ರಂಪಾಟ.. ಅಸಲಿಗೆ ನಡೆದಿದ್ದೇನು?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಒಣಗಿದ ಚಹಾ ಎಲೆ ತಿಂದರೆ ಅತಿಸಾರ ನಿಲ್ಲುತ್ತಾ? ತಜ್ಞರು ಹೇಳುವುದೇನು?

ಒಣಗಿದ ಚಹಾ ಎಲೆ ತಿಂದರೆ ಅತಿಸಾರ ನಿಲ್ಲುತ್ತಾ? ತಜ್ಞರು ಹೇಳುವುದೇನು?

2

ಅಭಿಷೇಕ್ ಶರ್ಮಾ ಪವರ್ ಹಿಟ್ಟಿಂಗ್ ಹಿಂದಿನ ಸೀಕ್ರೆಟ್ ಇದೇ ನೋಡಿ..! ಈ ಟ್ರಿಕ್ ಫಾಲೋ ಮಾಡಿದ್ರೆ ನೀವೂ ಸಿಕ್ಸರ್ ಕಿಂಗ್!

3

ಕಷ್ಟಪಟ್ಟು ದುಡಿದು ಬದುಕುತ್ತಿದ್ದವರ ಮೇಲೆಯೇ ಪುಂಡರ ದೌಲತ್ತು! ಬೇಕರಿ, ಕಾಂಡಿಮೆಂಟ್ಸ್ ಅಂಗಡಿಯಲ್ಲಿ ಕಿರಿಕ್ ಮಾಡಿ ರಂಪಾಟ.. ಅಸಲಿಗೆ ನಡೆದಿದ್ದೇನು?

4

ಸ್ಪೇನ್‌ನಲ್ಲಿ ಭೀಕರ ರೈಲು ಅಪಘಾತ.. ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ, 40ಕ್ಕೂ ಹೆಚ್ಚು ಮಂದಿ ಸಾವು! ಅಪಘಾತಕ್ಕೆ ಬೆಚ್ಚಿಬಿದ್ದ Spain

5

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ.. ಭಕ್ತರಿಗಾಗಿ ಭರ್ಜರಿ ಸಿದ್ಧತೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bangalore peenya near condiments shop fight: ಅವರು ಜೀವನಕ್ಕಾಗಿ ಸಣ್ಣ ಬೇಕರಿ, ಕಾಂಡಿಮೆಂಟ್ಸ್ ಅಂಗಡಿ ಇಟ್ಕೊಂಡು ಜೀವನ ಮಾಡುತ್ತಿದ್ರು. ಕಷ್ಟಪಟ್ಟು ದುಡಿದು ತಿನ್ನೋರ ಮೇಲೆನೇ ಪುಂಡರು ದೌಲತ್ತು ತೋರಿಸೋದು. ಹಾಗೇ ಕಾಂಡಿಮೆಂಟ್ಸ್ ಬಳಿ ಬಂದವರು ಕಿರಿಕ್ ಮಾಡಿ ದೊಡ್ಡ ಗಲಾಟೆ ಮಾಡಿದ್ದಾರೆ. ಹಾಗಾದ್ರೆ ಅಲ್ಲಿ ಆಗಿದ್ದೇನೂ ಎಂಬುದನ್ನ ಕಂಪ್ಲೀಟ್ ಆಗಿ ಹೇಳ್ತಿವಿ ನೋಡಿ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಕರಿ, ಕಾಂಡಿಮೆಂಟ್ಸ್ ಗಳಲ್ಲಿ ಸಾಲ ಕೇಳಿ ಹಲ್ಲೆ ಮಾಡೋದು ಧಮ್ಕಿ ಹಾಕೋದು  ಕಾಮನ್ ಆಗಿದೆ. ಪೊಲೀಸರು ಎಷ್ಟೇ ಕ್ರಮ ಕೈಗೊಂಡರು ಇಂತವರ ಪುಂಡಾಟಕ್ಕೆ  ಮಾತ್ರ ಬ್ರೇಕ್ ಬೀಳ್ತಿಲ್ಲ. ಈಗ ಪೀಣ್ಯಾದಲ್ಲಿ ಎರಡು ಕಾಂಡಿಮೆಂಟ್ಸ್ ಗಳಲ್ಲಿ ಗಲಾಟೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ಹೌದು,ಮಹಿಳೆ ಎಂತಲೂ ನೋಡದೆ ಎಳೆದಾಡಿ ಆವಾಜ್,ಕೊರಳ‌ ಪಟ್ಟಿ ಹಿಡಿದು ಹಲ್ಲೆ ಮಾಡಿದ  ಪುಂಡರು, ಪೀಸ್ ಪೀಸ್ ಆಗಿ ಬಿದ್ದಿರುವ ಬಾಟಲ್ಗಳು, ಪುಟ್ ಪಾತ್ ನಲ್ಲಿ ಚೆಲ್ಲಾಪಿಲ್ಲಿಯಾಗಿರುವ ತಿಂಡಿ ತಿನಿಸು ಇದಕ್ಕೆಲ್ಲ ಕಾರಣ ನಿನ್ನೆ ನಡೆದ ಗಲಾಟೆ.ಇದು ಪೀಣ್ಯದ ಹೆಮ್ ಎಂ ಟಿ ಲೇಔಟ್ ನಲ್ಲಿರುವ ರತನ್ ಬೇಕರಿ ಮತ್ತು ಕಾಂಡಿಮೆಂಟ್ಸ್ ಇಲ್ಲಿ ಅಜಿತ್ ಅನ್ನೋರು ಸುಮಾರು ಎಂಟು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ನಿನ್ನೆ ಮಹೇಶ್ ಎನ್ನುವ ಯುವಕ ಬಂದು ಸಾಲ ಕೇಳಿದ್ದಾನೆ ಈಗಾಗಲೇ 690 ರೂಪಾಯಿ ಬಾಕಿಯಿದೆ ಕ್ಲಿಯರ್ ಮಾಡಿ ಎಂದು ಹೇಳಿದ್ದಾರೆ.ಅದಕ್ಕೆ ನನ್ನ ಬಳಿಯೇ ಹಣ ಕೇಳ್ತಿರ ಎಂದು ಆವಾಜ್ ಹಾಕಿ ಬೇಕರಿ ಒಳಗಡೆ ನುಗ್ಗಿ ದಾಂಧಲೆ ಮಾಡಿ ಮಹಿಳೆಯನ್ನು ತಳ್ಳಾಡಿದ್ದಾನೆ.ನಂತರ ಅವರದ್ದೇ ಇನ್ನೊಂದು ಕಾಂಡಿಮೆಂಟ್ಸ್ ಬಳಿ ಬಂದು ಬಾಟಲ್ ಗಳನ್ನೆಲ್ಲ ಹೊಡೆದು ಹಾಕಿ ತಿಂಡಿ ತಿನಿಸುಗಳನ್ನ ರಸ್ತೆಗೆ ಎಸೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದನಂತೆ.

ಇನ್ನೂ ಈ ಬೇಕರಿ ಬಳಿ ಇದೆ ತರ ಮೂರ್ನಾಲ್ಕು ಬಾರಿ ಗಲಾಟೆ ‌ಆಗಿದೆಯಂತೆ‌.  ಬೇಕರಿ ಮತ್ತು ಕಾಂಡಿಮೆಂಟ್ಸ್ ಗಳಲ್ಲಿ ಬಂದು ಟೀ, ಸಿಗರೇಟ್, ಕೇಳೊದು ಹಣ ಕೇಳಿದ್ರೆ ಹಲ್ಲೆ ಮಾಡೋದು‌ ಕಾಮನ್ ಆಗಿದೆ. ಪೊಲೀಸರು ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿದರು. ಘಟನೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಆರೋಪಿಗಳ ‌ಪತ್ತೆಗೆ ಮುಂದಾಗಿದ್ದಾರೆ.


ಇನ್ನು ಈ ಬೇಕರಿ ಬಳಿ ಪ್ರತಿದಿನ ನೂರಾರು ಜನ ಗುಂಪು ಕಟ್ಟಿಕೊಂಡಿರುತ್ತಾರಂತೆ. ರೆಸಿಡೆನ್ಸಿಯಲ್ ಏರಿಯಾ ಆಗಿರೋದರಿಂದ ಜನ ಓಡಾಡೋದಕ್ಕೆ ಕಷ್ಟ ಆಗುತ್ತೆ ಸಂಬಂಧ‌ಪಟ್ಟರಿಗೆ ದೂರು ನೀಡಿದ್ದೇವೆ ಇನ್ನಾದ್ರು ‌ಕ್ರಮ‌ಕೈಗೊಳ್ಳಿ ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಿ ಸರಿಯಾದ ಕ್ರಮ ಕೈಗೊಳ್ಳಲಿ ,ಇಂತಹ ಪುಂಡರ ಆಟಕ್ಕೆ ಬ್ರೇಕ್ ಬೀಳಲಿ ಅನ್ನೋದು ಅಂಗಡಿ ಮಾಲೀಕರ ಮನವಿಯಾಗಿದೆ.

 

Add Zee News as a Preferred Source
TAGS:
Kannada News