• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಂದನ್ ಕೊಲೆ ಕೇಸ್; ಸಲಿಂಗ ಸಂಬಂಧದ ವಿಚಾರಕ್ಕೆ ಜಿಮ್ ಟ್ರೈನರ್ ಹತ್ಯೆ!

ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಂದನ್ ಕೊಲೆ ಕೇಸ್; ಸಲಿಂಗ ಸಂಬಂಧದ ವಿಚಾರಕ್ಕೆ ಜಿಮ್ ಟ್ರೈನರ್ ಹತ್ಯೆ!

ಕೊಲೆಗೂ ಮುನ್ನ ಏನೆಲ್ಲಾ ನಡೆದಿತ್ತು..? ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಸಿಕ್ಕಿರುವ ಸಾಕ್ಷ್ಯಗಳು ಬೆಚ್ಚಿ ಬೀಳಿಸುವಂತಿವೆ. ಹಾಗಾದ್ರೆ ನಂದನ್ ಕೊಲೆಗೆ ಅಸಲಿ ಕಾರಣ ಏನೂ ಎಂಬುದನ್ನು ಹೇಳ್ತಿವಿ ನೋಡಿ.

Written ByChetana Devarmani
Published: Oct 06, 2026, 02:46 PM IST|Updated: Oct 06, 2026, 02:47 PM IST
joinshare
ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಂದನ್ ಕೊಲೆ ಕೇಸ್; ಸಲಿಂಗ ಸಂಬಂಧದ ವಿಚಾರಕ್ಕೆ ಜಿಮ್ ಟ್ರೈನರ್ ಹತ್ಯೆ!

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಜಿಮ್ ಟ್ರೈನರ್ ಕೊ*ಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ : ಎದೆ ಮೇಲೆ ಕಚ್ಚಿದ ಗುರುತು, ಬಾತ್‌ರೂಮ್‌ನಲ್ಲಿ ಒಟ್ಟಿಗೆ

ಜಿಮ್ ಟ್ರೈನರ್ ಕೊ*ಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ : ಎದೆ ಮೇಲೆ ಕಚ್ಚಿದ ಗುರುತು, ಬಾತ್‌ರೂಮ್‌ನಲ್ಲಿ ಒಟ್ಟಿಗೆ

2

Train Ticket Booking: ದಶಕಗಳ ಹಿಂದಿನ ಪಿಎನ್‌ಆರ್‌ ನಿಯಮ ಬದಲಿಸಲು ಮುಂದಾದ ಭಾರತೀಯ ರೈಲ್ವೆ

3

ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ನಿಯಮ: 2026ರ ಹೊಸ SOP ಜಾರಿ

4

ರೆಬೆಲ್ ಸ್ಟಾರ್ ದಿವಂಗತ ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವಂತೆ ಮನವಿ

5

ರಾಜಕೀಯ ಕೆಸರಾಟಕ್ಕೆ ಸಾಕ್ಷಿ ಆಗ್ತಿದೆ ಮನ್ಮುಲ್ ಹಗರಣ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಅಮೃತಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ಜಿಮ್ ಟ್ರೈನರ್ ನಂದನ್ ಕೊಲೆ ಪ್ರಕರಣದಲ್ಲಿ ಸ್ಫೋಟಕ ಸತ್ಯಗಳು ಹೊರಬಿದ್ದಿವೆ. ಕೊಲೆಗೆ ಕಾರಣವೇನು..? ಕೊಲೆಗೂ ಮುನ್ನ ಏನೆಲ್ಲಾ ನಡೆದಿತ್ತು..? ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಸಿಕ್ಕಿರುವ ಸಾಕ್ಷ್ಯಗಳು ಬೆಚ್ಚಿ ಬೀಳಿಸುವಂತಿವೆ. ಹಾಗಾದ್ರೆ ನಂದನ್ ಕೊಲೆಗೆ ಅಸಲಿ ಕಾರಣ ಏನೂ ಎಂಬುದನ್ನು ಹೇಳ್ತಿವಿ ನೋಡಿ.

ಕಟ್ಟುಮಸ್ತಾದ ದೇಹ ಹೊಂದಿದ್ದ ಜಿಮ್ ಟ್ರೈನರ್ ನಂದನ್ ಕೊಲೆ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರಂಭದಲ್ಲೇ ಕೆಲ ಅನುಮಾನಗಳು ಮೂಡಿದ್ದವು. ಮೃತದೇಹದಲ್ಲಿ ಕಂಡುಬಂದಿದ್ದ ಗಾಯದ ಗುರುತುಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು.ಇದೀಗ ವೈದ್ಯಕೀಯ ಪರಿಶೀಲನೆ ಹಾಗೂ ತನಿಖೆಯಿಂದ ಪ್ರಕರಣದ ಮತ್ತಷ್ಟು ಅಂಶಗಳು ಬೆಳಕಿಗೆ ಬಂದಿವೆ.ನಂದನ್ ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಕಂಡುಬಂದಿದ್ದ ಕಚ್ಚಿದ ಗುರುತುಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಇದೇ ರೀತಿಯ ಗುರುತುಗಳು ಆರೋಪಿಯ ದೇಹದಲ್ಲೂ ಪತ್ತೆಯಾಗಿರುವುದು ಪೊಲೀಸರ ತನಿಖೆಗೆ ಪ್ರಮುಖ ಸಾಕ್ಷ್ಯವಾಗಿದೆ.

ಈ ದೃಶ್ಯಗಳನ್ನು ಗಮನಿಸಿ.ನಂದನ್ ಎದೆ ಭಾಗದಲ್ಲಿ ಹಲವು ಬಾರಿ ಕಚ್ಚಿದ ಗುರುತುಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಈ ಗುರುತುಗಳು ಹೇಗೆ ಉಂಟಾದವು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದಾಗ, ನಂದನ್ ಹಾಗೂ ಆರೋಪಿ ವಿಶ್ವನಾಥ್ ನಡುವೆ ಆತ್ಮೀಯ ಸಂಬಂಧದ ವಿಚಾರ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ, ನಂದನ್ ಹಾಗೂ ವಿಶ್ವನಾಥ್ ನಡುವೆ ಆತ್ಮೀಯತೆ ಬೆಳೆದಿತ್ತು ಎಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾರ್ಟಿ ವೇಳೆ ನಂದನ್ ಹಾಗೂ ವಿಶ್ವ ಕಿಸ್ ಮಾಡಿ ಪರಸ್ಪರ ಕಚ್ಚಿಕೊಂಡಿರುವ ಗುರುತುಗಳು ದೇಹದಲ್ಲಿ ಪತ್ತೆಯಾಗಿವೆ. ಬಳಿಕ ಇಬ್ಬರೂ ಕೆಲಕಾಲ ವಾಶ್‌ರೂಮ್‌ನಲ್ಲಿದ್ದರು ಎನ್ನಲಾಗಿದೆ. ಆದರೆ ಇದೇ ವಿಚಾರದ ನಡುವೆ ಮತ್ತೊಂದು ಗಲಾಟೆ ಶುರುವಾಗಿದೆ. ತನಗಿಂತ ಮೂರು ವರ್ಷ ಚಿಕ್ಕವನಾಗಿದ್ದ ವಿಶ್ವನಾಥ್‌ನನ್ನು ನಂದನ್ ಶಿಷ್ಯ ಎಂದು ಕರೆದಿದ್ದೇ ಗಲಾಟೆಗೆ ಪ್ರಮುಖ ಕಾರಣವಾಗಿದೆ.

ಇತ್ತ ಗಲಾಟೆ ನಡೆಯುತ್ತಿದ್ದ ವೇಳೆ ವಿಶ್ವನಾಥ್ ಪರವಾಗಿ ವಿಜಯ್, ನಿಶಾಂತ್ ಹಾಗೂ ಶರತ್ ಕೂಡ ಬಂದಿದ್ದಾರೆ. ಜಿಮ್‌ನ ಅನಿವರ್ಸರಿ ಕಾರ್ಯಕ್ರಮ ಮುಗಿಸಿ ಬಂದಿದ್ದ ಎಲ್ಲರೂ ಮದ್ಯ ಸೇವಿಸಿದ್ದರು. ಈ ವೇಳೆ ಅನೂಷ್ ಶೆಟ್ಟಿಗೆ ಕರೆ ಮಾಡಿ, ತಾವು ಈಗಾಗಲೇ ಕುಡಿದಿದ್ದು ಫ್ಲ್ಯಾಟ್‌ಗೆ ಬರುತ್ತಿರುವುದಾಗಿ ತಿಳಿಸಿದ್ದಾರೆ. ಐವರು ಫ್ಲ್ಯಾಟ್‌ಗೆ ಬಂದ ಬಳಿಕ ಅನೂಷ್ ತನ್ನ ರೂಮ್‌ಗೆ ತೆರಳಿ ಬಾಗಿಲು ಹಾಕಿಕೊಂಡು ಮಲಗಿದ್ದ. ಬೆಳಗ್ಗೆ ಎದ್ದು ನೋಡಿದಾಗ ವಾಶ್‌ರೂಮ್‌ನಲ್ಲಿ ನಂದನ್ ಶವವಾಗಿ ಪತ್ತೆಯಾಗಿದ್ದಾನೆ.

ಪೊಲೀಸರ ತನಿಖೆಯ ಪ್ರಕಾರ, ನಂದನ್ ಹಾಗೂ ವಿಶ್ವನಾಥ್ ನಡುವೆ ನಡೆದಿದ್ದ ಗಲಾಟೆ ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹೊಡೆದಾಟದ ವೇಳೆ ವಾಶ್‌ರೂಮ್‌ನಲ್ಲಿದ್ದ ಗಾಜಿನ ವಸ್ತುವೊಂದು ನಂದನ್ ತಲೆಗೆ ತಾಗಿ ಗಂಭೀರ ಗಾಯವಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರೂ, ಹಲವು ಗಂಟೆಗಳ ಕಾಲ ನಂದನ್‌ಗೆ ಆಸ್ಪತ್ರೆಗೆ ಕರೆದೊಯ್ಯಲಾಗಿಲ್ಲ. ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ನಂದನ್ ಮೃತಪಟ್ಟಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಇನ್ನು ಪ್ರಕರಣದ ಮತ್ತೊಂದು ಪ್ರಮುಖ ಅಂಶವೆಂದರೆ ಆರೋಪಿಗಳ ನಶೆ. ಪೊಲೀಸರು ಆರೋಪಿಗಳನ್ನು ಅದೇ ಫ್ಲ್ಯಾಟ್‌ನಿಂದ ವಶಕ್ಕೆ ಪಡೆದಿದ್ದರು. ಆದರೆ ಸುಮಾರು ಏಳೆಂಟೂ ಗಂಟೆಗಳ ಕಾಲ ಆರೋಪಿಗಳು ನಶೆಯಲ್ಲೇ ಇದ್ದರು ಎನ್ನಲಾಗಿದೆ. ಹೀಗಾಗಿ ಆರೋಪಿಗಳು ಮಾದಕ ವಸ್ತು ಸೇವನೆ ಮಾಡಿದ್ದಾರೆಯೇ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಈ ಹಿನ್ನೆಲೆ ಎಲ್ಲಾ ಆರೋಪಿಗಳ ರಕ್ತ ಹಾಗೂ ಮೂತ್ರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಪರೀಕ್ಷಾ ವರದಿ ಬಂದ ಬಳಿಕ ಆರೋಪಿಗಳು ಡ್ರಗ್ಸ್ ಸೇವಿಸಿದ್ದಾರೆಯೇ ಎಂಬುದರ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ.ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು, ಕೊಲೆ ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದಾರೆ.

 

Add Zee News as a Preferred Source
TAGS:
Crime