ಆಟೋ ಬಾಡಿಗೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ..!
A dispute over an auto-rickshaw fare ends in murder: ಅಂದು ಆತನ ತಂದೆಗೆ ಕರೆ ಮಾಡಿದವರು,ನಿಮ್ಮ ಮಗ ನಡುರಸ್ತೆಯಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದಿದ್ದರು.ಮಗನಿಗೆ ಏನಾಯ್ತು ಎಂದು ಮನೆಯವರು ಆಸ್ಪತ್ರೆಗೆ ಓಡೋಡಿ ಬಂದ್ರೆ ಕೆಲವೇ ಹೊತ್ತಲ್ಲಿ ಮಗಾ ಉಸಿರು ಚೆಲ್ಲಿ ಬಿಟ್ಟಿದ್ದ.ಡಾಕ್ಟರ್ ಹಾರ್ಟ್ ಅಟ್ಯಾಕ್ ಇರಬಹುದು ಅಂದಿದ್ರೆ ಸಿಸಿಟಿವಿ ದೃಶ್ಯಗಳು,ಪಿ ಎಂ ರಿಪೋರ್ಟ್ ಬೇರೆಯದ್ದೇ ಕಥೆ ಹೇಳಿತ್ತು. ಹಾಗಾದ್ರೆ ಅಲ್ಲಿ ಆಗಿದ್ದೇನೂ..? ಹೇಳ್ತಿವಿ ನೋಡಿ.
ಅಂದು ಆತನ ತಂದೆಗೆ ಕರೆ ಮಾಡಿದವರು,ನಿಮ್ಮ ಮಗ ನಡುರಸ್ತೆಯಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದಿದ್ದರು.ಮಗನಿಗೆ ಏನಾಯ್ತು ಎಂದು ಮನೆಯವರು ಆಸ್ಪತ್ರೆಗೆ ಓಡೋಡಿ ಬಂದ್ರೆ ಕೆಲವೇ ಹೊತ್ತಲ್ಲಿ ಮಗಾ ಉಸಿರು ಚೆಲ್ಲಿ ಬಿಟ್ಟಿದ್ದ.ಡಾಕ್ಟರ್ ಹಾರ್ಟ್ ಅಟ್ಯಾಕ್ ಇರಬಹುದು ಅಂದಿದ್ರೆ ಸಿಸಿಟಿವಿ ದೃಶ್ಯಗಳು,ಪಿ ಎಂ ರಿಪೋರ್ಟ್ ಬೇರೆಯದ್ದೇ ಕಥೆ ಹೇಳಿತ್ತು. ಹಾಗಾದ್ರೆ ಅಲ್ಲಿ ಆಗಿದ್ದೇನೂ..? ಹೇಳ್ತಿವಿ ನೋಡಿ.
ಈ ಫೋಟೋದಲ್ಲಿರೋ ವ್ಯಕ್ತಿ ನೋಡಿ ಹೆಸರು ಶ್ರೀರಾಮ್ ವಯಸ್ಸು 46.ವಕೀಲನಾಗಿ ಕೆಲಸ..ಅಂದು ಮಧ್ಯಾಹ್ನ ನಡೆದ ಒಂದು ದುರ್ಘಟನೆ ಈತನ ಪ್ರಾಣವನ್ನೇ ಕಸಿದುಬಿಟ್ಟಿದೆ..ಶ್ರೀರಾಮ್ ಪೋಷಕರಿಗೆ ಅಕ್ಟೋಬರ್ 09 ಮಧ್ಯಾಹ್ನ 12:30 ರ ಸುಮಾರಿಗೆ ನಿಮ್ಮ ಮಗ ಅಸ್ಬಸ್ಥನಾಗಿ ಬಿದ್ದಿದ್ದಾನೆ..ಆಸ್ಪತ್ರೆಗೆ ಸೇರಿಸಿದ್ದೀವಿ ಅಂತ ಹೊಯ್ಸಳ ಪೊಲೀಸರು ಕರೆ ಮಾಡಿದ್ರು..ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3:30 ಕ್ಕೆ ಶ್ರೀರಾಮ್ ಮೃತಪಟ್ಟಿದ್ದ.ವೈದ್ಯರು ಹಾರ್ಟ್ ಅಟ್ಯಾಕ್ ಇರಬಹುದು ಎಂದಿದ್ರು.ಅದರಂತೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿದ್ರು..
ಆದ್ರೆ ಗಟ್ಟಿಮುಟ್ಟಾಗಿದ್ದ ಮಗನಿಗೆ ಏನಾಯ್ತು ಅಂತ ಯೋಚಿಸಿದ ಪೋಷಕರು,ದೇಹದ ಮೇಲಿದ್ದ ಸಣ್ಣಪುಟ್ಟ ಗಾಯ ನೋಡಿ ಅನುಮಾನ ಬಂದಿತ್ತು..ಈ ಹಿನ್ನೆಲೆ ಆತ ಅಸ್ಬಸ್ಥನಾಗಿ ಬಿದ್ದಿದ್ದ ಜಾಗದ ಅಕ್ಕಪಕ್ಕ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದ್ರು..ಆಗಲೇ ನೋಡಿ ಅಸಲೀ ಸತ್ಯ ಹೊರಬಿದ್ದಿದ್ದು..ಶ್ರೀರಾಮ್ ಜೊತೆಗೆ ಆಟೋ ಚಾಲಕನೊಬ್ಬ ಗಲಾಟೆ ಮಾಡಿದ ವಿಚಾರ ಗೊತ್ತಾಗಿತ್ತು..ಅಂಬೇಡ್ಕರ್ ಕಾಲೇಜು ಬಳಿ ನಡೆದು ಬರ್ತಿದ್ದ ಶ್ರೀರಾಮ್..ಮನೆಗೆ ಹೋಗಲು ಆಟೋ ಕೇಳಿದ್ದು ಬಾಡಿಗೆ ವಿಚಾರಕ್ಕೆ ಪೃಥ್ವಿರಾಜ್ ಎಂಬ ಆಟೋ ಚಾಲಕನ ಜೊತೆಗೆ ಗಲಾಟೆ ಆಗಿತ್ತು..ಆಟೋ ಬೇಡ ವೆಂದು ನಡೆದುಕೊಂಡು ಮುಂದೆ ಹೊರಟಿದ್ದಾಗ ಆಟೋ ಚಾಲಕ ಅವಾಚ್ಯವಾಗಿ ಬೈಯುತ್ತಾ ಫಾಲೋ ಮಾಡಿದ್ದ..ಇದ್ದಕ್ಕಿದ್ದಂತೆ ಇಬ್ಬರು ನಡುರಸ್ತೆಯಲ್ಲಿ ಹೊಡೆದಾಡೋಕೆ ಶುರು ಮಾಡಿದ್ರು..ಈ ವೇಳೆ ಶ್ರೀರಾಮ್ ಗೆ ಗಂಭೀರವಾಗಿ ರಸ್ತೆಯಲ್ಲೇ ಬಿದ್ದಿದ್ದು,ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ರು..ಏನು ವಿಷಯ ಗೊತ್ತಿರದೇ ಆಸ್ಪತ್ರೆಗೆ ಪೋಷಕರು ಧಾವಿಸಿದ್ರು..ಈ ವೇಳೆ ಆಸ್ಪತ್ರೆಗೆ ಬಂದಿದ್ದ ಆಟೋ ಚಾಲಕ ನಿಮ್ಮ ಮಗ ರಸ್ತೆಯಲ್ಲಿ ಬಿದ್ದಿದ್ರು ನಾವೇ ಆಸ್ಪತ್ರೆಗೆ ಕರೆತಂದ್ವಿ..ಈ ವೇಳೆ ನನ್ನ ಮೊಬೈಲ್ ಒಡೆದಿದೆ ಅಂತ 15 ಸಾವಿರ ಪಡೆದಿದ್ದನಂತೆ..ಶ್ರೀರಾಮ್ ಸಾವಿನ ಬಳಿಕ ಪರಿಶೀಲನೆ ವೇಳೆ ಗಲಾಟೆ ವಿಚಾರ ಗೊತ್ತಾಗಿತ್ತು.
ಈ ನಡುವೆ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು,ಹೊಡೆತ ಬಿದ್ದು ಬ್ಲಡ್ ಕ್ಲಾಟ್ ಆಗಿ ಶ್ರೀರಾಮ್ ಮೃತಪಟ್ಟಿದ್ದು ಗೊತ್ತಾಗಿದೆ..ಅನ್ನಪೂರ್ಣೇಶ್ವರಿ ನಗರ ಪೊಲೀಸರು ಶ್ರೀರಾಮ್ ತಂದೆಯಿಂದ ದೂರು ಪಡೆದು ಕೊಲೆ ಪ್ರಕರಣ ದಾಖಲು ಮಾಡಿ,ಹಲ್ಲೆ ಮಾಡಿ ಕೊಲೆಗೆ ಕಾರಣವಾಗಿ ಮೊಬೈಲ್ ಮತ್ತು ಹಣವನ್ನ ಕಿತ್ತುಕೊಂಡ ಆರೋಪದ ಮೇಲೆ ಆರೋಪಿ ಪ್ರಥಿರಾಜ್ ಬಂಧಿಸಿದ್ದಾರೆ..ರಸ್ತೆಯಲ್ಲಿ ನಡೆದ ಕ್ಷುಲ್ಲಕ ಗಲಾಟೆ ಒಂದು ಪ್ರಾಣ ಹೋಗುವ ಹಂತಕ್ಕೆ ತಲುಪಿದ್ದು ನಿಜಕ್ಕೂ ದುರಂತವೇ ಸರಿ.